Posts

Showing posts with the label ಪುರಂದರದಾಸರ ಚರಿತ್ರೆ

"ದಾಸರೆಂದರೆ ಪುರಂದರದಾಸರಯ್ಯ"

Image
"ದಾಸರೆಂದರೆ ಪುರಂದರ ದಾಸರಯ್ಯ" ಎನ್ನುವಷ್ಟರ ಮಟ್ಟಿಗೆ ಜನಾರ್ದನ ಪ್ರೀತಿ ಗಳಿಸಿದ್ದಾರೆ. ಭಾಗವತ ಧರ್ಮಕ್ಕೆ ವ್ಯವಸ್ಥಿತವಾದ ಮಾರ್ಗವನ್ನು ತೋರಿಸಿಕೊಟ್ಟವರು.ಹಾಗೇ ಕೀರ್ತನಕಾರರಿಗೆ ಹಾದಿಯನ್ನು ಹಾಕಿಕೊಟ್ಟವರು. ಶ್ರೀ ವಿಜಯದಾಸರು ಒಂದು ಉದಯರಾಗದಲ್ಲಿ ಪುರಂದರ ದಾಸರ ಪೂರ್ಣ ಚರಿತ್ರೆಯನ್ನು ಹೇಳಿದ್ದಾರೆ. ಭಗವಂತನ ಆಜ್ಞೆ ಯಂತೆ ಅವತರಿಸಿದ ನಾರದ ಮಹಾಮುನಿಗಳು ಎಂದು ಹೇಳಿದ್ದಾರೆ.      ದಕ್ಷಿಣ ಭಾರತದ ಆಂಧ್ರ ತಮಿಳನಾಡು, ಕರ್ನಾಟಕದಲ್ಲಿ ಇವರ ನಾಮಗಳು ಪ್ರತಿಯೊಬ್ಬರ ನಾಲಿಗೆಯಲ್ಲಿ ಹರಿದಾಡುತ್ತವೆ. ನಾಲ್ಕು ಲಕ್ಷ ಎಪ್ಪತ್ತೈದು ಸಹಸ್ರ ಸಾಹಿತ್ಯಗಳನ್ನು  ರಚಿಸಿದ್ದಾರೆ. ವಾದಿರಾಜರು,ವಿಜಯೀಂದ್ರರು,ಕನಕ ದಾಸರು, ವೈಕುಂಠದಾಸರು, ಅಣ್ಣಮಾಚಾರ್ಯರು ಸಮಕಾಲಿನರು. ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ. ಸರ್ವರಲ್ಲೂ ಭಗವಂತನನ್ನು  ಕಂಡವರು. ಸುಮಾರು ೧೦೦೦ ಸಾವಿರ ಕೀರ್ತನೆಗಳು ಲಭಿಸಿವೆ. ಇವರ ಸಾಹಿತ್ಯ ತತ್ವಭರಿತವಾಗಿದ್ದರಿಂದ  "ಪುರಂದರೋಪನಿಷತ್ತು" ಎಂದು ಕರೆದಿದ್ದಾರೆ. ಪುರಂದರ ದಾಸರ ಚರಿತ್ರೆ :- ಇವರು  ಪುಣೆಯ ಹದಿನೆಂಟು ಮೈಲಿಯ ದೂರದಲ್ಲಿರುವ "ಪುರಂದರಗಡ" ದಲ್ಲಿ ಹುಟ್ಟಿದರು. ಇವರ ತಂದೆ ವರದಪ್ಪ ನಾಯಕರು ಕೋಟಿವಂತರಾಗಿದ್ದರು. ಆಗ ಪುರಂದರಗಡ ಪ್ರಾಂತ ಕರ್ನಾಟಕದ ವಶದಲ್ಲಿತ್ತು. ಆಗ ಕನ್ನಡ ಮಾತನಾಡುವ ಭಾಷೆಯಾಗಿತ್ತು. ಶಾಲಿವಾಹನಶಕೆ ೧೪೦೬ ಜನಿಸಿದರು, ಎಂದು ಹೇಳಲಾಗುತ್ತದೆ. ಆದರೂ...