ಚರಿತ್ರೆ :-ವಾದಿರಾಜಗುರುನ್ವಂದೇ*ಹಯಗ್ರೀವದಯಾಶ್ರಯಾನ್*
🙏 ಶ್ರೀ ವಾದಿರಾಜ ಗುರುಭ್ಯೋ ನಮಃ 🙏
*ತಪೋ ವಿದ್ಯಾ ವಿರಕ್ತ್ಯಾದಿ* *ಸದ್ಘುಣೌ ಘಾಕರಾನಹಮ್/*ವಾದಿರಾಜಗುರುನ್ವಂದೇ*ಹಯಗ್ರೀವದಯಾಶ್ರಯಾನ್* /
🌸🌸🌸🌸🌸🌸🌸🌸🌸🌸🌸🌸
🙏🙏🙏🙏🙏🙏🙏🙏🙏🙏🙏🙏
ಶ್ರೀ ವಾದಿರಾಜ ಗುರುಸಾರ್ವಭೌಮರು
ಮದ್ವ ಸಮಾಜಕ್ಕೆ ನೀಡಿದ ಕೊಡುಗೆ ಬಹಳ ಮಹತ್ವ ದ್ದಾಗಿದೆ.೧೨೦ವರ್ಷ ಜೀವಿತಾವಧಿಯಲ್ಲಿ ೧೧೨ ವರ್ಷಗಳ ಕಾಲಸೋಂದಾ ಪೀಠವನ್ನಾಳಿದರು.ಇವರು ೮ ನೇ ವರ್ಷದಲ್ಲಿ ವಾಗೀಷ ತೀರ್ಥರಿಂದ ಸನ್ಯಾಸ ಸ್ವೀಕಾರ ಮಾಡಿದವರು. ಹರಿ ಚಿಂತನೆ,ಕೀರ್ತನೆ, ಪ್ರವಚಾನಾದಿ ಗಳಲ್ಲಿ ತೊಡಗಿ; ಧರ್ಮಜಾಗೃತಿ ಯಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು.
ಇವರು "ಲಾತವ್ಯ" ಅಂಶ ಸಂಭೂತರು.ಇವರು ೮ ಭಾಷೆಗಳಲ್ಲಿ ಪಾಂಡಿತ್ಯ ಸಾಧಿಸಿದ್ದರು. ವೈದಿಕ ಸಂಸ್ಕ್ರತಿಯಲ್ಲಿ ವಾದಿರಾಜರ ಪಾತ್ರ ಪ್ರಮುಖವಾಗಿದೆ.ಇವರಲ್ಲಿ ತಪಃಶಕ್ತಿ, ಮಂತ್ರಸಿದ್ಧಿ, ತತ್ವಜ್ಞಾನಗಳ ಸಂಗಮವಾಗಿತ್ತು.ಅನೇಕ ರಾಜಮಹರಾಜರು,ಸಾಮಂತರು ಇವರ ಮಾರ್ಗದರ್ಶನ ಪಡೆಯುತ್ತಿದ್ದರು. ಇವರ ಅಂಕಿತ ಹಯವದನ". ಇವರ ಪ್ರಖಾಂಡ ವಿದ್ಯುತ್ವ ನಾಡಿನ ಉದ್ದಗಲಕ್ಕೂ ವ್ಯಾಪಿಸಿತು. ಅನೇಕ ಸಂಸ್ಕ್ರತ ಮತ್ತು ಕನ್ನಡ ಧೀರ್ಘ ಕೃತಿಗಳು, ಪದ್ಯಗಳನ್ನು ರಚಿಸಿದರು. ವೈಕುಂಠವರ್ಣನೆ, ಲಕ್ಷ್ಮಿಶೋಭಾನ, ಸ್ವಪ್ನಪದ,ಗುಂಡಕ್ರಿಯ,ತತ್ವಸುವ್ವಾಲಿ,ಭ್ರಮರ ಗೀತೆ,ನಾರದಕೋರವಂಜಿ,ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇತಿಹಾಸದಲ್ಲೇ ಸಜೀವ ವೃಂದಾವನಸ್ಥರಾದ ಮೊದಲ ಯತಿಗಳು ನಂತರ ಮಂತ್ರಾಲದ ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥಾರಾಗಿದ್ದು.ಇನ್ನು ಅವರ ಚರಿತ್ರೆ ಓದಿ ಪಾವನರಾಗೋಣ 🙏🙏
