ರಾಜ ರಾಜ ಶ್ರೀಪಾದರಾಜರ ಚರಿತ್ರೆ
ಶ್ರೀಪಾದರಾಜರು (೧೪೧೩- ೧೫೦೪)
"ನಮಃ ಶ್ರೀಪಾದರಾಜಾಯ/ನಮಸ್ತೆ ವ್ಯಾಸಯೋಗಿನೇ/
ನಮಃ ಪುರಂದರಾರ್ಯಾಯ
ವಿಜಯರಾಜಾಯ ನಮಃ/
🌸🌸🌸🌸🌸🌸🌸🌸🌸
ಇಂದು ಶ್ರೀಪಾದರಾಜರ ಆರಾಧನೆ ನಿಮಿತ್ಯ ಲೇಖನ
🙏🙏🙏🙏🙏🙏🙏🙏🙏
ಮದ್ವಾಚಾರ್ಯರಿಂದ ಹುಟ್ಟಿದ ಈ ದಾಸ-ವ್ಯಾಸ ಸಾಹಿತ್ಯ ನರಹರಿ ತೀರ್ಥರು ಮತ್ತು ಶ್ರೀಪಾದ ರಾಜರಿಂದ ಬೆಳೆಯಿತು. ಹರಿದಾಸ ಸಾಹಿತ್ಯದ ಪಿತಾಮಹರು ಶ್ರೀಪಾದರಾಜರು.
ಶ್ರೀಪಾದರಾಜ ಮಠವು ಪದ್ಮನಾಭ ತೀರ್ಥರ ಪರಂಪರೆಯಲ್ಲಿ ಬಂದ
ಮಠ. ಆದರೆ ಹೆಚ್ಚು ಪ್ರಸಿದ್ಧಿ
ಪಡೆದಿದ್ದು "ಶ್ರೀಪಾದರಾಜ ಮಠ"
ಎಂದೇ ಪ್ರಸಿದ್ದಿಗೊಂಡಿದೆ. ಶ್ರೀಪಾದರಾಜರ ಕೀರ್ತಿ ಮತ್ತು ಇವರ ಮಹಿಮೆ ತಿಳಿಯುತ್ತದೆ.
"ರಂಗವಿಠಲ್" ಎಂಬ ಅಂಕಿತದಿಂದ
ದಾಸ ಸಾಹಿತ್ಯದ ಹೆಮ್ಮರದ ಬೀಜವನ್ನು ಬಿತ್ತಿದವರು.
ಶ್ರೀಪಾದರಾಜರು ಗೋಪಿಗೀತಾ, ವೇಣುಗೀತಾ, ಭ್ರಮರಗೀತಾ, ಶ್ರೀ ಲಕ್ಷ್ಮೀ ನರಸಿಂಹ ಪ್ರಾರ್ದುಭಾವ ದಂಡಕ, ರುಕ್ಮಿಣೀ-ಸತ್ಯಭಾಮ ವಿಲಾಸ ಮತ್ತು ಮಧ್ವನಾಮ ಎಂಬೆಲ್ಲ ಕನ್ನಡ ಕಾವ್ಯಗಳನ್ನು ರಚಿಸಿದ್ದಾರೆ.
ಕಾಲಿಗೆ ಗೆಜ್ಜೆ ಕಟ್ಟಿ, ಪೂಜಾ ಸಮಯಗಳಲ್ಲಿ ಹಾಡಿಕೊಂಡು ನರ್ತಿಸಿ ಭಗವಂತನ ವೈಭವನ್ನು
ಕೀರ್ತನೆ ರಚಿಸಿ ಸ್ತುತಿಸಿದವರು.
ಭಗವಂತನನ್ನು ಒಲಿಸಿಕೊಳ್ಳ ಬೇಕಾದರೆ ಒಂದೇ ಒಂದು ಮಾರ್ಗ. ಅದು ಸಂಗೀತ- ಗಾನ- ಇದರಿಂದ ಮಾತ್ರವೇ ದೇವರು ಒಲಿಯಲು ಸಾಧ್ಯ ಎಂದರು ಶ್ರೀಪಾದರಾಜರು. ಕೀರ್ತನೆಗಳು ಬರಿಯ ವೇದಾಂತವಲ್ಲ, ಭಕ್ತಿರಸ ತುಂಬಿದ ಭಗವಂತನ ವರ್ಣನೆ. ಸಂಸ್ಕ್ರತದಲ್ಲಿದ್ದ ಎಲ್ಲ ವೇದ ಉಪನಿಷತ್ತಗಳ ಸಾರವನ್ನು , ಮಾತ್ರಭಾಷೆಯಾದ ಕನ್ನಡ ಸಾಹಿತ್ಯ ದಲ್ಲಿ ರಚಿಸಿದರೆ, ಅದು ಜನರ ಹೃದಯ ತಲುಪುವದು ಎಂದು
ತಿಳಿದಿದ್ದರು.
