ಹರಿದಾಸರ ಧನ್ವಂತರಿ ಕೀರ್ತನೆಗಳ ಸಂಗ್ರಹ
🙏 ಶ್ರೀ ಗುರುಭ್ಯೋ ನಮಃ🙏
ಎಲ್ಲ ಹರಿದಾಸರುಗಳು ರಚಿಸಿದ
ಧನ್ವಂತರಿ ಕೀರ್ತನೆಗಳು
೧) ಗೋಪಾಲ ದಾಸರು
೧)ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ |
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ||
ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ ಈ ಮೂರುವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧||
ವಸುಮತಿಯ ಮೇಲಿನ್ನು ಅಸುರ ಜನರ ಬಹಳ ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ
ಹೇ ದೇವ ನಿನ್ನ ಕರಕಲಶ ಸುಧೆಗರೆದು ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನಿವೀ
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩||
ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ
ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ಇನ್ನು ಆಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರುದಿನ್ನು ಉಲುಹೊ ಸಲಹೊ ||೪||
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು
ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೆಕು ಕರುಣಿ
ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೋ ಪ್ರಭುವೇ ||೫
೨)ಆವ ರೋಗವೊ ಎನಗೆ ದೇವಧನ್ವಂತ್ರಿ ಪ.
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ ಅ.ಪ.
ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ 1
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರಂಘ್ರಿಗೆ ಶಿರ ಬಾಗದುಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವುಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ 2
ಅನಾಥಬಂಧು ಗೋಪಾಲವಿಠಲರೇಯಎನ್ನ ಭಾಗದ ವೈದ್ಯ ನೀನೆಯಾದೆಅನಾದಿ ಕಾಲದ ಭವರೋಗ ಕಳೆಯಯ್ಯನಾನೆಂದಿಗು ಮರೆಯೆ ನೀ ಮಾಡಿದುಪಕಾರ 3
೨)ರಾಮದಾಸರು
ಅಮೃತ ನೀಡೆನಗೆ ಶ್ರೀಹರಿ ಅಮೃತ ನೀಡೆನಗೆ ಪ
ಅಮೃತ ನೀಡಪಮೃತ್ಯುಕಳೆದು ಧ್ಯಾ
ನಾಮೃತವೆಂಬ ಸಾಮ್ರಾಜ್ಯ ಸಂಪದವಿತ್ತು ಅ.ಪ
ಜರಾ ಮರಣವ ಗೆಲಿಪ ಅಮೃತ
