ಲೇಖನ :- ಶ್ರೀ ಮಹಿಪತಿ ದಾಸರ ಭಕ್ತಿ ಪಾರಮ್ಯ
ಲೇಖನ :- ಶ್ರೀ ಮಹಿಪತಿ ದಾಸರ ಭಕ್ತಿ ಪಾರಮ್ಯ
ಆದಿಲ್ ಶಾಹಿ ಸಾಮ್ರಾಜ್ಯದಲ್ಲಿ ಮಹಿಪತಿ ದಾಸರ ಭಕ್ತಿ ಪಾರಮ್ಯ ಬಗ್ಗೆ ತಿಳಿದುಕೊಳ್ಳುವ
ಮೊದಲು ಅಂದಿನ ವಿಜಾಪುರಕ್ಕೆ ಆದಿಲ್
ಶಾಹಿ ಸಂಪರ್ಕ ಮತ್ತು ಸಮಕಾಲಿನ ಸ್ಥಿತಿ
ಬಗ್ಗೆ ತಿಳಿದುಕೊಳ್ಳೋಣ. ಅಂದರೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಭಾಷೆ, ಮತ್ತು ದಾಸಸಾಹಿತ್ಯ ಹಾಗೂ ಭಕ್ತಿ ಮಾರ್ಗದ
ಪ್ರವರ್ತಕರ ಬಗ್ಗೆ ತಿಳಿಯೋಣ.
ಕ್ರಿ. ಶ. ೧೩೪೬ ರಲ್ಲಿ ದೇವಗಿರಿಯು
ಸ್ವತಂತ್ರವಾಗಿ ತನ್ನ ಹೊಸ ರಾಜ್ಯವನ್ನು
ಕಲ್ಬುರ್ಗಿಯಲ್ಲಿ ಬಹುಮನಿ ರಾಜ್ಯವೆಂದು
ಕರೆಸಿಕೊಂಡಿತ್ತು. ಈ ಬಹುಮನಿ ರಾಜ್ಯದಲ್ಲಿ
ವಿಜಾಪುರ ಒಂದು ವಿಭಾಗದ ರಾಜಧಾನಿಯಾಗಿತ್ತು. ಅಂದಿನ ರಾಜಕೀಯ ಆಸ್ಥಿರತೆಯಿಂದ ವಿಜಾಪುರದಲ್ಲಿ ರಾಜ್ಯಪಾಲನಾಗಿದ್ದ ತುರ್ಕ ವಂಶದ
ಯೂಸಫಖಾನನು ಕೂಡ ಕ್ರಿ.ಶ. ೧೪೮೯ ರಲ್ಲಿ ತನ್ನ ಸ್ವಾತಂತ್ರವನ್ನು ಸಾರಿದನು. ಅಂದಿನಿಂದ ಹೊಸ ಆದಿಲ್ ಶಾಹಿ ಯುಗ ಪ್ರಾರಂಭವಾಯಿತು.
ಕ್ರಿ. ಶ ೧೫೬೫ ರಕ್ಕಸ ತಂಗಡಗಿ ಯುದ್ಧದಲ್ಲಿ
ವಿಜಾಪುರದ ನಾಲ್ಕನೇ ಸುಲ್ತಾನನ ಮೊದಲನೇ ಅಲಿ ಆದಿಲ ಶಾಹನ ಕಾಲದಲ್ಲಿ
ಎಲ್ಲ ಶಾಹಿ ಮುಸಲ್ಮಾನರು ವಿಜಯನಗರವನ್ನು ಸೋಲಿಸಿದರು ಆಗ ಅಗಣಿತ ಅಪಾರ ಸಂಪತ್ತು ದೊರೆತ ಮೇಲೆ ವಿಜಯಪುರ ಆದಿಲ ಶಾಹಿಗಳ ಆಡಳಿತದಲ್ಲಿ ಪ್ರಗತಿ ಹೊಂದಿತು. ಅವರಲ್ಲಿ ಮೊದಲನೇ ಅಲಿ ಆದಿಲಶಹಾನ ಮಗ ಎರಡನೇ ಇಬ್ರಾಹಿಂ ಆದಿಲಶಹಾ (೧೫೮೦-೧೬೨೯), ಅವನ ಮಗ ಮಹಮ್ಮದ ಆದಿಲ ಶಾಹ(೧೬೨೬-೧೬೫೯).
