ಮಹಿಪತಿ ದಾಸರ ಸಾಹಿತ್ಯ ವೈಶಿಷ್ಟ, ಚರಿತ್ರೆ



ಲೇಖನ :-  ಮಹಿಪತಿ ದಾಸರ ಸಾಹಿತ್ಯ  ವೈಶಿಷ್ಟ.&ಚರಿತ್ರೆ 



ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ,ಕರ್ಮ ಯೋಗ ಭಕ್ತಿ ಯೋಗ, ರಾಜಯೋಗ ಮಂತ್ರಯೋಗ, ಜಪ, ನಾಮಸಾಧನೆಯಿಂದ ಕೂಡಿದೆ. ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ  ಗುರಿಯನ್ನು ಮುಟ್ಟಿದ್ದಾರೆ . ಇಂತಹ ಶ್ರೇಷ್ಠ  ಸಾಧಕ ಹರಿದಾಸರಾದ  ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ.

ಮಹಿಪತಿ ದಾಸರು ಇದ್ದ ಅವಧಿ  ಮಧ್ಯ ಅವಧಿ ೧೬ ನೇ ಶತಮಾನ. ಪುರಂದರ ದಾಸರ ಕಾಲ ಮುಗಿದ ಮೇಲೆ ವಿಜಯದಾಸರ ಕಾಲ (ಕ್ರಿ. ಶ.೧೫೬೪ ರಿಂದ ಕ್ರಿ. ಶ.೧೬೮೨), ಈ ಘಟ್ಟವನ್ನು ಹರಿದಾಸ ಸಾಹಿತ್ಯ ನಿಂತು ಹೋಗಿತ್ತು ಎಂದಿದ್ದಾರೆ. ಆದರೆ ಈ ಘಟ್ಟದಲ್ಲಿ ಮಹಿಪತಿದಾಸರು ಬರುತ್ತಾರೆ. ಅಂದರೆ ಪುರಂದರ ದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರ ಬರುವ ಮುಂಚೆ ( ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ .

ಮಹಿಪಾತಿದಾಸರನ್ನು, ಮಹಿಪತಿ ರಾಜ,ಮಹಿಪತಿ ಸ್ವಾಮಿ, ಮಹಿಪತಿದಾಸರು, ಮಹಿಪತಿರಾಯ ಎಂದು ಕರೆಯುವುದು ಇದೆ.
ಇವರು ಹರಿದಾಸ ಸಾಹಿತ್ಯವನ್ನು  ವಿಶಿಷ್ಟ ರೀತಿಯಿಂದ ಕೂಡಿದೆ. ಹರಿ ಸರ್ವೋತ್ತಮತೆ ಸಾರುವ ಮದ್ವ ಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ
ಆಡು ಭಾಷೆಯಲ್ಲಿ ರಚಿಸಿದ್ದಾರೆ, ಹಾಗೇ
ಇವರು ಊರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯಲ್ಲಿ ಸ್ಥಿರವಾಗಿ. ಇದ್ದು, ಯೋಗ ಜಪಗಳ ಮೂಲಕ ಭಗವಂತನ್ನನ್ನು ಕಂಡವರು.

