ಲೇಖನ :- ಚಿದಂಬರನಾಮ ಝೇಂಕರಿಸಿದ ಸಂತ ರಾಜಾರಾಮ

       ಶ್ರೀ ಚಿದಂಬರ ಮಹಾಸ್ವಾಮಿಗಳು 
 ಶ್ರೀ ಚಿದಂಬರ ಭಕ್ತ  ಸಂತ ಶ್ರೀ    
           ರಾಜಾರಾಮ್  

ಲೇಖನ :- ಚಿದಂಬರನಾಮ  ಝೇಂಕರಿಸಿದ ಸಂತ ರಾಜಾರಾಮ

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್

ಧರ್ಮ ಕಳೆಗುಂದಿದಾಗೆಲ್ಲ, ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ.
ಇಡಿಯ ಪ್ರಪಂಚದಲ್ಲಿ ಯಾವಾಗ-ಯಾವಾಗ ಧರ್ಮ ಮಲೀನವಾಗಿ ಅಧರ್ಮದ ಮುಂದೆ ಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವ ಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದು ಬರುತ್ತೇನೆ ಎನ್ನುತ್ತಾನೆ ಕೃಷ್ಣ.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ

ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ ಎಂದು ಕೃಷ್ಣ ಹೇಳಿದ್ದಾನೆ.

ದೇಶ ಕಾಲ ಭೇದ ತೋರದೆ ಬೇರೆಬೇರೆ ಪ್ರಾಂತಗಳಲ್ಲಿ ಬೇರೆ ಬೇರೆ ರೂಪಗಳಿಂದ ಅವತರಿಸಿ ಬಂದು ಶಿಷ್ಟ ರಕ್ಷಣೆ ದುಷ್ಟ  ಶಿಕ್ಷಣೆ ಭಗವಂತ ಮಾಡಿದ್ದಾನೆ.

ಆದರಂತೆಯೇ ನಮ್ಮ ಕರ್ನಾಟಕದ
ಸುಕ್ಷೇತ್ರ ಮುರಗೋಡ ಗ್ರಾಮದ ಭಕ್ತ ವಾತ್ಸಲನಾದ ಭಕ್ತರ ಅಭೀಷ್ಟವ ಈಡೇರಿಸುವ  ಭಕ್ತರ ಕೈವಾರಿಯಾದ ಶಿವ ಅವತಾರಿಯಾದ ಶ್ರೀ ಚಿದಂಬರ ಮಹಾಸ್ವಾಮಿಗಳು ಜನ್ಮ ತಾಳಿದರು.
ಮಾರ್ತಾಂಡ ಭಟ್ಟರು ಮತ್ತು ಲಕ್ಷ್ಮೀಬಾಯಿ ಪುತ್ರರಾಗಿ ಜನಿಸಿದರು.. ಮಾರ್ತಾಂಡ ಭಟ್ಟರು ಮೂಲತಃ ವಿಜಯಪುರದ ಗೋಠೆ ಗ್ರಾಮದ ನಿವಾಸಿಗಳು. ಸಂತಾನ ಅಪೇಕ್ಷಿಯಾಗಿ ಆಕಾಶ ಚಿದಂಬರಲ್ಲಿ ತಪಸ್ಸು ಮಾಡಿ ಸಂತಾನ ಪಡೆದರು.

ಶ್ರೀ ಚಿದಂಬರ ಸ್ವಾಮಿಗಳು ಶಕೆ ೧೬೮೦ ಕಾರ್ತಿಕ ವದ್ಯ ಷಷ್ಠಿ ಸೋಮವಾರ ಬೆಳಗಿನ ೧೦ ಘಂಟೆಗೆ ೫೮ ಪಳ ಕ್ಕೆ ಅಷ್ಟ ವರ್ಷಾತ್ಮಕ ಬಾಲಕನಾಗಿ, ಭಸ್ಮಧಾರಿಯಾಗಿ, ಕೌಪಿನಧಾರಿಯಾಗಿ ಪ್ರಗಟನಾದನು. ದಂಪತಿಗಳ ಆನಂದ ಪಾರವೇ ಇಲ್ಲ. ಕೈಮುಗಿದು ನನಗೆ ಮಗುವಿನ ರೂಪದಲ್ಲಿ ಇದ್ದು ಮಗನ ಸುಖಾನಂದ ಕೊಡು ಎಂದಾಗ ಲೌಕಿಕವಾಗಿ ಅವರಿಗೆ ಮಗನಂತೆ ಇದ್ದರು. ಎಲ್ಲರಂತೆ ಇವರು ಇದ್ದರೂ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಲೀಲೆಗಳು ಪ್ರಕಟಿಸುತ್ತಾ
ಮದವೇರಿದ ಜನರಿಗೆ ಅಂತರಂಗ ಶುದ್ಧ ಮಾಡಿ ಉದ್ದರಿಸುತ್ತಿದ್ದರು.ಇವರ ನಂಬಿದ ಭಕುತರನ್ನು ಕಾಪಾಡುತ್ತಾ ಧರ್ಮ ರಕ್ಷಣೆ ಮಾಡುತ್ತಿದ್ದರು. ಇವರ ಅಂತರಂಗದ ಶಿಷ್ಯರೇ ಶ್ರೀ ರಾಜಾರಾಮರು.

