Posts

ಲೇಖನ :- ನವರಾತ್ರಿ ಜೀವನ‌ಕೆ ಪಾಠ ಶಾಂತಿಯ ತೋಟ (ಭಾಗ - ೩)

Image
ಲೇಖನ :- ನವರಾತ್ರಿ ಜೀವನ‌ಕೆ ಪಾಠ ಶಾಂತಿಯ ತೋಟ ಭಾಗ - ೩ ನವರಾತ್ರಿಯ ಈ ಹತ್ತು ದಿನಗಳು ಜೀವನ ನೀತಿ ರೀತಿಗೆ ಇದೊಂದು ಪಾಠ ಇದ್ದಂತೆ. ನಮ್ಮ ಸನಾತನ ಧರ್ಮದಲ್ಲಿ ಬರುವ ಪ್ರತಿ ಹಬ್ಬವು ಒಂದೊಂದು ಪಾಠ ಕಲಿಸುತ್ತದೆ. ಅದಕ್ಕಂತೆಯೇ   ನಮ್ಮ ಭಾರತ ದೇಶ ಪೂಜ್ಯನಿಯವಾಗಿದೆ. ಪ್ರದೇಶಾನುಸಾರ ಆಚರಣೆಗಳಲ್ಲಿ ವ್ಯತ್ಯಾಸವಿದೆ: ಕರ್ನಾಟಕದಲ್ಲಿ ಮೈಸೂರು ದಸರಾ, ಗೊಂಬೆ ಹಬ್ಬ ಮತ್ತು ಆಯುಧಪೂಜೆ ಪ್ರಸಿದ್ಧ. ಗುಜರಾತಿನಲ್ಲಿ ಗರ್ಭಾ ಮತ್ತು ಡಾಂಡಿಯಾ ನೃತ್ಯಗಳು ನಡೆಯುತ್ತವೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ವಿಶೇಷ ಮಹತ್ವ ಪಡೆದಿದೆ. ತಮಿಳುನಾಡಿನಲ್ಲಿ ಗೊಲು ಬೊಂಬೆಗಳ ಪ್ರದರ್ಶನದ ಸಂಪ್ರದಾಯವಿದೆ. ಕೇರಳದಲ್ಲಿ ಸರಸ್ವತಿ ಪೂಜೆ ಮತ್ತು ವಿದ್ಯಾರಂಭ ಆಚರಣೆ ನಡೆಯುತ್ತದೆ. ಕರ್ನಾಟಕದ ನವರಾತ್ರಿ ಕರ್ನಾಟಕದಲ್ಲಿ ನವರಾತ್ರಿಯು ಮೈಸೂರು ದಸರಾಯೊಂದಿಗೆ ವಿಶೇಷವಾಗಿ ಪ್ರಸಿದ್ಧವಾಗಿದೆ. ಚಾಮುಂಡೇಶ್ವರಿ ದೇವಿಯ ಆರಾಧನೆ, ಅರಮನೆಯ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಜಯದಶಮಿಯ ಜಂಬೂಸವಾರಿ ಈ ಹಬ್ಬದ ಪ್ರಮುಖ ಆಕರ್ಷಣೆಗಳು. ಮನೆಯಲ್ಲಿ ನಡೆಯುವ ಗೊಂಬೆ ಹಬ್ಬವು ಮಕ್ಕಳಿಗೆ ಪುರಾಣಕಥೆಗಳು, ದೇವತೆಗಳ ರೂಪಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಸುಂದರ ಸಂಪ್ರದಾಯವಾಗಿದೆ. ನವರಾತ್ರಿಯ ಸಂಕೇತವೆಂದರೆ ಕೆಟ್ಟ ದಿನ ಆದ ಮೇಲೆ ಒಳ್ಳೆಯದಿನ, ಅಧರ್ಮದ ಮೇಲೆ ಧರ್ಮದ ಪತಾಕೆ ಹಾರುತ್ತದೆ.ಮತ್ತು ಅಜ್ಞಾನದ ...

