Posts

ಲೇಖನ :- ಹೇಗೇ ಅರ್ಚಿಸಲಿ,ಹೇಗೆ ಮೆಚ್ಚಿಸಲಿ**ಅರ್ಥಾನುಸಂಧಾನ :-

Image
ಹೇಗೇ ಅರ್ಚಿಸಲಿ,ಹೇಗೆ ಮೆಚ್ಚಿಸಲಿ* ದಾಸವ್ಯಾಸ ಸಾಹಿತ್ಯ ಅಜ್ಞಾನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಟಿಗೆಯಾಗಿದೆ. ಎಲ್ಲ‌ ಮಹನೀಯರ ಸಾಹಿತ್ಯವನ್ನು ಅವಲೋಕಿಸಿದಾಗ ವೇದ ಉಪನೀಷತ ಭಾಗವತಾದಿ ಗ್ರಂಥಗಳ ಸಾರವನ್ನು ; ನಮ್ಮಂತಹ ಪಾಮರಿಗೆ ತಿಳಿಯಲು ಕನ್ನಡದಲ್ಲಿ ಕೀರ್ತನೆಗಳು, ಉಗಾಭೋಗ,ಸುಳಾದಿ ಹೀಗೆ ಹಲವು ಪ್ರಕಾರದಲ್ಲಿ ಬರೆದು ನಮಗೆ ಭಗವದ್ ಚಿಂತನೆಯಲ್ಲಿ ತೊಡಗಿಸಿಅಂತರ್ಯದ ಚಕ್ಷುವನ್ನು ತೆರೆಯುವಂತೆ ಮಾಡಿದ್ದಾರೆ. ಆದರೂ ನಾವು ಮೂಢರು ನಾವುಗಳು ಮಾಡುವ ಪ್ರತಿ ಕರ್ಮವನ್ನು ಅಹಂಕಾರದಿಂದ ಮಾಡುತ್ತೇಲೆ ಬಂದಿದ್ದೇವೆ. *"ಹೇಗೆ ಅರ್ಚಿಸಲಿ;* ಮೆಚ್ಚಸಲಿ"ಅನ್ನುವ ಕೃತಿಯಲ್ಲಿ  ನಾವು ಭಗವಂತನ  ಪೂಜೆ ಮಾಡುವ ಮೊದಲು , ದೇವಾದಿದೇವತೆಗಳ ಮೂಲಕ ,  ಪ್ರೇರ್ಯ, ಪ್ರೇರ್ಯಕನಾಗಿ ಸರ್ವೋತ್ತಮನಾದ ಭಗವಂತ ಅಣುತೃಣುವಿನಲ್ಲಿ ವ್ಯಾಪಿಸಿ, ತನ್ನ ತಾನೇ ಪೂಜೆಗೊಂಡರು, ಕಿಂಚಿತ್ತು ಗರ್ವ ಪಡದೇ , ಅನಂತಗುಣಗಣಗಳ ಮಹಿಮನಾದ ಚಿದಾನಂದಾತ್ಮಕನಾದ ಭಗವಂತನಲ್ಲಿ ವಿನಮ್ರದಿಂದ ಮೊರೆ ಹೋಗಿದ್ದಾರೆ. ಹರಿಕಥಾಮೃತಸಾರದ ಮೂರನೇ ಸಂಧಿಯಾದ "ವ್ಯಾಪ್ತಿಸಂಧಿ" ಯಲ್ಲಿ ಹದಿನಾಲ್ಕು ಲೋಕಗಳ ಒಡೆಯನಾದ ಅನಿತ್ಯ ಭಂಧುವಾದ ಭಗವಂತ ಸಮಸ್ತ ಸೃಷ್ಟ್ಯಾದಿಗಳಲ್ಲಿ ನಿಂತು ನಿತ್ಯ ಯಾವ ರೀತಿ ಪೂಜೆಗೊಂಬು ವದನ್ನು  ಸುಂದರವಾಗಿ ವರ್ಣಿಸಿದ್ದಾರೆ. *ಪಲ್ಲವಿ* *ಹೇಗೆ ಅರ್ಚಿಸಲಿ ಮೆಚ್ಚಿಸಲಿ* *ನಿನ್ನನಾಗಶಯನ* *ನಾರದವಂದಿತನೆ ದೇವಾ*/ ಪ *ಅರ್ಥ:

ಲೇಖನ :- ಗುಲಾಬಿ ಹೂವಿನಂತೆ ಇರಬೇಕು ನಮ್ಮ ಜೀವನ

Image
ಲೇಖನ‌:- ಗುಲಾಬಿ ಹೂವಿನಂತಿರಬೇಕು‌ ನಮ್ಮ ಜೀವನ   ಪ್ರಕೃತಿ ಮತ್ತು ಮನುಷ್ಯನಿಗೆ ಒಂದು ಸಂಬಂಧವಿದೆ. ಪ್ರಕೃತಿ ಬಿಟ್ಟು ಮನುಷ್ಯ ಬದಕಲು ಸಾಧ್ಯವಿಲ್ಲ. ಸೃಷ್ಟಿಯಲ್ಲಿ ಕಾಣುವ ಪ್ರತಿ ನೋಟದಲ್ಲಿ  ಸೌಂದರ್ಯ ತುಂಬಿ ತುಳುಕುತ್ತದೆ.ಪ್ರಕೃತಿಯು ಮನಸ್ಸಿಗೆ ಮುದ, ಉಲ್ಲಾಸ ನೀಡುತ್ತದೆ. ಪ್ರಕೃತಿಯಲ್ಲಿ ಬೀಡುವ ಹೂಗಳು ಬಹಳ ಇವೆ.  ಆದರೆ ಹೂಗಳಲ್ಲಿ ಅತೀ ಶ್ರೇಷ್ಟವೆನಿಸಿದ ಹೂ ಅಂದರೆ, "ಗುಲಾಬಿ". ಗುಲಾಬಿ ಹೂ ಎಲ್ಲರಿಗೂ ಇಷ್ಟವಾದ ಹೂ. ಜಗದ ಎಲ್ಲ  ಕಾರ್ಯಗಳಿಗೂ ಇದು ಅವಶ್ಯ. ಈ ಗುಲಾಬಿ ಹೂ ನೊಡಿದಾಗ ಎಲ್ಲರ ಮನಸ್ಸುರಗೊಳ್ಳುತ್ತದೆ. ಆ ಗುಲಾಬಿ  ಮುಳ್ಳಿನ ಕಂಟಿಯಲ್ಲಿಯೇ ಬೆಳೆಯುತ್ತದೆ. ಆದರೂ ಆ ಹೂವನ್ನು ಎಲ್ಲರೂ ಇಷ್ಟ‌ಪಡುತ್ತಾರೆ. ಹಾಗೇ ಮನೆಮನೆಗಳಲ್ಲೂ ಇದನ್ನು ಬೆಳೆಸುತ್ತಾರೆ , ಪ್ರೀತಿಸುತ್ತಾರೆ. ಗುಲಾಬ ಮೊಗ್ಗಾಗಿ ಹೂವಾಗಿ ಅರಳುವ ಹಾಗೇ ನಮ್ಮ ಜೀವನ ಅರಳುತ್ತದೆ. ಮಗುವಾಗಿ‌ ಹುಟ್ಟಿ ಬೆಳೆದು ಒಬ್ಬ ಸಾಮಾಜಿಕ ವ್ಯಕ್ತಿಯಾಗುತ್ತೆವೆ.  " ಆಗ ನಮ್ಮ ಜೀವನದಲ್ಲಿ ಗುಲಾಬಿಯಂತೆ ಸದಾ ನಗುತಿರಬೇಕು; ಇದರ ಗುಣಧರ್ಮ ಕೆಲವೇ ಗಂಟೆಗಳಲ್ಲಿ ಬಾಡುತ್ತದೆ, ಆದರೆ ಎಲ್ಲರ ಮನ ಗೆದ್ದಿರುತ್ತದೆ ಹಾಗೇ ಸಂತೋಷ ತಂದಿರುತ್ತದೆ. ನಾವುಗಳು  ನಮ್ಮ‌ ಜೀವನದಲ್ಲಿ  ಪ್ರತಿಯೊಬ್ಬರ ಜೊತೆ ಒಳ್ಳೆಯ ಸಂಭಂಧ ಇಟ್ಟುಕೊಂಡು, ಪ್ರೀತಿಯಿಂದ ಇರಬೇಕು.ಗುಲಾಬಿ ಸುತ್ತಲೂ ಮುಳ್ಳಿನ ಕಂಟಿ ಇರುವ ಹಾಗೇ, ನಮ್ಮ ಜೀವನದಲ್ಲೂ ಕೆಲವೊಂದಿಷ್ಟು ಜನ  ಕುಮನದ