ಭಗವಂತ ತನ್ನ ಅಂತರಂಗದ ಶಿಷ್ಯನನ್ನು ಆಯ್ಕೆ ಮಾಡಿಕೊಳಲ್ಲೂ ಕಾಯುತ್ತಿರುತ್ತಾನೆ, ಹಾಗೇ ತನ್ನ ಸ್ವರೂಪೋದ್ಧಾರಕ ಗುರುವನ್ನು ಪಡೆಯಲು ಶಿಷ್ಯ ಹಾತೋರಿಯುತ್ತಿರುತ್ತಾನೆ. ಚಿದಂಬರ ನಾಮ ಝೇಂಕರಿಸಿದ ಅಂತರಂಗದ ಶಿಷ್ಯ ರಾಜಾರಾಮರು.
ಇವರು ಶಾಲಿವಾಹನ ಶಕೆ ೧೬೯೦, ಸಂವತ್ಸರ ಸರ್ವಜಿತ ಫಾಲ್ಗುಣ ವದ್ಯ ದ್ವಿತೀಯ ಮಂಗಳವಾರ ದಿನದಂದು ಬೆಳಗಿನ ಮೊದಲ ಪ್ರಹಾರದಲ್ಲಿ ಜನಸಿದರೆಂದು  ಸಂತ ರಾಜರಾಮರ ಶಿಷ್ಯಳಾದ ಸಂತ ವಿಠಾಬಾಯಿ ಅವರು ತಮ್ಮ ಒಂದು ಅಭಂಗದಲ್ಲಿ ಹೇಳಿದ್ದಾರೆ.

"ಶಕೆ ಸೋಳಾಸೇ ನವದೀತ ಸಂವತ್ಸರ ಸರ್ವಜಿತ /
ಫಾಲ್ಗುಣ ವದ್ಯ ದ್ವಿತಿಯೇಸಿ ಜನ್ಮದಿಧಲಾ ಮಜಸಿ /
ಮಂಗಳವಾರೀ ಪಾಹಟೇ ಪ್ರಹರಿ /ಆಣವಿಲೇ ಸೃಷ್ಟಿವರಿ,/ ಎಂಬ ೫ ಸಾಲಿನ ಅಭಂಗದಲ್ಲಿ ಹೇಳಿದ್ದಾರೆ.

ಇವರು ಹುಟ್ಟಿದ್ದು  ರಜಪೂತ ಮನೆತನದ ಹರಿಸಿಂಗ ಮತ್ತು ಲಕ್ಷ್ಮಿಬಾಯಿಯ ಮಗನಾಗಿ ಹುಟ್ಟಿದರು.
ಹರಿಸಿಂಗ  ಗೋಧಾವರಿ ನದಿ ದಂಡೆಯಲ್ಲಿರುವ ಬಾಬುಳಗಾಂವ (ಗಂಗಾ ಬಾಬುಳಗಾಂವ). ಇವರು ತಮ್ಮ ಶೌರ್ಯ ಪರಾಕ್ರಮದ ಬಲದಿಂದ ಗೌಡಕಿ ವತನ ಸಂಪಾದಿಸಿದ್ದರು ಇವರಿಗೂ ಬಹಳ ವರ್ಷಗಳವರೆಗೆ ಮಕ್ಕಳಾಗಿದ್ದಿಲ್ಲ.
ಕೃಷ್ಣ ಮತ್ತು ಪಾಂಡುರಂಗನ ಭಕ್ತಾರಾಗಿದ್ದರು.
ಆ ಭಗವಂತನ ಸೇವೆಯ ಫಲವಾಗಿ ಸುಪುತ್ರನನ್ನು ಪಡೆದಿದ್ದರು.

