ಲೇಖನ : ಶ್ರದ್ಧೆಯಿಂದ ಮಾಡುವ ಕರ್ಮ ಶ್ರಾದ್ಧ ಮತ್ತು ಪಿತೃಕರ್ಮ
ಹಿರಿಯರ ಸ್ಮರಣೆಯಲ್ಲಿ ಮಾಡುವ ಕರ್ಮವೇ "ಶ್ರಾದ್ಧ"ಮತ್ತು ಪಕ್ಷಮಾಸದಲ್ಲಿ ಮಾಡುವ "ಪಿತೃಪಕ್ಷ" ಹಿನ್ನಲೆ
ಒಬ್ಬ ವ್ಯಕ್ತಿ ತೀರಿಹೋದರೆ, ಆವ್ಯಕ್ತಿಗೆ ವರ್ಷದಲ್ಲಿ ಎರಡು ಸಲ ತೀಲ್ (ಕರಿಎಳ್ಳು),ಅನ್ನ, ನೀರು ಕೊಡಬೇಕಾಗುತ್ತದೆ. ಮೊದಲನೆಯದು ವ್ಯಕ್ತಿ ತೀರಿದ ದಿನದ ತಿಥಿಗೆ ಅನುಗುಣವಾಗಿ ಮಾಡುವುದೇ "ಕಾಲಶ್ರಾದ್ಧ". ಇಲ್ಲಿ ತೀರಿಹೋದ ವ್ಯಕ್ತಿಯ ಜೊತೆ ಮೂರು ತೆಲೆಗಳ ಶ್ರದ್ಧೆಯಿಂದ ಸ್ಮರಣೆ ಮಾಡುವುದೇ "ಶ್ರಾದ್ಧ".
ಇನ್ನು ಎರಡನೇಯದು ಭಾದ್ರಪದ ಕೃಷ್ಣಪಕ್ಷದ ಹದಿನೈದು ದಿನ ಬರುವದು "ಪಕ್ಷಮಾಸ".ಇಲ್ಲಿ ತೀರಿಹೋದ ವ್ಯಕ್ತಿಯ ಜೊತೆ ಎಲ್ಲ ತಲೆಮಾರಿ ಕುಲ ಬಾಂಧವರ ಸ್ಮರಣೆ ಹಾಗೂ ಸರ್ವ ಪಿತೃಗಳ ಸ್ಮರಣೆ ಮಾಡಿ ತೀಲೋದಕ ಬೀಡುವುದೇ ಈ "ಪಕ್ಷಮಾಸ".
ಮೊದಲು ಶ್ರಾದ್ಧದ ಹಿನ್ನಲೆ ತಿಳುದುಕೊಳ್ಳೋಣ .
ಬ್ರಹ್ಮವೈವತ್ವ ಪುರಾಣ , ಹರಿವಂಶ ಪುರಾಣ, ಗರುಡ ಪುರಾಣ,ವಾಯು ಪುರಾಣ, ನಾರದೀಯ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ಇವುಗಳನ್ನೆಲ್ಲಾ ಅಧ್ಯಯನ ಮತ್ತು ವಿಶ್ಲೇಷಣೆ , ಶ್ರೇಷ್ಠ ದಾಸರಾದ ಜಗನ್ನಾಥ ದಾಸರು "ಹರಿಕಥಾಮೃತ ಸಾರದಲ್ಲಿನ "14 ನೇ ಸಂಧಿ ಯಾದ "ಪಿತೃಗಣ" ಸಂಧಿಯಲ್ಲಿ ಬರೆದಿದ್ದಾರೆ .
ಇದರ ಮೂಲ ಪ್ರಾಂಭವಾದದ್ದು ಮಾಹಾಭಾರತದಲ್ಲಿ. ವೇದವ್ಯಾಸರು ಇದರ ವಿವರಣೆಯನ್ನು "ಹರಿವಂಶ" ಪುರಾಣದ , "ವಿಷ್ಣು ಪರ್ವ" ದಲ್ಲಿ 16 ರಿಂದ 24 ಅಧ್ಯಾಯವರೆಗೆ ಹೇಳಿದ್ದಾರೆ .
