ಲೇಖನ :- ಮರಡೆಪ್ಪನ ಮೇಲೆ ಶ್ರೀ ಮಹಿಪತಿದಾಸರ ಕಾರುಣ್ಯ





ಲೇಖನ :-  ಮರಡೆಪ್ಪನ ಮೇಲೆ ಶ್ರೀ ಮಹಿಪತಿದಾಸರ  ಕಾರುಣ್ಯ

ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ,ಕರ್ಮ ಯೋಗ ಭಕ್ತಿ ಯೋಗ, ರಾಜಯೋಗ ಮಂತ್ರಯೋಗ, ಜಪ, ನಾಮಸಾಧನೆ ಹೀಗೆ ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ  ಗುರಿಯನ್ನು ಮುಟ್ಟಿದ್ದಾರೆ . ಇಂತಹ ಶ್ರೇಷ್ಠ  ಸಾಧಕ ಹರಿದಾಸರಾದ  ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ.

ಮಹಿಪತಿ ದಾಸರು ಇದ್ದ ಅವಧಿ  ಮಧ್ಯ ಅವಧಿ ೧೬ ನೇ ಶತಮಾನ. ಪುರಂದರ ದಾಸರ ಕಾಲ ಮುಗಿದ ಮೇಲೆ ವಿಜಯದಾಸರ ಕಾಲ (ಕ್ರಿ. ಶ.೧೫೬೪ ರಿಂದ ಕ್ರಿ. ಶ.೧೬೮೨), ಈ ಘಟ್ಟವನ್ನು ಹರಿದಾಸ ಸಾಹಿತ್ಯ ನಿಂತು ಹೋಗಿತ್ತು ಎಂದಿದ್ದಾರೆ. ಆದರೆ ಈ ಘಟ್ಟದಲ್ಲಿ ಮಹಿಪತಿದಾಸರು ಬರುತ್ತಾರೆ. ಅಂದರೆ ಪುರಂದರ ದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರ ಬರುವ ಮುಂಚೆ ( ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ .

ಮಹಿಪಾತಿದಾಸರನ್ನು, ಮಹಿಪತಿ ರಾಜ,ಮಹಿಪತಿ ಸ್ವಾಮಿ, ಮಹಿಪತಿದಾಸರು, ಮಹಿಪತಿರಾಯ ಎಂದು ಕರೆಯುವುದು ಇದೆ.
ಇವರು ಹರಿದಾಸ ಸಾಹಿತ್ಯವನ್ನು  ವಿಶಿಷ್ಟ ರೀತಿಯಿಂದ ಕೂಡಿದೆ. ಹರಿ ಸರ್ವೋತ್ತಮತೆ ಸಾರುವ ಮದ್ವ ಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ
ಆಡು ಭಾಷೆಯಲ್ಲಿ ರಚಿಸಿದ್ದಾರೆ, ಹಾಗೇ
ಇವರು ಊರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯಲ್ಲಿ ಸ್ಥಿರವಾಗಿ. ಇದ್ದು, ಯೋಗ ಜಪಗಳ ಮೂಲಕ ಭಗವಂತನ್ನನ್ನು ಕಂಡವರು.

