"ದಾಸರೆಂದರೆ ಪುರಂದರದಾಸರಯ್ಯ"
"ದಾಸರೆಂದರೆ ಪುರಂದರ ದಾಸರಯ್ಯ" ಎನ್ನುವಷ್ಟರ ಮಟ್ಟಿಗೆ ಜನಾರ್ದನ ಪ್ರೀತಿ ಗಳಿಸಿದ್ದಾರೆ. ಭಾಗವತ ಧರ್ಮಕ್ಕೆ ವ್ಯವಸ್ಥಿತವಾದ ಮಾರ್ಗವನ್ನು ತೋರಿಸಿಕೊಟ್ಟವರು.ಹಾಗೇ ಕೀರ್ತನಕಾರರಿಗೆ ಹಾದಿಯನ್ನು ಹಾಕಿಕೊಟ್ಟವರು.
ಶ್ರೀ ವಿಜಯದಾಸರು ಒಂದು ಉದಯರಾಗದಲ್ಲಿ ಪುರಂದರ ದಾಸರ ಪೂರ್ಣ ಚರಿತ್ರೆಯನ್ನು ಹೇಳಿದ್ದಾರೆ. ಭಗವಂತನ ಆಜ್ಞೆ ಯಂತೆ ಅವತರಿಸಿದ ನಾರದ ಮಹಾಮುನಿಗಳು ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಆಂಧ್ರ ತಮಿಳನಾಡು, ಕರ್ನಾಟಕದಲ್ಲಿ ಇವರ ನಾಮಗಳು ಪ್ರತಿಯೊಬ್ಬರ ನಾಲಿಗೆಯಲ್ಲಿ ಹರಿದಾಡುತ್ತವೆ. ನಾಲ್ಕು ಲಕ್ಷ ಎಪ್ಪತ್ತೈದು ಸಹಸ್ರ ಸಾಹಿತ್ಯಗಳನ್ನು ರಚಿಸಿದ್ದಾರೆ.
ವಾದಿರಾಜರು,ವಿಜಯೀಂದ್ರರು,ಕನಕ ದಾಸರು, ವೈಕುಂಠದಾಸರು, ಅಣ್ಣಮಾಚಾರ್ಯರು ಸಮಕಾಲಿನರು.
ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ. ಸರ್ವರಲ್ಲೂ ಭಗವಂತನನ್ನು ಕಂಡವರು. ಸುಮಾರು ೧೦೦೦ ಸಾವಿರ ಕೀರ್ತನೆಗಳು ಲಭಿಸಿವೆ.
ಇವರ ಸಾಹಿತ್ಯ ತತ್ವಭರಿತವಾಗಿದ್ದರಿಂದ
"ಪುರಂದರೋಪನಿಷತ್ತು" ಎಂದು ಕರೆದಿದ್ದಾರೆ.
ಪುರಂದರ ದಾಸರ ಚರಿತ್ರೆ :-
ಇವರು ಪುಣೆಯ ಹದಿನೆಂಟು ಮೈಲಿಯ ದೂರದಲ್ಲಿರುವ "ಪುರಂದರಗಡ" ದಲ್ಲಿ ಹುಟ್ಟಿದರು. ಇವರ ತಂದೆ ವರದಪ್ಪ ನಾಯಕರು ಕೋಟಿವಂತರಾಗಿದ್ದರು. ಆಗ ಪುರಂದರಗಡ ಪ್ರಾಂತ ಕರ್ನಾಟಕದ ವಶದಲ್ಲಿತ್ತು. ಆಗ ಕನ್ನಡ ಮಾತನಾಡುವ ಭಾಷೆಯಾಗಿತ್ತು. ಶಾಲಿವಾಹನಶಕೆ ೧೪೦೬ ಜನಿಸಿದರು, ಎಂದು ಹೇಳಲಾಗುತ್ತದೆ. ಆದರೂ ಸ್ಪಷ್ಟತೆಯಿಲ್ಲ.
