ರಾಮದಾಸರ ಮುಂಡಿಗೆ ಚಿಂತನೆ"ನಮ್ಮವ್ವ ಈಕೆ ನಮ್ಮವ್ವ
"ಮುಂಡಿಗೆ"ಎಂದರೆ ಗೂಡಾರ್ಥ ಹೊಂದಿರುವ ಸಾಹಿತ್ಯ.
ರಾಮದಾಸರ ಮುಂಡಿಗೆ ಚಿಂತನೆ
ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ
ಆರುವರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು
ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗೆ ಬೀಳದಹಾಗೆ ಕುಡಿದಳು ಹತ್ತಡಿಗೊಳಿಗೆ ಪತ್ತೆಯಿಲ್ಲದೆ ತಿಂದು 8 ಮೆತ್ತಗೆ ಸುತ್ತಿಕೊಂಡು ಮಲಗಿದಳು
ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳು ಕುಡಿದೊಡೆಯ ಶ್ರೀರಾಮನ ಕೂಡಿದಳು
__________////////___________//////// _________
ಅರ್ಥಾನುಸಂಧಾನ :-
ಮೇಲಿನ ಮುಂಡಿಗೆಗೆ ಮತಿಗೆ ತಿಳಿದಿತ್ತು ಅರ್ಥೈಸಲು ಪ್ರಯತ್ನ ಮಾಡಿದ್ದೇನೆ.ತಪ್ಪಿದಲ್ಲಿ ಕ್ಷಮಿಸಿ
ಈ ಮುಂಡಿಗೆಯಲ್ಲಿ ಮನಸ್ಸು ಮತ್ತು ಮಾಯೆ ಬಗ್ಗೆ ಹೇಳಿದ್ದಾರೆ. ಮಾಯೆ ಎಂಬ ಭಾವನೆ ಉಂಟಾಗಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಷಯವನ್ನು ಪ್ರತಿ ನುಡಿಯಲ್ಲಿ ಹೇಳಿದ್ದಾರೆ.
"ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ"
ಈ ಪಲ್ಲವಿಯಲ್ಲಿ ಮಾಯೆ ಮನಸ್ಸಿನ ಜೊತೆ
ಆಡುವ ಆಟದ ಬಗ್ಗೆ ಹೇಳಿದ್ದಾರೆ. ಮನಸ್ಸು ಕಾಣದ. ಮುಟ್ಟದ ವಸ್ತುವಾಗಿದೆ. ಆದರೆ ದೇಹದ ಇಂದ್ರೀಯಗಳ ಆಟವನ್ನು ಮನಸ್ಸು ತನ್ನ ಇಚ್ಛೆಯಂತೆ
ಆಡುತ್ತದೆ.ಈ ಮನಸ್ಸಿಗೆ ಮಾಯೆ ಆವರಿಸುದಾಗ
ಮಂಗನ ಕೈಯಲ್ಲಿ ಮಾಣಿಕ್ಯ ಕೋಟ್ಟಂತೆ, ಹೀಗೆ ಮಾಯೆ ಮನಸ್ಸಿನ ಜೊತೆ ಆಡಿ ಏನು ತಿಳಿಯದ ಹಾಗೆ ಇರುತ್ತದೆ.
"ಆರುವರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು"
"ಆರುವರ" ಮಾಯೆ ಆವರಿಸಿತೆಂದರೆ ನಮ್ಮಲ್ಲಿರವ ಅರಿಷಡ್ವರ್ಗಗಳಾದ ಕಾಮ,ಕ್ರೋಧ,ಲೋಭ,ಮೋಹ, ಮದ,ಮಾತ್ಸರ್ಯಗಳೆಂಬ ನಮ್ಮ ಆಂತರಿಕ ವೈರಿಗಳು.
ಒಮ್ಮೆಲೆ ನಮ್ಮನ್ನು ಆವರಿಸಿ ಮಾಯೆ ನುಂಗುವಳು.