ಭಗವದಾಜ್ಞೆಯಂತೆ ೬೪ ಬಗೆಯ ನೈವೇದ್ಯ ತೋರಿಸಿ, ಸ್ವೀಕರಿಸು ತ್ತಿದ್ದರು.ಸರ್ವೋತ್ತಮ ಭಗವಂತನಿಗೆ ಮುತ್ತಿನ ಕವಚ,ಹಾರ,ತುರಾಯಿ, ನವರತ್ನದಾಭರಣ ಸಮರ್ಪಿ ಸುತ್ತಿದ್ದರು.
ಇಂಥಹ ಮಹಾಮಹಿಮರಾದ ರಾಜರಾದ ಶ್ರೀಪಾದರಾಜ ಮಹಿಮೆಯನ್ನು ಮತ್ತು ಚರಿತ್ರೆಯನ್ನು
ತಿಳಿಯೋಣ.
#ಜೀವನ_ಚರಿತ್ರೆ :-
ಕಣ್ವ ತೀರದ ಅಬ್ಬೂರಿನಲ್ಲಿದ್ದ ಶೇಷಗಿರಿ ಮತ್ತು ಗಿರಿಯಮ್ಮ ದಂಪಂತಿಗಳ ಪುತ್ರನೇ, ಲಕ್ಷ್ಮಿ ನಾರಾಯಣ ಇವರೇ ಮುಂದೇ ಶ್ರೀಪಾದರಾಜರಾದವರು.
ಒಮ್ಮೆ ಸ್ವರ್ಣವರ್ಣತೀರ್ಥರು ಅಬ್ಬೂರಿಗೆ ಬರುತ್ತಿದ್ದಾಗ , ಊರ ಹೋರಗೆ ಒಬ್ಬ ಪುಟ್ಟ ಬಾಲಕ ಆಡುತ್ತದ್ದನ್ನು ಕಂಡು , ಹತ್ತಿರಕ್ಕೆ ಕರೆದು ಊರು ಬಹಳ ದೂರ ಇದೆಯಾ ? ಎಂದು ಕೇಳಿದರು.
ಆ ಬಾಲಕ "ನನ್ನ ಹಾಗೂ ಸೂರ್ಯನನ್ನು ನೋಡಿ ತಿಳಿಯಿರಿ,
ಊರು ಎಷ್ಟು ದೂರ ಇದೆಯೆಂದು ನಿಮಗೆ ತಿಳಿಯುತ್ತದೆ; ಥಟ್ಟನೆ ಹೇಳಿದನು.
ಬಾಲಕನ ಕುಶಾಗ್ರಮತಿ ಮಾತನ್ನು ಕಂಡು ಬೆರಗಾದರು.ಹಾಗೇ ಆ ಬಾಲಕ ಹೇಳಿದ ಮಾತಿನ ಮರ್ಮ ಅರಿತರು. ಊರು ಹತ್ತಿರದಲ್ಲಿಯೇ ಇದೆ ಎಂದು ತಿಳಿದರು. ಆಗಲೇ ಸ್ವರ್ಣವರ್ಣ ತೀರ್ಥರು , ಈ ಬಾಲಕನನ್ನೇ ತಮ್ಮ ಮುಂದಿನ
ಮಠಾಧಿಪತಿಯನ್ನು ಮಾಡಬೇಕೆಂದು ನಿಶ್ಚಯಿಸಿದರು.