ವರದಪ್ಪ ನಾಯಕ ತಮ್ಮ ಮಗನಿಗೆ ಶ್ರೀನಿವಾಸ(ಪುರಂದರದಾಸರ ಮೊದಲ ಹೆಸರು)ಎಂದು ನಾಮಕರಣ ಮಾಡಿದರು.ಮಗನಿಗೆ ಧಾರ್ಮಿಕ ಪದ್ಧತಿ ಮತ್ತು ವವ್ಯಹಾರದ ಎಲ್ಲ ಕೌಶಲ್ಯಗಳನ್ನು ಕಳಿಸಿದ್ದರು. ಶ್ರೀನಿವಾಸನಿಗೆ ಪ್ರಾಪ್ತ ವಯಸ್ಸನಲ್ಲಿ ಸರಸ್ವತಿ ಎಂಬ ಗುಣಶೀಲೆ, ರೂಪವಂತೆಯ ಜೊತೆ ವಿವಾಹ ವಾಗುತ್ತದೆ. ಇವರಿಗೆ ನಾಲ್ಕು ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು.ತಂದೆಯ ನಂತರ ರತ್ನಪಡಿ ವ್ಯಾಪಾರಿಯಾಗುತ್ತಾನೆ. ಇದರ ಜೊತೆ ಚಿನ್ನ,ಬೆಳ್ಳಿ ವ್ಯಾಪಾರ ಮಾಡುತ್ತಾನೆ. ಅಪ್ಪನಿಗಿಂತ ದುಪ್ಪಟ್ಟಾಗಿ ಶ್ರೀಮಂತನಾಗಿ ಗಳಿಸುತ್ತಾನೆ. ಶ್ರೀನಿವಾಸ ನಾಯಕನು ಧರ್ಮಿಷ್ಟನು;;ಆದರೆ ಇದರ ಜೊತೆ ಅವನಿಗೆ ಜಿಪುಣ ಮತ್ತು ಅಹಂಕಾರ ಬಂದಿರುತ್ತದೆ. ಯಾರಿಗೂ ದಾನ ಮಾಡುತ್ತರಲಿಲ್ಲ.ಮನೆಯಲ್ಲಿಯು ಸತಿಸುತರಿಗೂ ಧಾರಳವಾಗಿ ಕೈ ಎತ್ತಿ ಹಣ ಕೊಡತ್ತಿರುವುದಿಲ್ಲ ; ಅಷ್ಟು ಲೆಕ್ಕಿಗ ಹಾಗೇ
ಜಿಪುಣ.ಬಡವರಿಗೂ ಭಿಕ್ಷೆ ಹಾಕಿಸಿ ಕೊಡುತ್ತಿರಲಿಲ್ಲ, ಅವರನ್ನು ಬೈದು ಕಳಿಸುತ್ತಿದ್ದನು.ಆದರೆ ಇವನ ಹೆಂಡತಿ ಸರಸ್ವತಿ ತದ್ವಿರುದ್ಧ ಸ್ವಭಾವದವಳು ಪುರಾಣ ಶ್ರವಣ, ಪೂಜೆಗಳಲ್ಲಿ ಆಸ್ತಿಕಳು.ಪರಮ ಸಾಧ್ವಿ. ಬಡವರನ್ನು, ಅಸಹಾಯಕರನ್ನು ಕರುಣೆಯಿಂದ ನಿಸ್ಸಹಾಯಕಳಾಗಿ ಕಣ್ಣಿಂದ ಕಷ್ಟ ನೋಡಿದರೂ, ಗಂಡನ ಅಂಜಿಕೆಗೆ ಅಸಾಹಾಯಕಳಾಗಿ ಮರುಗುತ್ತದ್ದಳು. ಭಗವಂತನಲ್ಲಿ ಸದಾ ತನ್ನ ಗಂಡನಿಗೆ ಒಳ್ಳೆಯ ಬುದ್ಧಿ ಕರುಣಿಸು ಎಂದು ಬೇಡಿಕೊಳ್ಳುತ್ತದ್ದಳು. ಗಂಡನಿಗೆ ಆಗಾಗ ಧರ್ಮಭೋಧನೆ ಮಾಡಿದರೂ ಹಿಡಿಸುತ್ತರಲಿಲ್ಲ. ವಯಸ್ಸು ಮೂವತ್ತೈದು ಆದರೂ ಧರ್ಮದ ವಾಸನೆ ಹುಟ್ಟಿರಲಿಲ್ಲ.
ಭಗವಂತ ಶ್ರೀನಿವಾಸನಿಗೆ ಬುದ್ಧಿ ಕಲಿಸಲು ಒಬ್ಬ ಬಡ ಬ್ರಾಹ್ಮಣನ ವೇಷದಿಂದ ಶ್ರೀನಿವಾಸ ನಾಯಕನ ಅಂಗಡಿ ಬಳಿ ಬಂದನು. ಮಗನ ಉಪನಯನಗೊಸ್ಕರ ನನಗೆ ಧನ ಸಹಾಯ ಮಾಡಬೇಕೆಂದು ವಿನಂತಿಸಿ ಕೊಂಡನು.ಆಗ ಇವನ ಮಾತು ಕೇಳಿ ಕ್ರೋಧಗೊಂಡು ಬೈದು, ಇನ್ನು ಆರು ತಿಂಗಳ ಬಿಟ್ಟು ಬಾ ಎಂದು ಹೇಳಿ ಕಳಿಸಿದನು.ಆದರೆ ಆ ಬಡಬ್ರಹ್ಮಾಣನು ಪದೆಪದೇ ಬಂದು ಪಿಡಿಸ ತೊಡಗಿದನು.