🌸 *-:ಚರಿತ್ರೆ:-* 🌸
ದಕ್ಷಿಣ ಕನ್ನಡ ಜಿಲ್ಲೆಯ ಕುಂಭಾಸಿ ಹತ್ತಿರ ಇರುವ ಹೂವಿನಕೇರೆ ಎಂಬ ಚಿಕ್ಕ ಗ್ರಾಮದಲ್ಲಿ ರಾಮಾಚಾರ್ಯ ಮತ್ತು ಗೌರಮ್ಮ ಎಂಬ ದಂಪತಿಗಳು.ತಮಗೆ ಪುತ್ರಹಂಬಲದಿಂದ.. ಪುತ್ರ ಸಂತಾನವಾಗಲೆಂದು "ಲಕ್ಷಾಭರಣ" ದೇವರಿಗೆ ಮಾಡಿಸುವೆಯೆಂದು ಹರಕೆ ಹೊತ್ತಿದ್ದಳು. ಅಷ್ಟರಲ್ಲೇ ಆ ಊರಿಗೆ ವಾಗೀಶ ತೀರ್ಥರು ಬಂದಿದ್ದರು.ಒಮ್ಮೆ ಇವರು ಗುರುಗಳನ್ನು ನೋಡಿ , ಆಶಿರ್ವಾದ ಪಡೆಯಲೆಂದು ದಂಪತಿಗಳು ಹೋಗಿದ್ದರು. "ರೋಗಿ ಬಯಸಿದ್ದು ಹಾಲು ಅನ್ನ,ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ;ಗುರುಗಳು ಪುತ್ರ ಸಂತಾನವಾಗಲೆಂದು ಆಶಿರ್ವಾದಿಸಿ ಫಲ ಮಂತ್ರಾಕ್ಷತೆ ನೀಡಿದರು. ಹಾಗೇ ಆ ಪುತ್ರನನ್ನು ನಮ್ಮ ಮಠಕ್ಕೆ ಒಪ್ಪಿಸಬೇಕು ಎಂದರು.ಇದನ್ನು ಕೇಳಿದ ಗೌರಮ್ಮಗೆ ಒಂದಡೆ ಪುತ್ರ ಸಂತಾನದ ಖುಷಿಯಾದರೆ ; ಇನ್ನೊಂದಡೆ ಮಠಕ್ಕೆ ಕೊಡಬೇಕೆನ್ನುವ ಮಾತು ಮನಸ್ಸಿಗೆ ಬೆಸರ ಪಡಿಸಿತು. ಮನೆಯಲ್ಲಿ ಸತಿಪತಿ ಗಳಿಬ್ಬರು ಚಿಂತಿತರಾದರು. ಅಪರೋಕ್ಷ ಜ್ಞಾನಿಗಳಾದ ವಾಗೀಶತೀರ್ಥರು ದಂಪತಿಗಳಿಗೆ ತೀರ್ಥ ಪ್ರಸಾದ ತಗೆದುಕೊಳ್ಳಲು , ಶಿಷ್ಯನ ಕಡೆಯಿಂದ ಹೇಳಿ ಕಳಿಸಿದರು. ತೀರ್ಥ ಪ್ರಸಾದ ಸ್ವೀಕರಿಸಿದ ಮೇಲೆ, ದಂಪತಿಗಳಿಗೆ ಆಶಿರ್ವಾದ ನೀಡುತ್ತಾ... ಮನೆಯ ಒಳಗೆ ಮಗು ಹುಟ್ಟಿದರೆ ನಿಮಗೆ , ಮನೆ ಹೋರಗಡೆ ಹುಟ್ಟಿದರೆ ನಮ್ಮ ಮಠಕ್ಕೆ ಕೊಡಬೇಕೆಂದು ಹೇಳಿ ಫಲಮಂತ್ರಾಕ್ಷತೆ ನೀಡಿದರು.ಇದಕ್ಕೆ ದಂಪತಿಗಳು ಸಮ್ಮತಿಸಿದರು.
