ಲೇಖನ :- ನವರಾತ್ರಿ ಜೀವನಕೆ ಪಾಠಶಾಂತಿಯ ತೋಟ (ಭಾಗ -೨)
ಲೇಖನ :- ನವರಾತ್ರಿ ಜೀವನಕೆ ಪಾಠ
ಶಾಂತಿಯ ತೋಟ
ಭಾಗ -೨
ನವರಾತ್ರ ಮಹೋತ್ಸವವು ಅತ್ಯಂತ ಮುಖ್ಯವಾದುದು. ಹೆಸರೇ ತಿಳಿಸುವಂತೆ ಒಂಬತ್ತು ಅಹೋರಾತ್ರಿಗಳಲ್ಲಿ, ಅಬಾಲವೃದ್ದರೂ, ಎಲ್ಲಾ ಧರ್ಮದವರೂ, ಎಲ್ಲಾ ವರ್ಣದವರೂ, ಎಲ್ಲಾ ಆಶ್ರಮದವರೂ, ಅವರವರ ಪದ್ಧತಿಯಂತೆ ಆಚರಿಸಬೇಕಾದ ಈ ಪರ್ವವು 'ನವರಾತ್ರ' ಪ್ರಸಿದ್ದವಾಗಿದೆ. 'ವಿಜಯದಶಮಿಗೆ ಎಂದೇ ಪ್ರಖ್ಯಾತವಾದ ಈ ಪರ್ವದ ಮುಂದಿನ ದಿನವೇ ವಿಜಯ ದಶಮಿ ಇದನ್ನು 'ದಶಾಹ' ಅಥವಾ 'ದಸರಾ' ಅಥವಾ (ಐದು ಮಹಾಪಾತಕಗಳನ್ನೂ ಮತ್ತು ಐದು ಉಪಪಾತಕಗಳನ್ನೂ ದೂರಮಾಡುವುದರಿಂದ) 'ದಶಹರ' ಎಂದು ಕರೆಯುವ ಪ್ರತಿಪತ್ತಿನಿಂದ ಚೈತ್ರಮಾಸದ ಒಂಬತ್ತು ದಿನಗಳು ಆಚರಿಸಲ್ಪಡುವ ಈ ಪರ್ವವನ್ನು ವಸಂತ ನವರಾತ್ರವೆಂಬ ಹೆಸರಿನಿಂದಲೂ, ಶರದೃತುವಿನ ಶುಕ್ಲಪಕ್ಷದ ಪ್ರಥಮೆಯಿಂದ ನವಮಿ ಪರ್ಯಂತ ಆಚರಿಸಲ್ಪಡುವ ಪರ್ವವನ್ನು ಶರನ್ನವರಾತ್ರವೆಂದೂ ಕರೆಯುತ್ತಾರೆ. ದುರ್ಗಾದೇವಿಯನ್ನು ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾದುರ್ಗಾ ಮುಂತಾದ ನಾನಾರೂಪಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಪರ್ವವಾದ್ದರಿಂದ ಇದೊಂದು ಮಹೋತ್ಸವವಾಗಿದೆ.
ತಾಯಿಯ ಗರ್ಭದಿಂದ ಹೊರಬಂದಾಗಿನಿಂದ ಮಾತೃಪ್ರೇಮದ ಅಮೃತವನ್ನು ನಾವು ಸವಿಯುತ್ತ ಬೆಳೆಯುತ್ತೇವೆ. ನಾವು ಬೆಳೆಯುತ್ತ ಆ ಮಾತೃಪ್ರೇಮವೂ ಬೆಳೆಯುತ್ತ, ವಿಸ್ತಾರವಾಗುತ್ತದೆ. ಓಡಾಡುವ ಭೂಮಿ ಭೂತಾಯಿಯಾಗಿ, ನಮ್ಮ ನಾಡು ತಾಯ್ನಾಡಾಗಿ, ದೇಶದ ಭಾರತ ಮಾತೆಯಾಗಿ ಪೂಜಿತಳಾಗುತ್ತಾಳೆ. ಜೀವನದಲ್ಲಿ ನೆರವಾಗುವ ಅನೇಕ ಸ್ತ್ರೀಯರನ್ನು ನಾವು ತಾಯಿಯೆಂತಲೇ ಆರಾಧಿಸುತ್ತೇವೆ. ಇನ್ನು ಪರಬ್ರಹ್ಮ ಶಕ್ತಿಯು ನಮಗೆ ಜ್ಞಾನ ನೀಡಿದಾಗ ಸರಸ್ವತಿ, ಸಂಪತ್ತನ್ನು ನೀಡಿದಾಗ ಲಕ್ಷ್ಮೀ, ಶಕ್ತಿಯನ್ನು ನೀಡಿದಾಗ ಪಾರ್ವತಿ, ದುರ್ಗೆ ಹೆಸರುಗಳಿಂದ ಕರೆದು, ಅರ್ಚಿಸುತ್ತೇವೆ. ಅನಾದಿ ಕಾಲದಿಂದಲೂ ಭರತ ಭೂಮಿಯಲ್ಲಿ, ಸನಾತನ ಧರ್ಮದಲ್ಲಿ ಮಾತೃಪೂಜೆ, ದೇವಿಯ ಪೂಜೆ ವಿಶೇಷವಾಗಿ ನಡೆದುಕೊಂಡು ಬಂದಿದೆ.
