ಲೇಖನ :- ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರ ಗುರು ಸಾರ್ವಭೌಮರು

ಲೇಖನ:- ಕಲಿಯುಗುದ  ಕಾಮಧೇನು ಶ್ರೀ ರಾಘವೇಂದ್ರ ಗುರುಸಾರ್ವಭೌಮರು..



ಕಲಿಯುಗದ ಕಾಮಧೇನು‌ ಕಲ್ಪವೃಕ್ಷವಾಗಿ ನೊಂದುಬೆಂದು ಬರುವಂತಹ ಬರುವ ಭಕ್ತರ ಕರುಣಿ, ಶ್ರೀರಾಘವೇಂದ್ರ ಸ್ವಾಮಿಗಳು  (೧೬೭೧-೧೬೭೧) ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಜರಾಗಿ‌  ಮೂರನೇ ಅವತಾರ. ಶ್ರೀ ವ್ಯಾಸರಾಯರಾಗಿ  ಎರಡನೆಯ ಅವತಾರ .  ಮುಂದೆ ಕಲಿಯುಗದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಾಗಿ ಧರೆಯಲ್ಲಿ‌ ಹುಟ್ಟಿ ಬಂದಿದ್ದಾರೆ.ಭಕ್ತರು ರಾಯರನ್ನು  ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

ಇವರು ಸಶರೀರವಾಗಿ ಬೃಂದಾವನಸ್ಥರಾಗಿದ್ದಾರೆ. ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯ ದಲ್ಲಿದೆ.  ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ.

 ಪೂರ್ವಾಶ್ರಮದ ಹೆಸರು ವೇಂಕಟನಾಥ.  ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣ ಭಟ್ಟರಿಗೆ ಮೂರು ಜನ ಮಕ್ಕಳು. ಗುರುರಾಜ ಮತ್ತು ವೇಂಕಟಾಂಬ ಮತ್ತು‌ ವೇಂಕಟನಾಥ.

ತಮಿಳುನಾಡಿನ  ಭುವನಗಿರಿ ಎಂಬಲ್ಲಿ ವೇಂಕಟನಾಥನ‌ ಜನನವಾಯಿತು. ಬಾಲಕ
ವೇಂಕಟನಾಥ ಕುಶಾಗ್ರಮತಿ ಮತ್ತು ಓರಿಗೆಯವರಕ್ಕಿಂತ ಹೆಚ್ಚಿನ ಜ್ಞಾನ ,ಗಾಂಭಿರ್ಯ. ಚಿಕ್ಕ ವಯಸ್ಸಿದ್ದಾಗಲೇ ತಂದೆ ತೀರಿ ಹೋದರು. ಸಂಸಾರದ ಜವಾಬ್ದಾರಿ  ಅಣ್ಣ ಗುರುರಾಜನ ಮೇಲೆ ಬಿತ್ತು. ವೇಂಕಟನಾಥನ   ವಿದ್ಯಾಭ್ಯಾಸ ಸೋದರಮಾವನಾದ ಮಧುರೈನ ಲಕ್ಷ್ಮಿ ನರಸಿಂಹಾಚಾರ್ಯರಲ್ಲಿ ನಡೆಯಿತು. ಇವರು ಕಲಿಯುತ್ತಿರುವಾಗಲೇ ಶ್ರೀಮನ್ ನ್ಯಾಯ ಸುಧಾ ಕ್ಕೆ "ಪರಿಮಳಾ" ಟಿಪ್ಪಣಿ ಬರೆದು  *ಪರಿಮಳಾಚರ್ಯ" ಎಂದು ಪ್ರಸಿದ್ದಿ  ಹೊಂದಿದರು.*
ಸರಸ್ವತಿ ಎಂಬ ಕನ್ಯೆಯೊಡನೆ ವಿವಾಹವಾಯಿತು.
ವಿವಾಹ ನಂತರ ಇವರು ಕುಂಭಕೋಣಕ್ಕೆ ಬಂದು  ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ಅಭ್ಯಸಿಸದರು. ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. 

ಕೆಲವೊಮ್ಮೆ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರುವ ಪರಸ್ಥಿತಿ ಬರುತ್ತಿತ್ತು. ಆದರೂ ದೇವರಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಿಲ್ಲ. ಅಚಲವಾದ ಭಕ್ತಿ ,ಶ್ರದ್ಧೆ ಇತ್ತು.

