ಲೇಖನ :- ನವರಾತ್ರಿ ಜೀವನಕೆ ಪಾಠ ಶಾಂತಿಯ ತೋಟ (ಭಾಗ -೧)
ಲೇಖನ :- ನವರಾತ್ರಿ ಜೀವನಕೆ ಪಾಠ ಶಾಂತಿಯ ತೋಟ
ಭಾಗ -೧
ನಮ್ಮ ಧಾರ್ಮಿಕ ಪದ್ಧತಿಯಲ್ಲಿ ಪ್ರತಿ ಹಬ್ಬಕ್ಕೂ ಅದರದೇ ವಿಶೇಷತೆ ಹೊಂದಿದೆ. ಮಾಸದಲ್ಲಿ ಬರುವ
ಹಬ್ಬ ,ಸೃಷ್ಟಿಗೆ ಸಂಬಂಧಿಸಿದ ಹಾಗೇ
ಪೂರಕವಾಗಿದೆ. ಮತ್ತು ಅದರಲ್ಲಿ ಜೀವನದ ಗುಟ್ಟು ಅಡಗಿದೆ.
ಅನೇಕ ಹಬ್ಬಗಳನ್ನು ಹಿಂದೂ ಪಂಚಾಂಗವು ಅವುಗಳ ದಿನಾಂಕಗಳನ್ನು ಗೊತ್ತುಮಾಡಿರುತ್ತದೆ. ಹಬ್ಬಗಳು ವಿಶಿಷ್ಟವಾಗಿ, ಋತುಗಳ ಬದಲಾವಣೆಗಳೊಂದಿಗೆ ಹಿಂದೂ ಪುರಾಣದ ಘಟನೆಗಳು ಹಬ್ಬದ ಹಿನ್ನಲೆ ಮತ್ತು ಆಚರಣೆಯನ್ನು
ತಿಳಿಸಿಕೊಡುತ್ತದೆ.
ಯುಗಾದಿ ,ಮಹಾ ಶಿವರಾತ್ರಿ, ಹೋಳಿ, ರಾಮ ನವಮಿ,ಶ್ರಾವಣ ಮಾಸದ ವರಮಹಾಲಕ್ಷ್ಮಿ ವೃತ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದುರ್ಗಾ ಪೂಜೆ, ಮತ್ತು ದೀಪಾವಳಿ, ಇನ್ನು ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ.
ಹಬ್ಬಗಳು ಸಾಮಾನ್ಯವಾಗಿ ದೇವರ ಮಹಾತ್ಮೆ ತಿಳಿಸಿಕೊಡಿತ್ತದೆ. ಪ್ರತಿ ಹಬ್ಬವು ದಿನನಿತ್ಯದ ಜೀವನದ ನಡುವೆಯೂ ಒಬ್ಬರಿಗೆ ದೈವತ್ವದ ಬಗ್ಗೆ ಚಿಂತಿಸಲು ನೆರವಾಗುವ ಉದ್ದೇಶದಿಂದ ಅನೇಕ ಆಚರಣೆಗಳನ್ನು ವೃದ್ಧಿಪಡಿಸಿ ಎಲ್ಲರೂ ಭಾಗವಹಿಸಬಹುದು.
ಸನ್ಮಾರ್ಗ ನಡೆಯಲು ಅನೂಕುಲವಾಗುತ್ತದೆ.
ನವರಾತ್ರಿನ ಹಬ್ಬದಲ್ಲಿನ ನಮ್ಮ ಜೀವನದ ಸ್ಥೂಲ ಸಾಮ್ಯತೆ ತಿಳಿಯೋಣ. ದುರ್ಗಾಮಾತೆಯು ದುಷ್ಟರನ್ನು ಶಿಕ್ಷಿಸಿ; ಶಿಷ್ಟರನ್ನು ರಕ್ಷಿಸುವ ಅಸುರ ಶಕ್ತಿಗಳ ಮರ್ಧನ ಮತ್ತು ಒಂದೊಂದು ದಿನ ದೇವಿ ದುರ್ಗೇಯ ರೂಪಗಳ ಕಥೆ ಬರುತ್ತದೆ ದಶಮಿಯ ದಿನ ಪಾಡಂವರು ಬಚ್ವಿಟ್ಟ ಆಯುಧ ಹೊರಗೆ ತಗೆದು ಪೂಜಿಸುವುದು . ಇಷ್ಟು ಹಬ್ಬದ ಸಡಗರ ಸಂಭ್ರಮ.