ಇವರಿಬ್ಬರ ಕಾಲದಲ್ಲಿ ಆದಿಲ್ ಶಾಹಿ ವೈಭವದಿಂದ ಇತ್ತು. ಮುಂದೆ ೧೨0 ವರ್ಷಗಳಲ್ಲಿ ಕುಂದು ಕೊರತೆಗಳಿಲ್ಲದೆ ಆದಿಲ ಶಾಹಿ ಮನೆತನ ವಿಜಾಪುರವನ್ನು ಆಳಿದರು. ನಂತರ ಮಹಮ್ಮದನ ಮಗ ಎರಡನೇ ಅಲಿ ಆದಿಲಶಾಹಿ ಕಾಲದಲ್ಲಿ
ಅವನತಿ ಪ್ರಾರಂಭವಾಯಿತು.ಕ್ರಿ. ಶ.೧೬೮೬
ರಲ್ಲಿ ಔರಂಗಜೇಬನ ಕೈವಶವಾಯಿತು.
ಹೀಗೆ ಒಟ್ಟಾರೆ ವಿಜಾಪೂರ ಆದಿಲ ಶಾಹಿ ಮತ್ತು ಮೊಘಲರ ಆಡಳಿತಕ್ಕೆ ಒಳಪಟ್ಟಿತ್ತು.
ಸಾಮಾಜಿಕವಾಗಿ ನೋಡಿದಾಗ ಆದಿಲ ಶಾಹಿ
ರಾಜ್ಯದಲ್ಲಿಎಲ್ಲ ಮತದವರು ಅರ್ಹತೆ, ಜ್ಞಾನ, ಸಾಹಸಿಗಳು ಅವರವರ ಅರ್ಹತೆಯಂತೆ ವಿವಿಧ ವಿಭಾಗದಲ್ಲಿ ಆಡಳಿತದಲ್ಲಿದ್ದರು. ಹೀಗೆ ಆಡಳಿತದಲ್ಲಿ ವರ್ಗ ಭೇಧ ತೋರದೆ ಆಡಳಿತ ನಡೆಸುತ್ತಿದ್ದರು.
ಆದಿಲ ಶಾಹಿ ರಾಜ್ಯದಲ್ಲಿ ಶಿವಾಜಿ ತಂದೆ, ಶಹಾಜಿ ಭೋಸಲೆ ಸರದಾರರಾಗಿದ್ದರು. ಆಡಳಿತದಲ್ಲಿ ಸ್ಥಳೀಯ ಕನ್ನಡ, ಮರಾಠಿ, ತೆಲಗು ಭಾಷೆಯ ಜನರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ರಾಜ್ಯ ನಿರ್ವಹಣೆಗೆ ಕಂದಾಯ ವಸೂಲಿ ಮಾಡಲು ಕಾರಕೂನ, ಕುಲಕರ್ಣಿ ಇದ್ದರು.
ಕರುಣಿಕ ವೃತ್ತಿಯಲ್ಲಿದ್ದ ಕೊನೇರಿರಾಯರ ಮಗ ಮಹಿಪತಿ ರಾಯರು ಖವಾಸಖಾನ
ಹಣದ ಲೆಕ್ಕಪತ್ರದ ಸಮಸ್ಯೆ ಬಗೆಹರಿಸಿದಾಗ, ಆದಿಲ ಶಾಹನು ಇವರಿಗೆ ತಮ್ಮ ಆಸ್ಥಾನದಲ್ಲಿ ಕೋಶಾಧಿಕಾರಿಯಾಗಿ ನೇಮಿಸಿಕೊಂಡು ಸ್ಥಾನಮಾನ ಕೊಟ್ಟು ಗೌರವಿಸಿದ್ದನು.