ಶ್ರೀ ಮಹಿಪತಿ ದಾಸರ ಸಾಹಿತ್ಯ ಎಲ್ಲ ಹರಿದಾಸರ ಸಾಹಿತ್ಯಗಳಿಗಿಂತ ವಿಭಿನ್ನ ಶೈಲಿ.
ಇವರು ವರಕವಿ, ತತ್ವಜ್ಞಾನಿ, ಅನುಭಾವಿಕರು ಅಂತಲೂ ಹೇಳಬಹುದು. ಗೂಢ ಅನುಭವಗಳನ್ನು ತಮ್ಮ ಪದಗಳನ್ನು ಕೀರ್ತನೆ, ಪದಗಳನ್ನು ರಚಿಸಿದವರು.
ಪರಮಾತ್ಮನ ಸಾಕ್ಷಾತ್ಕಾರವನ್ನು ಸವಿದು ಸಾಹಿತ್ಯದ ಮೂಲಕ ಹರಿದಾಸ ಸಾಹಿತ್ಯ ಪೋಷಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ  ಸಂಸ್ಥೆ ಪ್ರಕಟಿಸಿದ "ಮಹಿಪತಿ ರಾಯರ ಕೃತಿಗಳು" ಸಂಗ್ರಹದಲ್ಲಿ ದೊರೆತ ಮಹಿಪತಿ ದಾಸರ ಒಟ್ಟು ಕೃತಿಗಳು  ೭೫೪, ಇವುಗಳಲ್ಲಿ ಹಿಂದಿ, ಮಾರಾಠಿ, ಉರ್ದು, ತೆಲಗು  ಮಿಶ್ರ ಭಾಷಾ ಕೃತಿಗಳು ಸೇರ್ಪಡೆಯಗಿವೆ. ಕನ್ನಡ ಕೃತಿಗಳು ೬೮೫, ಮರಾಠಿ ಕೃತಿಗಳು  ೪೬
ಹಿಂದಿ ಕೃತಿಗಳು ೧೮, ಮಿಶ್ರ ಕೃತಿಗಳು  ೫.
ಇನ್ನು ಕನ್ನಡ ಕೃತಿಗಳಲ್ಲಿ  ೩೨೨ ಹರಿವಾಯುಗುರುಗಳು, ಅನುಭಾವ, ಸಾಕ್ಷಾತ್ಕಾರ ೧೩೪, ಸ್ವಾನುಭಾವ ಉಪದೇಶ  ೧೫೩, ದ್ವೈತ ಮತ ೧೫, ಇತರ ೬೩.

ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ. ಹಾಗೆ ವೈವಿಧ್ಯಮಯ.ಇವರು ಬಹು ಭಾಷಾ ವಿಶಾರದಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ ,ತೆಲಗು, ದಖಣಿ,ಮರಾಠಿ, ಪರ್ಷಿಯನ್ ಭಾಷಾಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕೀರ್ತನೆಗಳು,ಸ್ತೋತ್ರ, ಆರತಿ ಪದ, ಕೋಲಾಟದ ಪದ(ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ* *ಕೋಲೆ,),ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹ0ತಿಪದ, ಸುಗ್ಗಿ ಪದ, ಸತ್ಸಂಗದ* **ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ*
*ಸಾಹಿತ್ಯವು ಸಂಪದ್ಭರಿತ ಹಾಗೆ ವಿಶಾಲ ದೃಷ್ಟಿಯಿಂದ ಕೋನದಿಂದ ಕೂಡಿದೆ.*
*ಇವರು  ಕನ್ನಡ,ಉರ್ದು, ಮರಾಠಿ, ತೆಲಗು, ಪಾರ್ಸಿ, ಸಂಸ್ಕೃತ ಬಹು ಭಾಷಾ ಪಂಡಿತರಿದ್ದರು. ಇವರ ಒಟ್ಟು ಅಂಕಿತ ೧೪ ಇವೆ. ಇವರ ಸಾಹಿತ್ಯ 700 ಕೃತಿಗಳಿಗಿಂತ ಹೆಚ್ಚು ರಚಿಸಿ ,ಅದರಲ್ಲಿ ಹರಿ ಸರ್ವೋತ್ತಮತ್ವದ ಬಗ್ಗೆ ಬಹಳ ಪದ್ಯಗಳು ಇವೆ. ಹೀಗೆ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ .

ಇನ್ನು ಅವರ ಜೀವನದ ಕಿರು ನೋಟವೆಂದರೆ
ಶ್ರೀ ಮಹಿಪತಿ ದಾಸರು  ಬಾಗಲಕೋಟೆಯ ಕಾಥೋಟೆ ಮನೆತನದ ಕೊನೇರಿರಾಯರ ಮಗ. ಇವರು ಮಾದ್ವ ಸಂಪ್ರದಾಯದವರು. ಇವರ ತಂದೆ ಮದ್ವಶಾಸ್ತ್ರ ಪಂಡಿತರಾಗಿದ್ದರು. ನಂತರ ದಿನಗಳಲ್ಲಿ ಉದರ ನಿಮಿತ್ಯವಾಗಿ ವಿಜಾಪುರಕ್ಕೆ ಬಂದು ನೆಲೆಸಿದರು.ಮುಂದೆ ಇವರು ಸಹ ತಂದೆಯಂತೆ ಮದ್ವ ಶಾಸ್ತ್ರ ಸಂಪನ್ನರಾಗಿ, ಷಟ್ ಶಾಸ್ತ್ರವಂತರಾಗಿ ನಿತ್ಯವು ಭಾಗವತ ಪುರಾಣದಿಗಳನ್ನು, ಹೇಳುತ್ತಿದ್ದರು. ಇವರ ಪುರಾಣ ಪ್ರವಚನ ಕೇಳಲು ಯಾವ ತಾರತಮ್ಯ ಇಲ್ಲದೇ  ಎಲ್ಲ ವರ್ಗದ ಜನರು ಬಂದು ಪುರಾಣ ನೀತಿ ಭೋಧೆಗಳನ್ನು  ಕೇಳುತ್ತಿದ್ದರು. ಮುಂದೆ ಖವಾಸಖಾನನ ವ್ಯವಹಾರದ ಲೆಕ್ಕ ಸಮಸ್ಯೆ ಪರಿಹಾರಿಸಿದಾಗ
ಆದಿಲ್ ಶಾಹಿ ಅವರ ಮೆಚ್ಚುಗೆ,ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ  ಆದಿಲ್ ಶಾಹಿ ಅರಮನೆಯ ಕೋಶಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿಯ ಶಾನುಂಗ ಶಾನುಂಗಿ ಎಂಬ ಸೂಫಿ ಸಹೋದರ ಸಹೋದರಿಯರ ಮಾತಿನಂತೆ, ಸಾರವಾಡ ಗ್ರಾಮಕ್ಕೆ ಹೋಗಿ ಸ್ವರೂಪೋದ್ದಾರಕ ಭಾಸ್ಕರ ಸ್ವಾಮಿಗಳ ಅನುಗ್ರಹ ಪಡೆದು, ಹನ್ನೆರಡು ವರುಷದಲ್ಲಿ ಮುಗಿಸುವಂತಹ ಯೋಗ ಹನ್ನೊಂದು ತಿಂಗಳಲ್ಲಿ ಯೋಗ ಸಾಧನೆ ಮಾಡಿದ ಮಹಾಯೋಗಿಗಳು. ಯೋಗದ ಮೂಲಕ ಭಗವಂತನನ್ನು ಕಂಡವರು. ಅಂದರೆ  ಯೋಗ ಮಾರ್ಗದಲ್ಲಿ  ವಿವರಿಸಿದ ಆತ್ಮ - ವಿಶ್ವ-ವಿಶ್ವಾತೀತ ಪರಮಾತ್ಮನನ್ನು  ಕಂಡವರು.

ಭಾಸ್ಕರ ಸ್ವಾಮಿಗಳ ಅನುಗ್ರಹದಿಂದ ಇಬ್ಬರು ಸುಪುತ್ರರಾದರು ನಂತರ  ಹೆಂಡತಿ ತಿಮ್ಮವ್ವ ತೀರಿಹೋದಳು. ಮಕ್ಕಳಿಬ್ಬರು ದೊಡ್ಡಮ್ಮ ತುಕ್ಕವ್ವ ಮತ್ತು ತಂದೆಯ ನೆರಳಲ್ಲಿ ಬೆಳೆದರು ಹಿರಿಯವನಾದ ದೇವರಾಯ ಅಜ್ಜನ ಮತ್ತು ಸಹೋದರಮಾವನ ಆರೈಕೆಯಲ್ಲಿ  ಬೆಳೆದು ದೋಣಿ ಶಿವಾಜಿ ಎಂಬ ಬಿರುದು ಪಡೆದು ಜಲವಾದಿ ದೇಸಗತ್ತಿ ಆಳಿದರು. ಇನ್ನು ಎರಡನೇ ಮಗ ಕೃಷ್ಣ ರಾಯ ತಮ್ಮ ತಂದೆ  ಮಹಿಪತಿದಾಸರನ್ನು  ಗುರುವನ್ನಾಗಿ ತಂದೆಯ ಹಾದಿಯಲ್ಲಿ ಹರಿದಾಸ ಪಥದಲ್ಲಿ ನಡೆದರು.

