ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ
ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ
ಇನ್ನು ಮಳೆಗಾಲ ಪ್ರಾರಂಭ ಸೃಷ್ಟಿಯು ದಟ್ಟ ಹಸಿರಿನಿಂದ ಕಂಗೊಳಿಸುತ್ತ, ನವ ವಧುವಿನಂತೆ ಶೃಂಗಾರವಾಗಿ ಕಾಣುತ್ತಾ ನೋಡುಗರ ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುವ ಹಾಗೂ ರೈತ ಭಾಂದವರಿಗೆ ಮತ್ತು ಜನರ ಜೀವನಕ್ಕೆ ಸೆಲೆಯಾಗಿ ತಣಿಸುವ ಮಳೆಗಾಲಕ್ಕೆ ಸ್ವಾಗತ ಹೇಳುತ್ತಾ....
ಇಂದಿನ ಚೈತನ್ಯದ ಚಿಲುಮೆಯ ವಿಷಯ
"ಇಳೆಗೆ ಕಳೆ ಮಳೆ ಬಾಳಿಗೆ ಉತ್ಸಾಹದ ಸೆಲೆ.
ಮಳೆಗಾಲ ಎಂದರೆ ಸುಂದರ ಆಹ್ಲಾದಕರ
ಮನಸ್ಸಿಗೆ ಕಣ್ಣಿಗೆ ಹಿತ ನೀಡುವ ರಮಣೀಯ ಕಾಲ. ಮಳೆಗಾಲದ ದಿನಗಳು ಭಾವನಾತ್ಮಕ, ರೋಮಾಂಚಕ ಯೋಚನಾ ಲಹರಿ ಬಿತ್ತುವ ಕಾಲ. ಕವಿಮನಸ್ಸುಗಳಿಗಂತೂ ಹೇಳಿ ಮಾಡಿಸಿದ ಕಾಲ ಬಾಹಿರಿಕ ಹಚ್ಚ ಹಸಿರಿನ ಸೃಷ್ಟಿ ಕುಣಿದರೆ, ಸುರಿವ ಮಳೆಯ ತಾಳದೊಂದಿಗೆ, ಮನೆಯೊಳಗೆ ಕುಳಿತು ಮಳೆಯನ್ನು ನೋಡುತ್ತಾ ಇದ್ದರೆ, ಸುಮಧುರವಾದ ಭಾವಗಳೆಲ್ಲ ಮನಸ್ಸನ್ನು ತುಂಬುತ್ತವೆ. ಆ ರೀತಿ ಮನದುಂಬುವ ಭಾವಗಳು ಸಂತೋಷದ ಅಲೆಗಳನ್ನೂ ಹೊಮ್ಮಿಸುವ ಕಾಲ್, ಹಾಗೇ ಸುಪ್ತ ಮನಸ್ಸಿನ ಮೂಲೆಯಲ್ಲಿ ಅಡಗಿ ಕುಳಿತ ಸವಿ ನೆನಪುಗಳನ್ನು ಸಹಾ ಈಚೆ ಬರುವ ಕಾಲ - ಅಂತಹ ಭಾವನೆಗಳ ತರಂಗಗಳನ್ನು ಸ್ವೀಕರಿಸುವ ರೀತಿಯನ್ನು ಹೊಂದಿಕೊಂಡು, ನಮ್ಮ ಮನಸ್ಸಿನ ಮೇಲೆ ಗಾಢ ಅಚ್ಚೊತ್ತಬಲ್ಲದು ಈ ಮಳೆಗಾಲದ ದಿನಗಳು ಭಾವಜೀವಿಯ ಭಾವನೆಗಳಿಗೆ ಕಾವ್ಯಾತ್ಮಕ ರೆಕ್ಕೆಗಳನ್ನು ಕಟ್ಟಿಕೊಡುವ ಶಕ್ತಿಯುಳ್ಳ ಮಳೆಗಾಲದ ರಮ್ಯತೆ, ಗಮ್ಯತೆ ಅದೆಷ್ಟೋ ಸಂದರ್ಭಗಳಲ್ಲಿ ಎಲ್ಲರ ಮೇಲೂ ಮೋಡಿ ಮಾಡುವುದಂತೂ ನಿಜ.