ದುರಿತ ಪರ್ವತಲೋಪ
ಭರದಿಗೈದು ಮಾಯಮರವೆ ಹರಿಗೆ
ಸ್ಥಿರ ಪರಮಪಾವನ ಮಾಳ್ಪ ಹರಿಸ್ಮರಣಾನಂದ 1
ಭವಬಾಧೆಯ ಗೆಲಿಪ ಅಮೃತ
ಜವನ ಭಯವ ಲೋಪ
ಜವದಿಗೈದು ತ್ರಯ ಭುವನದೊಳ್ಮಿಗಿಲಾಗಿ
ಧ್ರುವನು ನಿರುತಮಾಗಿ ಸವಿದ ಮಹದಾನಂದ2
ತಾಮಸಗಳನಳಿವ ಅಮೃತ
ಪಾಮರತನ ತುಳಿವ
ಆ ಮಹ ವೈಕುಂಠದ ವಿಮಲ ಪದವಿಯನು
ಕ್ಷೇಮದೀಯುವ ಶ್ರೀರಾಮ ಪ್ರೇಮಾನಂದ 3
೩)ಪ್ರಾಣೇಶದಾಸರು
ಕಾಯಯ್ಯ ರೋಗನಿಕಾಯಕಳೆದು ನಿನ್ನಕಾಯಿಕೊಂಡವರ ಕೂಡ ||ಈ ಯಣಕವೇ ಮೆಚ್ಚರೋ ಯತಿಗಳು ಆದ-ದ್ದಾಯಿತೋ ಶ್ರೀಶ ಗುಣಿ ಹೇ ಕರುಣೀ ಪ
ಮೃತ್ಯುಂಜಯಾರಾಧ್ಯ ಮೃತ್ಯುವಿಗೆ ಮೃತ್ಯುಸತ್ಯ ನೃಸಿಂಹನೆಂದು ||ಸತ್ಯವತಿಯ ವರಪುತ್ರ ಪೇಳಿರಲು ತಾಮತ್ತೂ ಬರೆದಿಹ ಮಧ್ವ ಪ್ರಸಿದ್ಧ1
ಧನುವಂತ್ರಿ ಧನುವಂತ್ರಿಯೆನೆ ವ್ಯಾಧಿ ಪರಿಹಾರ-ವೆನುತಿಹ ವಚನಗಳು ||ಗಣನೆಗೆ ಬಾರವೋ ಪ್ರಣತ ಜನರನಿಷ್ಟುದಣಿಸಲು ತಿಳಿದುನೋಡುದಯ ಮಾಡು 2
ಪ್ರಾಣಮತದೊಳಿಪ್ಪ ಪ್ರಾಣಿಗಳಿಗೆ ಬಲಜ್ಞಾನಾರೋಗ್ಯಪ್ರದರಾ ಕ್ಷೋಣಿಯೊಳಿನ್ನಾರಾ ||ಕಾಣೆ ನಿನ್ನುಳಿದು ಶ್ರೀಪ್ರಾಣೇಶ ವಿಠಲರೇಯ ಸುಜೆÕೀಯ 3
೪)ಅಂಬಾಬಾಯಿ
ಇಂದು ಕಾಯಲಿಬೇಕೊ ಸುಂದರ ಧನ್ವಂತ್ರಿ
ಇಂದಿರೆರಮಣ ಆನಂದ ಕೃಷ್ಣ /ಪ.
ತಂದೆ ಮುದ್ದುಮೋಹನ ಗುರುಗಳ ನೀನು ಚಂದದಿಂ ಪಾಲಿಸಿ ತಂದುಕೊ ಕೀರುತಿ /ಅ.ಪ.
ಬಂದಿತೊ ನಿನಗೊಂದು ಕುಂದು ಇದರಿಂದ ನಂದಕಂದನೆ ಕೃಷ್ಣ ಉಡುಪಿ ನಿಲಯಮಂದರೋದ್ಧರ ಕೃಷ್ಣ ಬಂದು ಈಗ ನೀ ಕಾಯೊ
ಕಂದರ್ಪಜನಕನೆ ಇಂದು ಬೇಡುವೆ ನಿನ್ನ 1
ಭವರೋಗ ಹರನಿಗೆ ಇದೊಂದ ಸಾಧ್ಯವೆ ತವಕದಿಂದಲಿ ಆಯುವಿತ್ತು ಕಾಯೊಪವನನಂತರ್ಯಾಮಿ ಭವಪಾಶಬದ್ಧರತವಕದಿಂದಲಿ ಕಾಯ್ವ ಗುರುಗಳಲ್ಲವೆ ಇವರು 2
ನಿನ್ನ ಆಜ್ಞೆಯಿಂದ ಭಕ್ತರನುದ್ಧರಿಸ
ಲಿನ್ನು ಧರೆಗೆ ಬಂದವರಲ್ಲವೆ
ಮನ್ನಿಸಿ ನೀನಾಯುರಾರೋಗ್ಯ ಭಾಗ್ಯವಿತ್ತು ಚನ್ನಾಗಿ ಕಾಯಬೇಕಿನ್ನು ಎನ್ನಯ ದೊರೆಯೆ 3
ಕಷ್ಟ ಬಿಡಿಸುವರಿಗೆ ಕಷ್ಟ ಕೊಡುವರೆ ನೀನು ಕಷ್ಟ ಪರಿಹಾರಕನೆಂದೆನಿಸಿ
ಬಿಟ್ಟು ಬಿಡು ಈ ಬಿಂಕ ಥಟ್ಟನೆ ಕಾಪಾಡೊ ಶ್ರೇಷ್ಠ ಗುರುಗಳ ಎಮ್ಮ ಕಷ್ಟ ಬಿಡಿಸುವರ 4
ಅನ್ನ ಪಾನವಿಲ್ಲದಿನ್ನು ಬಳಲಿಸುವರೆ
ಚನ್ನವಾಯಿತು ಇದು ನಿನ್ನ ಘನತೆ
ಸನ್ನುತ ಮಹಿಮ ಶ್ರೀ ಗೋಪಾಲಕೃಷ್ಣವಿಠ್ಠಲ
ಇನ್ನು ಕಾಯದಿರೆ ಎನ್ನಾಣೆ ಬಿಡೆ ಕಂಡ್ಯಾ 5
ಕರುಣಾಮೃತವ ಸಿರದಿ ಸುರಿಯೊ ವರದ ಧನ್ವಂತರಿಯೆ
ಚರಣಯುಗಳ ಕಮಲವನ್ನು ಕರುಣಿಸೆನಗೆ ದೊರೆಯೆ ಪ.
