ಗುರು ಪೌರ್ಣಿಮೆಯ ಶುಭಾಶಯಗಳು 🙏🙏

ಸರ್ವರಿಗೂ ಗುರುಪೌರ್ಣಿಮೆಯ ಶುಭಾಶಯಗಳು 🙏🙏



ಗುರುಗಳಿಗೆ ನಮೋ ಎಂಬೆ
ವ್ಯಾಸ ಮದ್ವ ಮುನಿಗಳಿಗೆ
ನಮೋ ನಮೋ ಎಂಬೆ /ಪ

ಶ್ರೀ ಮಹಿಪತಿದಾಸ ಗುರುವೇ 
ಭಕ್ತಿ ವಂದನೆ ಮಾಡುವೆನಾ /ಅ.ಪ

ಇಳೆಗೆ ರವಿತೇಜ ಪ್ರಕಾಶ
ಗುರುವೇ ನೀನೆ ಜ್ಞಾನೇಶ
ಅಂತರಂಗದಿ ನೀ ನೆಲೆಸೋ
ಸದ್ಭೋದಿ ಎನ್ನನು ಉದ್ಧರಿಸೋ/೧

ಆಕಾಶಕ್ಕೆ ಎಣೆಯಿಲ್ಲ 
ನಿನ್ನಯ ಸಹನೆಗೆ ಮಿತಿಯಿಲ್ಲ
ಗುರಿಗೆ ಗುರುವಾಗಿರುವೆ  ನೀನು
ಶಿಷ್ಯಳಾಗಿ ಸ್ವೀಕರಿಸೆನ್ನುವೆನು/೨

ಜೀವನ ಮರ್ಮವ ತಿಳಿಸು
ಜ್ಞಾನದ ಕಣ್ಣನು ತೇರಿಸು
ಪ್ರಿಯಕೃಷ್ಣನೇ ಜದ್ಗುರು
ಅವನ ಪಥದಿ ನಡೆಸು/೩

✍️ ಪ್ರಿಯಾ ಪ್ರಾಣೇಶ ಹರಿದಾಸ












Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