ಧಾರ್ಮಿಕ ನೆಲೆಗಟ್ಟಿನಲ್ಲಿ ನೊಡಿದಾಗ ಇಲ್ಲಿ ಮುಸ್ಲಿಂ ಧರ್ಮ ಬರುವ ಮೊದಲು ಶೈವ ವೈಷ್ಣವ ಜೈನ ಸಂಪ್ರದಾಯಗಳು ಇದ್ದವು ಎಂಬುದಕ್ಕೆ ಪುರಾವೆ ಎಂದರೆ ಬಸವೇಶ್ವರರು, ಗಣಿತಜ್ಞ ಭಾಸ್ಕರಾಚಾರ್ಯರರು, ಹೀಗೆ ಹಲವಾರು ಮಹನೀಯರು ಹುಟ್ಟಿ ಮೆಟ್ಟಿದ ವಿಜಾಪುರವಾಗಿದೆ.
ಹಾಗೇ ಸಹಸ್ರ ಫಣಿ ಜೈನ ಬಸದಿ ಇರುವುದೊಂದು ಪುರಾವೆ ಸಾಕ್ಷಿಯಾಗಿದೆ.
ಮೊದಲನೇ ಇಬ್ರಹಾಂ ಆದಿಲ್ ಶಾಹನು (೧೫೩೪-೧೫೫೭) ತನ್ನ ಆಡಳಿತದಲ್ಲಿ ಸರ್ವ ಧರ್ಮಗಳ ಸಮನ್ವಯತೆಯನ್ನು ಅಳವಡಿಸಿಕೊಂಡಿದ್ದನು.ಇವನ ಮಗ ಮೊದಲ ಅಲಿ ಆದಿಲ ಶಾಹನು ಸರ್ವ ಧರ್ಮಗಳ ಸನ್ಯಾಸಿ ಮತ್ತು ಪಂಡಿತರನ್ನು ಆದರಿಸುತ್ತಿದ್ದನು. ಇವರಿಗೆಲ್ಲ ಉದಾರ ದೇಣಿಗೆ ಕೊಟ್ಟ ಉಲ್ಲೇಖಗಳು ಇವೆ. ಇದೇ ಪರಂಪರೆಯನ್ನು ಎರಡನೇ ಇಬ್ರಾಹ೦ ಆದಿಲ್ ಶಾಹನು (೧೫೮೦-೧೬೨೬) ಮುಂದುವರಿಸಿಕೊಂಡು ಹೋದನು. ಇವನು ಜ್ಞಾನ ದೇವತೆ ಸರಸ್ವತಿ ದೇವಿಯನ್ನು ಪೂಜಿಸುತ್ತಿದ್ದನು. ಇವನ "ಕಿತಾಬ-ಇ-ನೌರಸ" ಎಂಬಪುಸ್ತಕದಲ್ಲಿ ಮೊದಲು ಸರಸ್ವತಿದೇವಿಯನ್ನು ಸ್ತುತಿಸಿದ್ದಾನೆ. ಇವನಿಗೆ ಮಾರ್ಗದರ್ಶನ ಮಾಡಿದವರು ಆ ಕಾಲದ ಭವ ರೋಗ ವೈದ್ಯ ಎಂದು ಪ್ರಸಿದ್ದಿ ಪಡೆದ ಶ್ರೀ ರುಕ್ಮಾ೦ಗದ ಪಂಡಿತರು.
