ಲೇಖನ :- ಒಳ್ಳೆಯ ಗುಣಗಳನ್ನು ಅಕ್ಷಯ ಮಾಡಿಕೊಳ್ಳೊಣ
ಲೇಖನ :- ಒಳ್ಳೆಯ ಗುಣಗಳನ್ನು ಅಕ್ಷಯ ಮಾಡಿಕೊಳ್ಳೊಣ
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ( ತದಿಗೆ)
" *ಅಕ್ಷಯ ತೃತೀಯಾ* "ಆಚರಿಸುತ್ತಾರೆ.
"ಅಕ್ಷಯ' ಎಂದರೆ ವೃದ್ಧಿಯಾಗು ಎಂದರ್ಥ. ಎಲ್ಲರೂ ಶ್ರೇಷ್ಠವಾದ , ವಿಶೇಷವಾದ ಕೆಲಸವನ್ನ ಕೈಗೊಳ್ಳುತ್ತಾರೆ. ಏಕೆಂದರೆ ಶುಭಕಾರ್ಯಗಳು ವೃದ್ಧಿ ಆಗುತ್ತಾ ಹೋಗುತ್ತವೆ ಎಂದು , ಈ ದಿನ ವಿಶೇಷವಾಗಿ ಬೆಳ್ಳಿ , ಬಂಗಾರ, ಇಂದು ವಿಶೇಷವಾಗಿ ಖರೀದಿ ಮಾಡುತ್ತಾರೆ. ಇಡಿ ದಿನ
*"ಸಾಡೇ ತೀನ್*"ಮುಹೂರ್ತ ಇರುತ್ತದೆ.
ಈ ದಿನದಲ್ಲಿ ಸೂರ್ಯ- ಚಂದ್ರರರು ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದಿರುತ್ತಾರೆ.
ಇದು ಶುಭ ಕಾರ್ಯ ಮಾಡಲಿಕ್ಕೆ ಶುಭಕರವಾದ ದಿನ .ಅಂತೆಯೇ ಜನರು ಇಂದು ಅಕ್ಷರಾಭ್ಯಾಸ ,
ಮದುವೆ , ಉಪನಯನ , ಗೃಹ ಪ್ರವೇಶ ಇನ್ನು ಅನೇಕ ವ್ಯವಹಾರಗಳು , ಕೆಲಸಗಳು ಮಾಡುತ್ತಾರೆ.
ಇಡೀ ಸಂವತ್ಸರಲ್ಲಿ ನಾಲ್ಕು ಬಾರಿ " ಸಾಡೇ ತೀನ"ಮೂಹರ್ತ ಇರುತ್ತೆ.
1) ಯುಗಾದಿ
2)ಅಕ್ಷಯ ತೃತೀಯಾ
3) ವಿಜಯ ದಶಮಿ
೪)ದೀಪಾವಳಿ ಪಾಡ್ಯ(ಈ ದಿನ ಅರ್ಧ ದಿನ ಸಾಡೇ ತೀನ್ ಮೂಹುರ್ತ ಇರುತ್ತದೆ)
ಇದಕ್ಕೆ ಬಹಳ ಪೌರಾಣಿಕ ಹಿನಲ್ಲೆಗಳು ಇವೆ .
*ಪೌರಾಣಿಕ ಹಿನ್ನೆಲೆ*
೧)ಕೃತ ಯುಗ ಪ್ರಾರಂಭ
೨) ಶ್ರೀ ಮಹಾವಿಷ್ಣು ಪರುಷರಾಮರಾಗಿ ಜನಿಸಿದ ದಿನ.
೩)ಬಲರಾಮರು ಜನಿಸಿದ ದಿನ.
೪)ಶ್ರೀ ಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆ ಕೊಟ್ಟ ದಿನ.
೫) ಗಂಗೆಯು ಸ್ವರ್ಗದಿಂದ ಧರೆಗಿಳಿದ ದಿನ
೬)ಸಂಪತ್ತಿನ ಒಡೆಯನಾದ ಕುಬೇರ ಲಕ್ಷಿಮಿಯ ಪೂಜೆ
ಮಾಡಿದ ದಿನ.
೭)ಸೀತೆಯು ತನ್ನ ಪವಿತ್ರತೆಯನ್ನ ಅಗ್ನಿ ಪರೀಕ್ಷೆಗೆ ಒಳಪಡಿಸಿದ ದಿನ .
