ಲೇಖನ :- ವರಕವಿ ಶ್ರೀ ಶ್ಯಾಮ ಸುಂದರ ದಾಸರು
ಲೇಖನ :-ವರಕವಿ ಶ್ರೀ ಶ್ಯಾಮಸುಂದರದಾಸರು
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಲಟಗಿ ಗ್ರಾಮದಲ್ಲಿ ಶ್ರೀ ಶ್ಯಾಮಾಚಾರ್ಯರರು ಮತ್ತು ಸಾಧ್ವೀ ಕೊಪ್ರಮ್ಮ ಎಂಬ ದಂಪತಿಗಳಿಗೆ ೧೯೦೩ ಗಂಡು ಮಗು ಜನನವಾಯಿತು. ಮಗುವಿಗೆ ಗುಂಡಾಚಾರ್ಯ ಎಂಬ ಹೆಸರು ನಾಮಕರಣ ಮಾಡಿದರು. ಮಗು 5 ವರ್ಷ ಆದರೂ ಮಾತು ಬರಲಿಲ್ಲ. ಆಗ ತಂದೆ ತಾಯಿ ಚಿಂತಿತರಾದರು
ಜಗನ್ನಾಥದಾಸರ ದರ್ಶನಾಕಾಂಕ್ಷಿಗಳಾಗಿ ಮಾನವಿಗೆ ಗುರು ಜಗನ್ನಾಥದಾಸರ ಹತ್ತಿರ ಕರೆದುಕೊಂಡು ಹೋದರು. ದಂಪತಿಗಳ ಮನದ. ಇಂಗಿತ ಅರಿತರು.ಗುರುವಿನ ಕಾರುಣ್ಯ ದೊರೆಯಿತೇ೦ದರೆ ಕಲ್ಲು ಹೂ ವಾಗಿ ಅರಳುವುದು. ಕರುಣೆಯಿಂದ ಶ್ರೀ ಗುರು ಜಗನ್ನಾಥದಾಸರು ಮಗುವಿನ ತಲೆಯ ಮೇಲೆ ವರದ ಹಸ್ತವಿಟ್ಟು ನಿಮ್ಮ ಮಗನು ಭಗವದನುಗ್ರಹದಿಂದ ವರ ಕವಿಯಾಗುವನು ಎಂದು ಹರಿಸಿದರು. ಶ್ರೀ ಗುರು ಜಗನ್ನಾಥದಾಸರ ಪರಮಾನುಗ್ರಹದಿಂದ ಗುಂಡಾಚಾರ್ಯರು ಕೆಲವೇ ತಿಂಗಳುಗಳಲ್ಲಿ ಸ್ವಚ್ಛವಾಗಿ ಮಾತನಾಡಲು ಪ್ರಾರಂಭಿಸಿದನು .
ಕುಲ ಗುರುಗಳು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಹಾಗೇ ಇವರ ಸ್ವರೂಪೋದ್ಧಾರಕ ಗುರುಗಳು ಶ್ರೀ ಜಗನ್ನಾಥದಾಸರು. ವಿದ್ಯೆ ಕೊಟ್ಟಂತಹ ಗುರುಗಳು ಶ್ರೀ ಐಕೋರು ನರಸಿಂಹಾಚಾರ್ಯರು, ಶ್ರೀ ಅಸ್ಕಿಹಾಳ ಗೋವಿಂದದಾಸರು. ಮುಂದೆ ಇವರಿಗೆ
ಅಂಕಿತವು ಶ್ರೀ ಜಗನ್ನಾಥದಾಸರಿಂದ ಸ್ವಪ್ನಾಂಕಿತ " ಶ್ಯಾಮಸುಂದರವಿಠ್ಠಲ"
ದೊರೆಯಿತು. ಸಮಕಾಲೀನ ಯತಿಗಳೆಂದರೆ
ಶ್ರೀ ಸುಶೀಲೇಂದ್ರತೀರ್ಥರು; ಶ್ರೀ ಸುವ್ರತೀಂದ್ರತೀರ್ಥರು; ಶ್ರೀ ಸುಯಮೀಂದ್ರತೀರ್ಥರು(ರಾಘವೇಂದ್ರ ಮಠ) ಹಾಗೇ ಇವರ ಶಿಷ್ಯ ವೃಂದ ಅಪಾರ ಸಂಖ್ಯೆಯಲ್ಲಿತ್ತು.