ಲೇಖನ :- ಮರಡೆಪ್ಪನ ಮೇಲೆ ಶ್ರೀ ಮಹಿಪತಿದಾಸರ ಕಾರುಣ್ಯ

Image
ಲೇಖನ :-  ಮರಡೆಪ್ಪನ ಮೇಲೆ ಶ್ರೀ ಮಹಿಪತಿದಾಸರ  ಕಾರುಣ್ಯ ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ,ಕರ್ಮ ಯೋಗ ಭಕ್ತಿ ಯೋಗ, ರಾಜಯೋಗ ಮಂತ್ರಯೋಗ, ಜಪ, ನಾಮಸಾಧನೆ ಹೀಗೆ ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ  ಗುರಿಯನ್ನು ಮುಟ್ಟಿದ್ದಾರೆ . ಇಂತಹ ಶ್ರೇಷ್ಠ  ಸಾಧಕ ಹರಿದಾಸರಾದ  ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ. ಮಹಿಪತಿ ದಾಸರು ಇದ್ದ ಅವಧಿ  ಮಧ್ಯ ಅವಧಿ ೧೬ ನೇ ಶತಮಾನ. ಪುರಂದರ ದಾಸರ ಕಾಲ ಮುಗಿದ ಮೇಲೆ ವಿಜಯದಾಸರ ಕಾಲ (ಕ್ರಿ. ಶ.೧೫೬೪ ರಿಂದ ಕ್ರಿ. ಶ.೧೬೮೨), ಈ ಘಟ್ಟವನ್ನು ಹರಿದಾಸ ಸಾಹಿತ್ಯ ನಿಂತು ಹೋಗಿತ್ತು ಎಂದಿದ್ದಾರೆ. ಆದರೆ ಈ ಘಟ್ಟದಲ್ಲಿ ಮಹಿಪತಿದಾಸರು ಬರುತ್ತಾರೆ. ಅಂದರೆ ಪುರಂದರ ದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರ ಬರುವ ಮುಂಚೆ ( ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ . ಮಹಿಪಾತಿದಾಸರನ್ನು, ಮಹಿಪತಿ ರಾಜ,ಮಹಿಪತಿ ಸ್ವಾಮಿ, ಮಹಿಪತಿದಾಸರು, ಮಹಿಪತಿರಾಯ ಎಂದು ಕರೆಯುವುದು ಇದೆ. ಇವರು ಹರಿದಾಸ ಸಾಹಿತ್ಯವನ್ನು  ವಿಶಿಷ್ಟ ರೀತಿಯಿಂದ ಕೂಡಿದೆ. ಹರಿ ಸರ್ವೋತ್ತಮತೆ ಸಾರುವ ಮದ್ವ ಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ ಆಡು ಭಾಷೆಯಲ್ಲಿ ರಚಿಸಿದ್ದಾರೆ, ಹಾಗೇ ಇವರು ಊರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯಲ್ಲಿ ಸ್ಥಿರವ