ತಿಮ್ಮಣ್ಣ ಭಟ್ಟರ ಅಜ್ಜ  ಕೃಷ್ಣ ಭಟ್ಟ. ಇವರು ವೀಣೆಯಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು.  ಮಕ್ಕಳ ಗುಣ ಅವರ ವಂಶದಿಂದ ಬರುವುದಂತೆ; ನಿಜ ಮುತ್ತಜ್ಜನಿಂದ ಬಂದಂತಹ
ವೇಂಕಟನಾಥರಿಗೆ ವೀಣಾ ವಿದ್ಯೆ ಬಳುವಳಿಯಾಗಿತ್ತು.ಆದ್ದರಿಂದ ರಾಘವೇಂದ್ರ ಸ್ವಾಮಿಗಳು ವೀಣೆ ನುಡಿಸುತ್ತಿದ್ದರು. ಆದ್ದರಿಂದ ಇವರಿಗೆ
 "ವೀಣಾ ವೈಣಿಕ" ಎಂದು ಕರೆಯುತ್ತಿದ್ದರು.

ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಭಗವಂತ ವೆಂಕಟನಾಥನನ್ನು ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೇಂಕಟನಾಥನಿಗೆ ತಿಳಿಸಿದಾಗ, ವೆಂಕಟನಾಥನು, ಪತ್ನಿ ಮತ್ತು ಮಗನನ್ನು ಬಿಟ್ಟು ಸನ್ಯಾಸಿ ಆಗಲಾರೆ; ಎಂದು ತಿರಸ್ಕಾರ ಮಾಡಿದರು.ಆದರೆ ಭಗವಂತ ತನ್ನ‌ ಆಟ ತೋರಿಸುತ್ತಾನೆ. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸಾಕ್ಷಾತ್ ಸರಸ್ವತಿ ದೇವಿಯೇ..; ಸ್ವಪ್ನದಲ್ಲಿ ಬಂದು ಸನ್ಯಾಸಾಶ್ರಮ ಸ್ವೀಕರಿಸಲು ಆಜ್ಞೆ ನಿಡುತ್ತಾಳೆ.  ಇದರಿಂದ ಮನಸ್ಸು ಪರಿವರ್ತನೆಯಾಗಿ‌;  ವೆಂಕಟನಾಥನು ಫಾಲ್ಗುಣ ಶುದ್ಧ ಬಿದಿಗೆ ಯಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ   ಫಾಲ್ಗುಣ ಶುದ್ಧ  ದ್ವಿತೀಯಾದಂದು ಸನ್ಯಾಸಾಶ್ರಮ ವನ್ನು ಸ್ವೀಕರಿಸಿ  ಶ್ರೀ ರಾಘವೇಂದ್ರ ಸ್ವಾಮಿಗಳಾಗುತ್ತಾರೆ

ಸನ್ಯಾಸಾಶ್ರಮ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಭಾವಿಯಲ್ಲಿ ಬಿದ್ದು ಆತ್ಮಹತ್ತೆ ಮಾಡಿಕೊಂಡು ಪಿಶಾಚಿಯಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದು; ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಈ ಅವತಾರದಲ್ಲಿ ನೋಡಿ ಆಕೆಯ ಮೇಲೆ ತೀರ್ಥವನ್ನು ಪ್ರೊಕ್ಷಿಸಿ ಆಕೆಗೆ ಮೋಕ್ಷ ನೀಡುತ್ತಾರೆ. 