ನವರಾತ್ರಿಯಲ್ಲಿ ಪ್ರತಿದಿವಸ ದುರ್ಗಾಮಾತೆಯ ಒಂದು ರೂಪವನ್ನು ಪೂಜಿಸುವುದು ನಮಗೆಲ್ಲ ತಿಳಿದಿರುವ ವಿಷಯ. ಇದರ ಉಲ್ಲೇಖವನ್ನು ಬ್ರಹ್ಮವೈವರ್ತ ಪುರಾಣದಲ್ಲಿ ಕಾಣಬಹುದು. ಅದರಲ್ಲಿ ಸ್ವಯಂ ಬ್ರಹ್ಮನೇ ಈ ಒಂಬತ್ತು ದುರ್ಗೆಯರ ಹೆಸರುಗಳನ್ನು ತಿಳಿಸಿದ್ದಾನೆ.
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ । ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ||
ಪಂಚಮಂ ಸ್ಕಂದಮಾತೇತಿ ಷಷ್ಟಂ ಕಾತ್ಯಾಯನೀತಿ ಚ ।
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಕಮ್ ।।
ನವಮಂ ಸಿದ್ದದಾ ಪ್ರೋಕ್ತಾ ನವದುರ್ಗಾಃ ಪ್ರಕೀರ್ತಿತಾಃ |
ಉಕ್ತಾನೈತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ ||
ಇನ್ನು ನವರಾತ್ರಿಯ ಎರಡನೇಯ ದಿನದ ಬ್ರಹ್ಮಚಾರಿಣಿ ದೇವಿ ಬಗ್ಗೆ ತಿಳಿಯೋಣ.
ತಪಸ್ಸು, ಜ್ಞಾನ ಮತ್ತು ಆತ್ಮಸಂಯಮ
ದೇವಿಯ ಹೆಸರು: ಬ್ರಹ್ಮಚಾರಿಣಿ
ಕೈಯಲ್ಲಿರುವುದು: ಜಪಮಾಲೆ ಮತ್ತು ಕಮಂಡಲ
ಪ್ರಮುಖ ಗುಣ: ತಪಸ್ಸು ಮತ್ತು ಸಂಯಮ.
ಪೌರಾಣಿಕ ಕಥೆ ಹಿನ್ನಲೆ ಎಂದರೆ
ಪಾರ್ವತಿದೇವಿಯು ಶಿವನನ್ನು ಪತಿಯಾಗಿ ಪಡೆಯಲು ದೃಢ ಸಂಕಲ್ಪ ಮಾಡಿದಳು.
ಶಿವನನ್ನು ಒಲಿಸಿಕೊಳ್ಳಲು ಅವಳು ಕಠಿಣ ತಪಸ್ಸನ್ನು ಆಚರಿಸಿದಳು. ಆರಂಭದಲ್ಲಿ ಹಣ್ಣುಗಳನ್ನು ತಿಂದು ಬದುಕಿದಳು. ನಂತರ ಎಲೆಗಳನ್ನು ಮಾತ್ರ ಸೇವಿಸಿದಳು. ಕೊನೆಗೆ ಆಹಾರವನ್ನೂ ತ್ಯಜಿಸಿ ತಪಸ್ಸಿನಲ್ಲಿ ನಿರತಳಾದಳು ಎಂದು ಪೌರಾಣಿಕ ಕಥೆಗಳು ವರ್ಣಿಸುತ್ತವೆ.
