Posts

Showing posts with the label ದೇವ್ ಧನ್ವಂತರಿ ಕೀರ್ತನೆಗಳು

ಹರಿದಾಸರ ಧನ್ವಂತರಿ ಕೀರ್ತನೆಗಳ ಸಂಗ್ರಹ

Image
            ‌‌‌‌‌‌  🙏 ಶ್ರೀ ಗುರುಭ್ಯೋ ನಮಃ🙏        ಎಲ್ಲ ಹರಿದಾಸರುಗಳು ರಚಿಸಿದ  ಧನ್ವಂತರಿ ಕೀರ್ತನೆಗಳು ೧) ಗೋಪಾಲ ದಾಸರು ೧)ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ | ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ|| ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ ಈ ಮೂರುವಿಧ ವಸ್ತುಗಳು ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧|| ವಸುಮತಿಯ ಮೇಲಿನ್ನು ಅಸುರ ಜನರ ಬಹಳ ವಶವಲ್ಲ ಕಲಿಯ ಬಾಧೆ ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨|| ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ ಹೇ ದೇವ ನಿನ್ನ ಕರಕಲಶ ಸುಧೆಗರೆದು ಸಾಧುಗಳ ಸಂತೈಸುವಿ ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನಿವೀ ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩|| ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ ನಿನ್ನವರನಿಸಿ ನಿನ್ನ ನ...