ಹೀಗೆ ಸುಮೂಹರ್ತದಲ್ಲಿ ಗೌರಮ್ಮಗರ್ಭಿಣಿಯಾದಳು.ಗುರುಗಳ ಮಾತಿನಂತೆ ದಿನಗಳು ತುಂಬಿದಂತೆ ರಾಮಾ ಚಾರ್ಯರು ಹೆಂಡತಿಯನ್ನು ಹೊರಗೆ ಹೋಗದಿರಲು ಕಟ್ಟಪ್ಪಣೆ ಮಾಡಿದರು. ಮುಂದೆ ನವಮಾಸಗಳು ಹತ್ತಿರವಾದಾಗ ,ಒಂದು ದಿನ ದ್ವಾದಶಿಯಂದು ಪಾರಣೆಗೆ ರಾಮಾಚಾರ್ಯರರು ಕುಳಿತರು. ಗೌರಮ್ಮ ಗರ್ಭಿಣಿಯಾಗಿದ್ದರಿ ಅವಳು ಏಕಾದಶಿ ಮಾಡಿದ್ದಿಲ್ಲ.ಆದರೆ ತುಳಸಿ ಪೂಜೆ ಮುಗಿಸಿ ಬರುವಾಗ ಮನೆಯ ಮುಂದಿನ ಗದ್ದೆಯಲ್ಲಿ ವರಹಾದೇವನು(ಹಂದಿ ರೂಪದಲ್ಲಿ ಬಂದು) ಬೆಳೆಗಳನ್ನು ತಿಂದು ಚೆಲ್ಲಾಪಿಲ್ಲಿ ಗೊಳಿಸು ತ್ತಿದ್ದವು.ಇದನ್ನು ಕಂಡು , ಗಂಡನ ಪಾರಣೆಗೆ ಭಂಗವಾಗಬಾರದೆಂದು... ಗಂಡ ಮಾಡಿದ ಕಟ್ಟಪ್ಪಣೆ ಮರೆತು , ಅವುಗಳನ್ನು ಓಡಿಸಲು ಹೋದಳು. ಅಷ್ಟರಲ್ಲೆ "ಭಗವಂತನ ಸಂಕಲ್ಪದಂತೆ" ಅವಳಿಗೆ ಗದ್ದೆಯಲ್ಲಿಯೇ ಪ್ರಸವ ವೇದನೆಯಾಗಿ ಗಂಡು ಮಗುವಾಯಿತು.ಅಷ್ಟರಲ್ಲೇ ಪಾರಣೆ ಮುಗಿಸಿ..... ಗಾಬರಿಯಿಂದಹೆಂಡತಿಯನ್ನು ಹುಡುಕುತ್ತ ಬಂದ ರಾಮಾಚಾರ್ಯರರು ತಾಯಿ ಮತ್ತು ಮಗುವನ್ನು ನೋಡಿ ಸಂತೋಷಪಟ್ಟರು.