ಶ್ರೀ ವೇಂಕಟೇಶ ಕಲ್ಯಾಣ ಮಹೋತ್ಸವ ನೆರೆವೆರುವ ಶುಭ ಕಾಲ. ಈ ಮಹಾತ್ಮೆಯಲ್ಲಿ ಶ್ರೀ ಶ್ರೀನಿವಾಸ ಮತ್ತು ಶ್ರೀ ಪದ್ಮಾವತಿಯರ ಕಲ್ಯಾಣದ ಕಥೆ ಬರುತ್ತದೆ. ಈ ಕಥೆ ಇಲ್ಲಿ ಯಜ್ಞ ನಡೆಯಬೇಕಾದ ಹವಿಸ್ಸು ಹಾಕಲು ಈ ಬ್ರಹ್ಮ, ವಿಷ್ಣು, ಮಹೇಶ್ವದ ಇವರಲ್ಲಿ ಯಾರು ಶ್ರೇಷ್ಠರೆಂದು ಅರೆಯಲು ಬೃಗು ಮುನಿ ಪರಿಕ್ಷೀಸಿದಾಗ ವಿಷ್ಣು ಶ್ರೇಷ್ಠ ಎಂದು ನಿರ್ಣಯ ಅಗಿ ಯಜ್ಞದ ಹವಿಸ್ಸು ಸಮರ್ಪಿಸುತ್ತಾರೆ. ಮುನಿಯು ಶ್ರೀನಿವಾಸನ ಎದೆಯ ಲಕ್ಷ್ಮಿದೇವಿ ಸ್ಥಾನವಾದ ವೃಕ್ಷ ಸ್ಥಲ ಬದಕುಭಗವಂತನು ಶ್ರೀರಾಮವತಾರದಲ್ಲಿ ಸೀತೆಯ ಪ್ರತಿರೂಪವಾದ ಅಗ್ನಿದೇವನ ತನ್ನ ಮಡದಿಯನ್ನು ಅಲ್ಲಿ ಬಿಟ್ಟಿರುತ್ತಾನೆ. ನಂತರ ಯುದ್ಧ ಮುಗಿದ ಮೇಲೆ ಸೀತೆಯ ಅಗ್ನಿ ಪರೀಕ್ಷೆಯಲ್ಲಿ ಆಗ ನಿಜವಾದ ಸೀತೆಯು ಅಗ್ನಿ ದೇವನ ಜೊತೆ ಬಂದಾಗ, ಆಗ ರಾಮನಿಗೆ ಎಲ್ಲ ವೃತ್ತಾಂತ ಗೊತ್ತಾಗುತ್ತದೆ. ಆಗ ಸೀತೆ ತನ್ನ ಪತಿಯಾದ ಶ್ರೀರಾಮರಿಗೆ ಮದುವೆ ಆಗಲು ಹೇಳುತ್ತಾಳೆ. ಈ ಯುಗದಲ್ಲಿ ನಾನು ಏಕ ಪತಿವೃತಸ್ತ, ಕಲಿಯುಗದಲ್ಲಿ ಮದುವೆಯಾಗುವೆ ಎಂದು ಅಭಯ ಕೊಡುತ್ತಾನೆ. ಅದರಂತೆ, ಸೀತೆಗೆ ಕೊಟ್ಟ ವಚನ ನಿಭಾಯಿಸಲು ಮದುವೆಯ ಆಗಲು ಧರೆಗೆ ಬರುತ್ತಾನೆ.