ಇನ್ನು "ಎಂಟು ಭಾಂಡೆ ಅನ್ನ" ಅಂದರೆ
ಅಷ್ಟಮದಗಳಾದ ಧನ,ಕುಲ,ವಿದ್ಯ,ರೂಪ,ಯೌವ್ವನ,
ಬಲ,ಪರಿವಾರ ಅಧಿಕಾರ. ಅರಿಷಡ್ವರ್ಗಗಳ ಜೊತೆ
ಅಷ್ಟಮದಗಳು ಸೇರಿದಾಗ ಅಹಂಕಾರದಿಂದ ಮೆರೆಯುತ್ತಾನೆ. ಹೀಗೆ ಎಲ್ಲದಕ್ಕೂ ಮಾಯೆ ಕಾರಣ ಎಂದು ಈ ನುಡಿಯಲ್ಲಿ ಹೇಳಿದ್ದಾರೆ.
"ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗೆ ಬೀಳದಹಾಗೆ ಕುಡಿದಳು ಹತ್ತಡಿಗೊಳಿಗೆ ಪತ್ತೆಯಿಲ್ಲದೆ ತಿಂದು ಮೆತ್ತಗೆ ಸುತ್ತಿಕೊಂಡು ಮಲಗಿದಳು"
"ಎತ್ತಿ ತುಪ್ಪದ ಮೂರು ಡಬ್ಬಿಗಳು" ಅಂದರೆ
ಸಂಚಿತ,ಆಗಾಮಿ, ಪ್ರಾರಬ್ಧ . ಈ ಮೂರು ಕರ್ಮಗಳು ಸಹ ಮಾಯೆಗೆ ಒಳಪಡುತ್ತವೆ. ತ್ರಿವಿಧ ಕರ್ಮಗಳು ಪ್ರತಿ ಜನ್ಮದಲ್ಲಿಯೂ ನಮ್ಮ ಜೊತೆ ಬರುತ್ತವೆ.
"ಹತ್ತಡಿಗೊಳಿಗೆ" ಅಂದರೆ ನಮ್ಮ ಸ್ಥೂಲ ಶರೀರ ಇಂದ್ರೀಯಗಳು ಅರಿಷಡ್ವರ್ಗಗಳ ಜೊತೆ
ಅಷ್ಟಮದಗಳು ಕೂಡಿ ತಾಮಸರಾಗಿ ಎಲ್ಲ ತ್ರಿವಿಧ ಕರ್ಮಗಳನ್ನು ಮಾಡಿಸುವ ಮಾಯೆ .
"ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳು ಕುಡಿದೊಡೆಯ ಶ್ರೀರಾಮನ ಕೂಡಿದಳು"
ಕೊನೆಯ ನುಡಿಯ ಅರ್ಥವಾಗದೆ ಮಾಯೆ ಯಾರನ್ನು ಬಿಟ್ಟಿಲ್ಲ .ದೇವಾನುದೇವತೆಗಳಿಂದ ಹಿಡಿದು ತೃಣಾದಿ
ಜೀವರನ್ನು ಬಿಟ್ಟಿಲ್ಲ . ಪುರಾಣಾದಿ ಗ್ರಂಥಗಳಲ್ಲಿ ಕೇಳಿರಬಹುದು ಮಾಯೆಯಿಂದ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಆಗಬಹುದು, ಪಿಂಡಾಂಡ ಮತ್ತು ಬ್ರಹ್ಮಾಂಡದಲ್ಲಿ ವ್ಯಾಪಿಸಿ ಅವರವರ
ಕರ್ಮಾನುಸಾರ ಶ್ರೀಹರಿಯ ಇಚ್ಛೆಯಂತೆ ಕರ್ಮ ಮಾಡಿಸುವಳು.ಮಾಯೆ ಕೊನೆಗೆ ಶ್ರೀ ಹರಿಯಲ್ಲಿ ಕೂಡುವಳು.
✍️ ಪ್ರಿಯಾ ಪ್ರಾಣೀಶ ಹರಿದಾಸ
(ಕವಿಯತ್ರಿ, ಬರಹಗಾರ್ತಿ )

Comments
Post a Comment