ಆಗ ಎರಡು ಚೀಲದಲ್ಲಿರುವ ಸವಕಲು ನಾಣ್ಯವನ್ನು ಸುರಿದನು.ಬ್ರಾಹ್ಮಣನು ಉಪಯೋಗಕ್ಕೆ ಬಾರದ ನಾಣ್ಯವನ್ನು ತಹೆದುಕೊಳ್ಳದೆ ಹಾಗೇ ನಿಂತನು. ಆಗ ಆಳುಗಳಿಂದ ಹೊರಗೆ ತಳ್ಳಿಸಿದನು.
ಬ್ರಾಹ್ಮಣ ಶ್ರೀನಿವಾಸನ ಮನೆಗೆ ಭಿಕ್ಷೆಗಾಗಿ ಬಂದು, ಉಪನಯನದ ವಿಷಯ ಹೇಳಿ ಧನ ಸಹಾಯ ಮಾಡಲು ಕೇಳಿದಾಗ , ಎಲ್ಲ ಐಶ್ವರ್ಯ ಇದ್ದು ಕೊಡಲು ಅಸಹಾಯಕಳಾಗಿದ್ದಳು. ಎಲ್ಲ ಪರಸ್ಥಿತಿ ಅವನ ಮುಂದೆ ಹೇಳಿ ನಿರುತ್ತರವಾಗಿ ನಿಂತಳು. ಆಗ ಆ ಬ್ರಹ್ಮಾಣನು ತವರು ಮನೆಯ ಉಡುಗೊರೆಯಾದ ಮೂಗಿನಲ್ಲಿರುವ ಮೂಗುತಿಯನ್ನು ಕೊಡಲು ಕೇಳಿದನು. ಆಗ ನಿಸ್ಸಾಹಾಯಕಳಾಗಿ ಮನದಲ್ಲಿ ಒಂದು ಒಳ್ಳೆಯ ಕಾರ್ತಕ್ಕೆ ಕೊಡುತ್ತಿರುವೆ ; ದೈವಚ್ಛೆಯೆಂದು ತಗೆದು ಕೊಟ್ಟಳು.
ಆ ಬಡ ಬ್ರಾಹ್ಮಣನು ಶ್ರೀನಿವಾಸನ ಅಂಗಡಿಗೆ ಬಂದು ಮಾರಟ ಮಾಡಲು ಬಂದನು.ಆ ಮೂಗುತಿ ಶ್ರೀನಿವಾಸನ ಕೈಲ್ಲಿ ಹಿಡಿದಾಗ ,ಅನುಮಾನ ಬಂತು; ನೋಡಿದ ಹಾಗೇ ಅನಿಸುತ್ತದೆಯಲ್ಲ ಎಂದು ವಿಚಾರಿಸುತ್ತಲೇ, ಒಂದು ವಸ್ತುವಿನಂತೆ ಮತ್ತೊಬ್ಬರಲ್ಲಿಯೂ ಇರುಬಹುದಲ್ಲ; ಎಂದು ಸಮಧಾನಪಟ್ಟುಕೊಂಡನು. ಇಬ್ಬರ ನಡುವೆ ಬೆಲೆ ಹೊಂದಾಣಿಕೆ ಯಾಗಲಿಲ್ಲ. ಆಗ ವ್ಯಾಪಾರಿ ಆ ಮೂಗತಿಯನ್ನು ಅಲ್ಲೇ ಸಿಟ್ಟಿನಿಂದ ಬಿಟ್ಟು ಹೋದನು. ಎಷ್ಟು!ಕರೆದರೂ ಬರದೇ ಹಿಂತಿರುಗಿ ನೋಡದೇ ಹೋರಟಬಿಟ್ಟನು. ತನ್ನ ಆಳುಗಳ ಮೂಲಕ ನೋಡಲು ಕಳಿಸಿದಾಗ ಅವನು ವಿಠ್ಠಲ ಮಂದಿರದವರಿಗೆ ಕಂಡು ಮುಂದೆ ಕಾಣದಾದ ಎಂದು ಹೇಳಿದರು. ಶ್ರೀನಿವಾಸ ನಾಯಕ
ಮೂಗುತಿಯನ್ನು ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಡು ಕೀಲಿ ಹಾಕಿ ಮನೆಗೆ ಹೋದನು.