"ದಸರಾ" ಶಬ್ದದ ವ್ಯುತ್ಪತ್ತಿ "ದಶಹರಾ' ಎಂದೂ ಇದೆ. ದಶ ಎಂದರೆ ಹತ್ತು, "ಹರಾ" ಎಂದರೆ ಸೋತಿವೆ. ಇಲ್ಲಿ ನಾವುಗಳು ನಮ್ಮ ದಶೇಂದ್ರೀಯಗಳನ್ನು ನಿಗ್ರಹದಲ್ಲಿಟ್ಟುಕೊಳ್ಳಲು ಸೋತಿದ್ದೇವೆ.ಹುಟ್ಟು ಸಾವಿನ ನಡುವೆ ಇರುವ ಅಲ್ಪ ಕಾಲದಲ್ಲಿ ನವದ್ವೇಶಗಳನ್ನು ಮೆಟ್ಟಿ ನವವಿಧ ಭಕ್ತಿಗಳಿಂದ ನಾಮಸ್ಮರಣೆಯಿಂದ ನಮ್ಮ ಅಂತರಾತ್ಮದ ಶುದ್ಧಿ ಮಾಡಿಕೊಂಡರೆ ಜೀವನ ಸೊಬಗು ಇಮ್ಮಡಿಯಾಗುತ್ತದೆ.
ನವರಾತ್ರಿ ಎಂದರೆ ಕೇವಲ ಒಂಬತ್ತು ದಿನಗಳ ಹಬ್ಬವಲ್ಲ. ಇದು ಮನುಷ್ಯನೊಳಗಿನ ಅಜ್ಞಾನವನ್ನು ದೂರಮಾಡಿ, ಜ್ಞಾನವನ್ನು ಬೆಳೆಸಿ, ದುಷ್ಟ ಗುಣಗಳನ್ನು ಗೆದ್ದು, ದೈವಿಕ ಗುಣಗಳನ್ನು ವೃದ್ಧಿಸಿಕೊಳ್ಳುವ ಒಂದು ಪರ್ವ ಕಾಲ. ಹೀಗಾಗಿ ಇನ್ನು ಒಂಭತ್ತು ದಿನಗಳ ಕಾಲ
ಶ್ರೀ ಶ್ರೀನಿವಾಸ ಕಲ್ಯಾಣ ಮತ್ತು ನವದುರ್ಗೆಯರ ಮಹಾತ್ಮೆ ತಿಳಿಯೋಣ.
ಶ್ರೀ ಶ್ರೀನಿವಾಸ ಕಲ್ಯಾಣದಲ್ಲಿ ನವರಾತ್ರಿಯ ಮೊದಲ
ದಿನದ ಮಾಹಾತ್ಮೆ.
ಮೊದಲನೇ ದಿನ: ಭೃಗುಮುನಿಯ ಪರೀಕ್ಷೆ
ಒಮ್ಮೆ ಗಂಗಾತೀರದಲ್ಲಿ ಋಷಿಗಳು ಮಹಾಯಾಗ ಮಾಡುತ್ತಿದ್ದರು. ಯಾಗದ ಫಲವನ್ನು ಯಾರಿಗೆ ಅರ್ಪಿಸಬೇಕು ಎಂಬ ವಿಚಾರದಲ್ಲಿ ಅವರಿಗೆ ಸಂಶಯವಾಯಿತು. ಆಗ ನಾರದಮುನಿ, ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು ಎಂಬುದನ್ನು ಪರೀಕ್ಷಿಸಲು ಭೃಗುಮುನಿಯನ್ನು ಕಳುಹಿಸಿದರು.