ಇವರಲ್ಲಿ ಪ್ರಮುಖ ಶಿಷ್ಯರೆಂದರೆ
ಚೀಲಕಪರವೀ ಶ್ರೀ ನರಸಿಂಹದಾಸರು, ದಡದಲ ಶ್ರೀ ನರಸಿಂಗರಾಯರು ಮತ್ತು ದಡದಲ ಶ್ರೀ ಭೀಮಸೇನದಾಸರು ( ಶ್ರೀ ಮೋತಿದಾಸರು ))
ಶ್ರೀ ವಿಜಯಸಾರಥಿವಿಠಲ; ಶ್ರೀ ಲಕುಮೀಶದಾಸರು ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ), ಶ್ರೀ ಅಭಿನವ ಪ್ರಾಣೇಶದಾಸರು; ಶ್ರೀ ಶ್ರೀಕರವಿಠಲ; ಶ್ರೀ ಪದ್ಮನಾಭವಿಠಲ ಮತ್ತು ಶ್ರೀ ಗುರು ಶ್ಯಾಮಸುಂದರದಾಸರು ( ಶ್ರೀ ಸುಶೀಲೇಂದ್ರಾಚಾರ್ಯರು ),
ಉಪದೇಶ ಪಡೆದ ಶಿಷ್ಯರು : ಮರತೇಡ್ ಶ್ರೀನಿವಾಸರಾಯರು, ಶ್ರೀ ಜಗನ್ನಾಥ ದಾಸರ ಮಗ ಶ್ರೀ ದಾಮೋದರದಾಸರೇ ಈಗಿನ ಕಥಾ ನಾಯಕ ಶ್ರೀ ಶ್ಯಾಮಸುಂದರದಾಸರು "
ಶ್ಯಾಮಸುಂದರದಾಸರು ಹಿಂದಿನ ಜನ್ಮದಲಿ ರಂಗ ಒಲಿದ ದಾಸರಾಯರಾದ ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರಾಗಿ ಅವತರಿಸಿ ಶ್ರೀ ಜಗನ್ನಾಥದಾಸರ ಹೊರಹೊಮ್ಮಿದ " ಹರಿಕಥಾಮೃತಸಾರ " ದ ಕೆಲವು ಸಂಧಿಗಳನ್ನು ಶ್ರೀ ದಾಸಾರ್ಯರ ಪರಮಾನುಗ್ರಹ ಬಲದಿಂದ ಬರೆದಿದ್ದರ ಫಲದಿಂದ ಶ್ರೀ ಶ್ಯಾಮಸುಂದರದಾಸರಾಗಿ ಅವತರಿಸಿದ್ದಾರೆ ಎಂಬುದನ್ನು ಈ ಕೆಳಗಿನ ಪ್ರಮಾಣಗಳಿಂದ ತಿಳಿದು ಬರುತ್ತದೆ.
ಶ್ರೀ ವಿಜಯಸಾರಥಿ ವಿಠಲರು....
ಹರಿಕಥಾಮೃತ ವಕ್ತಾರಃ ।
ಪರಮಾನುಗ್ರಹ ಸೂನವೇ ।
ವರ ಕವಿ ಪಂಡಿತಾಚಾರ್ಯ
ನಮೋ ನಮಃ ।।
ಶ್ರೀ ಶ್ರೀಕರ ವಿಠಲರು...
ಮಾನವಿಯಧಾಮರಾ
ಪ್ರೇಮದಾ ಸೂನೂ ।
ನೀನೆಂದು ಭಾವಿಸಿ
ಸ್ತುತಿಪ ಜನರನ್ನು ತಾನೇ ।
ಶ್ರೀಕರವಿಠ್ಠಲ ಪೊರೆಯುವನು
ವರ ಕಾಮಧೇನು ।।....
........
ಶ್ರೀ ಶ್ಯಾಮ ಸುಂದರ ದಾಸರೇ ತಾವು ಶ್ರೀ ಜಗನ್ನಾಥದಾಸರ ಪುತ್ರರೆಂದು ಈ ಕೆಳಕಂಡ ಪ್ರಮಾಣಗಳಿಂದ ಸ್ಪಷ್ಟ ಪಡಿಸಿದ್ದಾರೆ.
ಭೋ ದಾತಾ ಬಾರೋ
ಗುರುವರ್ಯ ।। ಪಲ್ಲವಿ ।।
ನಂಬಿದೆ ನಾ ನಿನ್ನ ಪಾದ
ಭೂನಾಥ ದಾಸಾಗ್ರಣೀ ।। ಅ. ಪ ।।
........
ಹೀಗೆ ನಿಗೂಢವಾದ ಸಾಧನೆಯನ್ನು ಮಾಡಿ ಕಾರಣ ಜನ್ಮರಾದ ಶ್ರೀ ಶ್ಯಾಮಸುಂದರದಾಸರು ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ ನವಮೀ ಶುಕ್ರವಾರ ವೈಕುಂಠಕ್ಕೆ ತೆರಳಿದರು.
✍️ ಪ್ರಿಯಾ ಪ್ರಾಣೇಶ ಹರಿದಾಸ

Comments
Post a Comment