ಸುಮೂಹರ್ತದಲ್ಲಿ ಲಕ್ಷ್ಮಿಬಾಯಿ ತನ್ನ ತವರೂರಾದ  ದಾಂದರಪಳದಲ್ಲಿ ಸುಪುತ್ರನಿಗೆ ಜನ್ಮ ನೀಡಿ ರಾಜಾರಾಮ ಎಂಬ ನಾಮಕರಣ ಮಾಡಿದರು. ಇವರ ಕುಲದೇವರು ಕಾಶಿ ವಿಶ್ವಾನಾಥ.
ತಂದೆ ತಾಯಿಯರ ಸಂಸ್ಕಾರಫಲದಿಂದ ಸುಮಾರು ಐದು ವರ್ಷ ಇದ್ದಾಗಲೇ ಗೋದಾವರಿ ನದಿಯಲ್ಲಿ ಸ್ನಾನ ಮಾಡಿ, ನದಿಯ ದಂಡೆಯ ಮೇಲಿರುವ ಗುಡಿಗೆ ಹೋಗಿ ಶಿವಲಿಂಗಕ್ಕೆ  ಪೂಜೆ ನಮಸ್ಕಾರ ಭಜನೆ ಮಾಡುತ್ತಿದ್ದರು. ಹೀಗೆ ಒಂದು ದಿನ ಊರಿಗೆ ದ್ವಾರಕಾ ದಾಸ್ಎಂಬ ಸತ್ಪುರುಷರು ಬಂದರು.
ಇವರು ವಿರಾಗಿಗಳು, ವೇದಶಾಸ್ತ್ರ ಪುರಾಣ ಮತ್ತು
ಜ್ಞಾನದೇವ ನಾಮದೇವ ಏಕನಾಥ ಮೊದಲಾದ ವಾರಿಕರಿ ಸಂತ ಪದ್ಧತಿ ಎಲ್ಲವೂ ಗೊತ್ತಿತ್ತು
ವಿಶೇಷ ಪಂಚಾಗ್ನಿ  ಅಭ್ಯಾಸ ಮಾಡಿ  ಸಾಧನವನ್ನು ಪಡೆದಿದ್ದರು.  ಇವರ ದರ್ಶನಕ್ಕೆ ರಾಜಾರಾಮರು ತನ್ನ ತಂದೆ ತಾಯಿ ಜೊತೆ ಹೋದಾಗ ದಂಪತಿಗಳು ತಮ್ಮ ಮಗ ರಾಜಾರಾಮನಿಗೆ ವಿಶೇಷ ಅನುಗ್ರಹ ಆಶೀರ್ವಾದ ನೀಡಬೇಕೆಂದು ಭಿನ್ನವಹಿಸಿಕೊಂಡರು. ಗುರುಗಳಿಗೆ ಇವನ ಮೇಲೆ ಅಂತ:ಕರಣ ಉಕ್ಕಿ ತಮ್ಮ ಶಿಷ್ಯನಾಗಿ ಮಾಡಿಕೊಂಡಿದ್ದರು. ಒಂದೆರಡು ವರ್ಷ ಬಾಬುಳಗಾಂವದಲ್ಲಿ ಇದ್ದು ಬಾಲಕ ರಾಜಾರಾಮರಿಗೆ ಅಕ್ಷಾರಾಭ್ಯಾಸ, ಸಂತರ ಬಗ್ಗೆ ಪುರಾಣಗಳ ಬಗ್ಗೆ ಪಾಠ ಹೇಳುತಿದ್ದರು.. ರಾಜಾರಾಮರಿಗೆ ಪುರಾಣಗಳಲ್ಲಿ ವಿಶೇಷ ಆಸಕ್ತಿ ತೋರುಸುತ್ತಿದ್ದರು. ನಾರದರು ಬಾಲಕ ಧ್ರುವನಿಗೆ ಉಪದೇಶ ಮಾಡಿದ ಪರಿ ಹಾಗೂ ಧ್ರವ ಐದು ವರ್ಷವಿದ್ದಾಗಲೇ ಭಗವಂತನನ್ನು ಕಂಡಿದ್ದನ್ನು ಕೇಳಿ., ರಾಜರಾಮರ  ಮನಸ್ಸು ಭಗವಂತನ ನೋಡುವ ತವಕ ಹೆಚ್ಚಾಯಿತು. ಭಗವಂತ ತಾನು ಇರುವ ಬಗ್ಗೆ ಹಲವಾರು ದೃಷ್ಟಾಂತ ಕೊಟ್ಟು ನಂಬಿಕೆ ಗಟ್ಟಿಮಾಡಿಸಿದನು. ಬಾಳೇಶ್ವರ ಗುರುಮಹಾರಾಜರು  ಭೇಟಿ ನೀಡಿದಾಗ ರಾಜರಾಮರು ಭಗವಂತನ ಕಾಣುವ ಹವಣಿಕೆ
ಕಂಡು ಇನ್ನು ವೇಳೆ ಇದೆ, ಭಗವಂತನೇ ಭೂಮಿಯ ಮೇಲೆ ಅವತಾರ ಮಾಡಿ ನಿನಗೆ ದರುಶನ ಕೊಡುವನು ಎಂದು ಹೇಳಿದ್ದು ಕೇಳಿ ಆನಂದಪಟ್ಟರು.

೨೦ ವರುಷದ ಸದೃಢ ಕಾಯಕ, ಆಕರ್ಷಣೆಯ
ಯುವಕರಾಗಿ ಬೆಳೆದರು . ಮಹಾರಾಷ್ಟ್ರದ ಭೋಸಲೆ ಮನೆತನದವರು ನಾಗಪುರದಲ್ಲಿ ಸ್ವತಂತ್ರ ರಾಜ್ಯವನ್ನು ಕಟ್ಟಿಕೊಂಡು ಆಳುತ್ತಿದ್ದರು. ರಾಜರಾಮರ ಸದೃಢ ಕಾಯ ನೋಡಿ ರಾಜನು ತನ್ನ ಆಸ್ಥಾನದೊಳಗೆ ಸೈನಿಕ ಹುದ್ದೆ ಕೊಟ್ಟನು. ರಾಜಾರಾಮರಿಗೆ ಇದ್ಯಾವುದು ಪ್ರಿಯವಾಗಿದ್ದಿಲ್ಲ. ಆದರೆ ಕರ್ತವ್ಯ ನಿಷ್ಠೆಯಿಂದ ಮಾಡುತ್ತಿದ್ದರು. ಜಾಣ್ಮೆ, ಚತುರತನ ನೋಡಿ ಹುದ್ದೆಯಲ್ಲಿ ಬಡ್ತಿ ಕೊಟ್ಟಿದ್ದನು , ಈ ಮದ್ಯದಲ್ಲಿಯೇ ತಂದೆ ತೀರಿಕೊಂಡಿದ್ದಾಕ್ಕಾಗಿ ಗೌಡಕಿ ಮಾಡಬೇಕೋ ಅಥವಾ ರಾಜನ ಸೇನೆ ಸೇರಬೇಕೋ ಅಂತ ಮನಸ್ಸಿನ ಗೊಂದದಲ್ಲಿದ್ದಾಗ, ರಾಜನ ಪ್ರೀತಿಯ ಆಪ್ತತೆಗೆ ಸೇನೆಯಲ್ಲಿ ಮುಂದುವರಿದರು.