ಗುರುಗಳಿಗೆ ಅವರ ಮಾತಿನಂತೆ ಆ ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸಲು ದಂಪತಿಗಳಿಬ್ಬರು ಹೋದರು.ಅದರೆ ಆ ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸಿದರು.ಆಗ ಗುರುಗಳು ತಮ್ಮ ಉಪಾಸ್ಯ ದೇವರಾದ ಭೂವರಹಾ ಮೂರ್ತಿಯ ಆಶಿರ್ವಾದ ಬಲದಿಂದ ಹುಟ್ಟಿದ್ದಕ್ಕೆ.... ಮಗುವಿಗೆ"ಭೂ ವರಹ" ನೆಂದು ನಾಮಕರಣ ಮಾಡಿದರು. ತಾಯಿ ಮನೋವೇದನೆ ಅರಿತ ಗುರುಗಳು..ಮುಂದೆ ಇನ್ನೋಂದು ಪುತ್ರ ಸಂತಾನವಾಗುವದೆಂದು ಆಶಿರ್ವದಿಸುತ್ತ ....ಫಲಮಂತ್ರಾಕ್ಷತೆ ಕೊಟ್ಟರು.ಮುಂದೆ ಸ್ವಲ್ಪ ದಿನಗಳಲ್ಲಿಯೇ ದಂಪತಿಗಳಿಗೆ ಇನ್ನೊಂದು ಪುತ್ರ ಸಂತಾನವಾಯಿತು. ಇತ್ತ ಶ್ರೀ ಮಠದಲ್ಲಿ ಭೂವರಾಹಮೂರ್ತಿಯ ಅಭಿಷೇಕದ ಹಾಲವೇ ಶಿಶುವಿಗೆ ಆಹಾರವಾಯಿತು.
ಮುಂದೆ ಸ್ವತಃ ವಾಗೀಶ ತೀರ್ಥರೆ ನ್ಯಾಯ ವೇದಾಂತ ಶಾಸ್ತ್ರಗಳನ್ನು ಕಲಿಸಿ ಎಂಟನೇ ವರ್ಷಕ್ಕೆ ಸನ್ಯಾಸ ದೀಕ್ಷೆ ನೀಡಿ ,ವಾದಿರಾಜ ಎಂಬ ನಾಮಕರಣ ಮಾಡಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ವ್ಯಾಸರಾಜರ ಹತ್ತಿರ ಬಿಟ್ಟರು .
ಈ ಸ್ವಾದಿ ಮಠಕ್ಕೆ ಮದ್ವಾಚಾರ್ಯರ ಸಹೋದರರಾದ ಶ್ರೀ ವಿಷ್ಣು ತೀರ್ಥರುಮೊದಲ ಪೀಠ ಗುರುಗಳು ನಂತರ ಇವರ ತರವಾಯ ೨೦ ನೇ ಯತಿಯಾಗಿ ಪೀಠವೇರಿದವರು ಶ್ರೀ ವಾದಿರಾಜ ಗುರುಸಾರ್ವಭೌಮರು.
ವಾದಿರಾಜರು ವಿಷ್ಣುವನ್ನು ಹಯಗ್ರೀವ ರೂಪದಲ್ಲಿ ಪೂಜಿಸುತ್ತಿದ್ದರು. ಪ್ರತಿದಿನ ಹಯಗ್ರೀವ ದೇವರಿಗೆ ತಲೆಯಮೇಲೆ ನೇವೇದ್ಯ ಅರ್ಪಿಸುತ್ತಿದ್ದರು. ಹಯಗ್ರೀವ ದೇವರು ಕುದರೆ ರೂಪದಲ್ಲಿ ಅವರ ಭಜದ ಮೇಲೆ ಕಾಲುಗಳನ್ನು ಇಟ್ಟು ಕೊಂಡು ಪ್ರಸಾದ ಸ್ವೀಕರಿಸುತ್ತಿದ್ದರು.