ಒಮ್ಮೆ ಭೀಷ್ಮಾಚಾರ್ಯರರು ತಂದೆಯಾದ ಶಂತುವಿನ ಶ್ರಾದ್ಧ ಮಾಡಿ ಆಚಾರ್ಯರ ನಿರ್ದೇಶನದಂತೆ ನೆಲಕ್ಕೆ ಪಿಂಡ ಇಡಲು ಮುಂದಾದಾಗ , ಭೂಮಿಯಿಂದ ಆಭರಣ ಸಹಿತ ಕೈಗಳು ಮೇಲೆ ಬಂದವಂತೆ ಆಗ ಭೀಷ್ಮಾಚಾರ್ಯರರು ತಮ್ಮ ತಂದೆಯ ಕೈಗಳನ್ನು ಗುರ್ತಿಸಿದರು , ಅಷ್ಟರಲ್ಲೇ ಅಶರೀರವಾಣಿ ಮೂಲಕ ನಿಮ್ಮ ತಂದೆಯಾದ ಶಂತನು ನಾನು , ಸ್ವತಃ ಬಂದಿದ್ದೇನೆ , ಪಿಂಡಗಳನ್ನು ನೆಲಕ್ಕೆ ಇಡದೆ ನನ್ನ ಕೈಗಳಲ್ಲೇ ಕೊಡು ಅಂದಾಗ , ಭೀಷ್ಮಾಚಾರ್ಯರರು ಶಾಸ್ತ್ರದ ವಿರುದ್ಧ ನಾನು ಈ ಕೆಲಸ ಮಾಡಲಾರೆ , ನನ್ನನ್ನು' ಕ್ಷಮಿಸಿ! ಅನ್ನುತ್ತಾನೆ .ಆಗ ಶಂತನು ,
ಭೀಷ್ಮಾಚಾರ್ಯರರಿಗೆ ನಿನ್ನ ಈ ಶ್ರದ್ಧೆಯಿಂದ ಮಾಡಿದ ಶ್ರಾದ್ಧ ನನಗೆ ಬಹಳ ಮೆಚ್ಚಗೆ ಆಯಿತು .ನಾನು ವರಕೋಡಬೇಕೆಂದಿರುವೆ , ಅಂದಾಗ
ಭೀಷ್ಮಾಚಾರ್ಯರರು ನನಗೆ ಯಾವ ಮೋಹ , ಲೋಭ ಗಳಿಲ್ಲ , ಆದರೆ ನನಗೆ ಶ್ರಾಧ್ದದ ಹಿಂದಿನ ಉದ್ದೇಶ ಹೇಳಿ ಅನ್ನುತ್ತಾನೆ .ಆಗ ಶಂತನು ಹೇಳಲು ನಾನು ಸಮರ್ಥನಲ್ಲಾ ಇಷ್ಟರಲ್ಲೇ ಮಾರ್ಕಂಡೇಯ್ಯ ಋಷಿಗಳು ಬರುತ್ತಾರೆ. ಇವರು ಪರಮಾತ್ಮನ ಪ್ರಳಯ ಕಾಲ ನೋಡಿರುವರು , ಜ್ಞಾನಿಗಳು , ಅವರಿಗೆ ನಿನ್ನ ಉದ್ದೇಶ ಹೇಳಿ ತಿಳಿದುಕೊ ಎಂದು ಅದೃಶ್ಯನಾಗುತ್ತಾನೆ
ಸ್ವಲ್ಪ ಹೊತ್ತಿನಲ್ಲೇ ಮಾರ್ಕಂಡೇಯ್ಯ ಋಷಿಗಳು ಬಂದರು .ತಮ್ಮ ಮನದ ಇಂಗಿತವನ್ನು ಋಷಿಗಳ ಹತ್ತಿರ ಹೇಳಿದಾಗ , ನನಗೆ ಬ್ರಹ್ಮ ದೇವರು ನಿನ್ನ ಮನದ ಇಂಗಿತ ಹೇಳಿ ಕಳಿಸಿರುವರು ಎಂದು ಹೇಳಿದರು .