ಲೇಖನ :- ನವರಾತ್ರಿ ಜೀವನ‌ಕೆ ಪಾಠಶಾಂತಿಯ ತೋಟ (ಭಾಗ -೨)

Image
ಲೇಖನ :- ನವರಾತ್ರಿ ಜೀವನ‌ಕೆ ಪಾಠ ಶಾಂತಿಯ ತೋಟ ಭಾಗ -೨ ನವರಾತ್ರ ಮಹೋತ್ಸವವು ಅತ್ಯಂತ ಮುಖ್ಯವಾದುದು. ಹೆಸರೇ ತಿಳಿಸುವಂತೆ ಒಂಬತ್ತು ಅಹೋರಾತ್ರಿಗಳಲ್ಲಿ, ಅಬಾಲವೃದ್ದರೂ, ಎಲ್ಲಾ ಧರ್ಮದವರೂ, ಎಲ್ಲಾ ವರ್ಣದವರೂ, ಎಲ್ಲಾ ಆಶ್ರಮದವರೂ, ಅವರವರ ಪದ್ಧತಿಯಂತೆ ಆಚರಿಸಬೇಕಾದ ಈ ಪರ್ವವು 'ನವರಾತ್ರ'  ಪ್ರಸಿದ್ದವಾಗಿದೆ. 'ವಿಜಯದಶಮಿಗೆ ಎಂದೇ ಪ್ರಖ್ಯಾತವಾದ ಈ ಪರ್ವದ ಮುಂದಿನ ದಿನವೇ ವಿಜಯ ದಶಮಿ ಇದನ್ನು 'ದಶಾಹ' ಅಥವಾ 'ದಸರಾ' ಅಥವಾ (ಐದು ಮಹಾಪಾತಕಗಳನ್ನೂ ಮತ್ತು ಐದು ಉಪಪಾತಕಗಳನ್ನೂ ದೂರಮಾಡುವುದರಿಂದ) 'ದಶಹರ' ಎಂದು ಕರೆಯುವ ಪ್ರತಿಪತ್ತಿನಿಂದ ಚೈತ್ರಮಾಸದ ಒಂಬತ್ತು ದಿನಗಳು ಆಚರಿಸಲ್ಪಡುವ ಈ ಪರ್ವವನ್ನು ವಸಂತ ನವರಾತ್ರವೆಂಬ ಹೆಸರಿನಿಂದಲೂ, ಶರದೃತುವಿನ ಶುಕ್ಲಪಕ್ಷದ ಪ್ರಥಮೆಯಿಂದ ನವಮಿ ಪರ್ಯಂತ ಆಚರಿಸಲ್ಪಡುವ ಪರ್ವವನ್ನು ಶರನ್ನವರಾತ್ರವೆಂದೂ ಕರೆಯುತ್ತಾರೆ. ದುರ್ಗಾದೇವಿಯನ್ನು ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾದುರ್ಗಾ ಮುಂತಾದ ನಾನಾರೂಪಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಪರ್ವವಾದ್ದರಿಂದ ಇದೊಂದು ಮಹೋತ್ಸವವಾಗಿದೆ. ತಾಯಿಯ ಗರ್ಭದಿಂದ ಹೊರಬಂದಾಗಿನಿಂದ ಮಾತೃಪ್ರೇಮದ ಅಮೃತವನ್ನು ನಾವು ಸವಿಯುತ್ತ ಬೆಳೆಯುತ್ತೇವೆ. ನಾವು ಬೆಳೆಯುತ್ತ ಆ ಮಾತೃಪ್ರೇಮವೂ ಬೆಳೆಯುತ್ತ, ವಿಸ್ತಾರವಾಗುತ್ತದೆ. ಓಡಾಡುವ ಭೂಮಿ ಭೂತಾಯಿಯಾಗಿ, ನಮ್ಮ ನಾಡು ತಾಯ್ನಾಡಾಗಿ, ದೇಶದ ಭಾರತ ಮಾತೆಯಾಗಿ ಪೂಜಿತಳಾ...

ಲೇಖನ :- ನವರಾತ್ರಿ ಜೀವನ‌ಕೆ ಪಾಠ ಶಾಂತಿಯ ತೋಟ (ಭಾಗ -೧)