ಮಹಿಪತಿ ದಾಸರ ಸಾಹಿತ್ಯ ವೈಶಿಷ್ಟ, ಚರಿತ್ರೆ

Image
ಲೇಖನ :-  ಮಹಿಪತಿ ದಾಸರ ಸಾಹಿತ್ಯ  ವೈಶಿಷ್ಟ.&ಚರಿತ್ರೆ  ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ,ಕರ್ಮ ಯೋಗ ಭಕ್ತಿ ಯೋಗ, ರಾಜಯೋಗ ಮಂತ್ರಯೋಗ, ಜಪ, ನಾಮಸಾಧನೆಯಿಂದ ಕೂಡಿದೆ. ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ  ಗುರಿಯನ್ನು ಮುಟ್ಟಿದ್ದಾರೆ . ಇಂತಹ ಶ್ರೇಷ್ಠ  ಸಾಧಕ ಹರಿದಾಸರಾದ  ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ. ಮಹಿಪತಿ ದಾಸರು ಇದ್ದ ಅವಧಿ  ಮಧ್ಯ ಅವಧಿ ೧೬ ನೇ ಶತಮಾನ. ಪುರಂದರ ದಾಸರ ಕಾಲ ಮುಗಿದ ಮೇಲೆ ವಿಜಯದಾಸರ ಕಾಲ (ಕ್ರಿ. ಶ.೧೫೬೪ ರಿಂದ ಕ್ರಿ. ಶ.೧೬೮೨), ಈ ಘಟ್ಟವನ್ನು ಹರಿದಾಸ ಸಾಹಿತ್ಯ ನಿಂತು ಹೋಗಿತ್ತು ಎಂದಿದ್ದಾರೆ. ಆದರೆ ಈ ಘಟ್ಟದಲ್ಲಿ ಮಹಿಪತಿದಾಸರು ಬರುತ್ತಾರೆ. ಅಂದರೆ ಪುರಂದರ ದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರ ಬರುವ ಮುಂಚೆ ( ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ . ಮಹಿಪಾತಿದಾಸರನ್ನು, ಮಹಿಪತಿ ರಾಜ,ಮಹಿಪತಿ ಸ್ವಾಮಿ, ಮಹಿಪತಿದಾಸರು, ಮಹಿಪತಿರಾಯ ಎಂದು ಕರೆಯುವುದು ಇದೆ. ಇವರು ಹರಿದಾಸ ಸಾಹಿತ್ಯವನ್ನು  ವಿಶಿಷ್ಟ ರೀತಿಯಿಂದ ಕೂಡಿದೆ. ಹರಿ ಸರ್ವೋತ್ತಮತೆ ಸಾರುವ ಮದ್ವ ಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ ಆಡು ಭಾಷೆಯಲ್ಲಿ ರಚಿಸಿದ್ದಾರೆ, ಹಾಗೇ ಇವರು ಊರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯ

ರಾಮದಾಸರ ಮುಂಡಿಗೆ ಚಿಂತನೆ"ನಮ್ಮವ್ವ ಈಕೆ ನಮ್ಮವ್ವ

"ಮುಂಡಿಗೆ"ಎಂದರೆ  ಗೂಡಾರ್ಥ ಹೊಂದಿರುವ ಸಾಹಿತ್ಯ. ರಾಮದಾಸರ ಮುಂಡಿಗೆ ಚಿಂತನೆ ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ ಆರುವರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗೆ ಬೀಳದಹಾಗೆ ಕುಡಿದಳು ಹತ್ತಡಿಗೊಳಿಗೆ ಪತ್ತೆಯಿಲ್ಲದೆ ತಿಂದು 8 ಮೆತ್ತಗೆ ಸುತ್ತಿಕೊಂಡು ಮಲಗಿದಳು ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳು ಕುಡಿದೊಡೆಯ ಶ್ರೀರಾಮನ ಕೂಡಿದಳು __________////////___________//////// _________ ಅರ್ಥಾನುಸಂಧಾನ :- ಮೇಲಿನ ಮುಂಡಿಗೆಗೆ ಮತಿಗೆ ತಿಳಿದಿತ್ತು ಅರ್ಥೈಸಲು ಪ್ರಯತ್ನ  ಮಾಡಿದ್ದೇನೆ.ತಪ್ಪಿದಲ್ಲಿ ಕ್ಷಮಿಸಿ ಈ ಮುಂಡಿಗೆಯಲ್ಲಿ ಮನಸ್ಸು ಮತ್ತು ಮಾಯೆ ಬಗ್ಗೆ ಹೇಳಿದ್ದಾರೆ. ಮಾಯೆ ಎಂಬ ಭಾವನೆ ಉಂಟಾಗಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಷಯವನ್ನು ಪ್ರತಿ ನುಡಿಯಲ್ಲಿ ಹೇಳಿದ್ದಾರೆ. "ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ" ಈ ಪಲ್ಲವಿಯಲ್ಲಿ  ಮಾಯೆ ಮನಸ್ಸಿನ  ಜೊತೆ ಆಡುವ ಆಟದ ಬಗ್ಗೆ ಹೇಳಿದ್ದಾರೆ. ಮನಸ್ಸು ಕಾಣದ. ಮುಟ್ಟದ ವಸ್ತುವಾಗಿದೆ. ಆದರೆ ದೇಹದ ಇ

