ಲೇಖನ :- ಅಧ್ಯಾತ್ಮದ ರಸದೌತಣ ಬಡಸಿದ ಶ್ರೀ ಮಹಿಪತಿದಾಸರು






ಲೇಖನ :- ಅಧ್ಯಾತ್ಮದ  ರಸದೌತಣ ಬಡಸಿದ ಶ್ರೀ ಮಹಿಪತಿದಾಸರು

    ಪ್ರತಿ ವ್ಯಕ್ತಿಯ ಜೀವನದಲ್ಲಿ ಯಾವ ಘಟ್ಟಲ್ಲಾದರೂ  ತಿರುವು ಕಾಣಬಹುದು.ಮಹಿಪತಿ ದಾಸಾರು ದಿವಾನ ಪದವಿ  ತ್ಯಾಗ ಮಾಡಿ, ಹರಿದಾಸರಾದರು.  ಹನ್ನೊಂದು ವರುಷಗಳಲ್ಲಿ ಮುಗಿಯುವಂತಹ ಯೋಗ ಕೇವಲ ಹನ್ನೊಂದು ತಿಂಗಳಲ್ಲಿ ಸಾಧಿಸಿದರು. ಇವರು ಶ್ರೇಷ್ಠ ಅನುಭಾವಿಗಳು.ಯೋಗ ಮಾರ್ಗ ಸಾಧಿಸಿ, ಇದರ  ಜೊತೆ ಭಕ್ತಿ ಯೋಗ ಸೇರಿತ್ತು. ಹೀಗಾಗಿ ತಾವು ಕಂಡ ಯೋಗದ ಅನುಭವಗಳು ಮತ್ತು ಆಧ್ಯಾತ್ಮ  ರಸದೌತಣವನ್ನು ತಮ್ಮ ಸಾಹಿತ್ಯದಲ್ಲಿ ಬರೆದಿದ್ದಾರೆ.

"ಏನೋ ಎಂತೋ ತಿಳಿಯದು  ತಿಳಿಯದು
ಒಳಗೊ ಹೊರಗೊ ಬೈಗೋ ಬೆಳಗೋ
ಕಾಳ ಬೆಳದಿಂಗಳೋ
ಮಳಿಯೋ ಮಿಂಚೋ ಹೊಳಪೋ ಸಳವೋ"

ಇನ್ನೊಂದು ಸಾಹಿತ್ಯದಲ್ಲಿ ಯೋಗ  ಸಾಧನೆಯಲ್ಲಿ ಆದ  ಅನುಭವ ಹೇಳಿದ್ದಾರೆ.

"ಭಾನುಕೋಟಿ  ತೇಜ ತಾನೇ  ತಾನಾದರೂ ಎನ್ನ ಮನದೊಳು ಈಗ /
ದೀನ ಮಹಪತಿಗೆ  ಸನಾಥ  ಮಾಡುವ ಸ್ವಾನುಭಾವ ಬ್ರಹ್ಮಯೋಗ /"

ಹಾಗೇ  ಮಹಿಪತಿದಾಸರ ಕೃತಿಗಳನ್ನು ಅವಸಲೋಕಿಸಿದಾಗ ವೈವಿದ್ಯಮಯ್ಯ ಹಾಗೂ ಪ್ರಾದೇಶಿಕ ಭಾಷಾ ಸೊಗಡುನ್ನು ನೋಡಬಹುದು. ಕೀರ್ತನೆಗಳನ್ನು, ಸ್ತುತಿ ಪದಗಳು, ಆರತಿ ಪದಗಳು, ಉದಯರಾಗಗಳು, ಸ್ತ್ರೀಯರಿಗಾಗಿ
ಸಾಂಗತ್ಯ, ಶೋಭಾನ ಪದ,ಜೋಗುಳ ಪದ, ಕುಟ್ಟುವ ಪದ, ಸುವ್ವಿ ಪದ, ಕೋಲಾಟದ ಪದ, ಲಾವಣಿ ಪದ, ಹಂತಿಪದ,ಸುಗ್ಗಿಪದ, ರಾಗತಾಳಗಳಿಂದ ಕೂಡಿದ ತ್ರಿಪದಿ, ಚೌಪದಿ, ಸಾಂಗತ್ಯ,ಭಾಮಿನಿ,
ವಾರ್ಧಕ ಷಟ್ಪದಿ,ರಗಳೆ, ಹೀಗೆ ಸಾಹಿತ್ಯದ ಅಮೃತ ಧಾರೆಯನ್ನೇ  ಹರಿಸಿದ್ದಾರೆ.  ಸತ್ಸಂಗ ಪದಗಳು, ಸಾಮಾಜಿಕ ಸಂದೇಶ ಕೊಡುವಂತಹ ಪದಗಳನ್ನು ರಚಿಸಿದ್ದಾರೆ.

