ಲೇಖನ:- "ಗಂಗೆಯಂತೆ ವಿಚಾರಧಾರೆ"
ಲೇಖನ :- ಗಂಗೆಯಂತೆ ವಿಚಾರಧಾರೆ
"ಹರಿಕಥಾಮೃತಸಾರ"ದ
ಎರಡನೇ ಸಂಧಿಯಾದ"ಕರುಣಾಸಂಧಿ"ಯಲ್ಲಿ
ಎರಡನೇ ನುಡಿಯಲ್ಲಿ ಒಂದು ಒಳ್ಳೆಯ ದೃಷಾಂತ ಕೊಟ್ಟಿದ್ದಾರೆ. " ಮಳೆಯ ನೀರೋಣಿಯೊಳು ಪರಿಯಲು ಬಳಸರೂರೊಳಗಿದ್ದ ಜನರಾ ಜಲವು ಹೆದ್ದೊರೆಗೂಡೆ ಮಜ್ಜನಪಾನಗೈದಪರು"
ಇದರ ಅರ್ಥ ಮಳೆ ನೀರು ಭೂಮಿಯಲ್ಲಿ ಬಿದ್ದು, ಓಣಿಯಲ್ಲಿ ಹರಿದು ಹೋಗುವಾಗ ಹೋಲಸು ನೀರು ಎಂದು ಯಾರು ಬಳಸುವದಿಲ್ಲ. ಇದೇ ನೀರು ಹರಿದು ತೊರೆಯಾಗಿ ನದಿಗೆ ಸೇರಿದಾಗ ಜನರು ಪವಿತ್ರಜಲ, ಗಂಗೆಯಷ್ಟೇ ಪಾವನ ಅಂತ ಪೂಜೆಗೆ, ಸ್ನಾನಕ್ಕೆ, ಕುಡಿಯಲು ಇತ್ಯಾದಿಯಾಗಿ ಬಳಸುತ್ತಾರೆ.
ಹಾಗೇ ನಮ್ಮ ಜೀವನದ ನಿತ್ಯದಲ್ಲಿ ಅವರಿವರನ್ನು ಆಡಿಕೊಳ್ಳುವುದು ಅಥವಾ ಕೊಂಕು ನುಡಿಗಳನ್ನು ಮಾತಾಡುವದು, ಅಸೂಯೆ ಪಡುವದು, ಮಾಡಬಾರದು.ಇಂತಹವುಗಳಲ್ಲಿ ಕಾಲ ಕಳೆದರೆ, ನಮ್ಮ ಜೀವನ ಸಹ ಚರಂಡಿ ನೀರಿನಂತೆ ಆಗುತ್ತದೆ.ಅವಾಗ ಭಗವಂತನಿಗೆ ಪ್ರೀತಿಯ ಪಾತ್ರರಾಗುವದಿಲ್ಲ ಹಾಗೆಯೇ, ನಾವು ಎಲ್ಲಿಯೂ ಸಲ್ಲುವದಿಲ್ಲ ಯಾರು ಇಷ್ಟಪಡುವದಿಲ್ಲ.ಆದ್ದರಿಂದ ಭಗವಂತ ಕೊಟ್ಟ ಈ ಮಾನವ ಜನ್ಮ ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು.ಈ ಸಾಧನಶರೀರ ಸಿಕ್ಕಿದ್ದು ಪುಣ್ಯ. ಎಲ್ಲ ಪ್ರಾಣಿಗಳ ಹಾಗೇ ನಾವು ಮನುಷ್ಯ ಪ್ರಾಣಿ , ಆದರೆ ಭಗವಂತ ಇಲ್ಲಿ ನಮಗೆ ಒಂದು ಹೆಚ್ಚಿನ ಶಕ್ತಿ ಕೊಟ್ಡಿದ್ದಾನೆ.
ಅದುವೇ ವಿಚಾರ ಶಕ್ತಿ,ಅರಿತು ಕೊಳ್ಳುವ ಶಕ್ತಿ. ಹೀಗಾಗಿ ನಾವು ಇದನ್ನ ಸದ್ವಿನಿಯೋಗ ಪಡಿಸಿಕೊಳ್ಳಬೇಕು.ದಿನದ ಸ್ವಲ್ಪ ವೇಳೆಯನ್ನು ಆಧ್ಯಾತ್ಮಿಕಗಾಗಿ,ಜಪ,ಸ್ಮರಣೆ ಅಥವಾ ಒಳ್ಳೆಯ ಹವ್ಯಾಸ ಮತ್ತು ಚಿಂತನಾಶೀಲವಾಗಿ ಕಳೆಯಬೇಕು. ನೆರೆಹೊರೆಯವರಲ್ಲಿ, ಭಂದುಬಳಗದಲ್ಲಿ ಹಿತ ನುಡಿಗಳನ್ನಾಡಬೇಕು.
ದಾಸರ ಪದಗಳಲ್ಲಿ ಜೀವನದ ಸತ್ಯಾಂಶವನ್ನು, ಸರಳ ಸುಂದರವಾಗಿ ತಿಳಿಯುವ ಹಾಗೇ ಹೇಳಿದ್ದಾರೆ. ಇದರಿಂದ ನಮಗೆ ಲಾಭ ಇದೆಯೇ ಹೊರತು ಕೆಡಕವು ಇಲ್ಲ. ಇದರಿಂದ ನಮ್ಮ ದೇಹದಲ್ಲಿ ಸಕಾರಾತ್ಕ ಬೆಳವಣಿಗೆ ಆಗುತ್ತದೆ.
ಭಗವಂತನ ಸ್ಮರಣೆ ಮಾಡಬೇಕು, ನಾವು ಒಳ್ಳೆಯ ಕಾರ್ಯ ಪ್ರವೃತ್ತಿಯಲ್ಲಿ ತೊಡಬೇಕು. ಇದು ನಮ್ಮ ಆತ್ಮಕ್ಕೆ ಕೊಡುವ ಪರೋಕ್ಷ ಸಂಸ್ಕಾರವಾಗುತ್ತದೆ. ಏಕೆಂದರೆ ನಮ್ಮ ಆತ್ಮ ನಿತ್ಯ ನಿರಂತರ.
🖋 ಪ್ರಿಯಾ ಪ್ರಾಣೇಶ ಹರಿದಾಸ (ವಿಜಯಪುರ)
Comments
Post a Comment