ಗಣೇಶನ ಹಾಡು:





https://publictoday.in/4738/ 

#ಗೌರಿ_ಗಣೇಶನಿಗೆ_ಪದಪುಷ್ಪಗಳು. 

ಲೋಕವಂದಿತ ಮೊದಲ ಪೂಜಿಪ
ಗೌರಿನಂದನ ಗಣಪನಿತ / ಪ

ದುರ್ವಿಷಯ ಭಗ್ನಗೈಸುವ ವಿಘ್ನೇಶ್ವರನಾದೆ
ಗಣಗಳ ನಾಯಕ ಸ್ತುತ್ಯದಿ  ವಿಶ್ವಂಭರನಾದೆ

ಭೂತಾಕಾಶಕೆ ನೀ ಅಭಿಮಾನಿ ದೇವತೆಯಾದೆ
ಉದ್ಧಟರನು ದಿಟ್ಟದಿ ಮರ್ಧಿಸಿ ಚಾರುದೇಷ್ಣನಾದೆ

ಪಾಶಾಂಕುಶಧರ ಮೊರದಗಲ ಕಿವಿ 
ರಕ್ತವರ್ಣದಿ ಶೋಭಿತನೆ
ಸರ್ಪವ ಕಟಿಸೂತ್ರ ಮಾಡಿ ಮೂಷಿಕ ವಾಹನ ಗಮನನೆ

ಧರ್ಮರಾಜ ಪೂಜಿಸಿದ ಏಕದಂತ ವಕ್ರತುಂಡನೆ
ಪ್ರಿಯಕೃಷ್ಣನ ನಂಬಿ ಬರುವ ಭಕ್ತರ ಸಂಕಟಚತುರ್ಥಿಗನೆ

🖋#ಪ್ರಿಯಾ_ಪ್ರಾಣೇಶ_ಹರಿದಾಸ

Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