ಲೇಖನ :- ಶ್ರೇಷ್ಠ ಅನುಭಾವಿ ಶ್ರೀ

Image
ಲೇಖನ :- ಶ್ರೇಷ್ಠ ಅನುಭಾವಿ ಶ್ರೀ ಮಹಿಪತಿ ದಾಸರು            ಇಂದು  ಛಟ್ಟಿ ಅಮವಾಸ್ಯೆ ಮಹಿಪತಿದಾಸರ ಕಾಲವಾದ ದಿನ. ನಿಮಿತ್ಯ ಅವರ ಜೀವನ ಚರಿತ್ರೆಯ ಕಿರು ಲೇಖನ. ಮಹಿಪತಿದಾಸರು ಮೂಲತಃ ಬಾಗಲಕೋಟೆ ಜಿಲ್ಲೆಯ "ಕಾಥವಟೆ" ಮನೆತನದವರು .  ಆದರೆ ಕಾಲಾಂತರದಲ್ಲಿ ಮಹಿಪತಿರಾಯರ ತಂದೆ "ಮೌನಭಾರ್ಗವ" ಗೋತ್ರಜ ಕೊನೇರಿರಾಯರು ತಮ್ಮ ಹೆಂಡತಿಯಾದ ಲಕ್ಷ್ಮಿಬಾಯಿ ಜೊತೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ "ಐಗಳಿ* " ಎಂಬ ಗ್ರಾಮದಲ್ಲಿ ವೆಂಕಟೇಶ ದೇವರನ್ನು ಅರ್ಚಿಸುತ್ತ ,ಕರ್ಣಿಕ ವೃತ್ತಿಯೊಂದಿಗೆ ಸುಖವಾಗಿದ್ದರು . ಕೊನೇರಿರಾಯರು ವಿದ್ವಾಂಸರು  ಷಟ್ ಶಾಸ್ತ್ರ ಪಂಡಿತರು ಮತ್ತು ಸಂಗೀತ ಆಸಕ್ತರಾಗಿದ್ದರು. ಇವರಿಗೆ ಮೊದಲನೇ ಮಗ ವೆಂಕಟೇಶ ಮತ್ತು ಎರಡನೇ ಮಗ ಗುರುರಾಯ (ಮಹಿಪತಿರಾಯ) ಸಂಸಾರ ಬೆಳೆದ ಹಾಗೆ ನಿರ್ವಹಿಸಲು ಕಷ್ಟವಾದಾಗ ವಿಜಯಪುರಕ್ಕೆ ಕೊನೇರಿರಾಯರು ಬಂದು ನೆಲಸಿದರು. ಆಗ ಆದಿಲ್ ಶಾಹಿ ಆಡಳಿತ ಇದ್ದರು , ಹಿಂದು-ಮುಸ್ಲಿಂ ಧರ್ಮದಲ್ಲಿ ದ್ವೇಷದ ವಾತಾವರಣ ಇರದೆ ಸ್ನೇಹ ಸೌಹಾರ್ದತೆಯಿಂದ ಕೂಡಿತ್ತು.  ಮುಂದೆ ಮಕ್ಕಳಿಬ್ಬರು ಬೆಳೆದು ದೊಡ್ಡವರಾದ ಮೇಲೆ ಹಿರಿಯವನಾದ ವೆಂಕಟೇಶನು ವಿದ್ಯಾಭ್ಯಾಸ ಮಾಡಿ ಮುಂದೆ ಐಗಳಿ ಗ್ರಾಮದಲ್ಲಿ ತನ್ನ ಹೆಂಡತಿಯಾದ ತುಕ್ಕವ್ವಳ ಜೊತೆ ಕುಲದ ಕರ್ಣಿಕ ವೃತ್ತಿ ಮತ್ತು ವೆಂಕಟೇಶ ದೇವರ ಅರ್ಚನೆ ಮಾಡ್ತಾ ಅಲ್ಲಿಯೇ ವಾಸಿಸತೊಡಗಿದ .     

