ಲೇಖನ :- ಪ್ರಸನ್ನ ವೆಂಕಟದಾಸರ ಕೃತಿ ಚಿಂತನೆ



ಶ್ರೀ ಪ್ರಸನ್ನ ವೆಂಕಟದಾಸರ ಆರಾಧನೆ ನಿಮಿತ್ಯ ಒಂದು* *ಸಾಹಿತ್ಯದ ಕೃತಿ ಚಿಂತನೆ  ಈ ಪದ ಪುಷ್ಪಗಳು ಸಮರ್ಪಣೆ*.     
.                 🙏🙏🙏🙏🙏
🌿🌿🌹🌹🌿🌿🌹🌹🌿🌿🌹🌹🌿🌿

ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ|| ಪ 

 ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ||೧

ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ ಅದಿತಿಯ ಕುಂಡಲ ಗಳಿಸಿದ ಅರವಿಂದ ನೃಪರನು ಸಲಹಿದ||೨

ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ||೩

ನರಕಚತುರ್ದಶಿ ಪರ್ವದ ದಿನ ಹರುಷದಿ ಪ್ರಕಟಾದನು ದೇವ ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ ||೪

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ ಜಗದೀಶ ಪ್ರಸನ್ವೆಂಕಟೇಶನು ಭಕ್ತರಘಹಾರಿ ರವಿ ಕೋಟಿಪ್ರಕಾಶನು|೫

🌹🌹🌹🌹🌹🌹

 ಹರಿದಾಸ ಸಾಹಿತ್ಯದಲ್ಲಿ ಹರಿದಾಸರು ರಚಿಸಿದಂತ ಸಾಹಿತ್ಯವು ಭಾಗವತ ವೇದಶಾಸ್ತ್ರ ಪುರಾಣಗಳು, ಉಪನಿಷತ್ತುಗಳನ್ನು ಒಳಗೊಂಡಿರುತ್ತದೆ ಹಾಗೇ  ಸಾಮಾಜಿಕ ಒಳ್ಳೆಯ ಸಂದೇಶವನ್ನು ಸಾರುವ ಮತ್ತು ಶ್ರೀ ಹರಿ ಮಹಿಮೆ ಸಾರುವ ಸಾಹಿತ್ಯ ಕೃತಿಗಳು ಹೊಂದಿರುತ್ತವೆ.

ಪ್ರಸನ್ನ ವೆಂಕಟದಾಸರು ಈ ಸಾಹಿತ್ಯದಲ್ಲಿ
ಪುರಾಣಗಳ. ರಾಜನಾದ 
ಭಾಗವತದ ದಶಮಸ್ಕಂದ  ಉತ್ತರಾರ್ಧದ
ಕೆಲವು ಚರಿತೆಯ ಸಾರಾಂಶವನ್ನು ಹೇಳಿದ್ದಾರೆ.

ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ||ಪ

 ಈ ಪಲ್ಲವಿಯಲ್ಲಿ ಅನುತೃಣಾದಿ ಯಲ್ಲಿ ವ್ಯಾಪಿಸಿರುವ  ಅಪೌರುಷೆಯನಾದ ಅನಂತ ಗುಣಪೂರ್ಣನಾದ ಶ್ರೀ ಹರಿಯ ಮಹಿಮೆಯನ್ನು ಹೇಳಿದ್ದಾರೆ. ಭಗವಂತನ ಅಣತಿಯಂತೆ  ಎಲ್ಲ ಕಾರ್ಯಗಳನ್ನು ಪಂಚ ರೂಪಾತ್ಮಕನ್ನಾಗಿ ಕಾರ್ಯ ಕಾರಣನಾಗಿ ಮಾಡಿಸುತ್ತಾನೆ : ಅಂತಯೇ ಎಲ್ಲರೂ ಅವನಿಗೆ ಮನಸೋತು ಮೊರೆ ಹೋಗುತ್ತಾರೆ
ಎಂದು ಹೇಳಿದ್ದಾರೆ.

ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ||೧

ಈ ಒಂದನೇ. ನುಡಿಯಲ್ಲಿ ಸ್ಯಮಂತಕ ಮಣಿಯ ಕೆಥೆ ಬರುತ್ತದೆ. ಸೂರ್ಯ ದೇವನು. ತನ್ನ ಭಕ್ತನಾದ ಸತ್ರಾಜೀತಗೆ ತಪಸಸ್ಸಿಗೆ  ಮೆಚ್ಚಿ
ಮಣಿಯನ್ನು ಕೊಟ್ಟಿರುತ್ತಾನೆ, ಸುಖ ಸಮೃದ್ಧಿಯಿಂದ ರಾಜ್ಯವಾಳುತ್ತಿರುತ್ತಾನೆ. ತಮ್ಮನಾದ  ಪ್ರಸೇನನು ಧರಿಸಿ ಕಾಡಿಗೆ ಬೇಟೆಗಾಗಿ ಹೋದಾಗ ಸಿಂಹಕ್ಕೆ ಆಹಾರವಾಗಿ ಹೋಗುತ್ತಾನೆ. ಅದರ ಬಾಯಿಯಲ್ಲಿ ಮಣಿಯನ್ನು ಕಂಡು ಜಾoಬುವಂತನು ಅದನ್ನು ಕೊಂದು ಆ ಮಣಿಯನ್ನು ಮಗನಿಗೆ ಆಡಲು ಕೊಡುತ್ತಾನೆ. ಇತ್ತ ತಮ್ಮ ಪ್ರಸೇನ
ಬಾರದಾಗಿ ಸತ್ರಜೀತ ಹುಡುಕಲು ಹೋಗುತ್ತಾನೆ, ಆದರೆ ಇವನಿಗೆ ಕೃಷ್ಣ ತಗೆದುಕೊಂಡಿರಬಹುದು ಎಂಬ ಶಂಕೆ ಇರುತ್ತದೆ. ಇದನ್ನರಿತ ಕೃಷ್ಣನು ಕಾಡಿನಲ್ಲಿ
 ಪ್ರಸೇನನ್ನ ಹುಡುಕುತ್ತಿರಲು ಒಂದು ಗುಹೆಯ ಬಳಿಯಲ್ಲಿ ಅವನ ಆಭರಣ ಮತ್ತು ಕುದುರೆ ಸತ್ತು ಬಿದ್ದಿದ್ದು ಕಂಡು ಬರುತ್ತದೆ. ಅದನ್ನು ಅರಿಸಿ ಗುಹೆಯೊಳಗೆ ಹೋದಾಗ ಮಣಿಯನ್ನು ಕಾಣುತ್ತಾನೆ. ಆಗ ಹನ್ನೆರಡು ದಿನ ಜಾಂಬುವಂತನ ಜೊತೆ ಕಾದಾಡಿ ತನ್ನ ರಾಮಾವತಾರವನ್ನು ತೋರಿಸಿ ಅವನನ್ನು ಅನುಗ್ರಹಿಸಿ ಮಣಿಯನ್ನು ಪಡೆದು,
 ಅರಮನೆಗೆ ಬಂದು ಸತ್ರಾಜೀತನಿಗೆ ಒಪ್ಪಿಸುತ್ತಾನೆ. ಆಗ ತನ್ನ ತಪ್ಪಿನ ಅರಿವಾಗಿ
 ತನ್ನ ಮಗಳಾದ ಸತ್ಯಭಾಮೆಯನ್ನು ಕೊಟ್ಟು ವಿವಾಹ ಮಾಡುತ್ತಾನೆ.  ಈ  ಮಣಿಯನ್ನು ಇಟ್ಟುಕೊಂಡು ಸುಖ ಸಮೃದ್ಧಿಯಿಂದ ರಾಜವಾಳಲು ಎಂದು ಸತ್ರಾಜೀತನಿಗೆ ಹೇಳುತ್ತಾನೆ.

ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ ಅದಿತಿಯ ಕುಂಡಲ ಗಳಿಸಿದ ಅರವಿಂದ ನೃಪರನು ಸಲಹಿದ//೨

ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ
//೩

ಇನ್ನು ಎರಡನೇ ಮತ್ತು ಮೂರನೇ ನುಡಿಯಲ್ಲಿ  ನರಕಾಸುರನ ವಧೆಯ ಕಥೆಯನ್ನು ಹೇಳುತ್ತಾರೆ. ನರಕಾಸುರನ ಮಂದಿರವನ್ನು ಪ್ರವೇಶಿಸಿದಾಗ
 ನರಕಾಸುರನ ತಾಯಿಯಾದ ಭೂದೇವಿಯು
 ತನ್ನ ಮೊಮ್ಮಗನಾದ ಭಗವದತ್ತನೋಡನೆ
 ಶ್ರೀ ಕೃಷ್ಣನನ್ನು ಪೂಜಿಸುತ್ತಾಳೆ. ರತ್ನಕುಂಡಲಗಳನ್ನು ಸಮರ್ಪಿಸಿ,
 ನನ್ನ ಮೊಮ್ಮಗನಾದ ಭಗವದತ್ತನನ್ನು
 ಆಶೀರ್ವದಿಸಿ ಸಲವ ಎಂದು ಬೇಡಿಕೊಳ್ಳುತ್ತಾಳೆ. ಅಂತೆ ಶ್ರೀ ಕೃಷ್ಣನ
 ಭವದತ್ತನನ್ನು ಉದ್ದರಿಸಿ, ಅವರವರ ಕರ್ಮಾನುಸಾರ ಪದವಿಗಳನ್ನು ಕೊಟ್ಟು
 ನರಕಾಸುರನ ಸೆರೆಯಲ್ಲಿದ್ದ 16,000 ನಾರಿಯರನ್ನು ಬಿಡುಗಡೆ ಮಾಡುತ್ತಾನೆ.
 ಇವರೆಲ್ಲರೂ ಬ್ರಹ್ಮನಲ್ಲಿ ಪ್ರಾರ್ಥಿಸಿ ಶ್ರೀ ಕೃಷ್ಣನನ್ನೇ ಪತಿಯಾಗಿ ಸ್ವೀಕರಿಸುತ್ತಾರೆ.