ಭೃಗುಮುನಿ ಮೊದಲು ಬ್ರಹ್ಮದೇವರ ಬಳಿಗೆ ಹೋದರು. ಬ್ರಹ್ಮನು ಅವರನ್ನು ತಕ್ಷಣ ಗಮನಿಸಲಿಲ್ಲ. ನಂತರ ಶಿವನ ಬಳಿಗೆ ಹೋದರು. ಅಲ್ಲಿಯೂ ಭೃಗುಮುನಿಗೆ ಸಮಾಧಾನವಾಗಲಿಲ್ಲ. ಕೊನೆಗೆ ವೈಕುಂಠಕ್ಕೆ ತೆರಳಿ, ಶ್ರೀಮಹಾವಿಷ್ಣುವಿನ ಎದೆಗೆ ಕಾಲಿನಿಂದ ಹೊಡೆದರು.
ವಿಷ್ಣು ಕೋಪಗೊಳ್ಳದೆ ಭೃಗುಮುನಿಯ ಪಾದವನ್ನು ಹಿಡಿದು, “ಮುನಿಗಳೇ, ನಿಮ್ಮ ಪಾದಕ್ಕೆ ನೋವಾಗಿದೆಯೇ?” ಎಂದು ಕೇಳಿದರು. ಆಗ ಭೃಗುಮುನಿಗೆ ವಿಷ್ಣುವಿನ ಕ್ಷಮೆ, ಕರುಣೆ ಮತ್ತು ಸಹನೆ ತಿಳಿಯಿತು. ಆದರೆ ಲಕ್ಷ್ಮೀದೇವಿಗೆ ತನ್ನ ನಿವಾಸವಾದ ವಿಷ್ಣುವಿನ ವಕ್ಷಸ್ಥಳಕ್ಕೆ ಅವಮಾನವಾದದ್ದು ನೋವಾಯಿತು. ಅವರು ವೈಕುಂಠವನ್ನು ತೊರೆದು ಭೂಲೋಕಕ್ಕೆ ಬಂದರು.
ಇದರಿಂದ ತಿಳಿಯುವುದೇನೆಂದರೆ ನಿಜವಾದ ಮಹತ್ವವು ಕೋಪದಲ್ಲಲ್ಲ, ಕ್ಷಮೆಯಲ್ಲಿ ಇದೆ.
ನಾವುಗಳು ಸಹ ಕೋಪವನ್ನು ನಿಗ್ರಹದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯಬೇಕು.
ಇನ್ನು ಮೊದಲನೆಯ ದಿನ ಶೈಲಪುತ್ರಿ ದೇವಿ ಬಗ್ಗೆ ತಿಳಿಯೋಣ. ಇವಳು ಪ್ರಕೃತಿಯ ಶಕ್ತಿ ಮತ್ತು ದೃಢ ಸಂಕಲ್ಪಕ್ಕೆ ಪ್ರತಿಕಳು.
ದೇವಿಯ ಹೆಸರು: ಶೈಲಪುತ್ರಿ
ವಾಹನ: ವೃಷಭ (ಹೋರಿ)
ಆಯುಧ: ತ್ರಿಶೂಲ
ಕೈಯಲ್ಲಿರುವುದು: ಕಮಲ
ನವರಾತ್ರಿಯ ಬಣ್ಣ: ಹಳದಿ — ಸಂತೋಷದ ಸಂಕೇತ
ಹಳದಿ ಬಣ್ಣವು ಬೆಳಕು, ಉತ್ಸಾಹ ಮತ್ತು ಆಶಾವಾದವನ್ನು ನೆನಪಿಸುತ್ತದೆ.
ಪೌರಾಣಿಕ ಕಥೆ ಹಿನ್ನಲೆ ಎಂದರೆ
ಶೈಲಪುತ್ರಿ ಎಂದರೆ ಪರ್ವತರಾಜನ ಮಗಳು ಎಂದರ್ಥ. ಹಿಮವಂತನ ಪುತ್ರಿಯಾಗಿ ಜನಿಸಿದ ಈ ದೇವಿಯು ಪಾರ್ವತಿಯ ರೂಪವೆಂದು ಪುರಾಣಗಳಲ್ಲಿ ವರ್ಣಿಸಲಾಗಿದೆ.