ತಾಯಿಯ ಒತ್ತಾಸೆಯ ಮೇರೆಗೆ ರಾಧಾಬಾಯಿ ಎಂಬ ಸಾದ್ವಿ ಶಿರೋಮಣಿಯನ್ನು ಮದುವೆಯಾದರು. ಸುಖ ಸಂಸಾರದಿಂದ ಕೂಡಿತ್ತು.
ಚಿಕ್ಕವರಿದ್ದಾಗಿನಿಂದಲೂ ವಿರಕ್ತ ಸ್ವಭಾವ ಇತ್ತು, ಸಂಸಾರಸ್ಥರಾದ ಮೇಲೂ ಜಲದಲ್ಲಿನ ಕಮಲದಂತೆ ಇದ್ದರು. ಮನದಲ್ಲಿ ಭಗವಂತನ ಕುರಿತಾದ ಭಕ್ತಿ, ನೋಡುವ ಹಂಬಲ ಜಿಜ್ಞಾಸೆ ಯಾವಾಗಲೂ ಚಿಂತನ ಮಂಥನ ನಡೆದಿರುತ್ತಿತ್ತು. ಊರಿನಲ್ಲಿ ಸಾಧು ಸತ್ಪುರುಷರು ಬಂದರೆ ಅವರ ಜೊತೆ ಚಿಂತನ ಮಂಥನ ಮಾಡುತ್ತಾ  ದೇವರ ಭಜನೆ ಮಾಡುತ್ತ ಮೈಮರೆಯುತ್ತಿದ್ದನು.

ರಾಜನು ರಾಜಾರಾಮರಿಗೆ ಅಶ್ವದಳದಲ್ಲಿ ಸಿಲೇದಾರನಾಗಿ(ಕುದುರೆ ಏರಿ ಯುದ್ಧ ಮಾಡುವನು)ಬಡ್ತಿ ಕೊಟ್ಟನು. ಎಲ್ಲವೂ ಚೆನ್ನಾಗಿ ನಡೆದಿರಲು ನರ್ಮದಾ ದಂಡೆಯ ಮೇಲಿರುವ
ಹುಸಂಗಬಾದ್ ಎಂಬ ಊರಿಗೆ ಅಲ್ಲಿ ಕೆಲಸ ನಿರ್ವಹಿಸಲು ಕಳಿಸಿದನು. ಮೂರನಾಲ್ಕುವರ್ಷ ಅಲ್ಲಿ ಇದ್ದು ಕೆಲಸ ಮಾಡುತ್ತಿರುವಾಗ ತಾಯಿಯು ತೀರಿಕೊಂಡಳು,  ದಿನಕರ್ಮ ಮಾಡಲು ಒಬ್ಬ ಬ್ರಾಹ್ಮಣನನ್ನು ಹುಡುಕುತ್ತಿರುವಾಗ, ತೈಲಂಗ
ದೇಶದ ಕೃಷ್ಣಭಟ್ಟನೆಂಬ ವಿದ್ವಾಂಸರೊಬ್ಬರು  ಆಕಸ್ಮಾತ ಭೇಟಿ ಅಯಿತು. ಅವರ ಕಡೆಯಿಂದ ರಾಜಾರಾಮರು ತಮ್ಮ ತಾಯಿಯ ಉತ್ತರ ಕ್ರಿಯೆಗಳನೆಲ್ಲ ಶಾಸ್ತ್ರಬದ್ಧವಾಗಿ ಮಾಡಿಸಿಕೊಂಡರು.
ಕೃಷ್ಣ ಭಟ್ಟರ ಶಾಸ್ತ್ರ ಪಾಂಡಿತ್ಯ ನೋಡಿ ರಾಜಾರಾಮರು ಅವರನ್ನು ಒಂದು ವರುಷದವರೆಗೆ
ತಮ್ಮ ಹತ್ತಿರ ಇಟ್ಟುಕೊಂಡು ಪಾರಮಾರ್ಥಿಕ ಮತ್ತು ಶಾಸ್ತ್ರ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಕೃಷ್ಣಭಟ್ಟರು ಒಮ್ಮೆ ನಾನು ಇನ್ನು ಕಾಶಿ ವಿಶ್ವನಾಥನ ದರುಶನಕ್ಕೆ ಹೋಗುವೆನೆಂದು ಹೇಳಿದಾಗ, ರಾಜಾರಾಮರು ನಾನು ಕಾಶಿ ವಿಶ್ವನಾಥನ ದರುಶನಕ್ಕೆ ಹೋಗಬೇಕಾಗಿದೆ, ಎಂದಾಗ ಆಗ
ಕೃಷ್ಣ ಭಟ್ಟರು ಎಂಥ ಮೂಢರು ನೀವು ಮೊದಲು
ಭಗವಂತ ಧರೆಗೆ ಬಂದು ಮುರುಗೋಡದಲ್ಲಿದ್ದು
ಧರ್ಮ ಮತ್ತು ಧರ್ಮಿಷ್ಠರನ್ನು ರಕ್ಷಣೆ ಮಾಡುತ್ತ
ದುಷ್ಟರ ಅಂತರಂಗ ಶುದ್ಧ ಮಾಡಿ ಅವರನ್ನು ಉದ್ದರಿಸುತ್ತಾ ಇದ್ದಾರೆ, ಎಂದು ಕೃಷ್ಣಭಟ್ಟರು ಹೇಳಿದರು. ಆಗ ರಾಜರಾಮರಿಗೆ  ನೀನು ಮೊದಲು ಅವರ ದುರುಶನ  ಪಡೆ ಎಂದು ಹೇಳಿದರು. ನೀನು ಹುಡುಕುವ ಭಗವಂತ ಅವರೇ ನಿನ್ನನ್ನು ಉದ್ಧರಿಸುವರು ಹೋಗು ಎಂದು ಹೇಳಿದರು.

ಹೀಗೆ ವಿಚಾರ ಮಾಡುತ್ತಾ ಮಲಗಿಕೊಂಡಾಗ ಶ್ರೀ ಚಿದಂಬರ ಮಹಾಸ್ವಾಮಿಗಳು ಕನಸಿನಲ್ಲಿ ಒಂದು ದೃಷ್ಟಾಂತ ಕೊಟ್ಟು ರಾಜಾರಾಮರ ಎಲ್ಲ ಸಂಶಯ ದೂರ ಮಾಡಿ ಭರವಸೆಯನ್ನು ಗಟ್ಟಿ ಮಾಡಿದರು.