ಶ್ರವಣ ನಯನ ಚಿತ್ತ ಜಿಹ್ವೆಗನುಕೂಲವಾಗಿರುವ ಲೀಲಾ
ಪ್ರವರ ಕಾಂತಿ ಸ್ಮರಣ ನಾಮಗಳನು ಪಾಲಿಸಿ
ಭವಜನೀತ ಭ್ರಮಣ ನಿಲಿಸಿ ಕುವರನಂತೆ ರಕ್ಷಿಸೆನ್ನ
ಕವಿಭಿರೀಡ್ಯ ಕಂಜಜಾತಶಿವರ ಸೌಖ್ಯಗೊಳಿಸದವನೆ 1
ಕಲಿಕೃತ ಕಲ್ಮಶಗಳಿಂದ ಬಳಲುವಂಥ ಬಾಧೆಯನ್ನು
ನಿಲಿಸಿಕೊಳ್ಳಲು ಅನ್ಯಮಾರ್ಗಂಗಳನು ಕಾಣೆನು
ನಳಿನನಾಭ ನಿನ್ನ ಪಾದಗಳನೆ ನಂಬಿಕೊಂಡಿರುವೆನು
ಬಲಿಯ ಕಾಯ್ವ ಭೂಮಿಜೇಶ ಘಳಿರನೆ ಬಂದೊದಗಿ ಬೇಗ 2
ವಾಗೀಶ್ವರನ ಕೂಡಿ ನಿಖಿಳ ಭೋಗಗಳನನುಭವಿಸುತ
ಶ್ರೀಗುರು ಮಧ್ವಾಂತರಾತ್ಮ ನಾಗಗಿರಿನಾಥ
ರಾಗ ರೋಗ ದೋಷಗಳನು ನೀಗಿ ನಿನ್ನ ನಂಬಿ ಸ್ತುತಿಪ
ಭಾಗವತರ ಭಕ್ತನೆನಿಪ ಭಾಗ್ಯವಿರಿಸೋ ಭೀಮವರದ 3
೬) ನಿಡಗುರುಕಿ ಜೀವೂಬಾಯಿ
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ
ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ
ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ
ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ
ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ
ಇನ್ನು ಪಾಲಿಸು ದೇವನೆ
ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ
ಇನ್ನು ಕರುಣಿಸೊ ಕೇಶವಾ
ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ
ನಿನ್ನ ಮೊರೆಯಿಡುವೆ ಹರಿಯೇ
ಚನ್ನ ಶ್ರೀಗೋಪಾಲ ಗೋವಿಂದ ಕೇಶವ
ನಿನ್ನ ನಾಮನಿರಂತರವು ಪಾ-
ವನ್ನ ಮಾಡಲಿ ಎನ್ನ ಜಿಹ್ವೆಯಾ 1
ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ
ಭೇದವಿಲ್ಲದೆ ಕರುಣಿಸೊ
ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ-
ಮಾದರವ ನಿತ್ತು ಸಲಹೊ
ಸಾಧು ಜನರೊಡಗೂಡಿ ಮೋದ ಪಡುವ ಭಾಗ್ಯ
ಮಾಧವನೆ ದಯಪಾಲಿಸೋ
ಶ್ರೀದ ಶ್ರೀಭೂರಮಣ ಮಾಧವ ಜನಾರ್ದನ