ಹಯಗ್ರೀವ ದೇವರಿಗೆ ಹರಿವಾಣದಲ್ಲಿ ಹರಿವಾಣದಲ್ಲಿ ಕಡ್ಲೆಬೇಳೆ ಪಾಯಸ (ಹಯಗ್ರೀವ, ಮಡ್ಡಿ) ಹಯಗ್ರೀವ್ ದೇವರಿಗೆ ಸಮರ್ಪಿಸಿ ,ಅದನ್ನೆ ಪ್ರಸಾದರೂಪವಾಗಿ ಸೇವಿಸುತ್ತಿದ್ದರು. ಇದನ್ನು ನೋಡಿ ಸಹಿಸದ ಕುಹಕ ವ್ಯಕ್ತಿಗಳು , ಒಮ್ಮೆ ಹಯಗ್ರೀವದಲ್ಲಿ ವಿಷವನ್ನು ಬೆರಿಸಿ ಇಟ್ಟಿದ್ದರು. ಎಂದಿನಂತೆ ವಾದಿರಾಜರು ಹಯಗ್ರೀವ ದೇವರಿಗೆ ಸಮರ್ಪಿಸಿದಾಗ ಅಂದು ಕಾಳು ಬೀಡದೆ ಎಲ್ಲವು ತಿಂದಿತು .ಕೂತಹಲದಿಂದ ನೋಡಿದಾಗ ಆ ಕುದುರೆಯ ಕೊರಳು ವಿಷದ ಕಪ್ಪು ವರ್ಣ ಕಂಡಿತು.ಕೂಡಲೇ"ವಾಗಣೆ"ಯವರು ಬೆಳೆದ ಗುಳ್ಳದಕಾಯಿಯನ್ನು(ಬಿಳಿಬದನೆಕಾಯಿ) ತರಿಸಿ ಕುದುರೆಗೆ ನೀಡಲು ವಿಷ ಪರಿಹಾರವಾಯಿತು.ತಮ್ಮ ಇಷ್ಟ ದೇವತೆಯ ಕಷ್ಟ ಪರಿಹಾರವಾಯಿತೆಂದು
ಸಂತೋಷಪಟ್ಟರು.ಮಾಗಣೆ ವಂಶಸ್ಥರನ್ನೇ ತಮ್ಮ ಮಠದ ಶಿಷ್ಯರನ್ನಾಗಿ ಮಾಡಿಕೊಂಡರು.
🌸 *ಸಾಧನೆ* 🌸
೧)ವಾದಿರಾಜರು ರಚಿಸಿದ ಸ್ವತಂತ್ರ ಗ್ರಂಥಗಳೆಂದರೆ ಗುರುವರ್ಥ ದೀಪಿಕಾ,ಸರಸ ಭಾರತಿ ವಿಲಾಸ,ಯುಕ್ತಿ ಮಲ್ಲಿಕಾ..ಇನ್ನು ಅನೇಕ ಇವೆ.
೨)ಅಸ್ವತಂತ್ರ ಗ್ರಂಥಗಳು ಶ್ರೀಮನ್ನ ನ್ಯಾಯಸುಧಾ ಟಿಪ್ಪಣೆ,ತತ್ವಪ್ರಕಾಶಿಕ ಟಿಪ್ಪಣೆ,ಮಹಾಭಾರತ ತಾತ್ಪರ್ಯ ನಿರ್ಣಯ ಟೀಕಾ,ಭಗದ್ಗೀತಾ ಟಿಪ್ಪಣೆ,ತಂತ್ರಸಾರ ಸಂಗ್ರಹ ಟೀಕಾ
೩)ನಿರ್ಣಯಾತ್ಮಕ ಕೃತಿಗಳು ಯಾವುದೆಂದರೆ ಏಕಾದಶಿ ನಿರ್ಣಯ,ಸಂಕಲ್ಪ ಪದ್ಧತಿ,ಉಪನ್ಯಾಸ ರತ್ನ ಮಾಲಾ.
೪)ವಾದಿರಾಜರ ಗ್ರಂಥಾತ್ಮಕ ಕನ್ನಡ ಕೃತಿಗಳು ತಾತ್ಪರ್ಯ ನಿರ್ಣಯ,ವೈಕುಂಠ ವರ್ಣನೆ,ಗುಂಡಕ್ರಿಯಾ,ಭ್ರಮರಗೀತೆ,ಸ್ವಪ್ನಪದ,ಲಕ್ಷ್ಮಿ ಶೋಭಾನ. ಹಾಗೇ ೧೦೦ ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ.