ಸುವರ್ಣತೀರ್ಥರು ಊರು ತಲುಪಿದ ನಂತರ ಆ ಬಾಲಕನ ವಿಚಾರಾರ್ಥವಾಗಿ ಪುರುಷೋತ್ತಮ ತೀರ್ಥರನ್ನು ವಿಚಾರಿಸಿ, ಹೆತ್ತವರ ಒಪ್ಪಿಗೆ ಪಡೆದು ಆ ಬಾಲಕನಿಗೆ ಉಪನಯನ ಮಾಡಿದರು.
" ಲಕ್ಷ್ಮಿನಾರಾಯಣ ತೀರ್ಥ" ಎಂದು
ನಾಮಕರಣ ಮಾಡಿ ಸನ್ಯಾಸ ದೀಕ್ಷೆವಿತ್ತರು. ಇವರ ಅಧ್ಯಯನವನ್ನು
ವಿಭುಧೇಂದ್ರರಲ್ಲಿ ಮಾಡಿಸಿದರು.
ರಾಯಚೂರ ಜಿಲ್ಲೆಯಲ್ಲಿ ಸ್ಥಳವಾದ ಕೃಷ್ಣ ತೀರದಲ್ಲಿರುವ ಪ್ರಸಿದ್ಧ ಕಾರ್ಪರಕ್ಷೇತ್ರವಾದ ನರಸಿಂದ ದೇವರ ಸನ್ನಿಧಾನದಲ್ಲಿ
ಉತ್ತರಾಧಿಮಠಾಧಿಶರಾದ ಶ್ರೀ ರಘುನಾಥ ತಿರ್ಥರು ಆಗಮಿಸಿದ್ದರು.
ಇವರ ಸಭೆಯಲ್ಲಿ ಶ್ರೀಮನ್ ನ್ಯಾಯಸುಧಾಗೆ ವ್ಯಾಖಾನ ಬರೆದ , ಮಹಾಜ್ಞಾನಿಗಳು ಮಾಡುವ ಅನುವಾದ ಅತ್ಯಧ್ಬುತ ಕಂಡು ಆನಂದರಾದರು.
ವಿದ್ಯೆಯ ಜೊತೆ ವಿನಯವು ನೊಡಿ, ತಮ್ಮ ದಿವ್ಯ ದೃಷ್ಟಿಯಿಂದ , ಶ್ರೀ ಲಕ್ಷ್ಮಿ ನಾರಾಯಣ ತೀರ್ಥರನ್ನು ನೋಡಿದರು. ಜ್ಞಾನ ಸನ್ಯಾಸ ಧರ್ಮದ ಜೊತೆಗೆ ಭೋಗ ಪ್ರಾರಬ್ದ ಕಂಡಿತು. ಹೀಗಾಗಿ ವಿರಕ್ತರಾದ ಶ್ರೀಲಕ್ಷ್ಮಿ ನಾರಾಯಣ ತೀರ್ಥರಿಗೆ
ಭುಕ್ತಿಯಲ್ಲಿ ರಾಜಯೋಗವಿದ್ದದ್ದು ಕಂಡಿತು. ಶ್ರೀ ಲಕ್ಷ್ಮಿ ನಾರಾಯಣ ತೀರ್ಥರಿಗೆ " ಶ್ರೀ ಪಾದರಾಜರು" ಎಂದು ಬಿರುದವನ್ನಿತ್ತರು.ಮುಂದೇ ಇದೇ ಬಿರುದಾಂಕಿತದಿಂದ ಪ್ರಸಿದ್ದಿ ಪಡೆದರು.
ಒಮ್ಮೆ ಪಾಂಡುರಂಗನ ಸುಕ್ಷೇತ್ರವಾದ
ಪಂಡರಾಪುರಕ್ಕೆ ಶಿಷ್ಯ ಸಮೇತರಾಗಿ
ದಿಗ್ವಿಜಯ ಯಾತ್ರೆ ಕೈಗೊಂಡರು.
ಪಾಡುರಂಗ ದರ್ಶನವಾಯಿತು.ಇವರ ಭಕ್ತಿಗೆ ಮೆಚ್ಚಿ ರುಕ್ಮಿಣಿ ಮತ್ತು ಸತ್ಯಭಾಮಾ ಸಮೇತ ರಂಗ ವಿಠಲ್ ಮೂರ್ತಿ ಸಿಕ್ಕಿತು. ಆನಂದಕ್ಕೆ ಪಾರವೇ ಇಲ್ಲ.ಹೀಗೆ ರಂಗವಿಠಲ್ ಸ್ಮರಿಸುತ್ತಾ "ರಂಗವಿಠಲ್" ಅಂಕಿತದಿಂದ ಸಾಹಿತ್ಯವನ್ನು ರಚಿಸಿದರು. ಇವರು "ರಂಗವಿಠಲ್"
ಮೂರ್ತಿ ಸಿಗುವ ಮುನ್ನ " ಗೋಪಿನಾಥ" ಎಂಬ ಅಕಿಂತದಿಂದ ಸಾಹಿತ್ಯ ರಚಿಸುತ್ತಿದ್ದರು.