ಕ್ರೋಧಿ ಸಂವತ್ಸರವು ಭಕುತರ
ಕ್ರೋಧಗಳ ಕಳೆಯುತ್ತ ಸಲಹಲಿ2
ಶರಣೆಂದು ಬೇಡುವೆ ಪರಿಪರಿ ಅಘಗಳ
ಪರಿಹರಿಸೆಂದು ನಾ ಸ್ಮರಿಸಿಬೇಡುವೆನು
ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ
ಹರುಷದಿ ನೆಲಸೆನ್ನ ಹೃದಯದಲಿ ದೇವ
ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ ಕಡುಭಾಗವತರ ಸಂಗವನೆ ನೀಡೈ
ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ
ತಡೆಯದಲೆ ಪಾಲಿಸುತ ಪೊರೆ ಶ್ರೀ
ಕಮಲನಾಭ ವಿಠ್ಠಲನಸ್ತುತಿಸಿ 3
೭)ಪ್ರಸನ್ನ ಶ್ರೀನಿವಾಸದಾಸರು
ವಾಮನ ಹಯಾಸ್ಯ ಶ್ರೀಹಂಸ ಧನ್ವಂತರಿ
ರಮಾಪತಿಗೆ ಪ್ರಿಯ ಸೋಮರಾಜನೇ ನಮಸ್ತೇ ಪ
ಸಹಸ್ರಶೀರ್ಷ ಪುರುಷನ ನಾಭಿ ವನರುಹಜಾತ
ಬ್ರಹ್ಮದೇವನ ಸುತನು ಬಹುಗುಣಿ ಅತ್ರಿ
ಬ್ರಹ್ಮಿಷ್ಠ ಈ ಋಷಿಯ ನೇತ್ರಜನು ಸೋಮ ನೀ
ಬ್ರಹ್ಮಣೌಷಧಿ ಉಡುಗಣಕೆ ಪತಿಯಾದಿ 1
ಪದ್ಮಜನ ನಿಯಮನದಿ ಹೊಂದಿದಿ ಈ ಅಧಿಕಾರ
ಸುಧಾಮೂರ್ತಿಯೇ ಸುಧಾsಶನ ಸುಧಾಗಾತ್ರ
ದಧಿ ಶಂಖ ತುಷಾರಾಭ ಆಹ್ಲಾದ ಕೃಣ್ಣಮೋ
ಚಂದ್ರದೇವನೇ ಕ್ಷೀರೋದಾರ್ಣವ ಸನ್ನಿಭನೇ 2
ತ್ರಿಭುವನಗಳ ಜೈಸಿ ರಾಜಸೂಯ ಯಜ್ಞಗೈದಿ
ತ್ರ್ಯಂಬಕನ ಮುಕುಟ ಭೂಷಣ ರೋಹಿಣೀಶ
ಅಂಬುಜೋದ್ಭವಪಿತ ಪ್ರಸನ್ನ ಶ್ರೀನಿವಾಸ ಹೃತ್
ಅಂಬರದಿಪೊಳೆವೆ ಸುe್ಞÁನ ಭಕ್ತಿ ಎನಗೀಯೋ 3 ಪ
೮)ಶಾಮಶರ್ಮರು
ಶ್ರೀಪತಿಯೆ ಧನ್ವಂತರಿಯ ರೂಪವಾಂತೆ
ತಾಪತ್ರಯವ ಹರಿಸೆ ಭಕ್ತರ್ಗೆ ನೋಂತೆ ಪ
ಸುರರು ದಾನವರೆಲ್ಲ ಕ್ಷೀರ ಸಾಗರವನ್ನು
ವರಗಿರಿ ಮಂದರವ ಕಡೆಗೋಲ ಮಾಡಿ
ಧರಣಿಧರ ವಾಸುಕಿಯ ಹಗ್ಗಗೈಯುತ ಮಥಿಸೆ
ಸಿರಿರತ್ನ ಧೇನು ತರು ಲಕ್ಷ್ಮಿಯರು ಬರಲು 1
ಶ್ರೀರಮಣಿ ಕೌಸ್ತುಭಗಳನ್ನು ನೀಧರಿಸುತ್ತ
ಕಾರುಣ್ಯದಿಂ ಕಾಮಧೇನುವಂ ಮುನಿಗಳಿಗೆ
ಪಾರಿಜಾತಸ್ವರ್ಗ ಸಂಪಾದವಗೈಯುತ್ತ
ಸಾರಸೌಖ್ಯದ ಸುಧಾರಕನಾಗಿ ತೋರ್ದೆ 2
ಅಮರರಿಗೆ ನೀನೊಲಿಯತಮೃತವನು ಕರೆದಿತ್ತು