ಸರಸ್ವತಿ! ಸರಸ್ವತಿ ಎಂದು ಅನಿರೀಕ್ಷಿತವಾಗಿ ಗಂಡನ ಧ್ವನಿ ಕೇಳಿ ಗಾಬರಿಯಾದಳು. ಸರಸ್ವತಿಯನ್ನು ಕಂಡ ಕ್ಷಣ ಮೂಗುತಿ ಇಲ್ಲದ್ದನ್ನು ನೋಡಿ , ಎಲ್ಲಿ ? ನಿನ್ನ ಮೂಗುತಿ ಎಂದು ಗದುರಿದನು. ಆಗ ದೇವರ ಮನೆಯಲ್ಲಿದೆ.ಈಗ ಪೂಜೆ ಮಾಡುತ್ತಿರುವೆ, ಪೂಜೆ ಮಾಡಿದ ನಂತರ ತರುವೆ, ಅಂದಾಗ ಮತ್ತೆ ! ಕೋಪಗೊಂಡನು.ಇಗಲೇ ತರಬೇಕು ಎಂದು ಒತ್ತಾಯಿಸಿದನು.
ಸರಸ್ವತಿಯು ಗಂಡನ ಕೋಪದಿಂದ ತತ್ತರಿಸಿ , ಇನ್ನು ತನಗೆ ಉಳಿಗಾಲವಿಲ್ಲ ಎಂದು ಅರಿತು, ವಿಧಯಿಲ್ಲದೆ ವಿಷ ಪ್ರಾಶನ ಮಾಡುತ್ತಾಳೆ.ಆಗ ಥಟ್ಟನೆ !ಅದರಲ್ಲಿ ಮೂಗುತಿ ಬಿದ್ದ ಸಪ್ಪಳ ನೋಡಿ , ಏನೆಂದು ನೋಡಿದಾಗ ಆ ವಜ್ರದ ಮೂಗುತಿಯೆ ಆಗಿರುತ್ತದೆ. ಕೂಡಲೇ ಹರುಷಗೊಂಡು ಭಗವಂತನಿಗೆ ನಮ್ಮಸ್ಕರಿಸಿ , ಗಂಡನ ಕೈಯಲ್ಲಿ ಮೂಗುತಿಯನ್ನು ಕೊಡುತ್ತಾಳೆ. ಮೂಗುತಿಯನ್ನು ನೋಡಿದ ಶ್ರೀನಿವಾಸ ನಾಯಕನು ,ತನ್ನ ಮನದ ಸಂಶಯ ನಿವಾರಣವಾಗಿ , ಮರಳಿ ತನ್ನ ಹೆಂಡತಿ ಕೈಗೆ ಧರಿಸಲು ಹೇಳಿ ; ಅಂಗಡಿಯ ಕಡೆಗೆ ಹೋಗುತ್ತಾನೆ. ಅಂಗಡಿಗೆ ಹೋಗಿ , ಪಟ್ಟಿಗೆಯಲ್ಲಿ ಭದ್ರವಾಗಿ ಇಟ್ಟಿದ್ದ ಆ ಮೂಗುತಿ ನೋಡುತ್ತಾನೆ ನಾಪತ್ತೆ ಯಾಗಿರುತ್ತದೆ. ಗೊಂದಲದಿಂದ ಮನೆಗೆ ಹಿಂತಿರುಗಿ ಎಲ್ಲ, ವಿಷಯವನ್ನು ಹೇಳಿನು.ಹಾಗೇ ಸರಸ್ವತಿ ತಾನು ನೀಡಿದ ಮೂಗುತಿ ವಿಷಯ , ವಿಷ ಸೇವನೆ ಸಂಕಲ್ಪ, ಬಟ್ಟಲಲ್ಲಿ ಬಿದ್ದ ಮೂಗುತಿ ವಿಷಯ ಹೀಗೆ ಅವಳು ಎಲ್ಲ ವಿಷಯ ಹೇಳುತ್ತಾಳೆ.