Image
ಲೇಖನ :- ನವರಾತ್ರಿ ಜೀವನ‌ಕೆ ಪಾಠ ಶಾಂತಿಯ ತೋಟ ಭಾಗ -೧ ನಮ್ಮ  ಧಾರ್ಮಿಕ ಪದ್ಧತಿಯಲ್ಲಿ ಪ್ರತಿ ಹಬ್ಬಕ್ಕೂ ಅದರದೇ ವಿಶೇಷತೆ ಹೊಂದಿದೆ. ಮಾಸದಲ್ಲಿ‌ ಬರುವ ಹಬ್ಬ ,ಸೃಷ್ಟಿಗೆ ಸಂಬಂಧಿಸಿದ ಹಾಗೇ ಪೂರಕವಾಗಿದೆ. ಮತ್ತು ಅದರಲ್ಲಿ ಜೀವನದ ಗುಟ್ಟು ಅಡಗಿದೆ. ಅನೇಕ ಹಬ್ಬಗಳನ್ನು  ಹಿಂದೂ ಪಂಚಾಂಗವು ಅವುಗಳ ದಿನಾಂಕಗಳನ್ನು ಗೊತ್ತುಮಾಡಿರುತ್ತದೆ.  ಹಬ್ಬಗಳು ವಿಶಿಷ್ಟವಾಗಿ, ಋತುಗಳ ಬದಲಾವಣೆಗಳೊಂದಿಗೆ ಹಿಂದೂ ಪುರಾಣದ ಘಟನೆಗಳು ಹಬ್ಬದ ಹಿನ್ನಲೆ ಮತ್ತು ಆಚರಣೆಯನ್ನು‌ ತಿಳಿಸಿಕೊಡುತ್ತದೆ. ಯುಗಾದಿ ,ಮಹಾ ಶಿವರಾತ್ರಿ, ಹೋಳಿ, ರಾಮ ನವಮಿ,ಶ್ರಾವಣ ಮಾಸದ ವರಮಹಾಲಕ್ಷ್ಮಿ ವೃತ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದುರ್ಗಾ ಪೂಜೆ, ಮತ್ತು ದೀಪಾವಳಿ, ಇನ್ನು‌ ಹಲವು ಹಬ್ಬಗಳನ್ನು‌‌ ಆಚರಿಸಲಾಗುತ್ತದೆ. ಹಬ್ಬಗಳು ಸಾಮಾನ್ಯವಾಗಿ ದೇವರ ಮಹಾತ್ಮೆ ತಿಳಿಸಿಕೊಡಿತ್ತದೆ.  ಪ್ರತಿ ಹಬ್ಬವು‌ ದಿನನಿತ್ಯದ ಜೀವನದ ನಡುವೆಯೂ ಒಬ್ಬರಿಗೆ ದೈವತ್ವದ ಬಗ್ಗೆ ಚಿಂತಿಸಲು ನೆರವಾಗುವ ಉದ್ದೇಶದಿಂದ ಅನೇಕ ಆಚರಣೆಗಳನ್ನು ವೃದ್ಧಿಪಡಿಸಿ ಎಲ್ಲರೂ ಭಾಗವಹಿಸಬಹುದು. ಸನ್ಮಾರ್ಗ ನಡೆಯಲು ಅನೂಕುಲವಾಗುತ್ತದೆ. ನವರಾತ್ರಿನ ಹಬ್ಬದಲ್ಲಿನ ನಮ್ಮ ಜೀವನದ ಸ್ಥೂಲ ಸಾಮ್ಯತೆ ತಿಳಿಯೋಣ.  ದುರ್ಗಾಮಾತೆಯು ದುಷ್ಟರನ್ನು ಶಿಕ್ಷಿಸಿ; ಶಿಷ್ಟರನ್ನು ರಕ್ಷಿಸುವ ಅಸುರ ಶಕ್ತಿಗಳ‌ ಮರ್ಧನ ಮತ್ತು ಒಂದೊಂದು ದಿನ ದೇವಿ ದುರ್ಗೇಯ ರೂಪಗಳ ಕ...