ಕಮಲ ಸರಸಲಿಹೆ ಆಯುರ್ವೇದವನ್ನೊರೆದೆ
ಕಮಲಲೋಚನ ಕೃಪೆಯೊಳಾರೋಗ್ಯಗಳ
ನಮಗೀಯುತಾಬಾಲವೃದ್ಧರಂ ಸಲಹೊ 3
ದೇವ ನೂತನಪುರಿಯ ದೇವ ಶ್ರೀಮೂರುತಿಯ
ಭಾವದಿಂ ಸನ್ನಿಧಿಯೊಳಾನಿನ್ನನುತಿಸೀ
ಕಾವುದೆನುತಲಿ ಸತತ ಶ್ರೀದ ನಮಿಸುವೆ ಮಹಿತ
ಜೀವ ಜೀವರಿಗೆಲ್ಲ ಸಿರಿಯೀವನಲ್ಲ 4
ಜಯಮಕ್ಕೆ ಜಾಜೀಶ ಚನ್ನಕೇಶವನಡಿಗೆ
ಜಯಮಕ್ಕೆ ವೈದ್ಯೇಶನಾಮಾಯಕೆ
ಜಯವುತಾನಾಗಲೀ ಓಷಧೀಲತೆಗಳಿಗೆ
ಜಯ ಜಯವು ಗೋಗಳಿಗೆ ವೈದ್ಯವೃಂದಕ್ಕೆ 5
೯)ಗುರುರಾಮವಿಠಲ ದಾಸರು
ಜನ್ಮವ್ಯರ್ಥವಾಯಿತು ಶಾಙ್ರ್ಗಧನ್ವ ನಿನ್ನನಂಬದೆ ಪ
ಮನ್ಮಥನಾಟದಲ್ಲಿ ಮರೆತು ಹೋಗಿಕಾಲ ನಾಕಳದೇ ಅ.ಪ
ಹೊಟ್ಟೆಗೋಸಗ ಕಾಡಿಬೇಡಿ ನಿಷ್ಟುರಗಳನಾಡುತಾ
ಕೆಟ್ಟವನಿವನೆನಿಸಿ ಕೊಂಡು ಕೀರ್ತಿಶೂನ್ಯನಾಗುತಾ 1
ನಿತ್ಯಕರ್ಮಮಾಡದೆ ಗೃಹಕೃತ್ಯದಲ್ಲಿ ಬಳಲುವೆ
ಸತ್ಯವೆಂಬುದು ಸ್ವಪ್ನದಲ್ಲಿಯು ಸಾಧ್ಯವಾಗದು ಜನರಿಗೆ2
ಸುಳ್ಳು ಹೇಳುವವನ ಜನರು ಒಳ್ಳೆವನಿವನೆಂಬರು
ಬಲ್ಲ ಹಿರಿಯರಾಡುವ ನುಡಿ ಭಕ್ತಿಯಿಂದನಂಬರು 3
ಖಲರು ನಡಿಯಲಾರದೆಯಿದು ಕಲಿಯುಗವೆಂದು ನಿಂದಿಸೀ
ಕೊಲೆಗೆ ಗುರಿಯಾಗಿ ಕಾಮ ಕ್ರೋಧಗಳಿಂದ ಬಂಧಿಸಿ 4
ಹೀನ ವಿದ್ಯಗಳೆಚ್ಚಿತು ಸುe್ಞÁನಬೋಧೆ ತಗ್ಗಿತು
ಸ್ವಾನುಭವಕೆ ಹಾನಿಕರ ನಿಧಾನಿಸೇ ಧರ್ಮ ಕುಗ್ಗಿತು 5
ದುರ್ಗುಣಿಗಳ ತೃಪ್ತಿಪಡಿಸೆ ಭರ್ಗಗಾದರು ಸಾಧ್ಯವೇ
ನಿರ್ಗಮಿಸುವಧ್ಹ್ಯಾಗೆ ನಾವಿನ್ನಿರುವುದು ಭೂಮಿಭಾರವೆ6
ಲೇಶ ಸಾಧನವಾಗುವದಿಲ್ಲ ಆಸೆ ಅಧಿಕವಾದುದರಿಂದ
ಘಾಶಿಪಡುವದಲ್ಲದೆ ದೇಹಾಯ್ಸವೇಕೆ ಪಡುವೆನಾಂ 7
ಮಾನವಿಲ್ಲ e್ಞÁನವಿಲ್ಲ ಮಮತೆಯೆಂಬೋದು ಬಿಡದಲ್ಲಾ
ಹೀನಾರನಾಸೇವಿಸಲಾರೆ ಹಿತವ ಕಾಣೆ ಸಿರಿನಲ್ಲಾ8
ಇರುಳು ಹಗಲು ನಿನ್ನ ದಿವ್ಯ ಚರಣಸೇವೆ ಪಾಲಿಸೊಗುರುರಾಮ ವಿಠಲನೆ ಪಾಮರರ ಬಿನ್ನಹ ಲಾಲಿಸೊ9
೧೦) ಗುರುಗೋವಿಂದವಿಠಲರು
ಧನ್ವಂತ್ರಿ ನಾ ನಿನ್ನ ಅಣುಗನೋ - ತ್ರೈಗುಣದೂರ ಅಣುಗಣು ಘನಘನಾ ಪ