ಮಳೆ ಎಂದರೆ ಸಂಭ್ರಮ. ಆತಂಕ, ಹಸುರು ಅದರ ಜೊತೆ ಮಳೆ ಬೀಳುವಾಗ ಗಾಳಿ ನವಿರಾಗಿ ಬೀಸಿದರೆ ಮಳೆ ನಿಂತು ಸುರಿಯುತ್ತದೆ. ಹೊಲ, ಗದ್ದೆಗಳು
ನೆನೆಯುತ್ತವೆ. ಮಳೆ ಬೀಳುವಾಗ
ಪ್ರಕೃತಿ ಹಸುರು ಹಾಸಿಗೆಯಿಂದ ಹಾಸಿದಂತೆ,
ಮಳೆ ಬರುವ ಮುಂಚೆ, ಕಪ್ಪೆಗಳು ವಟಗುಡುತ್ತಾ
ಮೇಘರಾಜನನ್ನು ಕರೆಯುತ್ತವೆ.
ಆಹಾ !! ಆಹಾ !! ಈ ಮಳೆಯ ಬಗ್ಗೆ ಎಷ್ಟು
ವರ್ಣಿಸಿದರೂ ಸಾಲದು.
ಮಳೆಯಲ್ಲಿ ನೆನೆಯುದೆಂದರೆ ಪ್ರಕೃ ತಿಯ ಜತೆಗೆ ಒಂದಾಗುವ ಕಾಲ.ಮಳೆಯಲ್ಲಿ ನೆನೆಯುವುದೇ ಅದ್ಭುತ ಅನುಭವ.
ಹಾಗಾದರೆ..... ಸ್ನೇಹಿತರೇ
ಮಳೆಯ ಬಗ್ಗೆ ತಿಳಿಯೋಣ...
ಮಳೆಗೆ ವರ್ಷ, ಪರ್ಜನ್ಯ, ಮಳೆಯ ಸುರಿತ, ವೃಷ್ಟಿಕಾರು ( ಮಳೆಗಾಲ) ಎಂದು ಕರೆಯುತ್ತಾರೆ.
ಮಳೆಗಾಲವನ್ನು ಮಾನ್ಸೂನ್ ಎಂದು ಕೆಯಲಾಗುತ್ತದೆ, ಇದು ಜೂನ್ ದಿಂದ ಸೆಪ್ಟೆಂಬರ್ ವರೆಗೆ ಮುಂದುವರಿಯುತ್ತದೆ. ಹಳ್ಳಕೊಳ್ಳಗಳು ನದಿಗಳು ಮತ್ತು ಸರೋವರಗಳು ಮಳೆಯಿಂದ ತುಂಬಿಕೊಳ್ಳುವ ಕಾಲ.
ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶಕ್ಕೆ ತಲುಪಿ ಅಲ್ಲಿ ಮೊಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೊಡಗಳ ಸಾಂದ್ರತೆ ಹೆಚ್ಚಾಗಿ ಅಲ್ಲಿನ ವಾತಾವರಣ ತಂಪಾದಾಮೊಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ಮೋಡದ ಮೂಲಕ ಮಳೆ ಬಿದ್ದ ನೀರು ಹಳ್ಳಕೊಳ್ಳಗಳಾಗಿ ಹರಿದು , ನದಿಗಳ ಮೂಲಕ ಮತ್ತೆ ಸಾಗರವನ್ನು ತಲುಪುವುದು. ಈ ಚಕ್ರ ಮತ್ತೆ ಮುಂದುವರಿಕೆ ಇದನ್ನು ವೈಜ್ಞಾನಿಕಪರಿಭಾಷೆಯಲ್ಲಿ ಜಲಚಕ್ರ ಎಂದು ಕೆಯಲಾಗುತ್ತದೆ. ಭೂಮಿಯ ಮೇಲಿನ ಮರಗಿಡಗಳು ಸಹ ಗಣನಿಯ ಪ್ರಮಾಣದಲ್ಲಿ ತೇವಾಂಶವನ್ನು ಹಿರಿ ವಾತಾವರಣಕ್ಕೆ ಸೇರಿಸುತ್ತದೆ.
ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಮತ್ತು ಭೂಮಿ ಮತ್ತು ಅದರ ವಾತಾವರಣದ ನಡುವೆ ನೀರಿನ ನಿರಂತರ ವಿನಿಮಯವನ್ನು ನಿರ್ವಹಿಸುವ ಜಲವಿಜ್ಞಾನ ಚಕ್ರವು ಮೂರು ಪ್ರಕ್ರಿಯೆಗಳನ್ನು ಒಳಗೊಂಡಿದೆ - ಆವಿಯಾಗುವಿಕೆ, ಘನೀಕರಣ ಮತ್ತು ಮಳೆ . ಭೂಮಿಯ ಮೇಲ್ಮೈಯಲ್ಲಿರುವ ವಿವಿಧ ಜಲಮೂಲಗಳಲ್ಲಿರುವ ನೀರು ಆವಿಯಾಗುತ್ತದೆ ಮತ್ತು ಗಾಳಿಯ ಪ್ರವಾಹಗಳಿಂದ ಸಾಗಿಸಲ್ಪಡುತ್ತದೆ ಮತ್ತು ಮೋಡಗಳನ್ನು ರೂಪಿಸಲು ಘನೀಕರಣಗೊಳ್ಳುತ್ತದೆ ಮತ್ತು
ಅಂತಿಮವಾಗಿ ಮಳೆಯ ರೂಪದಲ್ಲಿ ಭೂಮಿಯ ಮೇಲ್ಮೈಗೆ ಮರಳುತ್ತದೆ. ಗಾಳಿಯಲ್ಲಿರುವ ನೀರಿನ ಆವಿಯ ಸರಾಸರಿ ಪ್ರಮಾಣವು ಇಡೀ ಭೂಮಿಯ ಮೇಲ್ಮೈಯನ್ನು ಆವರಿಸಿರುವ 1-ಇಂಚಿನ ನೀರಿನ ಪದರಕ್ಕೆ ಬಹುತೇಕ ಸಮಾನವಾಗಿರುತ್ತದೆ ಎಂಬುದನ್ನು ಇಲ್ಲಿ ಗಮನಿಸುವುದು ಸ್ಪಷ್ಟವಾಗಿದೆ.
ಭಾರತ ಮತ್ತು ಮಧ್ಯಪ್ರಾಚ್ಯದಂತಹ ಬಿಸಿಲು ಹೆಚ್ಚಿರುವ ಹಾಗೂ ಒಣಪ್ರದೇಶಗಳಲ್ಲಿ ಮಳೆಯನ್ನು ಆನಂದ ಮತ್ತು ಉಲ್ಲಾಸದಿಂದ ಸ್ವಾಗತಿಸಲಾಗುತ್ತದೆ.
ಭಾರತದ ಮೇಘಾಲಯದ ಮಾಸಿನ್ರಾಮ್ ಮತ್ತು ಚಿರಾಪುಂಜಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಸರಾಸರಿ ವಾರ್ಷಿಕ ಮಳೆ ಬೀಳುವ ಸ್ಥಳಗಳೆಂದು ಹೆಸರಾಗಿವೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಆಗುಂಬೆ ಅತಿ ಹೆಚ್ಚು ಮಳೆ ಬೀಳುವ ಸ್ಥಳವಾಗಿದೆ.
ಮಳೆ, ಹಿಮದ ಮಳೆ, ಆಲಿಕಲ್ಲು ಮಳೆ ಅಂತ ಬೀಳುತ್ತದೆ, ನಮ್ಮಲ್ಲಿ ಮಳೆ ಬಿಳ್ಳುತ್ತದೆ ಕೆಲವೊಮ್ಮೆ ಆಲಿಕಲ್ಲು ಬೀಳುವುದು ಉಂಟು.
ಇನ್ನು ನಮ್ಮ ಭಾರತಕ್ಕೆ ಮುಂಗಾರು ಮಳೆ ಎಂದರೆ ನೈರುತ್ಯ ದಿಕ್ಕಿನಿಂದ ಬರುವ ಮಳೆ. ...