ನರಕಚತುರ್ದಶಿ ಪರ್ವದ ದಿನ ಹರುಷದಿ ಪ್ರಕಟಾದನು ದೇವ ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ||೪

ಇನ್ನು ನಾಲ್ಕನೇ ನುಡಿಯಲ್ಲಿ
ಸ್ಯಮಂತಕ ಮಣಿ, ನರಕಾಸುರನ ವಧೆ, ಕರ್ಣ ಕುಂತಡಲ ಪಡೆದಿದ್ದು ಈ ಘಟನೆಗಳ ಸಾರಾಂಶ ಹೇಳಿ ಈ ನಾಲ್ಕನೇ ನುಡಿಯಲ್ಲಿ
 ನರಕಾಸುರನ ವಧೆ ಮಾಡಿದ್ದು ಮತ್ತು 16,000 ನಾರಿಯರನ್ನು ಬಿಡುಗಡೆ ಮಾಡಿದ್ದು
 ಅಶ್ವಿನಿವಾಸದ ಚತುರ್ದಶಿಯಂದು ಹೀಗೆ ಆ ದಿನ ಭಗವಂತ ಪ್ರಕಟನಾಗಿ ಎಲ್ಲರನ್ನು ಉದ್ದರಿಸಿದನೆಂದು ಹೇಳಿದ್ದಾರೆ.ಶರಣಾಗತ ರಕ್ಷಕ ಸುಜನರನ್ನು ರಕ್ಷಿಸುವ, ಭಾಗವತರ ಪ್ರಿಯ ಕೃಷ್ಣ.

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ ಜಗದೀಶ ಪ್ರಸನ್ವೆಂಕಟೇಶನು ಭಕ್ತರಘಹಾರಿ ರವಿ ಕೋಟಿಪ್ರಕಾಶನು//೫

 ಇನ್ನು ಕೊನೆ ನುಡಿಯಲ್ಲಿ ಕೃಷ್ಣನ ಕಥೆಯನ್ನು ಎಷ್ಟು ಹೇಳಿದರು ಕಡಿಮೆಯೇ, ಜೀವನದ ಎಲ್ಲ ಪಾಠದ ರೀತಿ ನೀತಿಗಳನ್ನು ಕಲಿಸುವುದು ಭಗವದ್ಗೀತೆ. ದಶಾವತಾರಗಳಲ್ಲಿಯೂ ಸಹ ಒಂದೊಂದು  ರೂಪ ಒಂದೊಂದು ಕಥೆಯನ್ನೇ ಸಾರುತ್ತದೆ. ಆದರೆ ಕೃಷ್ಣಾವತಾರ ಮಾತ್ರ ಎಲ್ಲ ರೂಪಗಳ ಸಾರ ಸಾರುತ್ತದೆ. ಪಾಪಗಳನ್ನ ನಾಶ ಮಾಡುವ ಕರ್ಷಣ ಶಕ್ತಿಯೇ ಕೃಷ್ಣನಿಗೆ ಇರುವುದು.

 ಹೀಗಾಗಿ ಶ್ರೀ ಪ್ರಸನ್ನ ವೆಂಕಟದಾಸರು
 ಶ್ರೀ ಕೃಷ್ಣನ ಮಹಿಮೆ ಎಷ್ಟು ಹೊಗಳಿದರು
 ಸಾಲದು ಅವನ ಕೀರ್ತಿ ಅಪಾರ ಅಗಣಿತ ಎಂದು ಹೇಳಿರುವರು.

✍️ *ಪ್ರಿಯಾ ಪ್ರಾಣೇಶ ಹರಿದಾಸ*
  *(ಕವಿಯತ್ರಿ,ಬರಹಗಾರ್ತಿ )*

Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