ಲೇಖನ:- "ಅಮ್ಮ" ಎಂಬರೇಡಕ್ಷರದಲ್ಲಿ....




ಕಿರು ಲೇಖನ :-"ಅಮ್ಮಾ" ಎಂಬೇರಡಕ್ಷರದಲಿ......

 



ವಿಶ್ವ ತಾಯಂದಿರದಿನಾಚರಣೆಯ ಪ್ರಯುಕ್ತ ಅಮ್ಮಂದರಿಗೆ ಶುಭಾಶಯಗಳು 💐💐

ವರುಷದ ಒಂದು ದಿನ ತಾಯಿ ದಿನಾಚರಣೆ ಮಾಡುವಂತದ್ದಲ್ಲಾ ಉಸಿರು ಇರುವವರೆಗೂ
ಆದರಸಿ,ಪ್ರೀತಿಸಿ, ಗೌರವಿಸಬೇಕು.

  " ಅಮ್ಮಾ" ಎನ್ನುವ ಎರಡು ಪದಗಳಲ್ಲಿ ಇಡೀ ಬ್ರಹ್ಮಾಂಡ ಸೃಷ್ಟೀಯ ಚೈತನ್ಯ ಸಾಕರ ಮೂರ್ತಿ.ಅವಳು ಅನಂತ ಗುಣಗಳ ಖಣಿಯಾಗಿದ್ದಾಳೆ. ಅಂತಯೇ ದೇವರು ಭೂಮಿಯಲ್ಲಿ ತನ್ನ ಪರವಾಗಿ ದೈವ ಸ್ವರೂಪ ತಾಯಿಯನ್ನ ಸೃಷ್ಟಿ ಮಾಡಿದ್ದಾನೆ. ಇವಳು ಶಕ್ತಿರೂಪಿಣಿ . ವಿವಿಧ ರೂಪದ ತಾಯಿ ಭಾಗ್ಯದಾಯಿನಿ ಸ್ವರೂಪಿಣಿ.

      ಯಾವುದೇ  ಸಂಭಂಧ ಇರಲಿ ಅಥವಾ ಇಲ್ಲದಿರಲಿ ಎಲ್ಲರಲ್ಲಿಯೂ ಒಂದಿಲ್ಲ ಒಂದು ಸ್ವಾರ್ಥ ತುಂಬಿದ ಭಾವನೆಗಳು ಇರುತ್ತದೆ.  ಆದರೆ ತಾಯಿ ಪ್ರೀತಿಯಲ್ಲಿ ನಿಶ್ಕಲ್ಮಷ ಪ್ರೀತಿ ಇರುತ್ತದೆ. ಮನುಷ್ಯನಿಗೆ ಎಷ್ಟೇ ವಯಸ್ಸಾದರೂ ತನ್ನಗೆ ಆಗುವ ನೋವಿನಲ್ಲಿ ಸಹ ಮೊದಲು ತನ್ನ ತಾಯಿಯನ್ನೆ ನೆನೆಯುತ್ತಾನೆ. ಅಮ್ಮಾ ! ಅಂತಾ ,ಆ ಶಬ್ದದಲ್ಲಿ ಅವ್ಯಕ್ತವಾದ  ಸಂವೇದನಾಶೀಲ 
ಭಾವನೆ ಇರುತ್ತದೆ. ಆಗ ಮನಸ್ಸಿಗೆ ಅವಿರತ ಆನಂದ ಅನುಭವ ವಾಗುತ್ತದೆ.

    ನವಮಾಸ ಹೊತ್ತು ಹೆತ್ತು ತನ್ನ ಜೀವನ್ಮರಣದ ನಡುವೆ ಹೋರಾಡಿ ಒಂದು ಮುದ್ದಾದ ಮಗುವಿಗೆ ಜನ್ಮವಿತ್ತಾಗ,ಆ ಮಗುವಿನ ನಗುಮೊಗ ನೋಡಿ  ನೋವನ್ನು ಮರೆಯುತ್ತಾಳೆ, ಆ ಮಗುವಿನ ಏಳ್ಗೆಗೆ ತನ್ನ ಹಸಿವು ,ನೋವು,ಸುಖ,ಹೀಗೆ
ಎಲ್ಲವನ್ನು ತ್ಯಾಗ ಮಾಡಿ ಬೆಳೆಸುತ್ತಾಳೆ.
ಆ ಮಗುವಿನಲ್ಲಿಯೇ ತನ್ನ ಸುಖ ಕಾಣುತ್ತಾಳೆ.

  ಇತ್ತೀಚಿನ ಬೆಳವಣಿಗೆ ಪ್ರಕಾರ ನೋಡಿದಾಗ  ಮಕ್ಕಳು ತಾಯಿಗೆ ಗೌರವ ತೋರಿಸದೆ ಉದಾಸಿನ ಮಾಡಿ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ.ಇದು ಒಂದು ವಿಷಾದಕರ ಸಂಗತಿ. ದೇವರಿಗೆ ಧೂಪ,‌ಹೂ,ಪ್ರದಕ್ಷಿಣೆ,ಮಾಡಿ, ಹೆತ್ತ ತಾಯಿಯನ್ನ ಪ್ರೀತಿ , ಗೌರವದಿಂದ ನೋಡದೇ ಹೋದರೆ  ಪರಮಾತ್ಮನು ಮೆಚ್ಚುವುದಿಲ್ಲ.

"ಅ" ಸಂಸ್ಕೃತ ದಲ್ಲಿ  ಅಂದರೆ ಜಗತ್ತನೇ ತನ್ನ ಉದರದಲ್ಲಿ ಧರಿಸಿದ ಭಗವಂತ
"ಮಾ"  ಸಂಸ್ಕೃತದಲ್ಲಿ ಲಕ್ಷ್ಮಿ,ತಾಯಿ, ಇವರಿಬ್ಬರ ಅಂಶ  ರೂಪವೇ ತಾಯಿ ಅದಕ್ಕೆ "ಅಮ್ಮಾ" ಎಂದು ಬಂದಿದೆ.

🙏 ತಾಯಿ🙏

ಬೆಚ್ಚನೆಯ ತೊಳಲ್ಲಿ  ಸವಿಯನು ಕಂಡೆ
 ನಿನ್ನಯ ಕಂಗಳ ಆಸೆಯ ನೋಟ ಕಂಡೆ
 ಜನ್ಮದಿ ತೀರಿಸಲಾರದ ಋಣದ ನಂಟು
ನಿನ್ನಲಿ ದೇವರ ಪ್ರತಿರೂಪ ಉಂಟು

ನವಮಾಸದಿ ಹೊತ್ತು ಹೆತ್ತ ನೋವಿನಲಿ
ಹಸಿವೆಯ ಮರೆತು ಗಳಿಗೆಯ ನೆನಪಲಿ
ಹೇಗೆ ಮರೆಯಲಿ ಉಸಿರಿನ ಒಲವಲಿ
ಮುತ್ತಿಗಿಂತ ತುತ್ತು  ಉತ್ತಮ ಪರಿಯಲಿ

ಸೂರ್ಯ ಚಂದ್ರರೇಷ್ಟು ಸತ್ಯ
ಬಂದು ಹೋಗುವ ನಡುವೆ  ಮಿಥ್ಯ
ಸತ್ಯ ಮಿಥ್ಯ ಗಳ ನಡುವೆ ಎಲ್ಲ ಶೂನ್ಯ
ಜಗದಿ ಮೊದಲು ನೀನು ಮಾನ್ಯ

🖋 ಪ್ರಿಯಾ ಪ್ರಾಣೇಶ ಹರಿದಾಸ 

Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