ಮುಂಗಾರುಮಳೆ ಅತ್ಯಂತ ಪ್ರಮುಖವಾದುದು. ಭಾರತದ ಬಹಳಷ್ಟು ಬೆಳೆ, ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆಗೆ ಅರಬ್ಬಿ ಸಮುದ್ರದಿಂದ ಹುಟ್ಟಿ ಬರುವ ನೈರುತ್ಯ ವಾಣಿಜ್ಯ ಮಾರುತಗಳು ತರುವ ಮುಂಗಾರು ಮಳೆ ಭಾರತದ ಜೀವ ಜಲಸಂಪನ್ಮೂಲ; ಜೀವನಾಧಾರ ಅವಲಂಬಿತವಾಗಿದೆ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತದೆ.
ಹಿಂಗಾರು ಮಳೆ ಅಥವಾ ಈಶಾನ್ಯ ಮಾರುತಗಳಿಂದ (ಉತ್ತರ ಮತ್ತು ಪೂರ್ವದ ಮಧ್ಯದ ದಿಕ್ಕು) ಬರುವ ಮಳೆ ಉತ್ತರ ದಿಕ್ಕಿನಿಂದ ಮಾರುತಗಳು (ಗಾಳ) ಆರಂಭವಾಗಿ ವಾಯು ಭಾರ ಕುಸಿತವಿರುವ ಬಂಗಾಳ ಕೊಲ್ಲಿ ಪ್ರವೇಶಮಾಡಿ ಭಾರತದ ಪೂರ್ವ ತೀರದ ರಾಜ್ಯಗಳಿಗೆ ಮಳೆ ತರುವುದು.
ಈ ಮಳೆಗಾಲದಲ್ಲಿ ಜನರ ಜೀವನವು ಆಸ್ತವ್ಯಸ್ತ ಆಗುತ್ತದೆ. ಈ ಮಳೆಗಾಲದಲ್ಲಿ ರೋಗರುಜಿನಗಳು ಹರಡುವುದು ಸಾಮಾನ್ಯ. ಆದ್ದರಿಂದ ಆದಷ್ಟು ಜನರು ಅನಾಹುತ ಆಗುವ ಮೊದಲು ತಮ್ಮ ತಮ್ಮ ಪ್ರಾದೇಶಿಕ ಅನುಗುಣವಾಗಿ ಸುರಕ್ಷತೆಯನ್ನು ಕಾಯ್ದು ಕೊಳ್ಳಬೇಕು.
ಮಳೆಗಾಲದ ಆರಂಭದಲ್ಲಿ ಶಾಲೆ ಕಾಲೇಜಿನ ಬಾಗಿಲು ತೆರೆಯುತ್ತವೆ. ವಿದ್ಯಾರ್ಥಿಗಳು ಮೆಲ್ಲನೆ ಬರುತ್ತಿರುವ ಮಳೆಯ ಜತೆ, ಯಾವುದೋ ಮೂಲೆಯಲ್ಲಿ ಬಿದ್ದಿರುವ ಕಳೆದ ವರ್ಷದ ಕೊಡೆ ಬಿಡಿಸಿ ಹೋಗುವ ಸಂಧರ್ಭ .
ಗುಡುಗು ಮತ್ತು ಮಿಂಚು ಇರುವ ಪ್ರದೇಶದಲ್ಲಿ ನೀವು ವಾಸಿಸುತ್ತಿದ್ದರೆ, ಚಂಡ ಮಾರುತದ ಸಮಯದಲ್ಲಿ ಒಳಗೆ ಉಳಿಯುವುದು ಉತ್ತಮ. ನೀವು ಹೊರಗೆ ಹೋದಾಗ ಎತ್ತರದ ಮರಗಳು ಅಥವಾ ಲೋಹದ ವಸ್ತುಗಳನ್ನು ಇರುವಲ್ಲಿ ಹೆಚ್ಚು ಹೊತ್ತು ಸಮಯ ಕಳೆಯಬೇಡಿ
ಇನ್ನು ಹಳ್ಳಿಗಾಡಿನ ಪ್ರದೇಶದಲ್ಲಿ ಗುಡ್ಡಗಳಿಗೆ ಮೇಯಲು ಹೋದ ದನಕರುಗಳು ಆಗಾಗ ಮಳೆಗೆ ಸಿಕ್ಕಿಕೊಳ್ಳುವುದುಂಟು. ಜಾಸ್ತಿ ಮಳೆ ಬಂದರೆ, ತೋಟದಾಚೆಯ ತೋಡಿನಲ್ಲಿ ನೀರು ತುಂಬಿಕೊಳ್ಳುತ್ತದೆ - ಅದೊಂದು ಪುಟ್ಟ ಪ್ರವಾಹವೇ ಸರಿ. ಆಗ ಹಸುಕರುಗಳು ಹಟ್ಟಿಗೆ ವಾಪಸಾಗಲು ಸ್ವಲ್ಪ ಕಷ್ಟವಾಗುತ್ತದೆ. ಮನೆಯವರು ಹಗ್ಗದೊಂದಿಗೆ ಹೋಗಿ, ಅವುಗಳ ಕತ್ತಿನ ಸುತ್ತ ಹಗ್ಗ ಬಿಗಿದು, ಪ್ರವಾಹ ತುಂಬಿದ ಆ ತೋಡನ್ನು ದಾಟಿಸಿ ಹಟ್ಟಿಗೆ ಕರೆತರುತ್ತಾರೆ.