ಆ ವೇಳೆಯಲ್ಲಿ ಎಲ್ಲ ಧರ್ಮದ ಜನರ ನಡುವೆ ಸಾಮರಸ್ಯೆ ಇತ್ತು. ಎರಡನೇ ಆದಿಲ ಶಾಹ ನ ಮಗಳು. ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದಳು.ಆಗ ನರಸೋಬ ವಾಡಿಯಲ್ಲಿದ್ದ ಶ್ರೀ ನರಸಿಂಹ ಸ್ವಾಮೀಜಿ ಅವರ ಮೊರೆ ಹೋಗಿ ಮಗಳ ಕಣ್ಣಿನ ದೋಷ ಪರಿಹರಿಸಲು ನೀವು ನಮ್ಮ
ವಿಜಯಪುರದಲ್ಲಿ ನೆಲಿಸಿ ಆದರ
ಆತಿಥ್ಯ ಸ್ವೀಕರಿಸಿ ನಮ್ಮ ರಾಜ್ಯದ ಜನರನ್ನು ಉದ್ದರಿಸಿ ಎಂದು ಕೇಳಿಕೊಂಡಾಗ ಸ್ವಾಮಿಗಳು ನೀವು ಇನ್ನು ಮುಂದೆ ನರಸೋಬ ವಾಡಿಗೆ ನನ್ನ ದರ್ಶನಕ್ಕಾಗಿ ಬರುವ ಅವಶ್ಯಕತೆ ಇಲ್ಲಾ, ಬರುವ ಅಮವಾಸ್ಯೆ ದಿವಸ ನಾನು ನಿಮ್ಮ ಅರಮನೆಯ ಆವರಣದಲ್ಲಿ ಔದಂಬರ ವೃಕ್ಷ ರೂಪದಲ್ಲಿ ದರ್ಶನ ಕೊಡುವೆ ಅಂದರು.ಅದೇ ಇಗಿನ ನರಸಿಂಹ ದೇವಸ್ಥಾನ.ಇಲ್ಲಿಯೆ ಮಹಿಪತಿದಾಸರು ವಿಜಯಪುರಕ್ಕೆ ಬಂದಹೊಸತರಲ್ಲಿ ಭಾಗವತ ರಾಮಾಯಣ, ಮಹಾಭಾರತ ಕನ್ನಡವಲ್ಲದೇ ದಖಣಿ ಮತ್ತು ಪರ್ಷಿಯನ ಭಾಷೆಯಲ್ಲಿ ಪುರಾಣ, ಪ್ರವಚನ ಹೇಳುವುದನ್ನು ಅನೇಕ ಭಕ್ತರು ಆಲಿಸುತ್ತಿದ್ದದ್ರು ಇಲ್ಲಿ ಯಾವ ಮತ ಭೇಧ ಇರದೇ ಶಾಂತಿಯ ತಾಣವಾಗಿತ್ತು.
ಇನ್ನು ಭಾಷೆಯ ಬಗ್ಗೆ ಹೇಳುವುದಾದರೆ
ಕನ್ನಡ, ಮರಾಠಿ, ಪರ್ಷಿಯನ,ಉರ್ದು ತೆಲುಗು ಎಲ್ಲ ಮಿಶ್ರ ಭಾಷೆಗಳ ಆಡು ಭಾಷೆಯಾಗಿ ಬಳಸುತ್ತಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳ ಮಿಶ್ರ ಭಾಷೆಗೆ ಉತ್ತರ ಭಾರತದವರು "ದಖಣಿ" ಎಂದು ಕರೆದರು.ಸಾಹಿತ್ಯ ವಿಚಾರದಲ್ಲಿ ಹೇಳುವುದಾದರೆ ಯುಸಫ ಖಾನ, ಇವನ ಮಗ ಇಸ್ಮಾಯಿಲ ಎರಡನೇ ಇಬ್ರಾಹಿಂ ಆದಿಲ್ ಶಾಹಿ ಸಾಹಿತ್ಯ ಪ್ರೇಮಿಗಳಾಗಿದ್ದರು.
ಮಹಿಪತಿರಾಯರು , ರುಕ್ಮಾ೦ಗದ ಪಂಡಿತರು, ಭೀಮಾಶಂಕರರು, ಜಕ್ಕಪ್ಪಯ್ಯ, ಮಹಿಪತಿದಾಸರು ಮತ್ತು ಅವರ ಮಕ್ಕಳಾದ ಕೃಷ್ಣ ದಾಸರು,ಗಲಗಲಿ ಅವ್ವನವರು, ಪ್ರಯಾಗಬಾಯಿ, ಹೀಗೆ ಅನೇಕ ಹರಿದಾಸ ಹರಿದಾಸಿಯರು ಹರಿಯುವ ಗಂಗೆಯಂತೆ ಶ್ರೇಷ್ಠ ದಾಸ ಸಾಹಿತ್ಯ ಪ್ರಸಾರ ಮಾಡಿದರು.
ಮಹಿಪತಿ ದಾಸರು ಮತ್ತು ಅವರ ಮಗ ಕೃಷ್ಣ ದಾಸರು ಬಹು ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ.