ಗೌರಿ ಹುಣ್ಣಿಮೆ ಮತ್ತು ಸಕ್ಕರೆಬೊಂಬೆ

Image
ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ ಕೈಯಲ್ಲಿಟ್ಟಾಗ ಅದರಂದಕೆ ಮಾರು ಹೋಗಿದ್ದು, ಅದನ್ನು ಸವಿದು ಸಂತಸ ಪಟ್ಟ ನೆನಪುಗಳು ಮರುಕಳಿಸುತ್ತವೆ. ಈಗ ಇದೆಲ್ಲಾ ಇತಿಹಾಸ ಎನ್ನಬಹುದೇನೋ! ಉತ್ತರ ಕರ‍್ನಾಟಕದಲ್ಲಿ ಶೀಗಿ ಮತ್ತು ಗೌರಿ ಹುಣ್ಣಿಮೆ ದಿನ ಗೌರಿಯ ಹೆಸರಿನಲ್ಲಿ ಪಾರ‍್ವತಿಯನ್ನು ಆರಾದಿಸಿದರೆ, ಸಕ್ಕರೆ ಅಚ್ಚುಗಳಿಗೆ ಪೂಜೆಯಲ್ಲಿ ಆದ್ಯತೆ. ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳನ್ನು ಆರತಿಯ ಜೊತೆಗೆ ತಟ್ಟೆಯಲ್ಲಿಟ್ಟ ಪುಟ್ಟ ಪುಟ್ಟ ಹುಡುಗಿಯರು, ಮನೆಮನೆಗೆ ತೆರಳಿ ಗೌರಿಗೆ ಆರತಿ ಮಾಡಿ ಬರುತ್ತಾರೆ. ಅಲ್ಲದೇ ಬಣ್ಣಬಣ್ಣದ ಕೋಲುಗಳೊಂದಿಗೆ ಕೋಲಾಟದ ಹೆಜ್ಜೆ ಹಾಕುತ್ತ ಕೋಲಾಟದ ಹಾಡಾದ ಗೌರಿ ಗೌರಿ ಗಾಣಾ ಗೌರಿ ಮ್ಯಾಣಾ ಗೌರಿ ಕುಂಕುಮ ಗೌರಿ ಅರಿಶಿಣ ಗೌರಿ ಅವರಿ ಅಂತ ಅಣ್ಣನ ಕೊಡ ತೊಗರಿ ಅಂತ ತಮ್ಮನ ಕೊಡ ಎಂದು ಹಾಡುತ್ತ ಆರತಿ ಬೆಳಗುವುದೇ ಒಂದು ಸಡಗರ. ಹಾಗೇ, ಒಬ್ಬ ಹುಡುಗನಿಗೆ ಹುಡುಗಿ ಗೊತ್ತು ಮಾಡಿದ್ದರೆ, ಮದುವೆಗೆ ಮೊದಲೇ ಗೌರಿ ಹುಣ್ಣಿಮೆ ಬಂದರೆ ಗಂಡಿನವರು ಮದುವೆ ಹೆಣ್ಣಿಗೆ ಸಕ್ಕರೆ ಗೊಂಬೆ, ಸೀರೆ, ದಂಡಿ ತಂದು ಹುಡುಗಿಗೆ ಆರತಿ ಮಾಡ್ತಾರೆ. ಆರತಿ ಮಾಡಲು ಓಣಿಯಲ್ಲಿನ ಮುತ್ತೈದೆಯರನು ಕರೆದ...