೫)ಭರತ ಖಂಡವನ್ನು ಮೂರು ಬಾರಿ ಪರ್ಯಟನೆ ಮಾಡಿ,ಸಂದರ್ಶಿಸಿದ ಕ್ಷೇತ್ರಗಳ ಪರಿಚಯ ಮತ್ತು ಮಹಿಮೆಯವುಳ್ಳ "ತೀರ್ಥ ಪ್ರಭಂಧ" ಎಂಭ ಪ್ರಭಂಧ ಬರೆದರು.ಇದರಲ್ಲಿ ೪ ದಿಕ್ಕುಗಳಲ್ಲಿ ಸಂದರ್ಸಿಸಿದ ೪ ಪ್ರಭಂಧಗಳು ಹೊಂದಿವೆ. ಇದರಲ್ಲಿ ೨೩೭ ಶ್ಲೋಕಗಳಿವೆ.
೬)ಪುಣೆಯಲ್ಲಿ "ಮಾಘ" ಕವಿ ರಚಿಸಿದ
"ಶಿಶುಪಾಲವಧೆ" ವಧೆಯಲ್ಲಿ ಭಗವಂತನ ಸರ್ವೋತ್ತ ಮತ್ವದ ಬಗ್ಗೆ ಅಪಚಾರ ವೆಸಗಿ ಬರೆದಿದ್ದನು.ಇದನ್ನು ಖಂಡಿಸಿ ಕೇವಲ ೧೯ ದಿನಗಳಲ್ಲಿಯೇ"ರುಕ್ಮಿಣೀಶ ವಿಜಯ" ಕೃತಿಯನ್ನು ರಚಿಸಿದರು.ಇದರಲ್ಲಿ ೧೯ ಸರ್ಗಗಳು ಇವೆ.ಇದು ಉತ್ಪ್ರೇಕ್ಷ ಅಲಂಕಾರ ಹೊಂದಿದೆ.ಈ ಕೃತಿಯನ್ನು ಅಂಬಾರಿಯ ಮೇಲೆ ಇಟ್ಟು ಪೂಜಿಸಲಾಯಿತು.ಹೀಗೆ ಹರಿ ಸರ್ವೋತ್ತಮತ್ವವನ್ನು ಸಾರಿದರು.
೭) ಅನೇಕ ರಾಜರುಗಳು ಬಿರುದುಗಳನ್ನು ಕೊಟ್ಟಿದ್ದಾರೆ. ಪ್ರಸಂಗ ತೀರ್ಥಾಭರಣ,ಷಡ್ದರ್ಶನ ಷಣ್ಮುಖ, ಸರ್ವಜ್ಞ ಕಲ್ಪ, ಕವಿಕುಲತಿಲಕ, ಮುಂತಾದವುಗಳು.
೮)ಒಮ್ಮೆ ಪ್ರಯಾಗದಲ್ಲಿ ಧ್ಯಾನಾಸಕ್ತರಾಗಿ ಕುಳಿತಾಗ ವೇದವ್ಯಾಸರುದರ್ಶನವಿತ್ತು,ವಾದಿರಾಜರಿಗೆ ಅವರ ತಾಯಿಯ ಲಕ್ಷಾಲಂಕಾರದ ಹರಕೆಯ ಬಗ್ಗೆ ಹೇಳಿ ಅದರಂತೆ ನೀನು ಮಹಾಭಾರತದ ಲಕ್ಷ ಶ್ಲೋಕಗಳನ್ನು ಕಠಿಣ ತಾತ್ಪರ್ಯ ವಿವರಿಸಿ ಬರೆದು ತಾಯಿ ಹರಕೆ ಸಮರ್ಪಿಸು ಎಂದು ಹೇಳಿದರು. ಆಗ ವ್ಯಾಸ ಭಾರತದ ಹಿನ್ನಲೆಯನ್ನು ತಮ್ಮದೇ ಶೈಲಿಯಲ್ಲಿ ರಚಿಸಿ ಸಮರ್ಪಸಿದರು.