ರಾಜಾರಾಮರು ತನ್ನ ಹೆಂಡತಿ ಮತ್ತು ಸಹಾಯಕರಾದ ನಿಂಬಾಜಿ ಅವರನ್ನು ಕೆರೆದುಕೊಂಡು ಹೋರಟರು. ದಾರಿಯಲ್ಲಿ ಚಿದಂಬರನ ಅನುಗ್ರಹದಿಂದ ಬಂದಂತಹ ಎಲ್ಲ ಸಂಕಟವು ಮಂಜುಗಡ್ಡೆಯಂತೆ ಕರಗಿ ಹೋಗುತ್ತಿದವು. ಹೀಗೆ ದಾರಿಯನ್ನು ತಳೆದುಕೊಡಾಂಗ ಭಗವಂತ ಒಬ್ಬ ದನ ಕಾಯುವ
ಬಾಲಕನ ರೂಪದಿಂದ ಬಂದು ಪಂಡರಾಪುರ ಕಾಣತ್ತಿದ್ದಾಗಲೇ, ಊರು ತೋರಿಸಿ ಮಾಯವಾದನು. ಇದನ್ನು ನೋಡಿ ಎಲ್ಲವೂ ಅವನ ಮಾಯೇ ಎಂದು ತಿಳಿದು, ಭಗವಂತನ
ಕಾಣುವ ಉತ್ಸುಕತೆ ಹೆಚ್ಚಾಯಿತು. ಅಲ್ಲಿದ್ದು, ವಿಠ್ಠಲನ ದರುಶನ ಪಡೆದು ಮುಂದೆ ಅಲ್ಲಿಯ ಭಡವೇ(ಪೂಜಾರಿ) ಅವರ ಸಹಾಯಕನ ಜೊತೆ ತೆರೆದುಕೊಂಡು ಅವನ ಸಹಾಯ ಪಡೆಯುತ್ತಾ
ಕುಂದಗೋಳಕ್ಕೆ ಬಂದರು, ಸ್ವಾಮಿಯನ್ನು ನೋಡುವ ತವಕ ಹೆಚ್ಚಾಯಿತು, ಅನ್ನ ನೀರು ಬಿಟ್ಟು ದರುಶನಕ್ಕೆ ಕಾಯ್ದರುಆದರೆ ದರುಶನ ದೊರೆಯಲಿಲ್ಲ ಆಗ  ಭಕ್ತರ ಕರುಣಿ, ಮಮತೆಯ ಖಣಿ ಸ್ವಾಮಿ ರಾಜರಾಮರ ಸ್ಪಪ್ನದಲ್ಲಿ ಬಂದು ತಾಯಿ ತನ್ನ ಮಗುವನ್ನು  ಅಕ್ಕರೆಯಿಂದ ಮಾತನಾಡಿಸುವಂತೆ ರಾಜಾರಾಯರ ಬೆನ್ನು ನೇವರಿಸುತ್ತು, ಬಾಯಿಯಲ್ಲಿ ಸಕ್ಕರೆ ಖೊಬ್ಬಿರಿ
ಹಾಕಿ, ಕಿವಿಯಲ್ಲಿ ಚಿದಂಬರ ನಾಮಮಂತ್ರಾಕ್ಷರ
ಉಪದೇಶಿಸಿದರು. ಸ್ಪನ್ನದಿಂದ ಎಚ್ಚರವಾದಾಗ
ಇನ್ನು ಬಾಯಿಯಲ್ಲಿ ಖೊಬ್ಬರಿ ಸಕ್ಕರೆ ಇದ್ದು ಅವರ ಸಂತೋಷಕ್ಕೆ ಪಾರವೇ ಇದಿದ್ದಿಲ್ಲ..

ದರುಶನಕ್ಕೆ ಹೋದರೆ ನಿತ್ಯ ದೂರದಿಂದಲೇ ದರ್ಶನವಾಗುತ್ತಿತ್ತು. ಭಕ್ತನ ಅಂತರಂಗ ದರುಶನಕ್ಕೆ ಚಾತಕ ಪಕ್ಷಿಯಂತೆ ಹಾತೊರೆಯುತ್ತಿತ್ತುಒಂದು ದಿನ ರಾಜರಾಮರು ನಿಂತಾಗ ಅಲ್ಲಿಯೆ ಬಂದು ಸ್ವಾಮಿಗಳು ಬಂದು ಬಹಳ ದೂರದಿಂದ ಬಂದಿರುವೆ
ಏನಾದರೂ ನಿನ್ನ ಅಭಿಲಾಷೆಗಳಿದ್ದರೆ ತಿಳಿಸು ಎಂದು ಕೇಳಿದರು. ಆಗ ರಾಜಾರಾಮರು ಮಹಾಸ್ವಾಮಿಯನ್ನು ನೋಡಿದ ಕ್ಷಣವೇ
"ರಾಮಕೃಷ್ಣ ಅವತಾರ ಝಾಲಾ ಚಿದಂಬರ" ಎಂಬ
ಅಭಂಗದಲ್ಲಿ ತಮ್ಮ ಅನುಭವ ಬರೆದಿದ್ದಾರೆ.