ತಿರುಪತಿ ತಿಮ್ಮಪ್ಪನ ಅತೀಂದ್ರಿಯ ಮಾಹಿತಿ

Image
ತಿರುಪತಿ ತಿಮ್ಮಪ್ಪನ ಅತೀಂದ್ರಿಯ ಮಾಹಿತಿ  ದಟ್ಟವಾದ ಅರಣ್ಯ, ಮುಗಿಲು ಮುಟ್ಟುವ ಸಪ್ತಗಿರಿಗಳು, ಬೆಳ್ಳಂಬೆಳಗ್ಗೆ ಕೇಳಿಬರುವ ‘ಕೌಸಲ್ಯಾ ಸುಪ್ರಜಾ ರಾಮ...’ ಸುಪ್ರಭಾತದ ನಾದ, ಮೈ ಕೊರೆಯುವ ಚಳಿ, ಅದರ ನಡುವೆ ಲಕ್ಷಾಂತರ ಭಕ್ತರ ಬಾಯಲ್ಲಿ ಹೊರಹೊಮ್ಮುವ ‘ಗೋವಿಂದ... ಗೋವಿಂದ...’ ಎಂಬ ನಾಮಸ್ಮರಣೆ. ಇದು ತಿರುಮಲ. ಇದು ಬರಿ ಒಂದು ಸ್ಥಳವಲ್ಲ, ನಂಬಿಕೆಯ ಪರಾಕಾಷ್ಠೆ. ಬನ್ನಿ, ಇಂದಿನ ಈ ಕಥಾ ರೂಪದ ಪಯಣದಲ್ಲಿ ನಾವು ಭೂಲೋಕದ ವೈಕುಂಠವೆಂದೇ ಕರೆಸಿಕೊಳ್ಳುವ ತಿರುಮಲದ ಗರ್ಭಗುಡಿಯೊಳಗೆ ಇಣುಕಿ, ಅಲ್ಲಿನ ರಹಸ್ಯಗಳನ್ನು ಅರಿಯೋಣ. ಒಮ್ಮೆ ಮಹರ್ಷಿ ಬೃಗುವು ದೇವತೆಗಳಲ್ಲಿ ಯಾರು ಶಾಂತಮೂರ್ತಿ ಎಂದು ಪರೀಕ್ಷಿಸಲು ಹೊರಟರು. ಬ್ರಹ್ಮ, ಶಿವನ ಬಳಿ ಹೋಗಿ ಅತೃಪ್ತರಾದ ಅವರು ಅಂತಿಮವಾಗಿ ವೈಕುಂಠಕ್ಕೆ ಹೋದರು. ಅಲ್ಲಿ ಶ್ರೀಮನ್ನಾರಾಯಣನು ಲಕ್ಷ್ಮಿಯೊಂದಿಗೆ ವಿಶ್ರಮಿಸುತ್ತಿದ್ದನು. ತನ್ನನ್ನು ಗಮನಿಸದಿದ್ದಕ್ಕೆ ಸಿಟ್ಟಿಗೆದ್ದ ಬೃಗು ಮಹರ್ಷಿ ನಾರಾಯಣನ ಎದೆಗೆ ಒದ್ದರು. ಆದರೆ ನಾರಾಯಣನು ಸಿಟ್ಟಾಗುವ ಬದಲು, ಮಹರ್ಷಿಯ ಪಾದವನ್ನು ಒತ್ತಿ ಅವರ ಕಾಲಿನಲ್ಲಿದ್ದ ‘ಅಹಂಕಾರದ ಕಣ್ಣನ್ನು’ ಕಿತ್ತರು. ಈ ಘಟನೆಯಿಂದ ಕೋಪಗೊಂಡ ಲಕ್ಷ್ಮೀದೇವಿ ವೈಕುಂಠವನ್ನು ಬಿಟ್ಟು ಭೂಲೋಕಕ್ಕೆ ಬಂದು ಕೊಲ್ಲಾಪುರದಲ್ಲಿ ನೆಲೆಸಿದಳು. ತನ್ನ ಪ್ರಿಯತಮೆಯನ್ನು ಹುಡುಕುತ್ತಾ ನಾರಾಯಣನು ಶ್ರೀನಿವಾಸನಾಗಿ ಭೂಮಿಗೆ ಬಂದು ಶೇಷಾಚಲ ಬೆಟ್ಟದಲ್ಲಿ ನೆಲೆಸಿದನು. ಅಲ್ಲಿ ಆತನು ಪದ್...

ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ

Image
ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ ಇನ್ನು ಮಳೆಗಾಲ ಪ್ರಾರಂಭ ಸೃಷ್ಟಿಯು ದಟ್ಟ ಹಸಿರಿನಿಂದ ಕಂಗೊಳಿಸುತ್ತ, ನವ ವಧುವಿನಂತೆ ಶೃಂಗಾರವಾಗಿ ಕಾಣುತ್ತಾ ನೋಡುಗರ ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುವ ಹಾಗೂ ರೈತ ಭಾಂದವರಿಗೆ ಮತ್ತು ಜನರ ಜೀವನಕ್ಕೆ ಸೆಲೆಯಾಗಿ ತಣಿಸುವ ಮಳೆಗಾಲಕ್ಕೆ ಸ್ವಾಗತ ಹೇಳುತ್ತಾ.... ಇಂದಿನ ಚೈತನ್ಯದ ಚಿಲುಮೆಯ ವಿಷಯ "ಇಳೆಗೆ ಕಳೆ ಮಳೆ ಬಾಳಿಗೆ ಉತ್ಸಾಹದ ಸೆಲೆ. ಮಳೆಗಾಲ ಎಂದರೆ ಸುಂದರ ಆಹ್ಲಾದಕರ ಮನಸ್ಸಿಗೆ ಕಣ್ಣಿಗೆ ಹಿತ ನೀಡುವ ರಮಣೀಯ ಕಾಲ. ಮಳೆಗಾಲದ ದಿನಗಳು ಭಾವನಾತ್ಮಕ, ರೋಮಾಂಚಕ ಯೋಚನಾ ಲಹರಿ ಬಿತ್ತುವ ಕಾಲ. ಕವಿಮನಸ್ಸುಗಳಿಗಂತೂ ಹೇಳಿ ಮಾಡಿಸಿದ ಕಾಲ ಬಾಹಿರಿಕ ಹಚ್ಚ ಹಸಿರಿನ ಸೃಷ್ಟಿ ಕುಣಿದರೆ, ಸುರಿವ ಮಳೆಯ ತಾಳದೊಂದಿಗೆ, ಮನೆಯೊಳಗೆ ಕುಳಿತು ಮಳೆಯನ್ನು ನೋಡುತ್ತಾ ಇದ್ದರೆ, ಸುಮಧುರವಾದ ಭಾವಗಳೆಲ್ಲ ಮನಸ್ಸನ್ನು ತುಂಬುತ್ತವೆ. ಆ ರೀತಿ ಮನದುಂಬುವ ಭಾವಗಳು ಸಂತೋಷದ ಅಲೆಗಳನ್ನೂ ಹೊಮ್ಮಿಸುವ ಕಾಲ್, ಹಾಗೇ ಸುಪ್ತ ಮನಸ್ಸಿನ ಮೂಲೆಯಲ್ಲಿ ಅಡಗಿ ಕುಳಿತ  ಸವಿ ನೆನಪುಗಳನ್ನು ಸಹಾ ಈಚೆ ಬರುವ ಕಾಲ - ಅಂತಹ ಭಾವನೆಗಳ ತರಂಗಗಳನ್ನು ಸ್ವೀಕರಿಸುವ ರೀತಿಯನ್ನು ಹೊಂದಿಕೊಂಡು, ನಮ್ಮ ಮನಸ್ಸಿನ ಮೇಲೆ ಗಾಢ ಅಚ್ಚೊತ್ತಬಲ್ಲದು ಈ ಮಳೆಗಾಲದ ದಿನಗಳು ಭಾವಜೀವಿಯ ಭಾವನೆಗಳಿಗೆ ಕಾವ್ಯಾತ್ಮಕ ರೆಕ್ಕೆಗಳನ್ನು ಕಟ್ಟಿಕೊಡುವ ಶಕ್ತಿಯುಳ್ಳ ಮಳೆಗಾಲದ ರಮ್ಯತೆ, ಗಮ್ಯತೆ ಅದೆಷ್ಟೋ ಸಂದರ್ಭಗಳಲ್ಲಿ ...

ಲೇಖನ :- ಚಿದಂಬರನಾಮ ಝೇಂಕರಿಸಿದ ಸಂತ ರಾಜಾರಾಮ

Image
       ಶ್ರೀ ಚಿದಂಬರ ಮಹಾಸ್ವಾಮಿಗಳು   ಶ್ರೀ ಚಿದಂಬರ ಭಕ್ತ  ಸಂತ ಶ್ರೀ                ರಾಜಾರಾಮ್   ಲೇಖನ :- ಚಿದಂಬರನಾಮ  ಝೇಂಕರಿಸಿದ ಸಂತ ರಾಜಾರಾಮ ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ । ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್ ಧರ್ಮ ಕಳೆಗುಂದಿದಾಗೆಲ್ಲ, ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ. ಇಡಿಯ ಪ್ರಪಂಚದಲ್ಲಿ ಯಾವಾಗ-ಯಾವಾಗ ಧರ್ಮ ಮಲೀನವಾಗಿ ಅಧರ್ಮದ ಮುಂದೆ ಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವ ಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದು ಬರುತ್ತೇನೆ ಎನ್ನುತ್ತಾನೆ ಕೃಷ್ಣ. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ । ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ ಎಂದು ಕೃಷ್ಣ ಹೇಳಿದ್ದಾನೆ. ದೇಶ ಕಾಲ ಭೇದ ತೋರದೆ ಬೇರೆಬೇರೆ ಪ್ರಾಂತಗಳಲ್ಲಿ ಬೇರೆ ಬೇರೆ ರೂಪಗಳಿಂದ ಅವತರಿಸಿ ಬಂದು ಶಿಷ್ಟ ರಕ್ಷಣೆ ದುಷ್ಟ  ಶಿಕ್ಷಣೆ ಭಗವಂತ ಮಾಡಿದ್ದಾನೆ. ಆದರಂತೆಯೇ ನಮ್ಮ ಕರ್ನಾಟಕದ ಸುಕ್ಷೇತ್ರ ಮುರಗೋಡ ಗ್ರಾಮದ ಭಕ್ತ ವಾತ್ಸಲನಾದ ಭಕ್ತರ ಅಭೀಷ್ಟವ ಈಡೇರಿಸುವ  ಭಕ್ತ...