ಮಳೆಗಾಲ ಆರಂಭವಾಗಿ ಒಂದೆರಡು ತಿಂಗಳುಗಳಲ್ಲಿ ರೈತರು ಗದ್ದೆ ಕಳೆ ಕೀಳುವ ಕೆಲಸ ಶುರು ಮಾಡಿ, ಬಿತ್ತಲು ಸಜ್ಜಾಗುತ್ತಾರೆ. ಬರಡಾದ ಭೂಮಿಯಲ್ಲಿ ರೈತ ಮಳೆರಾಯನನ್ನು ಕರೆಯುವ ಕ್ಷಣ.
ಈ ಭೂಮಿಯ ಮೇಲೆ ಎಲ್ಲವೂ ಮಳೆಯ ಮೇಲೆ ನಿಂತಿದೆ. ಬೇಸಿಗೆಯ ಧಗೆಯಿಂದ ಕಾದ ಭೂಮಿ ತಂಪಾಗಿಸುವುದು ಈ ಮಳೆಗಾಲ.ಹಸುರಿಲ್ಲದೇ ಪ್ರಕೃತಿಗೆ ಉಸಿರಿಲ್ಲ, ನೀರಿಲ್ಲ ಎಂಬ ಕೆಲವು ಚಿಂತೆಗಳು ರೈತನಿಗೆ ಇರಲ್ಲ. ಮಳೆ ಬಂದರೆ, ಕಾಲಚಕ್ರದ ತರ. ರೈತನ ದಿನ ನಿತ್ಯ ಕಾಯಕ ನೆಮ್ಮದಿಯ ವಾತಾವರಣದಲ್ಲಿ ಸಾಗುತ್ತದೆ. ಇನ್ನು
ಭಾರತಿಯ ರೈತರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಕೆಂದರೆ ಅವರು ತಮ್ಮ ಬೆಳೆಗಳನ್ನು ಬೆಳೆಸಲು ಅವಲಂಬಿತಾರಾಗಿದ್ದಾರೆ. ರೈತರು ಸಾಮಾನ್ಯವಾಗಿ ಮಳೆಯ ನೀರನ್ನು ಸಂಗ್ರಹಿಸಲು ಅನೇಕ ಹೊಂಡ ಮತ್ತು ಕೊಳಗಳನ್ನು ಮಾಡುತ್ತಾರೆ. ಮಳೆಗಾಲವು ಕೃಷಿಕರಿಗೆ ದೇವರ ವರನವಾಗಿದೆ. ಅವರು ಮಳಿ ದೇವರನ್ನು ಪೂಜಿಸುತ್ತಾರೆ.
ಸ್ನೇಹಿತರೆ ಇಲ್ಲಿಯವರಿಗೆ ಮಳೆ ವರ್ಣನೆ ಮಳೆಯ ಮಾಹಿತಿ ಮತ್ತು ಜನರ ಜೀವನ ಬದುಕು ತಿಳಿದಾಯಿತು.