ಶ್ರೇಷ್ಠ ಅನುಭವಿಗಳಾದ, ಯೋಗ ಸಾಧನೆ ಮಾಡಿದ ಮಹಿಪತಿ ದಾಸರ ಬಗ್ಗೆ ತಿಳಿಯೋಣ. ಇವರ ಸಾಹಿತ್ಯ ವೈಶಿಷ್ಟವೆಂದರೆ ಜ್ಞಾನಯೋಗ,ಕರ್ಮಯೋಗ, ಭಕ್ತಿಯೋಗ, ರಾಜಯೋಗ. ಹೀಗೆ ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ ಗುರಿಯನ್ನು ಮುಟ್ಟಿದ್ದಾರೆ . ಇಂತಹ ಶ್ರೇಷ್ಠ ಹರಿದಾಸರಾದ ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡುಕೊಂಡಿದ್ದರು
ಮಹಿಪತಿ ದಾಸರು ಕಾಲ (ಕ್ರಿ.ಶ.೧೬೪೦ರಿಂದ ಕ್ರಿ. ಶ.೧೭೦೫), ಅಂದರೆ ಶ್ರೀ ಮಹಿಪತಿ ದಾಸರು ೬೫ ವರುಷ ಬಾಳಿ ಬದುಕಿದರು.ಈ ಘಟ್ಟದಲ್ಲಿ ಹರಿದಾಸ ಸಾಹಿತ್ಯ ನಿಂತು ಹೋಗಿತ್ತು ಎಂದು ಇತಿಹಾಸಕಾರರು ತಿಳಿದುಕೊಂಡಿದ್ದರು ಆದರೆ ಈ ಘಟ್ಟದಲ್ಲಿ ಮಹಿಪತಿದಾಸರು ಇರುವ ಪುರಾವೆಗಳು ಇತಿಹಾಸಕಾರರು ಶೋಧಿಸಿದಾಗ ಪುರಾವೆಗಳೊಂದಿಗೆ ನಿರೂಪಿಸಿದಾಗ ಹರಿದಾಸ ಸಾಹಿತ್ಯ ನಿತ್ಯ ನಿರಂತರ ನಡೆದುಕೊಂಡು ಬಂದಿದೆ ಎಂದು ತಿಳಿಯಿತು. ಅಂದರೆ ಪುರಂದರ ದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರ ಬರುವ ಮುಂಚೆ
( ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ .
ಮಹಿಪಾತಿದಾಸರನ್ನು ಮಹಿಪತಿ ರಾಜ,ಮಹಿಪತಿ ಸ್ವಾಮಿ, ಮಹಿಪತಿದಾಸರು, ಮಹಿಪತಿರಾಯ ಎಂದು ಕರೆಯುವುದು ಇದೆ. ಇವರು ಸಾಹಿತ್ಯವು ವಿಶಿಷ್ಟತೆಯಿಂದ ಕೂಡಿದೆ. ಹರಿ ಸರ್ವೋತ್ತಮತೆ ಸಾರುವ ಮಧ್ವ ಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ
ಆಡು ಭಾಷೆಯಲ್ಲಿ ರಚಿಸಿದ್ದಾರೆ.
ಇವರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯಲ್ಲಿ ಸ್ಥಿರವಾಗಿ ಇದ್ದು, ಯೋಗ ಜಪಗಳ ಮೂಲಕ ಭಗವಂತನನ್ನು ಕಂಡುಕೊಂಡರು.
ತತ್ವಜ್ಞಾನಿ, ಶ್ರೇಷ್ಠ ಅನುಭಾವಿಕರಾದ ಶ್ರೀ ಮಹಿಪತಿ ದಾಸರ ಸಾಹಿತ್ಯ ಎಲ್ಲ ಹರಿದಾಸರ ಸಾಹಿತ್ಯಗಳಿಗಿಂತ ವಿಶಿಷ್ಟ ವಿಭಿನ್ನ ಶೈಲಿಯಿಂದ ಕೂಡಿದೆ. ಪರಮಾತ್ಮನ ಸಾಕ್ಷಾತ್ಕಾರವನ್ನು ಸವಿದು ಸಾಹಿತ್ಯದ ಮೂಲಕ ಹರಿದಾಸ ಸಾಹಿತ್ಯ ಪೋಷಿಸಿ ಬೆಳೆಸಿದರು.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ "ಮಹಿಪತಿ ರಾಯರ ಕೃತಿಗಳು" ಸಂಗ್ರಹದಲ್ಲಿ ದೊರೆತ ಇವುಗಳಲ್ಲಿ ಹಿಂದಿ, ಮಾರಾಠಿ, ಉರ್ದು, ತೆಲಗು ಮಿಶ್ರ ಭಾಷಾ ಕೃತಿಗಳು ಸೇರ್ಪಡೆಯಗಿವೆ. ಕನ್ನಡ ಕೃತಿಗಳು ೬೮೫, ಮರಾಠಿ ಕೃತಿಗಳು ೪೬
ಹಿಂದಿ ಕೃತಿಗಳು ೧೮, ಮಿಶ್ರ ಕೃತಿಗಳು ೫.