ಎಲ್ಲ ವೇದ ಉಪನಿಷತ್ತುಗಳ ಖಂಡಾರ್ಥ ಮುಂತಾದ ಗೀತಗೆ ವಿವೃತ್ತಿ,, ಚಂದ್ರಿಕಾಕ್ಕೆ ಪ್ರಕಾಶ ಹೀಗೆ   ಗ್ರಂಥಗಳು ಮತ್ತು ಸ್ತೋತ್ರಗಳನ್ನು ರಚಿಸಿದ್ದಾರೆ."ವೇಣುಗೋಪಾಲ" ಅಂಕಿತದಿಂದ ಕನ್ನಡ ಪದ್ಯ ರಚಿಸಿರುತ್ತಾರೆ. ದಾಸ ಸಾಹಿತ್ಯದಲ್ಲಿ ಎಲ್ಲ ದಾಸರಗಳಿಂದ ಸ್ತುತಿಸಿಕೊಂಡ

ಮಹಾತ್ಮರು. "ಇಂದು ಎನಗೆ ಗೋವಿಂದ..." ಪ್ರಸಿದ್ದ ಪದ ಇವರ ರಚನೆಯಾಗಿದೆ.

ಪ್ರಲ್ಹಾದ ರಾಜರ ಯಜ್ಞಭೂಮಿ ಯಾದ, ಮಂಚಾಲಮ್ಮನ ಕ್ಷೇತ್ರವಾದ ಮಂತ್ರಾಲಯದಲ್ಲಿ ಶ್ರಾವಣ ಬಹುಳ ದ್ವಿತೀಯ ಶುಕ್ರವಾರದಂದು, ತಾವೇ
ನಿರ್ಮಿಸಿದ ವೃಂದಾವನದಲ್ಲಿ ಪ್ರವೇಶ ಮಾಡಿದರು.ಇವರ ಮಹಿಮೆಗಳು ಭಕ್ತಜನಕ್ಕೆ ಆಶ್ರಯ ನೀಡಿವೆ.

*ಮಹಿಮೆಗಳು*

ದೇಸಾಯಿ ಮಗನನ್ನು ಮಾವಿನ ಶಿಕರಣೆಯಿಂದ ರಕ್ಷಣೆ ಮಾಡಿದರು.

ಅದವಾನಿಯ ದನಗಾಹಿ ವೆಂಕಣ್ಣನಿಗೆ ದಿವಾನ ಪದವಿ ಬರುವಂತೆ ಮಾಡಿದರು.

ಶಿಷ್ಯನಿಗೆ ಮೃತ್ತಿಕೆಯನ್ನು ನೀಡಿ
ಊರಿಗೆ ಹೋರಟ ಸಂದರ್ಭದಲ್ಲಿ;
ರಾತ್ರಿಯಾದಾಗ ಒಂದು ಮನೆಯ ಕಟ್ಟೆಯ ಮೇಲೆ ಮಲುಗುತ್ತಾನೆ,ಆಗ ಮನೆಯ ಒಡತಿಯ ಪ್ರತಿ ಬಾರಿಯು ಪ್ರಸವವಾದಾಗ ಪಿಶಾಚಿ ಹುಟ್ಟಿದ ಮಗುವನ್ನು ಕೊಲ್ಲುತ್ತಿತ್ತು.ಆದರೆ ಈ ಸಲ ಪ್ರಸವವಾದಾಗ ಗಂಡು ಮಗು ಸುರಕ್ಷಿತವಾಗಿ‌ ಉಳಿದಿರುತ್ತದೆ. 
ಏಕೆಂದರೆ ಕಟ್ಟೆಯ ಮೇಲೆ‌ಮಲಗಿದ ಶಿಷ್ಯನಲ್ಲಿರುವ ಮೃತ್ತಿಕೆಯಿಂದ ಈ ಮಹಿಮೆ ಘಟಿಸುತ್ತದೆ.

ಜಗನ್ನಾಥ ದಾಸರು ಹೇಳಿದಂತೆ

"ನಂಬಿ ಕೆಟ್ಟವರಿಲ್ಲವೋ ಈ ಗುರುಗಳ/ನಂಬದೇ ಕೆಡುವರುಂಟೋ ಎಂದು ಹೇಳಿದಂತೆ

ಇಂದಿಗೂ ಭಕ್ತರ ಕರೆಗೆ ಓ! ಗೊಟ್ಟು
ಬರುವ ಕಾಮಧೇನು  ಕಲ್ಪವೃಕ್ಷವಾಗಿರುವ ಶ್ರೀ ರಾಘವೇಂದರ ಗುರು ಸಾರ್ವಭೌಮರು.