*ಶ್ರಾದ್ಧ ಏಂದರೇನು ?*
ಪಿತೃ ದೇವತೆಗಳು , ಮೂಲ ಚತುರ್ಮುಖ ಬ್ರಹ್ಮ ದೇವರ ಮಕ್ಕಳು . ದೇವಲೋಕದ ದೇವತೆಗಳು, ಗಂಧರ್ವರು, ಯಕ್ಷರರು, ಕಿನ್ನರರು ಶ್ರದ್ಧೆಯಿಂದ ಮಾಡುವ ಅರ್ಚನೆಯನ್ನು ಪಿತೃಗಳ ಅಂತರ್ಯಾಮಿಯಾದ ಪರಮಾತ್ಮನನ್ನು ಪೂಜಿಸುವುದೇ "ಶ್ರಾದ್ಧ" ಎನ್ನುವರು .
ಮಾನವರು ಮಾಡಿದಂತಹ ಶ್ರಾದ್ಧದಲ್ಲಿ ಅವರು ಕೊಡತಕ್ಕಂತಹ "ಸ್ವಾಧ್ಧಾ" ವನ್ನು ತಗೆದುಕೊಂಡು ಹೋಗಿ, ತಂದೆ , ತಾತಾ, ಮುತ್ತಾತ , ಅಜ್ಜಿ , ಮುತ್ತಜ್ಜಿ ಇವರಿಗೆ ತಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ .ಅವರು ಯಾವುದೇ ಯೋನಿಗಳಲ್ಲಿ ಹುಟ್ಟಿದರು , ಅವರು ಹುಟ್ಟಿದ ಯೋನಿಗೆ ಅನುಸಾರವಾಗಿ ಮಾರ್ಪಾಡಿಸಿ ಅನ್ನವನ್ನು ಮುಟ್ಟಿಸುವ ಕಾರ್ಯ ಈ ಪಿತೃ ದೇವತೆಗಳ ಕೆಲಸ . ಇದೆ ಶ್ರಾದ್ಧದ ಅರ್ಥ ಮತ್ತು ಉದ್ದೇಶ .
*ಶ್ರಾಧ್ದದಲ್ಲಿ 5 ಪ್ರಕಾರಗಳು :-*
1)ಸಪಿಂಡಿಕರಣ ಶ್ರಾದ್ಧ :-
ಇದು ಮರಣದ 12 ನೇ ದಿನದಲ್ಲಿ ಪಿಂಡದಲ್ಲಿ ಕಾಮ ಮತ್ತು ಕಾಲ ಎಂಬ ದೇವತೆಗಳು ಪ್ರವೇಶ ಪ್ರವೇಶ ಮಾಡುತ್ತಾರೆ .
2) ನಾಂದಿ ಶ್ರಾದ್ಧ :-
ಇದು ಮಂಗಳ ಕಾರ್ಯದಲ್ಲಿ ಹಿರಿಯರ ಸ್ಮರಣೆಯಲ್ಲಿ ಮಾಡುವ ಶ್ರಾಧ್ದ. ಸತ್ಯ ಮತ್ತು ವಸು ದೇವತೆಗಳು.
3) ಇಷ್ಟ ಶ್ರಾದ್ಧ :-
ಜ್ಞಾನಿಗಳು , ಯತಿಗಳು ಬಂದಾಗ ಪಿತೃಗಳಿಗೆ ಉದ್ದೇಶವಾಗಿ ಮಾಡುವ ಶ್ರಾದ್ಧ. ಕ್ರತು ಮತ್ತು ದಕ್ಷ ದೇವತೆಗಳು.
4) ನೈಮಿತ್ತಿಕ ಶ್ರಾದ್ಧ :-
ಇದು ಕ್ಷೇತ್ರಗಳಲ್ಲಿ ಮತ್ತು ಪಕ್ಷ ಮಾಸದಲ್ಲಿ ಮಾಡುವ ಶ್ರಾಧ್ದ.ಧೂರಿ ಮತ್ತು ವಿಲೋಚನ ದೇವತೆಗಳು.
5) ಕಾಲ ಶ್ರಾದ್ಧ :-
ಪಿತೃಗಳು ಮರಣ ಹೊಂದಿದ ತಿಥಿ ಯನ್ನು, ಪ್ರತಿ ಸಾ0ವತ್ಸರದಲ್ಲಿ ಬರುವ ಅದೇ ತಿಥಿಗೆ ಮಾಡುವಶ್ರಾದ್ಧ . ಪುರೂರವ ಮತ್ತು ಆದ್ರ೯ವ ದೇವತೆಗಳು .