ಮಹಿಪತಿ ದಾಸರು ಜೀವನದಲ್ಲಿ ನಡೆದಂತಹ ಘಟನೆ. ಮರಡೆಪ್ಪನು ಮಹಿಪತಿದಾಸರ ನಿಷ್ಕಾಮ ಸೇವಕ. ಸ್ವಹಿತಕ್ಕಾಗಿ ಎಂದು ಒಂದು ದಿನವು ಕಾಲ. ಹರಣ ಮಾಡಿರಲಾರದ ಅಂತಃಕರಣದ ಸೇವಕ.ಹಗಲಿರುಳು ಭಕ್ತಿಯಿಂದ ದಿನವೂ ಇವರ ಸೇವೆ ಮಾಡುತ್ತಿದ್ದನು. ಒಂದು ದಿನ ಇವನ ಹೆಂಡತಿ ತೀರಿ ಹೋದಳು.ಗುರಗಳ ಸೇವೆಯಲ್ಲಿ ಇರುವುದಾಗಿ ಹೇಳಿ ಕಳಿಸಿದನು. ನಂತರ ಮಹಿಪತಿದಾಸರು ಇವನಿಗೆ ತಿಳಿಹೇಳಿ ಕಳಿಸಿದರು. ಇತ್ತ ಮಹಿಪತಿದಾಸರ ಅತ್ತಿಗೆಯಾದ ತುಕ್ಕವ್ವ... ಮಾರಡೆಪ್ಪ ನಿಮ್ಮ ಸೇವೆ ಮಾಡಿದಕ್ಕೆ ಇನ್ನು ಮಕ್ಕಳ ಸಣ್ಣವು ಇವೆ , ನೀವು ಕರುಣೆ ತೋರಿ ಉಳಿಸಿ , ನಾನು ಎಷ್ಟೋ ಪುಣ್ಯ ಪುರುಷರು , ಸ್ವಾಮಿಗಳು ತಮ್ಮ ಹಸ್ತದಿಂದ ಅಥವಾ ಆಶೀರ್ವಾದದ ಬಲದಿಂದ ಉಳಿಸಿದ್ದಾರೆ , ನೀವು ಅದೇಕೆ ನಿಮ್ಮ ಕರುಣೆ ಮತ್ತು ಪುಣ್ಯದ ಬಲದಿಂದ ಉಳಿಸಬಾರದು ,ನೀವು ಈ ಹಿಂದೆ ನನಗೆ ಮಾತು ಕೊಟ್ಟಿದ್ದೀರಿ ನಿಮ್ಮ ಸಾಧನೆಯ , ತಪಸ್ಸಿನ ಶಕ್ತಿ ತೋರಿಸುವದಾಗಿ ಎಂದು ತುಕ್ಕವ್ವ  ಜ್ಞಾಪಿಸಿದಳು. ಅವರು ತಮ್ಮ ಮಾತಿನ ಫಲವಾಗಿ ತಮ್ಮ ಮೈ ಮೇಲಿನ ಹೊದ್ದುಕೊಳ್ಳುವ  ಶಾಠಿಯನ್ನು ಕೊಟ್ಟರು. ಅದನ್ನು ತಗೆದುಕೊಂಡು ಹೋಗಿ ಹೆಣದ ಮೇಲೆ ಹೊದಿಸಲು ಸತ್ತ ಮರಡೆಪ್ಪನ ಹೆಂಡತಿ ಎದ್ದು ಕುಳಿತಳು. ಗುರುಗಳು ಇದ್ದಲ್ಲಿಗೆ ಬಂದು ಸಾಷ್ಟಾಂಗ ಎರಗಿದರು. ನಂತರ ಮಹಿಪತಿದಾಸರು ಅತ್ತಿಗೆಗೆ ಇನ್ನು ನಾನು ಸೃಷ್ಟಿಯ ವಿರುದ್ಧ ಈ ತರಹ ಯಾವುದೇ ಪವಾಡ ನಾನು ಮಾಡುವದಿಲ್ಲಾ ಎಂದು ಹೇಳಿದರು. ಬಂದ ಭಕ್ತರಿಗೆ ಧರ್ಮೋಪದೇಶ ಮಾಡುತ್ತಾ ಧರ್ಮ ಪಾಲನೆ ಮಾಡಿದರು ಹಾಗೆಯೇ ಬಂದ ಭಕ್ತರಿಗೆ ಸನ್ಮಾರ್ಗದ
ಹಾದಿಯಲ್ಲಿ ನಡೆಸುತ್ತಿದ್ದರು.