ಇನ್ನು ಸಾಹಿತ್ಯ ವಿಷಯದಲ್ಲಿ ನೋಡುವುದಾದರೆ ಕವಿಮನಗಳಿಗೆ ಗರಿಗಳನ್ನು ಬಿಚ್ಚಿ ನರ್ತಿಸುವ ನವಿಲಿನ೦ತೆ ,
ಭಾವನೆಗಳು ಹೊರಹೋಮ್ಮವ ರಮಣೀಯ ಕಾಲ. ಮನಭವದ ಭಾವನೆಯ ಬಂಡಿ ಏರಿ ಹೊರಡುವ ಕಾಲ, ಕವಿ ರಮಿಸುವ ಏಕಾಂತ ಕಾಲ ಈ ಮಳೆಗಾಲ. ಇನ್ನು ಸಾಹಿತ್ಯ ಅವಲೋಕನದ ಮಳೆಯ ಸಾಹಿತ್ಯಗಳು...
ಕುವೆಂಪು ರವರ ಪಕ್ಷಿಕಾಶಿ ಸಂಕಲನದ ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಎಂಬ ಕವನ..
ಕದ್ದಿಂಗಳು: ಕಗ್ಗತ್ತಲು
ಕಾರ್ಗಾಲದ ರಾತ್ರಿ.
ಸಿಡಿಲ್ಮಿಂಚಿಗೆ ನಡುಗುತ್ತಿದೆ
ಪರ್ವತ ವನಧಾತ್ರಿ.
ತುದಿಯಿಲ್ಲದೆ ಮೊದಲಿಲ್ಲದೆ
ಹಿಡಿದಂಬರವನು ತಬ್ಬಿದೆ
ಕಾದಂಬಿನಿ ರಾಶಿ;
ನಿರ್ದಯ ಕಠಿಣಾಘಾತದಿ
ಕುಂಭಿನಿಯನು ಅಪ್ಪಳಿಸಿದೆ
ಘೀಳಿಟ್ಟುರೆ ಭೋರೆನ್ನುತೆ
ಬಿರುಗಾಳಿಯು ಬೀಸಿ !
ಹೊಂಬಳ್ಳಿಯು ಹೊಮ್ಮಿದವೊಲು
ಥಳ್ಳೆನೆ ಮುಗಿಲಂಚು,
ಇರುಳಲಿ ಹಗಲಿಣುಕಿದವೊಲು
ಹಾವ್ನಾಲಗೆ ಮಿಂಚು
ನೆಕ್ಕುತಲಿದೆ ಕತ್ತಲೆಯನು;
ಕುಕ್ಕುತಲಿದೆ ಬುವಿಗಣ್ಣನು
ಮಿಂಚಕ್ಕಿಯ ಚಂಚು!
ಆಕಾಶವೆ ನೀರಾಯ್ತೆನೆ
ಸುರಿಯುತ್ತಿದೆ ಭೋರ್ಭೋರನೆ
ಮುಂಗಾರ್ಮಳೆ ಧಾರೆ;
ಕುವೆಂಪು ಅವರು ಮಳೆಗಾಲದ ಯಾವ ರೀತಿಯ ಹವಾಮಾನ ಮತ್ತು ವಾತಾವರಣ ಎಂಬುದನ್ನು ಪದಗಳ ಮೂಲಕ ವರ್ಣಿಸಿದ್ದಾರೆ.
ಬೇಂದ್ರೆಯವರಿಗೆ ಶ್ರಾವಣ ಮಾಸ ಸಂಭ್ರಮದ ಮಾಸ. ರಭಸದಿಂದ ಹುಯ್ಯುವ ಶ್ರಾವಣದ ಮಳೆಯನ್ನು ಅವರು ರಾವಣನ ಕುಣಿತಕ್ಕೆ ಹೋಲಿಸುತ್ತಾರೆ:
‘ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||’
ಈ ಕವನದಲ್ಲಿ ಶ್ರಾವಣಮಾಸದಲ್ಲಿ ಆಗುವ ಮಳೆ ಸೃಷ್ಟಿ ಮತ್ತು ಭೂರಮೆ ಶೃಂಗಾರ ಬಗ್ಗೆ ವರ್ಣಿಸಿದ್ದಾರೆ.ಕುರುಡು ಪ್ರೀತಿಯ ಹಾಂಗ
ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ ||೧||
೧೬ ನುಡಿಯ ಈ ಕವಿತೆಯಲ್ಲಿ ಮುಂಗಾರು ಮಳೆ, ಸೃಷ್ಟಿ ನರ್ತನ, ಭಾವ ಬಯಲುಗಳ ಆಟ ರೈತರ ಒಡನಾಟ ಒಟ್ಟಾರೆ ಸಮಗ್ರ ಮಳೆಗಾಲದ ಮಾಹಿತಿಯನ್ನೇ ನೀಡಿದ್ದಾರೆ.