"ತೊಡಕಿ  ಮಿಡಕಬ್ಯಾಡ  ಹಡಕಿ  ವಿಷಯದೋಳು ಗಳಕವಾಗಿ /
ಕೆಡಕು  ಬುದ್ಧಿಯಿಂದ  ಕೇಡದೇನು ಬಡದ ಭವಣೆಬಟ್ಟು /

ಹೀಗೆ ಸತ್ಸಂಗ ಪದ ರಚಿಸಿದ್ದಾರೆ.

ಬಹುಭಾಷಾ ಪ್ರವೀಣರಾಗಿದ್ದರು. ಕನ್ನಡ, ಮರಾಠಿ,ದಖಣಿ ಪರ್ಷಿಯನ್, ಹಿಂದಿ, ಉರ್ದು ತೆಲಗು ಬಲ್ಲವರಾಗಿದ್ದರು.

"ಸಮಜೋ ಭಾಯಿ ಸಕೂನಾ  ಚಾರೋ ಖುದಾ ಕಾ /
ತೆಲಗು  ಕನ್ನಡ  ತುರುಕಾರೆ  ಒಂದೇ ಸುಖ /"
ಈ ಸಾಹಿತ್ಯ ದಲ್ಲಿ ಕನ್ನಡ, ಉರ್ದು, ಮಾರಾಠಿ, ತೆಲಗು  ಶಬ್ದಗಳನ್ನು  ಬಳಿಸಿದ್ದಾರೆ.

"ಧನ್ ಐಸಾ ಮಿಲನಾ ಭಾಯಿ/ ಧನ ಐಸಾ ಮಿಲನಾ //
ಹಾತಾನ ಲಾವೆ ಹರ ಕೋಯಿ//"
ಇದನ್ನು ಉರ್ದುವಿನಲ್ಲಿ ಬರೆದಿದ್ದಾರೆ.

"ಬಾಟ್ ಪಕೊಡೊ ಸಿದಾ /ನ ಘಡೆ ತೆಥೆ ಬಾಧಾ//
ಇದುವೇ ಗುರು ನಿಜ ಬೋಧಾ/
‌ಕನ್ನಡ,ಮರಾಠಿ, ಉರ್ದು‌ ಪದಗಳನ್ನು ಬಳಿಸಿದ್ದಾರೆ.

ಹೀಗೆ  700ಕ್ಕಿಂತಲೂ ಹೆಚ್ಚು ಸಾಹಿತ್ಯಗಳನ್ನು  ರಚಿಸಿದ್ದಾರೆ. ಸರ್ವೋತ್ತಮನಾದ ಶ್ರೀ ಹರಿಯ ಮೇಲೆ ೩೨0 ಕೃತಿಗಳನ್ನು ರಚಿಸಿದ್ದಾರೆ. ಭಾಗವತ, ರಾಮಾಯಣ,ಮಹಾಭಾರತ ಗ್ರಂಥಗಳ ಸಾರಾವನ್ನು
ತಮ್ಮ ಸಾಹಿತ್ಯದಲ್ಲಿ ಸರಳ ಶೈಲಿಯಲ್ಲಿ ಬರೆದಿದ್ದಾರೆ.

ಕನ್ನಡ ಸಾರಸ್ವತ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅನನ್ಯ. ಶಾಸ್ತ್ರವಿಚಾರಗಳನ್ನು ಸರಳವಾಗಿ ಪದ್ಯಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ದಾಸರಿಗೆ ಸಲ್ಲಬೇಕು. ಪುರಂದರ ಮತ್ತು ಕನಕದಾಸರ ನಂತರದ ಅವಧಿಯಲ್ಲಿ ವಿಜಯದಾಸರ ಕಾಲ ಪ್ರಾರಂಭವಾಗುವ ಮುನ್ನ  ೧೬ ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆ ಕಾಖಂಡಕಿಯ ಶ್ರೀ ಮಹಿಪತಿದಾಸರು . ಇವರಿಂದ ಮತ್ತು ಇವರ
ವಂಶಜರಿಂದ ದಾಸಸಾಹಿತ್ಯ ಸಮೃದ್ಧವಾಗಿ ಬೆಳೆಯಿತು.
ಮಹಿಪತಿದಾಸರ ಆರಾಧನೆ ಕಾರ್ತಿಕ ವದ್ಯ ಛಟ್ಟಿ ಅಮಾವಾಸ್ಯೆ .
     
🖊 ಪ್ರಿಯಾ ಪ್ರಾಣೇಶ ಹರಿದಾಸ
        (ಕವಯತ್ರಿ, ಬರಹಗಾರ್ತಿ)







     





Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