ನನ್ನ ಅಂತರಂಗ ನಿಮಗೆ ಗೊತ್ತಿದೆ ಸ್ವಾಮಿ,
ನಾನು ನಿಮ್ಮನ್ನು ಏಕಾಂತದಲ್ಲಿ ಭೇಟಿಯಾಗಿ ನಿಮ್ಮ ಅನುಗ್ರಹ ಪಡೆಯಬೇಕೆಂದಿರುವೆ ಎಂದರು.
ಆಗ ಸ್ವಾಮಿಗಳು ಏಕಾಂತದಲ್ಲಿ ಭೇಟಿಯಾಗಿ ನಿನಗೆ ಏನು ವರ ಬೇಕೆಂದು ಕೇಳು ಎಂದರು.
ನನಗೆ ನಿಮ್ಮ ಪಾದದಲ್ಲಿ ಸದಾ ನನ್ನ ಮನಸ್ಸು ಮುಗ್ನ ವಾಗಿರಬೇಕು, ಎರಡನೇ ವರ ನನಗೆ ಬೇರೆ ಯಾವ ವಸ್ತುವಿನಲ್ಲಿ ಮೋಹ ಉಂಟಾಗಬಾರದು,
ಮೂರನೇಯ ವರ ನನಗೆ ಸರಿಯಾಗಿ ಕಣ್ಣು ಕಾಣುವದಿಲ್ಲ  ನಿನ್ನ ನೋಡುವ ಶಕ್ತಿ ಮತ್ತು ಅಕ್ಷರ ಕಾಣುವ ಶಕ್ತಿ ವರಬೇಕೆಂದು ಕೇಳಿಕೊಂಡರು.
ಸ್ವಾಮಿಗಳು ವರವನ್ನು ಅನುಗ್ರಹಿಸಿದರು.
ಒಂದೇ ಚಿದಂಬರ ಸ್ವಾಮಿಗಳ ಅನುಗ್ರಹ ಬಲದಿಂದ ಅನೇಕ ದೃಷ್ಟಾಂತಗಳು ನಡೆಯುತ್ತಿದ್ದವು.
ಸಂತ ರಾಜಾರಾಮರಾದರು.

ಹೀಗೆ  ಚಿದಂಬರ ಮಹಾಸ್ವಾಮಿಗಳ ಅವತಾರ ಸಮಾಪ್ತಿಯಾದ ಮೇಲೆ ಇವರು ಮುಂದೆ ೪0 ವರ್ಷಗಟ್ಟಲೆ ತನ್ನದೇ ಆದ ೨0,000 ಜನರ ದಿಂಡಿಯ ಮುಖಾಂತರ ಸಮಸ್ತ ಭಾರತ ದೇಶವನ್ನು ಸಂಚರಿಸಿ ಸ್ವಾಮಿಗಳ ದೃಷ್ಟಾಂತವನ್ನು ಸಂಗ್ರಹ ಮಾಡಿ ತಮ್ಮ ಅನುಭವಗಳನ್ನು ಅಭಂಗ ಳನ್ನು ರಚಿಸಿ ಭಕ್ತ  ಜನಮಾನಸಕ್ಕೆ ತಿಳಿಪಡಿಸ ಸುತ್ತಾ ಚಿದಂಬರ ನಾಮ ಪ್ರಸಾರ ಮಾಡಿದ್ದಾರೆ.

ರಾಜಾರಾಮರು ತಮ್ಮ ಒಂದು ಅಭಂಗದಲ್ಲಿ ಶ್ರೀ ಚಿದಂಬರ ಮಹಾ ಸ್ವಾಮಿಗಳ ಬಗ್ಗೆ ಹೀಗೆ ಹೇಳಿದ್ದಾರೆ.....

ಪೂರ್ವಿಚೆ ಜೆ ಝಾಲೆ ಅವತಾರ ನಾನಾ |
ಧರ್ಮಾಚೀ ಸ್ಥಾಪನಾ ಕರಿತ ಆಲೆ
ಭಕ್ತಾಂಚಾ ಉದ್ಧಾರ ದುಷ್ಟಂಚಾ ಸಂಹಾರ |
ಐಸೆ ಅವತಾರ ಹೋತ ಆಲೆ
ಯಾಹೀ ಅವತಾರೀ ತೇಚಿ ಅಸೆ ಚಾಲೀ |
ಅಧಿಕ ದಾವಲೀ ಸ್ಥಿತಿ ಏಕ
ದಾಸ ಮಣೆ ಝಾಲಾ ಗರೀಬ ಬ್ರಾಹ್ಮಣ |
ನ ದುಖವೀ ಮನ ದುರ್ಜನಾಂಚೆ

ಚಿದಂಬರ ಮಹಾಸ್ವಾಮಿಗಳು ವಿಷ್ಣುವಿನ ಅವತಾರ
ಎಂದು ಹೇಳಲು ಆಧಾರವಾಗಿ ನೋಡಲು ಸಂತ ರಾಜಾರಾಮರು ಅನೇಕ ಅಭಂಗಗಳನ್ನು ರಚಿಸಿದ್ದಾರೆ. ಉದಾಹರಣೆಗೆ ಹೇಳಬೇಕಾದರೆ
ತೈಲಂಗ ದೇಶದ ಬ್ರಾಹ್ಮಣ ಶ್ರೀ ನರಸಿಂಹ ದೇವರ ಉಪಾಸಕರಾಗಿದ್ದರು ಅವರು ಚಿದಂಬರ ಮಹಾಸ್ವಾಮಿಗಳ ಬಗ್ಗೆ ಕೇವಲಾಗಿ ನೋಡಿದಾಗ,  ನರಸಿಂಹ ಅವತಾರ ತೋರಿಸಿ ಅಂತರಂಗ ಶುದ್ಧ ಮಾಡಿದ್ದರು. ಹಾಗೇ ತಿರುಪತಿ ವೆಂಕಟೇಶನಾಗಿ, ರಾಮ, ಕೃಷ್ಣ ರೂಪ, ಹೀಗೆ ಭಕ್ತರಿಗೆ ದರುಶನ ಕೊಟ್ಟಿದ್ದು, ಇತ್ಯಾದಿಯಾಗಿ   ಸಂತ ರಾಜಾರಾಮರು ಬರೆದಿದ್ದಾರೆ.
ಶ್ರೀ ಚಿದಂಬರ ಸ್ವಾಮಿಗಳು ಮತ್ತು ಶ್ರೀ ಸಂತ ರಾಜಾರಾಮರ ಸಂಬಂಧ ಯುಗಯುಗದಿಂದಲೂ ಕೂಡಿ ಬಂದಿದೆ.  ಅಭಂಗಳಲ್ಲಿ  ನಿರೂಪಿಸಿದ್ದಾರೆ.