೮) ಲಂಕಾ ನಗರವು ಮೊದಲು ಅಕ್ಷಯ ತೃತೀಯಾದಂದು ಕುಬೇರನು ವಿಶ್ವಕರ್ಮರಿಂದ ನಿರ್ಮಾಣ ಮಾಡಿಸಿದ್ದನು. ತದನಂತರ ಅಣ್ಣನಾದ ರಾವಣನು ರುದ್ರ ದೇವರ ತಪಸ್ಸು ಮಾಡಿ ವರ
ಪಡಿದಿದ್ದನು , ಹಾಗೆಯೇ ಬಲಾಢ್ಯ ಇದ್ದರಿಂದ ಕುಬೇರನನ್ನು ಉತ್ತರ ದಿಕ್ಕಿಗೆ ಓಡಿಸಿ ತಾನು ವಶಪಡಿಸಿ ಕೊಂಡನು. ಮುಂದೆ ಇದು ಲಂಕಾ ಬದಲಾಗಿ ಸ್ವರ್ಣ ಲಂಕೆ ಆಯಿತು. ರಾಮಾಯಣದಲ್ಲಿ ಉಲ್ಲೇಖ ಇದೆ.
೯) ಇಂದು ಅಣ್ಣ ಜಗದ ಜ್ಯೋತಿ ಬಸವಣ್ಣ ಹುಟ್ಟಿದ ದಿನ "ಬಸವ ಜಯಂತಿ"ಯನ್ನಾಗಿ
ಆಚರಿಸುವರು.
ಈದಿನ ಜನರು ಹೆಚ್ಚಾಗಿ ಬೆಳ್ಳಿ , ಬಂಗಾರ ತಗೆದು ಕೊಳ್ಳುತ್ತಾರೆ , ಒಳ್ಳೆಯದಾಗುತ್ತೆ ಅಂತಾ.
ಅವಲೋಕನ :-
ನಾವು ಮನುಜರೆಲ್ಲ ಎಲ್ಲ ಭಾರತೀಯ ಸಂಪ್ರದಾಯ , ಹಬ್ಬ ಹರಿದಿನ ಆಚರಿಸೋಣ ಅದರ ಜೊತೆ ಅಲ್ಲಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ .
ಅಂದರೆ. ಮಾನವ ಜನ್ಮ ಹುಟ್ಟಿದಕ್ಕೆ ಸಾರ್ಥಕವಾಗುತ್ತದೆ. ಆಗ ಶಾಂತಿ , ನೆಮ್ಮದಿ ನೆಲಿಸಿ ಪ್ರಗತಿದತ್ತ ಸಾಗುತ್ತದೆ . ಇಂದು ಅಕ್ಷಯ ತೃತೀಯಾ ನಾವೆಲ್ಲರೂ ಜೀವನಕ್ಕೆ ಅವಶ್ಯವಾಗಿರುವ ನಮ್ಮೆಲ್ಲರನ್ನು ಸಲುಹುತಿರುವ ಆ ದೇವರನ್ನ ನೆನೆಯೋಣ , ಸಾಧನಾ ಶರೀರದಿಂದ ಅವನ ಪೂಜಿಸೋಣ .
ದ್ವೇಷ ಭಾವಗಳನ್ನು ತೊರೆದು , ಪ್ರೀತಿಯಿಂದ ಸೌಹಾರ್ದತೆಯಿಂದ ಇದ್ದು . ಜ್ಞಾನ , ಭಕ್ತಿ , ವೈರಾಗ್ಯ ಬೇಡಿಕೊಂಡು , ನಿತ್ಯದಲ್ಲಿ ಅವನ ಉಪಾಸನೆ ಮಾಡ್ತಾ , ಆ ದೇವನಿಗಾಗಿ ದಿನದ ಸ್ವಲ್ಪ ಸಮಯ ಪ್ರಾರ್ಥಿಸಿ , ನೀ ಕೊಟ್ಟ ಜನ್ಮ ನಿನಗೆ ಸೇವೆ ಮಾಡಲು ಅವಕಾಶ ಕೊಡು ಎಂದು ಬೇಡಿಕೊಳ್ಳೋಣ .
ದುರ್ಗುಣಗಳನ್ನು ಬಿಟ್ಟು, ಇಂತಹ ಒಳ್ಳೆಯ ಗುಣಗಳನ್ನ ಬೇಡುತ್ತಾ ಜೀವನ ಅಕ್ಷಯ ಮಾಡಿಕೊಳ್ಳೋಣ.
✍️ ಪ್ರಿಯಾ ಪ್ರಾಣೇಶ ಹರಿದಾಸ
Comments
Post a Comment