ವ್ಯಾಸರಾಜರು,ಪುರಂದರ ದಾಸರು,ಕನಕದಾಸರು ಇವರ ಸಮಕಾಲಿನರು.
🌸 *ಮಹಿಮೆಗಳು* 🌸
೧)ಸೋದೆ ಅರಸಪ್ಪ ನಾಯಕನ ಮದುವೆ ಮನೆಯಲ್ಲಿ ವರನಿಗೆ ಹಾವು ಕಚ್ಚಿ ಸತ್ತಾಗ , ಆ ಸಂಧರ್ಭದಲ್ಲಿ ಲಕ್ಷ್ಮಿ ಶೋಭಾನವನ್ನು ರಚಿಸಿದರು.ಇದರಿಂದ ವರನು ನಿದ್ರೆಯಿಂದ ಏಳುವಂತೆ ಎದ್ದು ಕುಳಿತನು.ಹೀಗಾಗಿ ಮಂಗಳದಾಯಕವಾದ ಲಕ್ಷ್ಮಿ ಶೋಭಾನವನ್ನು ಪ್ರತಿ ಮನೆ ಮದುವೆಯಲ್ಲೂ ಹಾಗೂ ಸುಮಂಗಲಿಯರು ನಿತ್ಯ ಪಠಣ ಮಾಡುತ್ತಾರೆ.
೨)ತಿರುಪತಿಗೆ ಯಾತ್ರೆ ಕೈಗೊಂಡಾಗ , ತಿರುಪತಿ ಬೆಟ್ಟವನ್ನುಕಂಡೊಡನೆಯೇ..ಇಡೀ ಬೆಟ್ಟ ಸಾಲಿಗ್ರಾಮ ರೂಪದಲ್ಲಿ ಕಂಡಿತು. ಹೀಗಾಗಿ ಮೊಣಕಾಲಿನಿಂದ ಹತ್ತಿದರು. ಹಾಗೇ ಸಾಲಿಗ್ರಾಮ ಹಾರವನ್ನು ಸಮರ್ಪಿಸಿದರು.
೩) "ಕುಡುಮ"ಎಂಬ ಊರನ್ನು "ಧರ್ಮಸ್ಥಳ" ಎಂಬ ಹೆಸರಿನಿಂದ ಕರೆದರು.ಇಲ್ಲಿ ಈಶ್ವರನ ಲಿಂಗದ ಜೊತೆ ನರಸಿಂಹ ಸಾಲಿಗ್ರಾಮವನ್ನು ಇಟ್ಟು ಅರ್ಚಿಸಿದರು. ಇವರ ಸಾಧನೆಯ ವೈಖರಯಿಂದ ವೈಷ್ಣವರುಶಿವದ್ವೇಷಿಗಳೆಂಬ ಭ್ರಮೆಯನ್ನು ಸಂಪೂರ್ಣ ನಿವಾರಿಸಿತು.
೪) ಸೋದೆಯ ಅಕ್ಕಸಾಲಿಗ ಗಣಪತಿ ವಿಗ್ರಹ ಮಾಡಲು ಪ್ರಯತ್ನಿಸಿದರು, ಹಯಗ್ರೀವ ಮೂರ್ತಿ ವಾಗುತ್ತಿತ್ತು.ಇದನ್ನು ಗುರುಗಳಿಗೆ ಕೃತಾರ್ಥನಾದನು.
೫)ಬ್ರಹ್ಮ ರಾಕ್ಷಸನಾದ ನಾರಾಯಣಾಚಾರ್ಯರನ್ನು ಶಿಷ್ಯನ್ನಾಗಿ ಮಾಡಿಕೊಂಡು ಉದ್ಧರಿಸಿ ಭೂತರಾಜ ರನ್ನಾಗಿ ಮಾಡಿ ಅನುಗ್ರಹಿಸಿದರು.