ಹಿಂದಿನ ಜನ್ಮದಲ್ಲಿ ಈಕೆ ದಕ್ಷ ಪ್ರಜಾಪತಿಯ ಪುತ್ರಿ ಸತೀದೇವಿಯಾಗಿದ್ದಳು. ಸತೀದೇವಿಯು ಶಿವನನ್ನು ವಿವಾಹವಾಗಿದ್ದಳು.
ಒಮ್ಮೆ ದಕ್ಷ ಪ್ರಜಾಪತಿಯು ಯಜ್ಞವನ್ನು ಆಯೋಜಿಸಿದನು. ಆದರೆ ಶಿವನನ್ನು ಯಜ್ಞಕ್ಕೆ ಆಹ್ವಾನಿಸಲಿಲ್ಲ. ತಂದೆಯ ಮನೆಯಲ್ಲಿ ನಡೆಯುತ್ತಿದ್ದ ಯಜ್ಞಕ್ಕೆ ಸತೀದೇವಿಯು ಹೋದಾಗ, ಅಲ್ಲಿ ಶಿವನಿಗೆ ಅವಮಾನವಾಗುವುದನ್ನು ಕಂಡಳು.
ತನ್ನ ಪತಿಯ ಅವಮಾನವನ್ನು ಸಹಿಸಲಾಗದೆ ಯೋಗಾಗ್ನಿಯಿಂದ ತನ್ನ ದೇಹವನ್ನು ತ್ಯಜಿಸಿದಳು ಎಂಬುದು ಪೌರಾಣಿಕ ಕಥೆ.
ನಂತರ ಹಿಮವಂತನ ಮಗಳಾಗಿ ಪುನರ್ಜನ್ಮ ಪಡೆದು ಪಾರ್ವತಿಯಾಗಿ ಬೆಳೆದಳು. ಶಿವನನ್ನು ಮತ್ತೆ ಪತಿಯಾಗಿ ಪಡೆಯಲು ತಪಸ್ಸು ಮಾಡಿದಳು.
ಈ ಪಾರ್ವತಿಯ ಮೊದಲ ರೂಪವೇ ಶೈಲಪುತ್ರಿ.
ಇಲ್ಲಿ ನಾವು ತಿಳಿದುಕೊಳ್ಳುವ ಸಂದೇಶವೆಂದರೆ
ಪರ್ವತವು ಎಷ್ಟೇ ಬಿರುಗಾಳಿ ಮತ್ತು ಮಳೆ ಬಂದರೂ ದೃಢವಾಗಿ ನಿಂತಿರುತ್ತದೆ. ಹಾಗೆಯೇ ಮನುಷ್ಯನೂ ಕಷ್ಟಗಳ ಎದುರು ಧೈರ್ಯ ಕಳೆದುಕೊಳ್ಳಬಾರದು.
ಸಂಕಲ್ಪ ದೃಢವಾಗಿದ್ದರೆ, ಕಷ್ಟಗಳ ನಡುವೆಯೂ ಗುರಿಯನ್ನು ಸಾಧಿಸಬಹುದು.
ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಗುಣವೆಂದರೆ ದೃಢತೆ, ತಾಳ್ಮೆ ಮತ್ತು ಆತ್ಮವಿಶ್ವಾಸ.
ಮಾನವ ಜನ್ಮ ಬಂದಾಗ ಅದನ್ನು ವ್ಯರ್ಥಿಸದೇ
ನಾವುಗಳು ಮಾಡುವ ಪ್ರತಿಯೊಂದು ಹಬ್ಬ ನಮಗೆ ಪಾಠ ಇದ್ದಂತೆ ತಿಳಿದು ಮಾಡಿದಾಗ ಜೀವನ ಒಂದು ಶಾಂತಿಯ ತೋಟವಾಗುತ್ತದೆ.
✍️ ಪ್ರಿಯಾ ಪ್ರಾಣೇಶ ಹರಿದಾಸ
( ಆಧ್ಯಾತ್ಮ ಚಿಂತಕಿ, ಸಾಹಿತಿ)

Comments
Post a Comment