"ರಂಗವಿಠಲ್" ಅಂಕಿತದಿಂದ
ಮದ್ವನಾಮ,ಭ್ರಮರಗೀತೆ,
ಗೋಪಿಗೀತೆ,ಕೀರ್ತನೆಉಗಾಭೋಗ,ನೃಸಿಂಹ ದಂಡಕ ರಚಿಸಿದರು.
ಮುಳಬಾಗಿಲನ್ನು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡು , ವ್ಯಾಸರಾಜರಂಥ
ಮಹಾ ಗುರುಗಳನ್ನು ನೀಡಿದರು.
ದಾಸಸಾಹಿತ್ಯ ಪರಂಪರೆಯನ್ನ ಬೆಳೆಸಿ
ಅನೇಕ ಮಂದಿಗ ಶಿಷ್ಯತ್ವ ಕೊಟ್ಟು, ಮತ್ತು ದಾಸರಾದಿ ಅನೇಕರನ್ನು ಪೋಷಿಸಿದರು.
ಇನ್ನು ಇವರ ಮಹಿಮೆ ಬಹಳ ಅಪಾರ , ಅಂಗಾರದಲ್ಲಿ ನರಸಿಂಹ ದೇವರನ್ನು ಚಿತ್ರಿಸಿ ಒಲಿಸಿಕೊಂಡರು.
ನರಸಿಂಹವನ್ನು ಸ್ತುತಿಸುವ "ನೃಸಿಂಹ ದಂಡಕ" ರಚಿಸಿದರು. ಗಂಗೆಯನ್ನು ಸ್ತುತಿಸಿ ಗಂಗೆ ಉಧ್ಬವಿಸಿ ನರಸಿಂಹ ತೀರ್ಥ ನಿರ್ಮಿಸಿದರು.
ತಮ್ಮ ತಪಃ ಬಲದಿಂದ ಚಂದ್ರಗಿರಿ ರಾಜ ಸಾಳ್ವ ನರಸಿಂಹನಿಗೆ ಬ್ರಹ್ಮಹತ್ಯ ದೋಷ ಪರಿಹರಿಸಿದರು.
ಇದನ್ನು ಸಂಶಯಿಸಿದ ಜನರಿಗೆ
ಶಂಖೋದಕದಿಂದ ಬಟ್ಟೆಯ ಕಲ್ಮಶ ಕಳೆದು ತೋರಿಸಿದರು. ಸರ್ಪಭಾಷೆಯಿಂದ ಮಾತಾಡಿ ಅಜಗರನನ್ನು ಕಳಿಸಿ ವ್ಯಾಸರಾಜರಿಗೆ
ಅಪಮೃತ್ಯು ಪರಿಹರಿಸಿದರು.
ಚಿಕಲಪರವಿಯಲ್ಲಿ ಅಶ್ವಥನರಸಿಂಹ
ದೇವರನ್ನು ಪ್ರತಿಷ್ಟಾಪಿಸಿದ್ದಾರೆ.
ತಮ್ಮ ಸಾಧನ ಭೂಮಿಯಾದ ಮುಳಬಾಗಿಲಿನಲ್ಲಿ ಜೇಷ್ಠ ಚತುರ್ದಶಿ ಯಂದು ವೃಂದಾವನ ಪ್ರವೇಶ ಮಾಡಿದರು.
ದಾಸ ಸಾಹಿತ್ಯದ ಜ್ಯೋತಿಯನ್ನು ಬೆಳಗಿಸಿದ ಮಹಾನ್ ರಾಜರು
ಶ್ರೀಪಾದರಾಜರು.
🖋 ಪ್ರಿಯಾ ಪ್ರಾಣೇಶ ಹರಿದಾಸ
Comments
Post a Comment