ಆಲಯ ತ್ಯಜಿಸೆಂದು ಧನ್ವಂತ್ರಿ | ಚಿಕಿತ್ಸಾಲಯ ಪೋಗೆಂದು ಧನ್ವಂತ್ರಿವ್ಯಾಳೆ ನೋಡಿ ಪೇಳ್ದೆ ಧನ್ವಂತ್ರಿ | ಎನ್ನಮೇಲೆ ಕರುಣವ ಮಾಡ್ಹೆ ಭವ ಹಂತ್ರಿ 1
ಅಪಮೃತ್ ಕಳೆದೆಯೊ ಧನ್ವಂತ್ರಿ | ಬಲುತಪಸಿ ಮಾತೆ ಶೋಕ ಧನ್ವಂತ್ರೀ |ಅಪಹರಿಸಿ ಸುಖ ತೋರ್ದೆ ಧನ್ವಂತ್ರಿ | ಬಲುಕೃಪಣ ವತ್ಸಲನಹುದೊ ಭವ ಹಂತ್ರೀ 2
ಸ್ನಾನ ಸಂಧ್ಯಾವಿಲ್ಲ ಧನ್ವಂತ್ರೀ | ಸೂಕ್ಷ್ಮಸ್ನಾನಾನು ಸಂಧಾನ ಧನ್ವಂತ್ರೀ |e್ಞÁನಾವೆ ಪಾಲಿಸೊ ಧನ್ವಂತ್ರೀ | ಈಸುe್ಞÁನವೇ ಸ್ಥಿರವಿರಲಿ ಭವಹಂತ್ರೀ 3
ಸತಿಸುತರ ಪ್ರಾರ್ಥನೆಗೆ ಧನ್ವಂತ್ರೀ | ಅತಿಹಿತದಿಂದ ಸಲಹೀದೆ ಧನ್ವಂತ್ರೀ |ಗತಿಪ್ರದ ಬಿರುದಾಂಕ ಧನ್ವಂತ್ರೀ | ಮಮರತಿ ಇರಲಿ ತವ ಪದದಿ ಭವಹಂತ್ರೀ 4
ಭವರೋಗ ಭೇಷಜ ಧನ್ವಂತ್ರೀ | ಎನ್ನಅವಗುಣವೆಣಿಸೋರೆ ಧನ್ವಂತ್ರೀ |ಧೃವ ಬಲಿ ಕರಿವರದ ಧನ್ವಂತ್ರೀ | ಗುರುಗೋವಿಂದ ವಿಠಲನೇ ಧನ್ವಂತ್ರೀ 5
೧೧)ವ್ಯಾಸತತ್ವಜ್ಞದಾಸರು
ಮನಸಿಗೆ ಬಂದ ಧನ್ವಂತ್ರಿ ವೈದ್ಯನೇ
ಮನಸಿನ ರೋಗವ ಪರಿಹರಿಸೊ ಪ
ಧನ ಲೇಶ ಕೇಳಾ ಬಡವರ ಪೊರೆಯೊ ನೀ
ಮನೆಗೆ ಬಂದರೆ ತನು ರೋಗಗಳೋಡೋವು
ನೆನಹ ಮಾರ್ಗಕೆ ಬೇಗ ತಡಿಯದೆ ಈ ಮನ
ಕುನರ ಸೂಲಿವುಳ್ಳ ವಾತವ ಹರಿಸೊ 1
ನಾಮವ ನುಡಿವಲ್ಲಿ ಅರುಚಿ ಇದಕಿದೆ
ಭಾಮೆಯ ಕಂಡರೆ ತಲ್ಲಣವಾಹದೊ
ಶ್ರೀ ಮನೋಹರನ ಸ್ಮರಣೆ ಹಾರುತಿದೆ
ಈ ಮಹಾದೋಷವುಳ್ಳ ಪಿತ್ತವ ಬಿಡಿಸೊ 2
ಪಿರಿಯರು ನೋಡಲು ಗುರುಗುರುಯೆನುತಿದೆ
ಪರಿಪರಿ ವಿಷಯದ ನಂಜಿಲಿಂದ
ಪರಿಹರಿಸೊ ಶ್ಲೇಷ್ಮ ಮೊರೆಹೊಕ್ಕೆನು ನಾನು
ಪರಿಹರಿಸೊ ವಾಸುದೇವವಿಠಲರೇಯ 3
೧೨)ಶಾಮಶರ್ಮರು
ಶ್ರೀಪತಿಯೆ ಧನ್ವಂತರಿಯ ರೂಪವಾಂತೆ
ತಾಪತ್ರಯವ ಹರಿಸೆ ಭಕ್ತರ್ಗೆ ನೋಂತೆ ಪ
ಸುರರು ದಾನವರೆಲ್ಲ ಕ್ಷೀರ ಸಾಗರವನ್ನು
ವರಗಿರಿ ಮಂದರವ ಕಡೆಗೋಲ ಮಾಡಿ
ಧರಣಿಧರ ವಾಸುಕಿಯ ಹಗ್ಗಗೈಯುತ ಮಥಿಸೆ
ಸಿರಿರತ್ನ ಧೇನು ತರು ಲಕ್ಷ್ಮಿಯರು ಬರಲು 1
ಶ್ರೀರಮಣಿ ಕೌಸ್ತುಭಗಳನ್ನು ನೀಧರಿಸುತ್ತ