ಮನುಷ್ಯ ತೀರಿ ಹೋದಮೇಲೆ ಅವರ ಸ್ಮರಣೆಯಲ್ಲಿ ಷಣ್ಣವತಿ ಶ್ರಾಧ್ದ ಮಾಡಬೇಕು . "ಷಣ್ಣವತಿ " ಎಂದರೆ ಸಂಸ್ಕೃತದಲ್ಲಿ 96 ಎಂದರ್ಥ . ಅಂದರೆ ವರ್ಷದಲ್ಲಿ 96 ಶ್ರಾದ್ಧಗಳನ್ನು ಮಾಡಬೇಕು .ವರ್ಷದಲ್ಲಿ ಬರುವ
*ಷಣ್ಣವತಿ ಶ್ರಾದ್ಧಗಳು :-*
1) ಮನ್ವಾದಿಗಳಲ್ಲಿ - 14
2)ಮಹಾಲಯ - 16
3) ಯುಗಾದಿಗಳು - 04
4) ಸಂಕ್ರಮಣ - 12
5) ದರ್ಶಗಳು - 12
6) ವ್ಯತಿಪಾತಗಳು - 13
7) ವೈಧೃತಿಗಳು - 13
8) ತ್ರಿಸ್ರೋಷ್ಟಕಗಳು - 12
ಒಟ್ಟಾರೆಯಾಗಿ ಇವೆ 96 ಷಣ್ಣವತಿ ಶ್ರಾದ್ಧ ಗಳು .
ಆದರೆ ನಾವು ಹಾಗೆ ಮಾಡುವುದಿಲ್ಲ . ಕೇವಲ ವರ್ಷದಲ್ಲಿ ಎರಡು ಶ್ರಾಧ್ದ ಮಾಡುತ್ತೇವೆ .1) ಪ್ರತಿ ಸಂವತ್ಸರದ ತಿಥಿಯಂದು ಮಾಡುವ
"ಕಾಲ್ ಶ್ರಾದ್ಧ " 2) ಇನ್ನು ಪಕ್ಷಮಾಸದಲ್ಲಿ ಮಾಡುವ " ಪಿತೃ ಪಕ್ಷ ".
ಇನ್ನು ಪಕ್ಷ ಮಾಸದ ಪೌರಾಣಿಕ ಹಿನ್ನೆಲೆ ತಿಳಿದುಕೊಳ್ಳೋಣ .
ಯುದ್ಧದಲ್ಲಿ ಅರ್ಜುನ ಕೈಯಿಂದ ಕರ್ಣನ ಮೃತ್ಯುವಾದಾಗ , ಅವನ ಆತ್ಮ ಸ್ವರ್ಗಕ್ಕೆ ಹೋಗುವಾಗ ಅವನಿಗೆ ಕೇವಲ ಚಿನ್ನ , ಬೆಳ್ಳಿ ಸಿಗುತ್ತೆ ಅನ್ನ ಸಿಗುವದಿಲ್ಲ , ಆಗ ಕರ್ಣನು ನೊಂದುಕೊಂಡು ಯಮಧರ್ಮರಾಯನಿಗೆ ಕೇಳುತ್ತಾನೆ . ನಾನು ಭೂಮಿಯಲ್ಲಿದ್ದಾಗ ಬೇಕಾದಷ್ಟು ದಾನ ಧರ್ಮ ಮಾಡಿರುವೆ ನನಗೇಕೆ ಈ ಗತಿ ಎಂದು ಕೇಳಿದಾಗ , ಆಗ ಯಮಧರ್ಮರಾಯ ಹೇಳುತ್ತಾನೆ , ನೀನು ಎಲ್ಲವನ್ನು ದಾನ ಮಾಡಿದ್ದಿಯಾ; ಆದರೆ ಅನ್ನದಾನ ಮತ್ತು ಪಿತೃ ಕರ್ಮ ಮಾಡಲಾರದಕ್ಕೆ ಈ ಸ್ಥಿತಿ ನಿನಗೆ ಬಂದಿದೆ ಎಂದು ಹೇಳುತ್ತಾನೆ . ಮಾತೇನು ಇದಕ್ಕೆ ಪರಿಹಾರ ಅಂದಾಗ , ನಿನಗೆ ಭಾದ್ರಪದ ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ
( ಮಹಾಲಯ ಅಮಾವಾಸ್ಯೆ) ಸಮಯ ಕೊಡುತ್ತೇನೆ , ಅಷ್ಟರಲ್ಲಿ ನೀನು ಅನ್ನದಾನ , ವಸ್ತ್ರದಾನ ಮಾಡಿ ಮತ್ತು ಪಿತೃ ತರ್ಪಣ ಕೊಟ್ಟು ಬಾ ಆಗ ನಿನಗೆ ಸ್ವರ್ಗದಲ್ಲಿ ಅನ್ನ ಸಿಗುತ್ತೆ ಎಂದು ಹೇಳುತ್ತಾನೆ .ಅದೇ ರೀತಿ ಕರ್ಣನು ಈ ಹದಿನೈದು ದಿನಗಳಲ್ಲಿ ಎಲ್ಲ ಕಾರ್ಯ ಮಾಡಿ ಸ್ವರ್ಗಕ್ಕೆ ಹೋದಾಗ ಅನ್ನ ಸಿಗುತ್ತದೆ .
*ಪಕ್ಷಮಾಸ ನಿಯಮ .*
ಈ ನೈಮಿತ್ತಿಕ ಶ್ರಾಧ್ದದಲ್ಲಿ ಬರುವ ಪಕ್ಷಮಾಸದಲ್ಲಿ ಮಾಡುವ ಶ್ರಾಧ್ದವೆ "ಪಿತೃ ಪಕ್ಷ " ಅನ್ನುತ್ತಾರೆ . ಇಲ್ಲಿ ಸರ್ವ ಪಿತೃಗಳನ್ನು ಸ್ಮರಿಸಿ ತರ್ಪಣ ಬಿಡುತ್ತಾರೆ . ಇದರ ದೇವತೆ ಧೂರಿ ಮತ್ತು ವಿಲೋಚನ. ಇಲ್ಲಿ ಮೂರು ತಲೆಮಾರಿನ ಪಿತೃಗಳ ಸ್ಮರಣೆ ಮಾಡಿ ಸಾಮುಹಿಕವಾಗಿ ತಿಲ್,ಜಲ್, ತರ್ಪಣ , ಪಿಂಡ ಬಿಡುವುದೇ ಪಿತೃ ಪಕ್ಷ ಅಥವಾ ಮಹಾಲಯ ಪಕ್ಷ ಎನ್ನುತ್ತಾರೆ .ಈ ಮೂರು ತಲೆಮಾರಿನವರು ಆತ್ಮಗಳು ಇದು ಸೂಕ್ಷ್ಮ ಶರೀರ ಇರುವದರಿಂದ ಭೂಮಿ ಮತ್ತು ಸ್ವರ್ಗ ದ ಮಧ್ಯದಲ್ಲಿ ಇರುತ್ತಾರೆ . ಈ ಶ್ರಾದ್ಧ ಕಾಲದಲ್ಲಿ ಜನಾರ್ಧನ ರೂಪಿಯಾದ ಪರಮಾತ್ಮನು 3555 ರೂಪಗಳಲ್ಲಿ ಇರುತ್ತಾನೆ .
ಹಾಗೆ ಪರಮಾತ್ಮನ ಪಂಚ ರೂಪಗಳಾದ ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ , ವಾಸುದೇವ , ನಾರಾಯಣ ಹೀಗೆ ಐದು ರೂಪಗಳಲ್ಲಿ ಇರುತ್ತಾನೆ .