*ರಾಘವೇಂದ್ರಸ್ವಾಮಿಗಳ ಕೃತಿಗಳು*

೧. ಋಗ್ವೇದವಿವೃತಿಃ *

೨. ಯಜುರ್ವೇದವಿವೃತಿಃ *

೩. ಸಾಮವೇದವಿವೃತಿಃ *

೪. ಮಂತ್ರಾರ್ಥಮಂಜರೀ

೫. ಪುರುಷಸೂಕ್ತಮಂತ್ರಾರ್ಥಃ

೬. ಶ್ರೀಸೂಕ್ತಮಂತ್ರಾರ್ಥಃ *

೭. ಮನ್ಯುಸೂಕ್ತಮಂತ್ರಾರ್ಥಃ *

೮. ಅಂಭೃಣೀಸೂಕ್ತಮಂತ್ರಾರ್ಥಃ *

೯. ಬಳಿತ್ಥಾಸೂಕ್ತಮಂತ್ರಾರ್ಥಃ *

೧೦. ಹಿರಣ್ಯಗರ್ಭಸೂಕ್ತ ವ್ಯಾಖ್ಯಾನಮ್

ಉಪನಿಷತ್ ಪ್ರಸ್ಥಾನ

೧೧. ಈಶಾವಾಸ್ಯೋಪನಿಷತ್ ಖಂಡಾರ್ಥಃ

೧೨. ತಲವಕಾರೋಪನಿಷತ್ ಖಂಡಾರ್ಥಃ

೧೩. ಕಾಠಕೋಪನಿಷತ್ ಖಂಡಾರ್ಥಃ

೧೪. ಷಟ್ಪ್ರಶ್ನೋಪನಿಷತ್ ಖಂಡಾರ್ಥಃ

೧೫. ತೈತ್ತಿರಿಯೋಪನಿಷತ್ ಖಂಡಾರ್ಥಃ

೧೬. ಆಥರ್ವಣೋಪನಿಷತ್ ಖಂಡಾರ್ಥಃ

೧೭. ಮಾಂಡೋಕ್ಯೋಪನಿಷತ್ ಖಂಡಾರ್ಥಃ

೧೮. ಶ್ರೀಮನ್ಮಹೈತರೇಯೋಪನಿಷನ್ಮಂತ್ರಾರ್ಥಃ *

೧೯. ಛಾಂದೋಗ್ಯೋಪನಿಷತ್ ಖಂಡಾರ್ಥಃ

೨೦. ಬೃಹದಾರಣ್ಯಕೋಪನಿಷತ್ ಖಂಡಾರ್ಥಃ

ಸೂತ್ರಪ್ರಸ್ಥಾನ

೨೧. ಶ್ರೀಮನ್ನ್ಯಾಯಸುಧಾಪರಿಮಳಃ

೨೨. ಅಣುಭಾಷ್ಯ ವಾಖ್ಯಾ ತತ್ವಮಂಜರೀ

೨೩. ತತ್ತ್ವಪ್ರಕಾಶಿಕಾ ಭಾವದೀಪಃ

೨೪. ತಾತ್ಪರ್ಯಚಂದ್ರಿಕಾಪ್ರಕಾಶಃ

೨೫. ತಂತ್ರದೀಪಿಕಾ

೨೬. ನ್ಯಾಯಮುಕ್ತಾವಳಿಃ

ಮೀಮಾಂಸಾಶಾಸ್ತ್ರ ಗ್ರಂಥ

೨೭. ಭಾಟ್ಟಸಂಗ್ರಹಃಪುರಾಣಪ್ರಸ್ಥಾನ

೨೮. ಶ್ರೀಕೃಷ್ಣಚಾರಿತ್ರ್ಯ ಮಂಜರೀ

ಗೀತಾ ಪ್ರಸ್ಥಾನ

೨೯. ಶ್ರೀಮದ್ಭಗವದ್ಗೀತಾಭಾಷ್ಯ ಪ್ರಮೇಯದೀಪಿಕಾ ಭಾವದೀಪಃ

೩೦. ಗೀತಾತಾತ್ಪರ್ಯನ್ಯಾಯದೀಪಿಕಾ ಭಾವದೀಪಃ

೩೧. ಗೀತಾರ್ಥಸಂಗ್ರಹಃ (ಗೀತಾವಿವೃತಿಃ)