ಇನ್ನು ಕನ್ನಡ ಕೃತಿಗಳಲ್ಲಿ ೩೨೨ ಹರಿವಾಯುಗುರುಗಳು, ಅನುಭಾವ, ಸಾಕ್ಷಾತ್ಕಾರ ೧೩೪, ಸ್ವಾನುಭಾವ ಉಪದೇಶ ೧೫೩, ದ್ವೈತ, ೧೩ಇತರೇ ೬೩ ಮಹಿಪತಿ ದಾಸರ ಒಟ್ಟು ಕೃತಿಗಳು ೭೫೪ ದೊರೆತಿವೆ.
ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ. ಹಾಗೆ ವೈವಿಧ್ಯಮಯ.ಇವರು ಬಹು ಭಾಷಾ ವಿಶಾರದಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ ,ತೆಲಗು, ದಖಣಿ,ಮರಾಠಿ, ಪರ್ಷಿಯನ್ ಭಾಷೆಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕಿರ್ತನೆಗಳುಲೇಖನ :- ಶ್ರೀ ಮಹಿಪತಿ ದಾಸರ ಭಕ್ತಿ ಪಾರಮ್ಯ

ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ. ಹಾಗೆ ವೈವಿಧ್ಯಮಯ.ಇವರು ಬಹು ಭಾಷಾ ವಿಶಾರದಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ ,ತೆಲಗು, ದಖಣಿ,ಮರಾಠಿ, ಪರ್ಷಿಯನ್ ಭಾಷೆಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕಿರ್ತನೆಗಳು,ಸ್ತೋತ್ರ, ಆರತಿ ಪದ, ಕೋಲಾಟದ ಪದ(ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ ಕೋಲೆ,),ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹಂತಿಪದ, ಸುಗ್ಗಿ ಪದ, ಸತ್ಸಂಗದ ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ
ಸಾಹಿತ್ಯವು ಸಂಪದ್ಭರಿತ ಹಾಗೂ ವಿಶಾಲ ದೃಷ್ಟಿಕೋಣದಿಂದ ಕೂಡಿದೆ.
ಇವರ ಒಟ್ಟು ಅಂಕಿತ ೧೪ ಇವೆ. ಹೀಗೆ ಹರಿದಾಸ ಸಾಹಿತ್ಯವನ್ನು ಇವರು ಶ್ರೀಮಂತಗೊಳಿಸಿದ್ದಾರೆ .