ಮುಂದೆಉಡುಪಿಯಲ್ಲಿ ಎರಡು ತಿಂಗಳ ಪೂಜೆಯ ಪದ್ಧತಿಯನ್ನು ಎರಡು ವರ್ಷಗಳ ಪರ್ಯಾಯ ಪೂಜಾ ಪದ್ಧತಿಯನ್ನು ರೂಢಿಯಲ್ಲಿ ತಂದರು. ಹೀಗೆ ೧೨೦ ವರ್ಷಗಳ ಜೀವನ ಸಾಗಿ ಹರಿವಾಯು ಗುರುಗಳ ಸೇವೆ ಸಲ್ಲಿಸಿ ಕೊನೆಗೆ ಸೋದೆಯಲ್ಲಿ ಫಾಲ್ಗುಣ ಕೃಷ್ಣ ತೃತೀಯಾದಂದು ವೃಂದಾವನಸ್ಥರಾದರು. ಪಂಚವೃಂದಾವನಗಳಲ್ಲಿನ ದೇವರ ಸನ್ನಿಧಾನ. ಪಂಚವೃಂದಾವನದ ಸುತ್ತಲೂ ಬ್ರಹ್ಮದೇವರು, ಮುಖ್ಯಪ್ರಾಣದೇವರು, ಮಹಾವಿಷ್ಣು,ರುದ್ರದೇವರು, ಮಧ್ಯದಲ್ಲಿ ವಾದಿರಾಜರು ಇದ್ದಾರೆ.ಮಧ್ಯವೃಂದಾವನದ ಮುಂಭಾಗದಲ್ಲಿ ಶ್ರೀ ಹಯಗ್ರೀವದೇವರು, ಸುತ್ತಲೂ ರಾಮ, ಕೃಷ್ಣ, ವೇದವ್ಯಾಸರು ಇದ್ದರೆ, ಬೃಂದಾವನದ ಮಧ್ಯದಲ್ಲಿ ವಾದಿರಾಜರು, ಪ್ರದಕ್ಷಿಣೆ ಆಕಾರದಲ್ಲಿ ಹನುಮ, ಭೀಮ, ಮಧ್ವರು ಇದ್ದಾರೆ. ಉಪವೃಂದಾವನದಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ-ಶ್ರೀರಾಮರು, ಕೃಷ್ಣ, ಬುದ್ಧ, ಕಲ್ಕಿ ಮೂರ್ತಿಗಳಿವೆ. ಈ ಎಲ್ಲ ದೇವತೆಗಳನ್ನೂ ಧ್ಯಾನಿಸುತ್ತಾ ವಾದಿರಾಜರು ಹಯಗ್ರೀವ ಭೂವರಾಹ ಸನ್ನಿಹ ಮಧ್ಯ ವೃಂದಾವನದಲ್ಲಿ ಸನ್ನಿಹಿತರಾಗಿರುತ್ತಾರೆ
ವಾದಿರಾಜರ ಅವತಾರ ಕಾಲವು ಶಾಲಿವಾಹನ ಶಕೆ ೧೪೦೨, ಶಾರ್ವರಿ ಸಂವತ್ಸರವೆಂದು ತಿಳಿದು ಬರುತ್ತದೆ.ಇವರು ಹುಟ್ಟಿದ ಸ್ಥಳಕ್ಕೆ "ಗೌರಿಗದ್ದೆ" ಎಂದು ಕರೆಯುತ್ತಾರೆ.ಈಗ ಶೀಲಾಮಂಟಪವಾಗಿದೆ.ಮತ್ತುಆಚಾರ್ಯರ ಮನೆ ಸ್ವಾದಿ ಮಠಕ್ಕೆ ಸೇರಿದೆ. ಆರಾಧನೆ ಕಾಲದಲ್ಲಿ ಗೌರಿಗದ್ದೆಯಲ್ಲಿ ಬೆಳೆದ ಅಕ್ಕಿಯೇ ಬಳಸಲಾಗುತ್ತದೆ.
🖋 *ಪ್ರಿಯಾ ಪ್ರಾಣೇಶ* *ಹರಿದಾಸ*
Comments
Post a Comment