ಬೇಸಿಗೆ ಬಿಸಿಯ ತಣಿಸಲು ನೀನು ಹುಯ್ಯೋ ಹುಯ್ಯೋ ಮಳೆರಾಯ
ನೀರು ತುಂಬಿದ ಮೋಡಗಳಿಂದ ಹುಯ್ಯೋ ಹುಯ್ಯೋ ಮಳೆರಾಯ
ಕಪ್ಪೆಗಳ ವಟ ವಟ ಕೇಳ್ಳೋ ಆಸೆ ಹುಯ್ಯೋ ಹುಯ್ಯೋ ಮಳೆರಾಯ
ಗುಡುಗಿನ ನಗಾರಿ ಬಾರಿಸುತ ಹುಯ್ಯೋ ಹುಯ್ಯೋ ಮಳೆರಾಯ
ಪ್ರಾಣಿ ಪಕ್ಷಿಗಳು ಊರು ಬಿಡುವ ಮುನ್ನ ಹುಯ್ಯೋ ಹುಯ್ಯೋ ಮಳೆರಾಯ
ಮಕ್ಕಳೆಲ್ಲರೂ ಪೇಪರ್ ದೋಣಿಯ ಬಿಡಲು ಹುಯ್ಯೋ ಹುಯ್ಯೋ ಮಳೆರಾಯ
ಎಸ್.ಬಿ.ಮೆಣಸಿನಕಾಯಿ, ಬಾದಾಮಿ
ಬರೆದಿದ್ದಾರೆ
ಬಾಯಿಂದ ಬಾಯಿಗೆ ಹರಿದಾಡುತ್ತಾ ಜನಪದ ಗೀತೆಗಳಾಗಿವೆ. ಜನಪದ ಗೀತೆಗಳೆಂದ ಮೇಲೆ ಅಲ್ಲಿ ಸಂಬಂಧಗಳ ಪ್ರಾಮುಖ್ಯ, ಒಕ್ಕಲುತನ ಮತ್ತು ಮಳೆಯ ಬಗ್ಗೆ ಜಾನಪದ ಗೀತೆಗಳು ಇಂದಿಗೂ ನಮ್ಮೊಳಗ ಚಿರಸ್ಥಾಯಿ ಆಗಿ ಉಳಿದಿವೆ.
ಮಾಯದಂಥ ಮಳೆ ಬಂತಣ್ಣ
ಮಗದಾದ ಕೆರೆಗೆ
ಅಂಗೈಯಗಲ ಮೋಡನಾಡಿ
ಭೂಮಿತೂಕದ ಗಾಳಿಬೀಸಿ
ಗುಡಗಿ ಗುಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಹೀಗೆ ಇನ್ನು ಹಲವಾರು ಗೀತೆಗಳು ಇವೆ.
ಗಾದೆ ಮಾತುಗಳಲ್ಲಿ ಹೇಳುವುದಾದರೆ
ಮಳೆ ಗಾದೆಗಳು
1. ಅಸ್ಥೆ ಮಳೆಗೆ ಸಸ್ಥೆ ಬೆಟ್ಟಕ್ಕೆ ನೆಗಿತು.
2. ಮಗೆ ಮಳೆ ಬಂದಷ್ಟು ಒಳ್ಳೇದು, ಮನೆ ಮಗ ಉಂಡಷ್ಟು ಒಳ್ಳೇದು
3. ಅಶ್ಲೇಷ ಮಳೆ, ಈಸಲಾರದ ಹೊಳೆ.
4. ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
5. ಅರಿದ್ರಾ ಮಳೆ ಅರದೇ ಹುಯ್ಯುತ್ತೆ.
6. ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ.
7. ಅಲ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ.
8. ಮಗೆ ಮಳೆ ಮಗೆ ಗಾತ್ರ ಬೀಳದೆ.
9. ಬಂದರೆ ಮಗೆ ಹೋದರೆ ಹೊಗೆ
10. ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ
ಈ ರೀತಿ ಗಾದೆ ಮಾತುಗಳು ನಮ್ಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತವೆ.
ಭಾರತದಲ್ಲಿ ಸೃಷ್ಟಿಯ ವಾತಾವರಣ ಹೇಗೆ ಬದಲಾಗುತ್ತದೋ ಹಾಗೇ ಸಾಂಸ್ಕೃತಿಕ ಹಬ್ಬಗಳು ಮತ್ತು ಭಾವನಾತ್ಮಕ ಸಂಕೇತಗಳೊಂದಿಗೆ ಪ್ರತಿಧ್ವನಿಸುತ್ತಾ ಮತ್ತು ಪ್ರತಿನಿಧಿಸುತ್ತಾ ನೈಸರ್ಗಿಕ ವಿದ್ಯಮಾನವಾಗಿ ಮಹತ್ವವನ್ನು ಎತ್ತಿ ತೋರಿಸುತ್ತವೆ. ಆದ್ದರಿಂದ ಸ್ನೇಹಿತರೇ ನಾವೆಲ್ಲರೂ ಸಂತೋಷದಿಂದ ಪ್ರಕೃತಿ ಮತ್ತು ಹಬ್ಬ ಪರಂಪರೆಗಳ ಮೂಲಕ ನಮ್ಮ ಜೀವನ ಹಾಸನಾಗಿಸೋಣ.
ಇನ್ನು ನನ್ನದೊಂದು ಸ್ವರಚಿತ ಕವನ
ಮುಂಗಾರು ಮಳೆಯೇ ವರದಾನ ರೈತರಿಗೆ
ರೈತರಿಗೆ ಬೀಜ ಬಿತ್ತುವ ಕಾಲ ಮಳೆಗಾಲ
ಮಳೆಗಾಲದಲಿ ರೈತ ನೀರಿನಲ್ಲಿ ಒಂದಾಗಿ
ಒಂದಾಗಿ ಬೆರೆತು ಮಣ್ಣಿನಲಿ ಬೆಳೆಯುವ ಕಾಲ
ನವ ವಧುವರರಿಗೆ ವಿರಹಿಸುವ ಕಾಲ ಆಷಾಢ
ಆಷಾಢ ಬರುತ್ತೆ,ಜೋಡಿ ಇಲ್ಲದ ವಿರಹದ ಕಾಲ
ಕಾಲದಲಿ ಕಣ್ಣಂಚಿನ ಸೆಳೆತ ಮುಂಗಾರು ಮಳೆ
ಮಳೆಯ ಜೊತೆ ಕಂಡ ಕನಸಿನ ಹೂ ಮಳೆ
ಸೃಷ್ಟಿಯ ವೈಭೋಗಕೆ ರಮಣೀಯ ಸೊಗಸು
ಸೊಗಸು ಕಣ್ಣಮನ ಸೆಳೆಯುವ ದೇವ ನಿರ್ಮಿತ
ನಿರ್ಮಿತವು ಪಂಚಭೂತಗಳ ಬದಲಾವಣೆ
ಬದಲಾವಣೆ ಸಂಕುಲಕ್ಕೆ ಸೃಷ್ಟಿ ಉಳಿಸಿವ ಹೊಣೆ
ಮುಂಗಾರು ಮಳೆ ಏನು ವರ್ಣಿಸಲಿ ನಿನ್ನ
ನಿನ್ನ ಅಂದಕೆ ಬೆರಗಾದೆ , ಎಲ್ಲರಿಗೂ ಬೇಕಾಗುವೆ
ಬೇಕಾಗುವೆ ನೀ ಉತ್ಸಾಹದ ಚಿಲುಮೆಯಾಗಿ
ಚಿಲುಮೆಯೊಳು ನಿನ್ನ ನನ್ನ ಜೊತೆಯಾಗಿ
ಧನ್ಯವಾದಗಳು 🙏🙏
Comments
Post a Comment