ಇನ್ನು ಅವರ ಜೀವನದ ಕಿರು ನೋಟವೆಂದರೆ
ಶ್ರೀ ಮಹಿಪತಿ ದಾಸರು ಬಾಗಲಕೋಟೆಯ ಕಾಥೊಟೆ ಮನೆತನದ ಕೊನೇರಿರಾಯರ ಮಗ. ಇವರು ಮಾಧ್ವ ಸಂಪ್ರದಾಯದವರು. ಉದರ ನಿಮಿತ್ಯವಾಗಿ ವಿಜಾಪುರಕ್ಕೆ ಬಂದು ನೆಲೆಸಿದರು. ಇವರು ಸಹ ತಂದೆಯಂತೆ ಮದ್ವ ಶಾಸ್ತ್ರ ಸಂಪನ್ನರಾಗಿ, ಷಟ್ ಶಾಸ್ತ್ರವಂತರಾಗಿ ನಿತ್ಯವು ಭಾಗವತ ಪುರಾಣಾದಿಗಳನ್ನು ಹೇಳುತ್ತಿದ್ದರು. ಇವರ ಪುರಾಣ ಪ್ರವಚನ ಕೇಳಲು ಯಾವ ತಾರತಮ್ಯ ಇಲ್ಲದೇ ಎಲ್ಲ ವರ್ಗದ ಜನರು ಬಂದು ಪುರಾಣ ನೀತಿ ಭೋಧೆಗಳನ್ನು ಕೇಳುತ್ತಿದ್ದರು. ಮುಂದೆ ಖವಾಸಖಾನನ ವ್ಯವಹಾರದ ಲೆಕ್ಕ ಸಮಸ್ಯೆ ಪರಿಹಾರಿಸಿದಾಗ
ಆದಿಲ್ ಶಾಹಿ ಅವರ ಮೆಚ್ಚುಗೆ,ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆದಿಲ್ ಶಾಹಿ ಅರಮನೆಯ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿಯ ಶಾನುಂಗ ಶಾನುಂಗಿ ಎಂಬ ಸೂಫಿಸಂತರ ಮಾತಿನಂತೆ ಸಾರವಾಡ ಗ್ರಾಮಕ್ಕೆ ಹೋಗಿ ಸ್ವರೂಪೋದ್ದಾರಕ ಭಾಸ್ಕರ ಸ್ವಾಮಿಗಳ ಅನುಗ್ರಹ ಪಡೆದು, ೧೨ ವರುಷದಲ್ಲಿ ಮುಗಿಸುವಂತಹ ಯೋಗ ಸಾಧನೆಯನ್ನು ೧೧ತಿಂಗಳಲ್ಲಿ ಯೋಗ ಸಾಧನೆಯನ್ನ ಮಾಡಿದ ಮಹಾಯೋಗಿಗಳು. ಯೋಗದ ಮೂಲಕ ಭಗವಂತನನ್ನು ಕಂಡವರು. ಅಂದರೆ ಯೋಗ ಮಾರ್ಗದಲ್ಲಿ ವಿವರಿಸಿದ ಆತ್ಮ - ವಿಶ್ವ-ವಿಶ್ವಾತೀತ ಪರಮಾತ್ಮನನ್ನು ಕಂಡವರು.
ಆದಿಲ್ ಶಾಹ ರಾಜನು ಇವರ ಕಾರ್ಯ ವೈಖರಿ ಮತ್ತು ತತ್ವಜ್ಞಾನದ ಚಿಂತನೆಯನ್ನು ಕಂಡು ಮರಳಿ ಆಸ್ಥಾನಕ್ಕೆ ಕೋಶಧಿಕಾರಿ ಕಾರ್ಯಭಾರ ನಿರ್ವಹಿಸಲು ಕೇಳಿಕೊಂಡರು,ತಿರಸ್ಕರಿಸಿ ಎಲ್ಲ ಸಂಪತ್ತನ್ನು ಹಂಚಿ ಯೋಗ ಸಾಧನ ಮೂಲಕ ಭಕ್ತಿ ಮಾರ್ಗದಿಂದ ಸಂಸಾರದಲ್ಲಿ ಕಂಸಾರಿ ಸ್ಮರಣೆಯಲಿ ಸಾಧನಾ ಪಥದಲ್ಲಿ ಮಹಿಪತಿರಾಯರು, ಮಹಿಪತಿದಾಸರಾಗಿ ನಡೆದರು.