ಶ್ರೀ ಮಹಿಪತಿ ದಾಸರ ಸಾಹಿತ್ಯ ಎಲ್ಲ ಹರಿದಾಸರ ಸಾಹಿತ್ಯಗಳಿಗಿಂತ ವಿಭಿನ್ನ ಶೈಲಿ.
ಇವರು ವರಕವಿ, ತತ್ವಜ್ಞಾನಿ, ಅನುಭಾವಿಕರು ಅಂತಲೂ ಹೇಳಬಹುದು. ಗೂಢ ಅನುಭವಗಳನ್ನು ತಮ್ಮ ಪದಗಳನ್ನು ಕೀರ್ತನೆ, ಪದಗಳನ್ನು ರಚಿಸಿದವರು.
ಪರಮಾತ್ಮನ ಸಾಕ್ಷಾತ್ಕಾರವನ್ನು ಸವಿದು ಸಾಹಿತ್ಯದ ಮೂಲಕ ಹರಿದಾಸ ಸಾಹಿತ್ಯ ಪೋಷಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ  ಸಂಸ್ಥೆ ಪ್ರಕಟಿಸಿದ "ಮಹಿಪತಿ ರಾಯರ ಕೃತಿಗಳು" ಸಂಗ್ರಹದಲ್ಲಿ ದೊರೆತ ಮಹಿಪತಿ ದಾಸರ ಒಟ್ಟು ಕೃತಿಗಳು  ೭೫೪, ಇವುಗಳಲ್ಲಿ ಹಿಂದಿ, ಮಾರಾಠಿ, ಉರ್ದು, ತೆಲಗು  ಮಿಶ್ರ ಭಾಷಾ ಕೃತಿಗಳು ಸೇರ್ಪಡೆಯಗಿವೆ. ಕನ್ನಡ ಕೃತಿಗಳು ೬೮೫, ಮರಾಠಿ ಕೃತಿಗಳು  ೪೬
ಹಿಂದಿ ಕೃತಿಗಳು ೧೮, ಮಿಶ್ರ ಕೃತಿಗಳು  ೫.
ಇನ್ನು ಕನ್ನಡ ಕೃತಿಗಳಲ್ಲಿ  ೩೨೨ ಹರಿವಾಯುಗುರುಗಳು, ಅನುಭಾವ, ಸಾಕ್ಷಾತ್ಕಾರ ೧೩೪, ಸ್ವಾನುಭಾವ ಉಪದೇಶ  ೧೫೩, ದ್ವೈತ ಮತ ೧೫, ಇತರ ೬೩.

ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ. ಹಾಗೆ ವೈವಿಧ್ಯಮಯ.ಇವರು ಬಹು ಭಾಷಾ ವಿಶಾರದಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ ,ತೆಲಗು, ದಖಣಿ,ಮರಾಠಿ, ಪರ್ಷಿಯನ್ ಭಾಷಾಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕೀರ್ತನೆಗಳು,ಸ್ತೋತ್ರ, ಆರತಿ ಪದ, ಕೋಲಾಟದ ಪದ(ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ* *ಕೋಲೆ,),ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹ0ತಿಪದ, ಸುಗ್ಗಿ ಪದ, ಸತ್ಸಂಗದ* **ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ*
*ಸಾಹಿತ್ಯವು ಸಂಪದ್ಭರಿತ ಹಾಗೆ ವಿಶಾಲ ದೃಷ್ಟಿಯಿಂದ ಕೋನದಿಂದ ಕೂಡಿದೆ.*
*ಇವರು  ಕನ್ನಡ,ಉರ್ದು, ಮರಾಠಿ, ತೆಲಗು, ಪಾರ್ಸಿ, ಸಂಸ್ಕೃತ ಬಹು ಭಾಷಾ ಪಂಡಿತರಿದ್ದರು. ಇವರ ಒಟ್ಟು ಅಂಕಿತ ೧೪ ಇವೆ. ಇವರ ಸಾಹಿತ್ಯ 700 ಕೃತಿಗಳಿಗಿಂತ ಹೆಚ್ಚು ರಚಿಸಿ ,ಅದರಲ್ಲಿ ಹರಿ ಸರ್ವೋತ್ತಮತ್ವದ ಬಗ್ಗೆ ಬಹಳ ಪದ್ಯಗಳು ಇವೆ. ಹೀಗೆ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ .

ಮಹಿಪತಿ ದಾಸರು ಜೀವನದಲ್ಲಿ ನಡೆದಂತಹ ಘಟನೆ. ಮರಡೆಪ್ಪನು ಮಹಿಪತಿದಾಸರ ನಿಷ್ಕಾಮ ಸೇವಕ. ಸ್ವಹಿತಕ್ಕಾಗಿ ಎಂದು ಒಂದು ದಿನವು ಕಾಲ. ಹರಣ ಮಾಡಿರಲಾರದ ಅಂತಃಕರಣದ ಸೇವಕ.ಹಗಲಿರುಳು ಭಕ್ತಿಯಿಂದ ದಿನವೂ ಇವರ ಸೇವೆ ಮಾಡುತ್ತಿದ್ದನು. ಒಂದು ದಿನ ಇವನ ಹೆಂಡತಿ ತೀರಿ ಹೋದಳು.ಗುರಗಳ ಸೇವೆಯಲ್ಲಿ ಇರುವುದಾಗಿ ಹೇಳಿ ಕಳಿಸಿದನು. ನಂತರ ಮಹಿಪತಿದಾಸರು ಇವನಿಗೆ ತಿಳಿಹೇಳಿ ಕಳಿಸಿದರು. ಇತ್ತ ಮಹಿಪತಿದಾಸರ ಅತ್ತಿಗೆಯಾದ ತುಕ್ಕವ್ವ... ಮಾರಡೆಪ್ಪ ನಿಮ್ಮ ಸೇವೆ ಮಾಡಿದಕ್ಕೆ ಇನ್ನು ಮಕ್ಕಳ ಸಣ್ಣವು ಇವೆ , ನೀವು ಕರುಣೆ ತೋರಿ ಉಳಿಸಿ , ನಾನು ಎಷ್ಟೋ ಪುಣ್ಯ ಪುರುಷರು , ಸ್ವಾಮಿಗಳು ತಮ್ಮ ಹಸ್ತದಿಂದ ಅಥವಾ ಆಶೀರ್ವಾದದ ಬಲದಿಂದ ಉಳಿಸಿದ್ದಾರೆ , ನೀವು ಅದೇಕೆ ನಿಮ್ಮ ಕರುಣೆ ಮತ್ತು ಪುಣ್ಯದ ಬಲದಿಂದ ಉಳಿಸಬಾರದು ,ನೀವು ಈ ಹಿಂದೆ ನನಗೆ ಮಾತು ಕೊಟ್ಟಿದ್ದೀರಿ ನಿಮ್ಮ ಸಾಧನೆಯ , ತಪಸ್ಸಿನ ಶಕ್ತಿ ತೋರಿಸುವದಾಗಿ ಎಂದು ತುಕ್ಕವ್ವ  ಜ್ಞಾಪಿಸಿದಳು. ಅವರು ತಮ್ಮ ಮಾತಿನ ಫಲವಾಗಿ ತಮ್ಮ ಮೈ ಮೇಲಿನ ಹೊದ್ದುಕೊಳ್ಳುವ  ಶಾಠಿಯನ್ನು ಕೊಟ್ಟರು. ಅದನ್ನು ತಗೆದುಕೊಂಡು ಹೋಗಿ ಹೆಣದ ಮೇಲೆ ಹೊದಿಸಲು ಸತ್ತ ಮರಡೆಪ್ಪನ ಹೆಂಡತಿ ಎದ್ದು ಕುಳಿತಳು. ಗುರುಗಳು ಇದ್ದಲ್ಲಿಗೆ ಬಂದು ಸಾಷ್ಟಾಂಗ ಎರಗಿದರು. ನಂತರ ಮಹಿಪತಿದಾಸರು ಅತ್ತಿಗೆಗೆ ಇನ್ನು ನಾನು ಸೃಷ್ಟಿಯ ವಿರುದ್ಧ ಈ ತರಹ ಯಾವುದೇ ಪವಾಡ ನಾನು ಮಾಡುವದಿಲ್ಲಾ ಎಂದು ಹೇಳಿದರು. ಬಂದ ಭಕ್ತರಿಗೆ ಧರ್ಮೋಪದೇಶ ಮಾಡುತ್ತಾ ಧರ್ಮ ಪಾಲನೆ ಮಾಡಿದರು ಹಾಗೆಯೇ ಬಂದ ಭಕ್ತರಿಗೆ ಸನ್ಮಾರ್ಗದ
ಹಾದಿಯಲ್ಲಿ ನಡೆಸುತ್ತಿದ್ದರು.

ಕಾರ್ತಿಕ ವದ್ಯ ಅಮಾವಾಸ್ಯೆಯ ದಿನ ಇವರ ಪ್ರಾಣಪಕ್ಷಿಯು ಶ್ರೀಹರಿಯಲ್ಲಿ ಸೇರಿತು.
ಬಂದ ಭಕ್ತರನ್ನು ಉದ್ಧರಿಸುತ್ತಾ ಕಾಖಂಡಕಿಯಲ್ಲಿ ನೆಲಸಿದ್ದಾರೆ.

✍️ ಪ್ರಿಯಾ ಪ್ರಾಣೇಶ ಹರಿದಾಸ
(ಕವಿಯತ್ರಿ, ಬರಹಗಾರ್ತಿ )








Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