ಇನ್ನು ಜಗನ್ನಾಥ ದಾಸರು ಹರಿಕಥಾಮೃತಸಾರ "ಭೋಜನ ಸಂಧಿಯಲ್ಲಿನ 21 ನೇ ನುಡಿಯಲ್ಲಿ ಹೇಳಿರುವಂತೆ ಶ್ರಾಧ್ದಗತ ಭಗವದ್ರೂಪಗಳಲ್ಲಿ "ಅನಿರುಧ್ದ ರೂಪಿಯಾದ ಪರಮಾತ್ಮನು ತ್ರಿನವತಿ (93) ರೂಪಗಳಿಂದ ( ವಸುಗಳು - 08 ರೂಪಗಳು, ರುದ್ರರಲ್ಲಿ - 11ರೂಪಗಳು,, ಆದಿತ್ಯರಲ್ಲಿ - 12 ರೂಪ ಗಳು ಹೀಗೆ ಕೂಡಿಸಿ ಒಟ್ಟಾರೆ 31 ರೂಪಗಳನ್ನು ಆಗುತ್ತದೆ . ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ ಎಂಬ 3 ನಾಮಗಳಿಂದ ಗುಣಿಸಿದಾಗ 93 ರೂಪಗಳು ಆಗುತ್ತದೆ .) ಇದಕ್ಕೆ ತ್ರಿನವತಿ ರೂಪ ಎನ್ನುವರು. ಸಂಸ್ಕೃತದಲ್ಲಿ ತ್ರಿನವತಿ ಎಂದರೆ 93 ಎಂದರ್ಥ . ಶ್ರಾಧ್ದ ಮಾಡುವ ಯಜಮಾನನಲ್ಲಿ ಈ ವಸು,ಆದಿತ್ಯ, ರುದ್ರರ ಮೂಲಕ ಪಿತೃಗಳಿಗೆ ಪ್ರದ್ಯುಮ್ನ ರೂಪದಿಂದ ಅನ್ನನಾಗಿರುತ್ತಾನೆ .
ಸಂಕರ್ಷಣ ರೂಪದಿಂದ ದೇವಭಾಗ ಮತ್ತು ಪಿತೃಭಾಗ ಎಂದು ವಿಭಾಗ ಮಾಡುತ್ತಾನೆ . ನಿತ್ಯಾನಂದನಾದ ಭಗವಂತನು ತುರ್ಯ ನಾಮಕನಾಗಿ ವಾಸುದೇವನ ಮೂಲಕ ತಾನು ಉಂಡು , ಸಕಲರಿಗೂ ಉಣಿಸುವನು .
ಇನ್ನು ಭೋಜನ ಸಂಧಿಯ 22 ನೇ ನುಡಿಯಲ್ಲಿ ಹೇಳಿರುವ ಪ್ರಕಾರ
"ಷಣ್ಣವತಿ " ನಾಮಕನಾಗಿ ವಸು , ಮುಕ್ಕಣ್ಣ(ರುದ್ರ), ಭಾಸ್ಕರಲ್ಲಿ ನಿಂತು ತನಗೆ ಶರಣು ಬಂದವರ ಜನರನ್ನು ನಿತ್ಯದಲ್ಲಿ ಕಾಪಾಡ್ತಾ , ಅವರ ಪುಣ್ಯ ಕರ್ಮ ಸ್ವೀಕರಿಸಿ ಪಿತೃಗಳಿಗೆ ಸುಖವ ನೀಡುತ್ತಾನೆ .
*ಭಗವಂತನ ಷಣ್ಣವತಿ(96) ರೂಪಗಳು :-*
ವಸುಗಳು 8 , ಏಕಾದಶ ರುದ್ರರು 11,
ದ್ವಾದಶ ಆದಿತ್ಯರು 12 , ಹಾಗೆಯೇ ಒಟ್ಟಾರೆಯಾಗಿ ಕೂಡಿಸಿದಾಗ 31 ರೂಪಗಳನ್ನು , ವೈಕಾರಿಕ , ತೈಜಸ , ತಾಮಸ , ಎಂಬ ಗುಣಗಳಿಂದ ಗುಣಿಸಿದಾಗ 93 ಬರುತ್ತದೆ , ಮತ್ತೆ ಈ ಮೇಲಿನ 3 ಗುಣಗಳು ಕೂಡಿಸಿದಾಗ ಷಣ್ಣವತಿ(96) ಆಗುತ್ತದೆ . ಹೀಗೆ ಭಗವಂತನನ್ನು ಚಿಂತಿಸಬೇಕು .