ಲೇಖನ:- ಮಹಿಪತಿದಾಸರ‌ ಮುಂಡಿಗೆ "ಕಂಡೆ ನಾನೊಂದುಕೌತುಕ"......

Image
. ಲೇಖನ:-  ಮಹಿಪತಿದಾಸರ‌ ಮುಂಡಿಗೆ  "ಕಂಡೆ ನಾನೊಂದುಕೌತುಕ"......  ಕಾಖಂಡಕಿ ಶ್ರೀ ಮಹಿಪತಿರಾಯರು ಕಂಡೆ ನಾನೊಂದು ಕೌತುಕವ ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ ಪ್ರದಕ್ಷಿಣೆ ಮಾಡುದು ಕಂಡೆ 1 ಇರುವೆ ವಿಷ್ಣುನ ನುಂಗಿದ ಕಂಡೆ ನರಿಯು ರಾಜ್ಯನಾಳುದುಕಂಡೆ ಅರಿಯು ಮರಿಯ ನುಂಗಿದ ಕಂಡೆ ಕುರಿಯಿಂದ ಪರಲೋಕಯೆಯ್ದಿದು ಕಂಡೆ 2 ಇಲಿಯು ಯುಕ್ತಿಯದೋರುದು ಕಂಡೆ ಹುಲಿಯು ಭಕ್ತಿಯು ಮಾಡುದು ಕಂಡೆ ಇಳೆಯೊಳು ಮಹಿಪತಿ ಕಳೆವರದೊಳಿನ್ನು ಮುಕ್ತಿ ಸಾಧನದೊಂದು ಬೆಡಗವು ಕಂಡೆ 3 _________/////_________/////_________       ಕಂಡೆ ನಾನೊಂದು ಕೌತುಕವ /ಪ ಎಂಬತ್ತನಾಲ್ಕು ಲಕ್ಷ ಯೋನಿ ಜನ್ಮ ದಾಟಿ ಈ ಮಾನವ ಶರೀರ ಬಂದಿರುತ್ತದೆ. "ಮಾನವ ಜನ್ಮಂ ದುರ್ಲಬಂ" ಅಂತ ಗೊತ್ತಿದ್ದರೂ ತನ್ನ ಜೀವನಕ್ಕೆ ಬಹಳ ಕೌತುಕ ಪಡುತ್ತಾನೆ. ಅಂದರೆ ಎಲ್ಲವೂ ಭಗವದ್ ಇಚ್ಛೆಯಂತೆ ನಡೆದಿರುತ್ತದೆ ಅನ್ನುವುದು ಮರೆತು. ತಾನು ತನ್ನ ಮಕ್ಕಳು ಅಂತ ಸಂಸಾರ ಬಂಧನದಲ್ಲಿ ಕಂಸಾರಿಯನ್ನು‌ ಮರೆತು ತನ್ನ ಅಹಂಕಾರದಲ್ಲಿ ಮೆರೆಯುತ್ತಾನೆ. ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯಪ್ರದಕ್ಷಣೆ ಮಾಡುದು ಕಂಡೆ 1 "ಆಯಿ ಅಜ್ಜನ ನುಂಗಿದ ಕಂಡೆ"     ಮೊದಲನೇ ನುಡಿಯಲ್ಲಿ "ಆಯಿ" ಅನ್