ಭಾಸ್ಕರ ಸ್ವಾಮಿಗಳ ಅನುಗ್ರಹದಿಂದ ಇಬ್ಬರು ಸುಪುತ್ರರಾದರು ನಂತರ ಹೆಂಡತಿ ತಿಮ್ಮವ್ವ ತೀರಿಹೋದಳು. ಮಕ್ಕಳಿಬ್ಬರು ದೊಡ್ಡಮ್ಮ ತುಕ್ಕವ್ವ ಮತ್ತು ತಂದೆಯ ನೆರಳಲ್ಲಿ ಬೆಳೆದರು ಹಿರಿಯವನಾದ ದೇವರಾಯ ಅಜ್ಜನ ಮತ್ತು ಸಹೋದರಮಾವನ ಆರೈಕೆಯಲ್ಲಿ ಬೆಳೆದು ದೋಣಿ ಶಿವಾಜಿ ಎಂಬ ಬಿರುದು ಪಡೆದು ಜಾಲವಾದ ದೇಶಗತಿ ಪ್ರಾಪ್ತವಾಯಿತು. ಇನ್ನು ಎರಡನೇ ಮಗ ಕೃಷ್ಣ ರಾಯ ತಮ್ಮ ತಂದೆ ಮಹಿಪತಿದಾಸರನ್ನು ಗುರುವನ್ನಾಗಿ ಸ್ವೀಕರಿಸಿ ತಂದೆಯ ಹಾದಿಯಲ್ಲಿ ಹರಿದಾಸ ಪಥದಲ್ಲಿ ನಡೆದರು.
ಮಹಿಪತಿದಾಸರ ಅವಸಾನ ಕಾಲದಲ್ಲಿ ಕೃಷ್ಣ ನದಿಯ ತಟದಲ್ಲಿ ಸ್ಥಿರವಾದ ಆಸನ ಹಾಕಿ ಅನುಷ್ಠಾನಕ್ಕೆ ಕುಳಿತು,ಕಾರ್ತಿಕ ವದ್ಯ ಅಮಾವಾಸ್ಯೆಯ ದಿನ ಶ್ರೀಹರಿಯ ಪಾದ ಸೇರಿದರು .ಕೃಷ್ಣರಾಯರಿಗೆ ತಂದೆ ಎನಿಸಿದ ಗುರುವಾದ ಮಹಿಪತಿರಾಯರ ನೆನಪು ಬಹಳ ಬಂದು ದುಃಖಿಸುತ್ತಾ ಮಲಗಿದಾಗ ಕನಸಿನಲ್ಲಿ ಮಹಿಪತಿ ದಾಸರು ಬಂದು ನಾನು ನಿತ್ಯ ಅನುಷ್ಠಾನ ಮಾಡುತ್ತಿದ್ದ ಶಮಿ ವೃಕ್ಷ ಭೂಮಿಯ ಕೆಳಗೆ ನಾನು ನೂರಾ ಎಂಟು ಶಾಲಿಗ್ರಾಮ ರೂಪದಲ್ಲಿರುವೆ ವೃಂದಾವನ ಕಟ್ಟಿಸು ನಾನು ಅಲ್ಲಿರುವೆ ಎಂದು ಹೇಳಿದರು.ಅಲ್ಲಿ ಅಗೆದು ನೋಡಲಾಗಿ ೧೦೮ ಶಾಲಿಗ್ರಾಮಗಳು ದೊರೆತವು.ಆದರಂತೆ ಕೃಷ್ಣರಾಯರು ವೃಂದಾವನ ಕಟ್ಟಿಸಿ , ಯೋಗ ದಂಡ ,ಪಾದುಕಾ ಇಟ್ಟು ಪೂಜೆ ಮಾಡುತ್ತಾ ಇದ್ದರು .ಈಗಲೂ ಅದೇರೀತಿ ವಿಧಾನ ನಡೆದು ಬಂದಿದೆ. ಬಂದ ಭಕ್ತರನ್ನು ಉದ್ಧರಿಸುತ್ತಾ ಕಾಖಂಡಕಿಯಲ್ಲಿ ನೆಲಸಿದ್ದಾರೆ.
✍️ ಪ್ರಿಯಾ ಪ್ರಾಣೇಶ ಹರಿದಾಸ
(ಕವಿಯತ್ರಿ, ಬರಹಗಾರ್ತಿ, ವಂಶಸ್ಥೆ, )
ಸ್ತೋತ್ರ, ಆರತಿ ಪದ, ಕೋಲಾಟದ ಪದ(ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ ಕೋಲೆ,),ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹಂತಿಪದ, ಸುಗ್ಗಿ ಪದ, ಸತ್ಸಂಗದ ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ

(ವಂಶಸ್ಥೆ,ಕವಿಯತ್ರಿ, ಬರಹಗಾರ್ತಿ,)

Comments
Post a Comment