ಹೀಗೆ ಮಹಿಪತಿದಾಸರು ಕೃಷ್ಣ ನದಿಯ ತಟದಲ್ಲಿ ಸ್ಥಿರವಾದ ಆಸನ ಹಾಕಿ ಅನುಷ್ಠಾನಕ್ಕೆ ಕುಳಿತು ಸರಿಯಾದ ಏಳನೇ ದಿನವಾದ ಕಾರ್ತಿಕ ವದ್ಯ ಅಮಾವಾಸ್ಯೆಯ ದಿನ ಇವರ ಪ್ರಾಣಪಕ್ಷಿಯು ಶ್ರೀಹರಿಯಲ್ಲಿ ಸೇರಿತು.ಕೃಷ್ಣರಾಯರಿಗೆ ತಂದೆ ಎನಿಸಿದ ಗುರುವಾದ ಮಹಿಪತಿರಾಯರ ನೆನಪು ಬಹಳ ಬಂದು ದುಃಖಿಸುತ್ತಾ ಮಲಗಿದಾಗ ಕನಸಿನಲ್ಲಿ ಮಹಿಪತಿ ದಾಸರು ಬಂದು ನಾನು ನಿತ್ಯ ಅನುಷ್ಠಾನ ಮಾಡುತ್ತಿದ್ದ ಶಮಿ ವೃಕ್ಷ  ಭೂಮಿಯ ಕೆಳಗೆ ನಾನು ನೂರಾ ಎಂಟು ಸಾಲಿಗ್ರಾಮ ರೂಪದಲ್ಲಿರುವೆ ವೃಂದಾವನ ಕಟ್ಟಿಸು ನಾನು ಅಲ್ಲಿರುವೆ ಎಂದು ಹೇಳಿದರು.ಅಲ್ಲಿ ಅಗೆದು ನೋಡಲಾಗಿ ೧೦೮ ಸಾಲಿಗ್ರಾಮಗಳು ದೊರೆತವು.ಆದರಂತೆ ಕೃಷ್ಣರಾಯರು ವೃಂದಾವನ ಕಟ್ಟಿಸಿ , ಯೋಗ ದಂಡ ,ಪಾದುಕಾ  ಇಟ್ಟು ಪೂಜೆ ಮಾಡುತ್ತಾ ಇದ್ದರು .ಈಗಲೂ ಅದೇರೀತಿ ವಿಧಾನ ನಡೆದು ಬಂದಿದೆ.ಬಂದ ಭಕ್ತರನ್ನು ಉದ್ಧರಿಸುತ್ತಾ ಕಾಖಂಡಕಿಯಲ್ಲಿ ನೆಲಸಿದ್ದಾರೆ.

✍️ ಪ್ರಿಯಾ ಪ್ರಾಣೇಶ ಹರಿದಾಸ
(ಕವಿಯತ್ರಿ, ಬರಹಗಾರ್ತಿ )

Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