ಪ್ರಕರಣ ಗ್ರಂಥಗಳು

೩೨. ಮಾಯಾವಾದ ಖಂಡನ ಟೀಕಾಟಿಪ್ಪಣೀ *

೩೩. ಮಿಥ್ಯಾತ್ವಾನುಮಾನ ಖಂಡನ ಟೀಕಾಟಿಪ್ಪಣೀ *

೩೪. ಉಪಾಖಂಡನ ಟೀಕಾ ಟಿಪ್ಪಣೀ ೩೫. ಶ್ರೀವಿಷ್ಣುತತ್ತ್ವವಿನಿರ್ಣಯ ಟೀಕಾ ಭಾವದೀಪಃ

೩೬. ತತ್ವೋದ್ಯೋತ ಟೀಕಾಟಿಪ್ಪಣೀ ೩೭. ತತ್ತ್ವಸಂಖ್ಯಾನಂ ಟೀಕಾ ಭಾವದೀಪಃ 

೩೮. ತತ್ತ್ವವಿವೇಕ ಟೀಕಾ ಭಾವದೀಪಃ

೩೯. ಕಥಾಲಕ್ಷಣ ಟೀಕಾ ಭಾವದೀಪಃ

೪೦.ಕರ್ಮನಿರ್ಣಯ ಟೀಕಾ ಭಾವದೀಪಃ

೪೧. ಪ್ರಮಾಣಲಕ್ಷಣ ಟೀಕಾ ಭಾವದೀಪಃ

ಇತರ ಗ್ರಂಥಗಳ ಟಿಪ್ಪಣಿಗಳು

೪೨. ಪ್ರಮಾಣ ಪದ್ಧತಿ ಟಿಪ್ಪಣಿ ಭಾವದೀಪಃ

೪೩. ತರ್ಕತಾಂಡವ ಟೀಕಾ ನ್ಯಾಯದೀಪಃ

೪೪. ವಾದಾವಳೀ ಟಿಪ್ಪಣೀ

೪೫. ಪ್ರಮೇಯ ಸಂಗ್ರಹಃ

ಇತಿಹಾಸ ಪ್ರಸ್ಥಾನ

೪೬. ಶ್ರೀರಾಮಚಾರಿತ್ರ್ಯ ಮಂಜರೀ

೪೭. ಶ್ರೀಮನ್ಮಹಾಭಾರತತಾತ್ಪರ್ಯ ನಿರ್ಣಯ ಭಾವಸಂಗ್ರಹಃ

೪೮. ಪ್ರಮೇಯನವಮಾಲಿಕೆಯ ಗೂಢಭಾವಪ್ರಕಾಶಿಕಾ (ಅಣುಮಧ್ವವಿಜಯಃ)

ಸದಾಚಾರ ಪ್ರಸ್ಥಾನ

೪೯. ಪ್ರಾತಃ ಸಂಕಲ್ಪಗದ್ಯಮ್

೫೦. ಸರ್ವಸಮರ್ಪಣಗದ್ಯಮ್

೫೧. ಭಗವದ್ಧ್ಯಾನಮ್

೫೨. ತಿಥಿನಿರ್ಣಯಃ

೫೩. ತಂತ್ರಸಾರ ಮಂತ್ರೋದ್ಧಾರಃ

ಸ್ತೋತ್ರ ಪ್ರಸ್ಥಾನ

೫೪. ರಾಜಗೋಪಾಲಸ್ತುತಿಃ

೫೫. ನದೀತಾರತಮ್ಯ ಸ್ತೋತ್ರಮ್

೫೬. ದಶಾವತಾರಸ್ತುತಿಃ

ಸುಳಾದಿ ಮತ್ತು ಗೀತೆಗಳು

೫೭. ಇಂದು ಎನಗೆ ಗೋವಿಂದ

೫೮. ಮರುತ ನಿನ್ನಯ ಮಹಿಮೆ - 

     

  🖋 ಪ್ರಿಯಾ ಪ್ರಾಣೇಶ್ ಹರಿದಾಸ


Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ

ಲೇಖನ :- ವಿಶ್ವ ಕಂಡ ವಿಶ್ವಮಾನವ ಸಂತ ಅನುಭಾವಿ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