ಕಾರುಣ್ಯದಿಂ ಕಾಮಧೇನುವಂ ಮುನಿಗಳಿಗೆ
ಪಾರಿಜಾತಸ್ವರ್ಗ ಸಂಪಾದವಗೈಯುತ್ತ
ಸಾರಸೌಖ್ಯದ ಸುಧಾರಕನಾಗಿ ತೋರ್ದೆ 2
ಅಮರರಿಗೆ ನೀನೊಲಿಯತಮೃತವನು ಕರೆದಿತ್ತು ಕಮಲ ಸರಸಲಿಹೆ ಆಯುರ್ವೇದವನ್ನೊರೆದೆ
ಕಮಲಲೋಚನ ಕೃಪೆಯೊಳಾರೋಗ್ಯಗಳ
ನಮಗೀಯುತಾಬಾಲವೃದ್ಧರಂ ಸಲಹೊ 3
ದೇವ ನೂತನಪುರಿಯ ದೇವ ಶ್ರೀಮೂರುತಿಯ ಭಾವದಿಂ ಸನ್ನಿಧಿಯೊಳಾನಿನ್ನನುತಿಸೀ
ಕಾವುದೆನುತಲಿ ಸತತ ಶ್ರೀದ ನಮಿಸುವೆ ಮಹಿತ ಜೀವ ಜೀವರಿಗೆಲ್ಲ ಸಿರಿಯೀವನಲ್ಲ 4
ಜಯಮಕ್ಕೆ ಜಾಜೀಶ ಚನ್ನಕೇಶವನಡಿಗೆ
ಜಯಮಕ್ಕೆ ವೈದ್ಯೇಶನಾಮಾಯಕೆ
ಜಯವುತಾನಾಗಲೀ ಓಷಧೀಲತೆಗಳಿಗೆ
ಜಯ ಜಯವು ಗೋಗಳಿಗೆ ವೈದ್ಯವೃಂದಕ್ಕೆ 5
ಆವರೋಗವೆ ಯೆನಗೆ ದೇವ ಧನ್ವಂತ್ರೀ ಪ
ಸಾವಧಾನದಿಯೆನ್ನ ಕೈಪಿಡಿದು ನೋಡೋ ಅ ಪ
ಹರಿಮೂರ್ತಿ ಕಾಣಿಸದು ಎನ್ನ ಕಂಗಳಿಗೆ
ಹರಿಕೀರ್ತನೆ ಕೇಳದೆನ್ನ ಕಿವಿಗಳಿಗೆ
ಹರಿಯ ಶ್ರೀಗಂಧವಾಘ್ರಾಣಿಸದೆನ್ನ ನಾಸಿಕವು
ಹರಿಯಪ್ರಸಾದ ಜಿಹ್ವೆಗೆ ಸವಿಯಾಗದು 1
ಹರಿಪಾದ ಪೂಜಿಸೆ ಹಸ್ತಗಳು ಚರಿಸದು
ಹರಿಗುರುಗಳಂಘ್ರಿಗೆ ಶಿರ ಬಾಗದು
ಹರಿಯ ಸೇವೆಗೆ ಯೆನ್ನ ಅಂಗಗಳು ಚಲಿಸದು
ಹರಿಯಾತ್ರೆಗೆನ್ನ ಕಾಲುಗಳೇಳದೋ 2
ಅನಾಥಬಂಧು ಶ್ರೀವಿಜಯವಿಠ್ಠಲರೇಯ
ಯೆನ್ನ ಭಾಗ್ಯದ ಸ್ವಾಮಿಯಾಗಿ ನೀನೊ
ಅನಾದಿಕಾಲದ ಘನರೋಗವನೆ ಬಿಡಿಸು
ನಿನ್ನ ಉಪಕಾರವ ನಾನೆಂದಿಗೂ ಮರೆಯೇ 3
೧೪)ನಿಡಗುರುಕಿ ಜೀವೂಬಾಯಿ
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ
ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ
ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ
ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ
ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ
ಇನ್ನು ಪಾಲಿಸು ದೇವನೆ
ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ
ಇನ್ನು ಕರುಣಿಸೊ ಕೇಶವಾ
ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ
ನಿನ್ನ ಮೊರೆಯಿಡುವೆ ಹರಿಯೇ
ಚನ್ನ ಶ್ರೀಗೋಪಾಲ ಗೋವಿಂದ ಕೇಶವ
ನಿನ್ನ ನಾಮನಿರಂತರವು ಪಾ-
ವನ್ನ ಮಾಡಲಿ ಎನ್ನ ಜಿಹ್ವೆಯಾ 1
ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ
ಭೇದವಿಲ್ಲದೆ ಕರುಣಿಸೊ
ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ-
ಮಾದರವ ನಿತ್ತು ಸಲಹೊ
ಸಾಧು ಜನರೊಡಗೂಡಿ ಮೋದ ಪಡುವ ಭಾಗ್ಯ
ಮಾಧವನೆ ದಯಪಾಲಿಸೋ
ಶ್ರೀದ ಶ್ರೀಭೂರಮಣ ಮಾಧವ ಜನಾರ್ದನ
ಕ್ರೋಧಿ ಸಂವತ್ಸರವು ಭಕುತರ
ಕ್ರೋಧಗಳ ಕಳೆಯುತ್ತ ಸಲಹಲಿ2
ಶರಣೆಂದು ಬೇಡುವೆ ಪರಿಪರಿ ಅಘಗಳ
ಪರಿಹರಿಸೆಂದು ನಾ ಸ್ಮರಿಸಿಬೇಡುವೆನು
ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ
ಹರುಷದಿ ನೆಲಸೆನ್ನ ಹೃದಯದಲಿ ದೇವ
ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ
ಕಡುಭಾಗವತರ ಸಂಗವನೆ ನೀಡೈ
ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ
ತಡೆಯದಲೆ ಪಾಲಿಸುತ ಪೊರೆ ಶ್ರೀ
ಕಮಲನಾಭ ವಿಠ್ಠಲನೆ ದಯದಲಿ 3
೧೫)ಪ್ರಸನ್ನ ಶ್ರೀನಿವಾಸದಾಸರು
ರೋಗ ಪರಿಹಾರ ಸ್ತುತಿ
ಗುರುಗ ಧನ್ವಂತರೀ ವರಾಹ ನರಹರಿ ನಿನ್ನಾ
ಚರಣಕೆರಗುವೆ ಎನ್ನ ಬಿನ್ನಪಕೇಳಿ ಪೊರೆ ಇವಳನ್ನಾ ಪ
ಉದರ ಶೂಲಿ ಎನಲು ವೈದ್ಯಪಂಡಿತರು
ಶಸ್ತ್ರ ಪ್ರಯೋಗಿಸಲಿಹರು ಅವಶ್ಯ ಇಲ್ಲದಲೆ 1
ಶಸ್ತ್ರದ ವೈಷಮ್ಯ ಬಾಧೆಗಳ ಕಳೆದು
ನಿತ್ರಾಣ ನರ ಉದರ ಮಾಂದ್ಯಗಳ ತಿದ್ದಿ ಕಾಪಾಡು 2
ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸ ಘೃಣಿಯೇ
ನಿನ್ನ ದಯದಿಂದಲೇ ಜೀವರು ನಮ್ಮೆಲ್ಲರ ಯೋಗ ಕ್ಷೇಮಗಳು 3
🖋 ಪ್ರಿಯಾ ಪ್ರಾಣೇಶ ಹರಿದಾಸ
( ಕವಿಯತ್ರಿ , ಬರಹಗಾರ್ತಿ)
ನಾ ಅಹಂ ಕರ್ತಾ, ಹರಿ ಕರ್ತಾಃ
Comments
Post a Comment