ಹೀಗೆ ಸಪ್ತಾನ್ನಗಳಾದ ( 7 ತರಹದ ಅನ್ನ )
*ಮನಸ್ಸು* , *ವಾಕ್ ,* *ಪ್ರಾಣ ,* *ಅನ್ನ *ಬಲಿ , ಹೋಮ* , *ಹಾಲು* *ಇವೆ* *ಸಪ್ತಾನ್ನಗಳು .*
1* )"ಸ್ವಾಹಾ ಮಾಯಾಪತಿ " ವಾಸುದೇವ ಅನ್ನ ಕಲ್ಪಿಸಿ ದೇವತೆಗಳಿಗೆ ಬಡಿಸುವನು.
*2* ) " ಸ್ವಾಧ್ಧಾ ಜಯಾಪತಿ ಸಂಕರುಷಣ ಅನ್ನ ಕಲ್ಪಿಸಿ ಪಿತೃಗಳಿಗೆ ತೃಪ್ತಿ ಪಡಿಸುತ್ತಾನೆ.
*3* ) ಕೃತಿ ಪತಿ ಪ್ರದ್ಯುಮ್ನ ಚತುರ್ವಿಧ ರಸಗಳಲ್ಲಿ ಅನ್ನ ಕಲ್ಪಿಸಿ ಮನುಷ್ಯರಿಗೆ ತೃಪ್ತಿ
ಪಡಿಸುವನು .
*4* ) ಶಾಂತಿ ಪತಿ ಅನಿರುಧ್ದನು ಅನ್ನ ಕಲ್ಪಿಸಿ ಪಶುಗಳಿಗೆ ತೃಪ್ತಿ ಪಡಿಸುವನು .
*5* ) ಮಾಯಾಪತಿ ವಾಸುದೇವನಿಂದ
ಈ ಸಪ್ತಾನ್ನಗಳ ಮೂಲಕ ತಾನು ಉಂಡು ಸಕಲರಿಗೂ ಉಣಿಸುವನು .
ಹಾಗೆಯೇ ಈ ಹದಿನೈದು ದಿನಗಳಲ್ಲಿ ಮುತೈದೆ ತೀರಿ ಹೋದಲ್ಲಿ ನವಮಿ ತಿಥಿಯಂದು " *ಅವಿಧವಾ ನವಮಿ* " ಅಂತ ವಂಶದಲ್ಲಿ ಯತಿ ಆಗಿ ಹೋದವರಿಗೆ ದ್ವಾದಶಿ ಅಂದು " *ಯತಿ ದ್ವಾದಶಿ* "ಅಂತಾ ಅಪಘಾತಗಳಲ್ಲಿ ತೀರಿ ಹೋದವರಿಗೆ ಚತುರ್ದಶಿ ತಿಥಿಯಲ್ಲಿ
" *ಘಾತ ಚತುರ್ದಶಿ* " ತರ್ಪಣ ನೀಡಬೇಕಾಗುತ್ತದೆ . ಈ ಮಾಸದೊಳೊಗೆ ಅನಾನುಕೂಲತೆಯಿಂದ ಆಚರಿಸಲಾಗದಿದ್ದರೆ ತುಲಾ ಮಾಸ ಮುಗಿಯುವದೊರೊಳಗೆ
ಆಚರಿಸಬೇಕು .
ಹೀಗೆಸರ್ವಾಂತರ್ಯಾಮಿಯಾದ
ಪರಮಾತ್ಮನು ಎಲ್ಲದರಲ್ಲೂ ಇದ್ದು ಕಾರ್ಯ ಮಾಡಿಸುವನು . ಅವರಅವರ ಸುಕರ್ಮವನ್ನು ಸ್ವೀಕರಿಸಿ ಸಕಲ ಜೀವರಾಶಿಗಳಿಗೂ ಮತ್ತು ಪಿತೃಗಳಿಗೂ ಸುಖವಿನಿತ್ತು ಎಲ್ಲ ಕಾಲದಲ್ಲಿಯೂ ಕಾರುಣ್ಯ ಸಾಗರನಾದ ಪರಮಾತ್ಮಾ ಕಾಯುತ್ತಿರುವನು .
🖋 ಪ್ರಿಯಾ ಪ್ರಾಣೇಶ ಹರಿದಾಸ
(ಆದರ್ಶ ನಗರ, ವಿಜಯಪುರ)
Comments
Post a Comment