ತ್ರಿವಾಚ್ಯಬೋಲಣೇ ಬೋಲತಸೇ ಸತ್ಯ | ಮಾನೀ ಜೋ ಅಸತ್ಯ ದೌರವ ತ್ಯಾರ್ಸಿ ಸತ್ಯ ಜೇ ಮಾನಿತೀ ಪ್ರಚೀತಿ ರೋಕಡೀ | ನವೇ ತರೀ ಕೋಟಿ ಪಾಪೇ ಮಜ || ಸದ್ಭಾವೇ ಕರೋನೀ ಸಹಾವೀ ಪ್ರಚೀತ | ಪುರವೀ ಮನೋರಥ ಚಿದಂಬರ ||
ದಾಸ ಮಣೇ ಬೋಲ ನವೇ ಪದರೀಚೇ । ಬೋಲವೀತಸಾಚೇ ಚಿದಂಬರ ||

ಈ ಅಭಂಗದಲ್ಲಿ ನಾನು ಬರೆದಿದ್ದು ಸತ್ಯ ಎಂದು ಮೂರು ಬಾರಿ ಹೇಳುವೆ. ಅಸತ್ಯ ಎಂದು ತಿಳಿದರೆ ನರಕ ಬರುತ್ತದೆ, ನಂಬಿ ನಡೆದವರಿಗೆ ಕೃಪೆ ಅಗುತ್ತದೆ. ನಾ ಹೇಳಿದ ರೀತಿ ಆಗದಿದ್ದಲಿ ನನಗೆ ಕೋಟಿ ಪಾಪಗಳು ಬರಲಿ. ಈ ನಾನು ಹೇಳಿದ್ದಲ್ಲ
ಚಿದಂಬರ ಸ್ವಾಮಿಗಳು ನನ್ನ ಮೂಲಕ ಹೇಳಿಸಿರುವರು ಎಂದು ಬರೆದಿದ್ದಾರೆ.

ಇವರ ಶಿಷ್ಯಳಾದ ಸಂತ ವೀಠಾಬಾಯಿ ಅವರು ತಮ್ಮ ಅಭಂಗವಾದ" ನಾಮ ಉರಮೇ ವೀಣಾ ಕರಮೇ ಫಿರತೇ ರಾಜಾರಾಮ " ಸಂತ ರಾಜಾರಾಮರಾದ ಬಳಿಕ ಚಿದಂಬರ ಮಹಾ ಸ್ವಾಮಿಗಳ ೨ ಚರ್ಮದ ಪಾದುಕೆಗಳು ತಮ್ಮ ಹತ್ತಿರ ಇಟ್ಟುಕೊಂಡು ಒಂದು ಒಂದು ಜೋಡು ರುಮಾಲಿನಲ್ಲಿ ಇಟ್ಟು ತಲೆಗೆ ಸುತ್ತಿಕೊಳ್ಳುತ್ತಿದ್ದರು. ಇನ್ನೊಂದು ಜೋಡಿ ಕೊರಳಿಗೆ ಹಾಕಿಕೊಳ್ಳುತ್ತಿದ್ದರು. ಕೈಯಲ್ಲಿ ತಾಳ ವೀಣೆಯನ್ನು ಧರಿಸಿ ಅಶು ಅಭಂಗಗಳನ್ನ ರಚಿಸಿ ಅರ್ಥೈಸುತ್ತಾ ಸಂಚಾರ ಮಾಡುತ್ತಿದ್ದರು ಎಂದು ಹೇಳಿದ್ದಾಳೆ.
ಕೇವಲ 3 ನೇ ತರಗತಿ ಪಾಸಾದ ಸಂತ ರಾಜಾರಾಮರು ಚಿದಂಬರ ಸ್ವಾಮಿಗಳ ಕೃಪೆಯಿಂದ ೧,೫೧,೪೯೧( ನಾಮಪರ, ಭಕ್ತಿಪರ, ಕರುಣಾಪರ,ವೇದಾಂತ ಪರ ಇತ್ಯಾದಿ) ಅಭಂಗಗಳ ಗಾಥಾ ಬರೆದಿದ್ದಾರೆ. ೨೧ವೇದಾಂತ ಗ್ರಂಥಗಳನ್ನು ಬರೆದ್ದಾರೆ.