ಆಗ ಶ್ರೀನಿವಾಸ ನಾಯಕನಿಗೆ ಈ ಹಣದಲೋಭ , ಮೋಹದ ಪರದೆ ಕಳಚಿ ಜ್ಞಾನೋದಯವಾಗುತ್ತದೆ. ಜೀವ ಸ್ವರೂಪಕ್ಕೆ ಭಗವಂತನ ಸ್ಮರಣೆ ಆಗುತ್ತದೆ.ನನ್ನ ಪತ್ನಿಗೆ ಉಂಟಾದ ಜ್ಞಾನ ನನಗೆ ಉಂಟಾಗಲಿಲ್ಲ ಎಂದು ಭಗವಂತನಲ್ಲಿ ಉಪವಾಸ ಇದ್ದು ಮೊರೆ ಹೋಗುತ್ತಾನೆ.
ಒಂದು ದಿನ ಭಗವಂತ ಸರಸ್ವತಿ ದೇವಿಗೆ ಪ್ರತ್ಯಕ್ಷನಾಗಿ, ನಿನ್ನ ಪತಿಗೆ ಸರಸ್ವವನ್ನು ತ್ಯಾಗ ಮಾಡಿ ನನ್ನ ದಾಸನಾಗಿ ಬಂದರೆ ದರ್ಶನವಾಗುತ್ತದೆ, ಎಂದು ಹೇಳಿ ಅದೃಶ್ಯನಾಗುತ್ತಾನೆ. ಪತಿಯ ಮುಂದೆ ಭಗವಂತ ಪ್ರತ್ಯಕ್ಷವಾಗಿ ಹೇಳಿದ ವಿಷಯ ಹೇಳಿದಾಗ , ಒಡನೆಯೆ ಭಗವತ್ಪರವಶನಾಗಿ ನರ್ತನೆ ಮಾಡುತ್ತಾ, ನಾಮ ಕೀರ್ತನೆಗಳನ್ನು ಹಾಡುತ್ತಾ ಮೈ ಮೇಲಿನ ಒಡವೆಗಳನ್ನು ಕಿತ್ತೋಗೆದು, ಮೈ ಮರೆಯುತ್ತಾನೆ. ಮನೆಯಿಂದ ಹೋರಗೆ ಬಂದು ಮನೆಯ ಮೇಲೆ ಒಂದು ತುಳಿಸಿ ದಳ ಹಾಕಿ " ಶ್ರೀ ಕೃಷ್ಣಾರ್ಪಣ" ಎಂದು ಕೈ ಮುಗಿಯುತ್ತಾನೆ.
ವೈರಾಗ್ಯ ಹೊಂದಿದ ಮೇಲೆ ಭಗವಂತ ಕನಸಿನಲ್ಲಿ ಬಂದು ಪಂಪಾ ಕ್ಷೇತ್ರದ ಚಕ್ರತೀರ್ಥದ ಬಳಿ ಇರುವ ಶ್ರೀಮಠದಲ್ಲಿ ಇರುವ ವ್ಯಾಸರಾಯರ ಶಿಷ್ಯರಾಗಿ ಗುರುಉಪದೇಶ ಪಡೆಯಲು ಸೂಚಿಸಿದನು. ಭಗವಂತನ ಅಣತಿಯಂತೆ ಅವರನ್ನು ಭೇಟಿ ಮಾಡಿ ಎಲ್ಲ ವಿಷಯ ಹೇಳಿದಾಗ , ಆಶ್ರಯ ನೀಡಿ "ಪುರಂದರ ವಿಠ್ಠಲ್" ಎಂಬ ಅಂಕಿತ ನೀಡಿ ಅನುಗ್ರಹಿಸಿದರು. ಅಂದಿನಿಂದ ಪುರಂದರ ದಾಸರಾದರು.
ಒಂದು ದಿನ ವ್ಯಾಸರಾಯರ ಆಜ್ಞೆಯಂತೆ ದಾಸರು ಆಹಾರ ಸ್ವೀಕರಿಸಿ ನಂತರ ಅದನ್ನು ಹೊರ ಹಾಕಿ , ತಮ್ಮ ನಿತ್ಯ ಐಹ್ನಿಕ ಮುಗಿಸಿ ಮತ್ತೇ ಸ್ವೀಕರಿಸಿ ಗುರುಭಕ್ತಿ ಮತ್ತು ಶಾಸ್ತ್ರ ಭಕ್ತಿ ತೋರಿಸಿಕೊಟ್ಟರು.
ಇವರು ರಕ್ತಾಕ್ಷಿ ಸಂವತ್ಸರದ ಪುಷ್ಯ ಬಹುಳ ಅಮವಾಸ್ಯೆ, ತುಂಗಾತೀರದ ಹಂಪಿಯಲ್ಲಿ ದೇಹ ತ್ಯಜಿಸಿದರು.
Comments
Post a Comment