Posts

Showing posts with the label ವಿಶ್ವ ಅಮ್ಮಂದಿರ ದಿನದ ಪ್ರಯುಕ್ತ

ಲೇಖನ:- "ಅಮ್ಮ" ಎಂಬರೇಡಕ್ಷರದಲ್ಲಿ....

Image
ಕಿರು ಲೇಖನ :-"ಅಮ್ಮಾ" ಎಂಬೇರಡಕ್ಷರದಲಿ......   ವಿಶ್ವ ತಾಯಂದಿರದಿನಾಚರಣೆಯ ಪ್ರಯುಕ್ತ ಅಮ್ಮಂದರಿಗೆ ಶುಭಾಶಯಗಳು 💐💐 ವರುಷದ ಒಂದು ದಿನ ತಾಯಿ ದಿನಾಚರಣೆ ಮಾಡುವಂತದ್ದಲ್ಲಾ ಉಸಿರು ಇರುವವರೆಗೂ ಆದರಸಿ,ಪ್ರೀತಿಸಿ, ಗೌರವಿಸಬೇಕು.   " ಅಮ್ಮಾ" ಎನ್ನುವ ಎರಡು ಪದಗಳಲ್ಲಿ ಇಡೀ ಬ್ರಹ್ಮಾಂಡ ಸೃಷ್ಟೀಯ ಚೈತನ್ಯ ಸಾಕರ ಮೂರ್ತಿ.ಅವಳು ಅನಂತ ಗುಣಗಳ ಖಣಿಯಾಗಿದ್ದಾಳೆ. ಅಂತಯೇ ದೇವರು ಭೂಮಿಯಲ್ಲಿ ತನ್ನ ಪರವಾಗಿ ದೈವ ಸ್ವರೂಪ ತಾಯಿಯನ್ನ ಸೃಷ್ಟಿ ಮಾಡಿದ್ದಾನೆ. ಇವಳು ಶಕ್ತಿರೂಪಿಣಿ . ವಿವಿಧ ರೂಪದ ತಾಯಿ ಭಾಗ್ಯದಾಯಿನಿ ಸ್ವರೂಪಿಣಿ.       ಯಾವುದೇ  ಸಂಭಂಧ ಇರಲಿ ಅಥವಾ ಇಲ್ಲದಿರಲಿ ಎಲ್ಲರಲ್ಲಿಯೂ ಒಂದಿಲ್ಲ ಒಂದು ಸ್ವಾರ್ಥ ತುಂಬಿದ ಭಾವನೆಗಳು ಇರುತ್ತದೆ.  ಆದರೆ ತಾಯಿ ಪ್ರೀತಿಯಲ್ಲಿ ನಿಶ್ಕಲ್ಮಷ ಪ್ರೀತಿ ಇರುತ್ತದೆ. ಮನುಷ್ಯನಿಗೆ ಎಷ್ಟೇ ವಯಸ್ಸಾದರೂ ತನ್ನಗೆ ಆಗುವ ನೋವಿನಲ್ಲಿ ಸಹ ಮೊದಲು ತನ್ನ ತಾಯಿಯನ್ನೆ ನೆನೆಯುತ್ತಾನೆ. ಅಮ್ಮಾ ! ಅಂತಾ ,ಆ ಶಬ್ದದಲ್ಲಿ ಅವ್ಯಕ್ತವಾದ  ಸಂವೇದನಾಶೀಲ  ಭಾವನೆ ಇರುತ್ತದೆ. ಆಗ ಮನಸ್ಸಿಗೆ ಅವಿರತ ಆನಂದ ಅನುಭವ ವಾಗುತ್ತದೆ.     ನವಮಾಸ ಹೊತ್ತು ಹೆತ್ತು ತನ್ನ ಜೀವನ್ಮರಣದ ನಡುವೆ ಹೋರಾಡಿ ಒಂದು ಮುದ್ದಾದ ಮಗುವಿಗೆ ಜನ್ಮವಿತ್ತಾಗ,ಆ ಮಗುವಿನ ನಗುಮೊಗ ನೋಡಿ  ನೋವನ್ನು ಮರೆಯುತ್ತಾಳೆ, ಆ ಮಗುವಿನ ಏಳ್ಗೆಗೆ ತನ್ನ ಹಸ...