ಅವಳ ತಪಸ್ಸು ಎಷ್ಟು ಕಠಿಣವಾಗಿತ್ತೆಂದರೆ, ಅವಳನ್ನು ಅಪರ್ಣೆ ಎಂದೂ ಕರೆಯಲಾಯಿತು. ಅಪರ್ಣೆ ಎಂದರೆ ಎಲೆಯನ್ನೂ ಸೇವಿಸದವಳು ಎಂಬ ಅರ್ಥ.
ಅವಳ ಅಚಲ ಭಕ್ತಿ ಮತ್ತು ತಪಸ್ಸಿಗೆ ಶಿವನು ಪ್ರಸನ್ನನಾದನು. ಕೊನೆಗೆ ಪಾರ್ವತಿಯನ್ನು ವಿವಾಹವಾದನು. ಈ ತಪಸ್ವಿನಿ ರೂಪವೇ ಬ್ರಹ್ಮಚಾರಿಣಿ.
ಇದರಿಂದ ನಾವು ತಿಳಿಯಬೇಕಾಗಿದ್ದೆನೆಂದರೆ
ತಪಸ್ಸು ಎಂದರೆ ಕಾಡಿಗೆ ಹೋಗಿ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಷ್ಟೇ ಅಲ್ಲ.
ನಮ್ಮ ಮನಸ್ಸನ್ನು ನಿಯಂತ್ರಿಸುವುದು, ಕೆಟ್ಟ ಅಭ್ಯಾಸಗಳನ್ನು ಬಿಡುವುದು, ಗುರಿಗಾಗಿ ನಿರಂತರ ಪ್ರಯತ್ನಿಸುವುದೂ ತಪಸ್ಸೇ ಆಗಿರುತ್ತದೆ..
ಶ್ರದ್ಧೆ ಮತ್ತು ಪರಿಶ್ರಮವಿಲ್ಲದೆ ಮಹತ್ತರವಾದ ಸಾಧನೆ ಸಾಧ್ಯವಿಲ್ಲ. ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಗುಣ: ಆತ್ಮಸಂಯಮ, ಭಕ್ತಿ ಮತ್ತು ನಿರಂತರ ಸಾಧನೆ.
ಇನ್ನು ಶ್ರೀ ಶ್ರೀನಿವಾಸ ಕಲ್ಯಾಣದ ಬಗ್ಗೆ ತಿಳಿಯೋಣ
ಎರಡನೇ ದಿನ: ವಿಷ್ಣುವಿನ ಭೂಲೋಕ ಆಗಮನ
ಲಕ್ಷ್ಮೀದೇವಿಯ ವಿರಹದಿಂದ ಶ್ರೀಮಹಾವಿಷ್ಣುವಿಗೆ ವೈಕುಂಠದಲ್ಲಿ ನೆಮ್ಮದಿ ಇರಲಿಲ್ಲ. ಅವರು ಭೂಲೋಕಕ್ಕೆ ಬಂದು ಶೇಷಾಚಲ ಪರ್ವತದಲ್ಲಿ ಈಗ ಇರುವ ಸ್ವಾಮಿ ಪುಷ ಪುಷ್ಕರ್ಣಿಯ ದಕ್ಷಿಣ ಭಾಗದಲ್ಲಿ ಹುಣಿಸೆ ಮರದ ಅಡಿಯಲ್ಲಿ ಒಂದು ಹುತ್ತದಲ್ಲಿ ವಾಸಿಸುತ್ತಿದ್ದನು . ಅಲ್ಲಿ ಚೋಳ ರಾಜನೆಂಬ ಭೂಪತಿ ರಾಜವನಾಡುತ್ತಿದ್ದನು. ಅವನ ರಾಜ್ಯದಲ್ಲಿ ಎಲ್ಲವೂ ಸಮೃದ್ಧವಾಗಿತ್ತು.
ವೈಕುಂಠವನ್ನು ಬಿಟ್ಟು ಬಂದಿದ್ದ ಪತಿಯನ್ನು ಹುಡುಕಲು
ಲಕ್ಷ್ಮೀದೇವಿಯು ಬ್ರಹ್ಮ ದೇವರನ್ನು ಆಕಳನ್ನಾಗಿ ಮಾಡಿ ಮತ್ತು ರುದ್ರ ದೇವರನ್ನು ಕರುವನ್ನಾಗಿ ಮಾಡಿ ಗೋಲ್ಲತಿಯಾಗಿ ಚೋಳ ರಾಜನಲ್ಲಿಗೆ ಬಂದು ಆಕಳು ಮತ್ತು ಕರವನ್ನು ಮಾರಿ ಲಕ್ಷ್ಮೀದೇವಿಯು ಹೊರಟು ಹೋದಳು.