ಚಿದಂಬರ ಸ್ವಾಮಿಗಳ ಅವತಾರ ಸಮಾಪ್ತಿ ಆದ ಮೇಲೆ ೨೭ ವರುಷ ಸಂಚಾರ ಮಾಡಿ ಚಿದಂಬರ ನಾಮ ಪ್ರಸಾರ ಮಾಡಿ ಕೊನೆಗೆ ಚಿದಂಬರ ಸ್ವಾಮಿಗಳ ಸ್ವಪ್ನ ಆಜ್ಞಾ ಮೇರೆಗೆ ತಮ್ಮ ೭೫ ನೇ
ವಯಸ್ಸಿನಲ್ಲಿ  ಬೆಳಗಾಂವಿಗೆ ಬಂದು ಕುಲಕರ್ಣಿ ಎಂಬ ಭಕ್ತರ ಮನೆಯಲ್ಲಿ ಭಕ್ತ ವೃಂದಕ್ಕೆ "ಲಕ್ಷ ಠೇವುಣಿ ಸುಖೆ ಕರಾ ಸಂಸಾರ " ಎಂದು ಉಪದೇಶಿಸಿ ದೇಹ ತ್ಯಾಗ ಮಾಡಿದರು.
ಆಗ ಭಕ್ತ ಸಮೂಹದಲ್ಲಿ  ಸಂಸ್ಕಾರದ ಬಗ್ಗೆ ಗೊಂದಲ ಉಂಟಾಯಿತು. ಇವರನ್ನು ಹೂಳಬೇಕೋ ಅಥವಾ ಅಗ್ನಿ ಸಂಸ್ಕಾರವೋ ಎಂಬ ವಿಷಯ ತಾರಕಕ್ಕೇರಿದಾಗ, ಅಲ್ಲಿ ವಿಚಿತ್ರ ಘಟನೆ ನಡೆಯಿತು. ತ್ರಿಕಾಲ ಜ್ಞಾನಿಗಳಾದ ಸಂತ ರಾಜಾರಾಮರು ಎದ್ದು ಕುಳಿತು ಶ್ರೀ ಕುಲಕರ್ಣಿ ಅವರ ಮನೆಯಿಂದ ಶಹಪುರದ ಗೋವಾವೇಸ್ ಗೆ ಬಂದು, ಇವರ ಬೆನ್ನಲ್ಲೇ ಬಂದ ಭಕ್ತ ವೃಂದವನ್ನ
ಉದ್ದೇಶಿಸಿ ನಾನು ಸತ್ತ ಮೇಲೆ ಹೂಳಿದರೇನು ಅಗ್ನಿಸಂಸ್ಕಾರ ಮಾಡಿದರೇನು, ನನ್ನ ದೇಹ ಚಿದಂಬರನಿಗೆ ಅರ್ಪಿಸುತ್ತೇನೆ ಎಂದು ನೆಲದ ಮೇಲೆ ಮಲಗಿ ತಮ್ಮ ಸಾಧನ ಶರೀರದ ಸಾಧನೆಯಿಂದ ಉಂಗುಷ್ಟದಿಂದ ಅಗ್ನಿ  ಉತ್ಪನ್ನ  ಮಾಡಿದರು, ದೇಹ ತಾನೇ ಅಗ್ನಿ ಸಂಸ್ಕಾರಕ್ಕೆ ಒಳಗಾಯಿತು. ಆಗ ಅವರು "ಜಯದೇವ ಜಯದೇವ ಜೈ ಚಿದಂಬರ ಕಾಪೂರಾರತಿ ಓವಾಳಿತೋ ಈಶ್ವರ" ಎನ್ನುತ್ತಾ ಚಿದಂಬರ ಮಹಾಸ್ವಾಮಿಗಳಲ್ಲಿ ಲೀನವಾದರು.

ಸಂತ ರಾಜರಾಮರ ಪುತ್ರರಾದ ಚಿದಂಬರ ಪ್ರಸಾದನು ತನ್ನ ತಂದೆಯ ಮರಣದ ಮಾಹಿತಿಯನ್ನು  ಅಭಂಗ ರೂಪದಲ್ಲಿ ಬರೆದಿದೆದ್ದಾನೆ.ಅವರ ಪ್ರಕಾರ ಸಂತ ರಾಜಾರಾಮರು ಶಾಲಿವಾಹನ ಶಕೆ ೧೭೬೫.
(ಇಸ್ವಿ ೧೮೪3) ಶೋಭನ ಕೃತ ನಾಮ ಸಂವತ್ಸರ ಕಾರ್ತೀಕ ವದ್ಯ ದ್ವಿತೀಯಾ ಗುರುವಾರ ದೇಹ ಲೀನವಾಗಿದ್ದು ಎಂದು ಉಲ್ಲೇಖವಿದೆ.
ಈಗ ಅದೇ ಸ್ಥಳದಲ್ಲಿ ಲಿಂಗ ಸ್ಥಾಪನೆ ಮಾಡಿ ಪೂಜೆ, ಭಜನೆ ಮಾಡುತ್ತಾ ಭಕ್ತರು ನಡೆದಿದ್ದಾರೆ.

✍️ ಪ್ರಿಯಾ ಪ್ರಾಣೇಶ ಹರಿದಾಸ

ಆಧಾರ ಗ್ರಂಥಃ
೧)ಶ್ರೀ ಎನ್ ಆರ್ ಕುಲಕರ್ಣಿ
( ಶ್ರೀ ಚಿದಂಬರ ಮಹಾಸ್ವಾಮಿಗಳು ಅಪ್ರಕಾಶಿತ ಲೀಲೆಗಳು)
೨) ಸಂಗ್ರಹಕಾರರು ಶ್ರೀ ಮಲ್ಹಾರರಾವ ತೊರವಿ
(ಸಂತ ರಾಜಾರಾಮ ಮಹಾರಾಜ ಕೃತ ಅಭಂಗ ಗಾಥಾ)









Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ

ಲೇಖನ :- ಬಂತು ಸಂಕ್ರಾಂತಿ ತಂತು ಉಲ್ಲಾಸದ ಕಾಂತಿ