ರಾಜನು ಆಕಳುಕರವನ್ನು ಗೋಪಾಲಕನಿಗೆ ಒಪ್ಪಿಸಿ
ನೋಡಿಕೊಳ್ಳಲು ಆಜ್ಞೆ ಇಟ್ಟನು. ಗೋಪಾಲಕನು ಎಲ್ಲ ಆಕಳುಗಳನ್ನು ಮೇಯಿಸಲು ಕರೆದುಕೊಂಡು ಹೋದಾಗ
ಈ ಆಕಳು ಪ್ರತಿದಿನ ತನ್ನ ಹಾಲನ್ನು ಆ ಹುತ್ತದೊಳಗೆ ಸುರಿಸುತ್ತಿತ್ತು. ಇದನ್ನು ಗಮನಿಸಿದ ಗೋಪಾಲಕನು ಕೋಪಗೊಂಡು ಹಸುವನ್ನು ಕೆ ಕೊಡಲಿಯಿಂದ ಹೊಡೆಯಲು ಮುಂದಾದನು. ಹಸುವನ್ನು ರಕ್ಷಿಸಲು ಶ್ರೀನಿವಾಸನು ಹೊರಬಂದಾಗ, ಹೊಡೆತವು ಅವರ ತಲೆಗೆ ತಗುಲಿತು. ಇದರಿಂದ ಸ್ವಾಮಿಯ ತಲೆಯಿಂದ ರಕ್ತ ಹರಿಯಲಾರಂಭಿಸಿತು. ಇದನ್ನೆಲ್ಲ ನೋಡಿ ಗಾಬರಿಯಲ್ಲಿ ಗೋಪಾಲಕನು ಮರಣ ಹೊಂದಿದನು
ಇದ್ದ ಆಕಳು ಕಿರುಚುತ್ತಾ ರಾಜಧಾನಿಯತ್ತ ಸಾಗಿತ್ತು ಇದನ್ನು ಕಂಡು ಸೇವಕರು ರಾಜನಿಗೆ ತಿಳಿಸಿದರು.
ಗಾಬರಿಯಿಂದ ಚೋಳರಾಜನ ಆಕಳು ಕರೆದುಕೊಂಡಲ್ಲಿಗೆ ಬಂದು ನೋಡಿದಾಗ ಗಾಬರಿಯಾದನು. ಶ್ರೀನಿವಾಸನ ಹುತ್ತದಿಂದ ಬಂದು ತನ್ನ ನಿಜರೂಪವನ್ನು ತೋರಿಸಿ, ಶ್ರೀನಿವಾಸನು ಚೋಳ ರಾಜನಿಗೆ ಪಿಶಾಚಿಯಾಗು ಎಂದು ಶಾಪ ಕೊಟ್ಟನು.
ಹೀಗೆ ಭೂಲೋಕದಲ್ಲಿ ಶ್ರೀನಿವಾಸನ ದಿವ್ಯ ಸಾನ್ನಿಧ್ಯ ಪ್ರಸಿದ್ಧವಾಯಿತು.
ಇದರಿಂದ ತಿಳಿಯೋದೆನೆಂದರೆ ಪ್ರಾಣಿಗಳನ್ನು ದಯದಿಂದ ನೋಡಬೇಕು ಎಂದು ಭಗವಂತನ ತೋರಿಸಿಕೊಟ್ಟನು. ಪ್ರಾಣಿಗಳ ಮೇಲೆ ದಯೆ ತೋರಿಸುವುದು ದೇವರ ಸೇವೆಯಂತೆಯೇ ಅಲ್ಲವೇ..
ಮುಂದುವರಿಯುವುದು..........
✍️ ಶ್ರೀಮತಿ ಪ್ರಿಯಾ ಪ್ರಾಣೇಶ್ ಹರಿದಾಸ್
(ಆಧ್ಯಾತ್ಮ ಚಿಂತಕಿ, ಸಾಹಿತಿ )
Comments
Post a Comment