ಲೇಖನ :- ಕರೋನಾ ‌ಸುಂಟರಗಾಳಿ




"ಕರೋನಾ" ಎಂಬ ಸುಂಟರಗಾಳಿ ಒಂದುವರೇ ವರುಷದಿಂದ ಸುತ್ತಿ ಸುತ್ತಿ ಬಿಸಿ , ಜನರ ಜೀವನ ಅಲ್ಲೋಲ್ಲಕಲ್ಲೊಲ್ಲ ಮಾಡಿದೆ. ಅಹಂಕಾರದಿಂದ ಹೋಂಟಿದ್ದ  ನಾನೇ ಸಕಲ ಬಲ್ಲವ , ನನ್ನ ಮುಂದೆ ಯಾರು ಇಲ್ಲ ಅಂತ ವಿಜ್ಞಾನದ ಅಹಂಕಾರ, ದೇವರೆ ಇಲ್ಲ ಅನ್ನುವ ಜೀವಿಗಳಿಗೆ , ಹಾಗೂ ಅಟ್ಟಾಸದಿಂದ ಮೆರೆಯುತ್ತಿದ್ದ ಧನವಂತರು.ಆಚಾರ ವಿಚಾರ ಬಿಟ್ಟು ಗಳಿಕೆ ಬೆನ್ನ ಹತ್ತಿ ಹೊಂಟಿದ್ದ ಜೀವಿಗಳಿಗೆ ;.....
ಭಗವಂತ ಕೊಟ್ಟ  ಕರೋನಾ ಎಂಬ ಸುಂಟರ ಗಾಲಿಯ ಪೆಟ್ಟು. ಕಲಿಸಿದ ಜೀವನ‌ಪಾಠ.

ದೊಡ್ಡ ನಗರಗಳಲ್ಲಿ ಸೇರಿದಂತೆ ಎಲ್ಲ ಜನರು ಧಾವಂತ ಗಳಿಕೆಯಲ್ಲಿ, ಊರಲ್ಲಿರುವ ತಂದೆತಾಯಿಯ ಭೇಟೆಗೆ ಸಹ ಬರಲು ನೆಪ ಹೇಳುತ್ತಿದ್ದರು. ಒರ್ಷಕಕೊಂದು ಸಾರಿ ಬರುವ ಮನೆದೇವರಜಾತ್ರೆ ಆಗಲಿ ಅಥವಾ ಹಬ್ಬಕ್ಕಾಗಲಿ ಬರುವುದನ್ನೆ ಬಿಟ್ಟಿದ್ದರು .ಮನೆ ಹಿರಿಯರು ಬರಲು ಹೇಳಿದರೆ, ನಿಮಗೆ ಕಂಪನಿ ಕಿರಿಕಿರಿ ಇರ್ತದೆ, ಗೊತ್ತಾಗುದಿಲ್ಲ ಅಂತ ಅವರನ್ನ
ದಬಾಯಿಸುತ್ತಿದ್ದರು. ಈಗ ಎಲ್ಲವು ವರ್ಕ
ಹೋಮ ಆದಾಗಿನಿಂದ, ಎಲ್ಲರೂ
ತಮ್ಮ ಹುಟ್ಟುರುಗಳಿಗೆ ತೆರಳಿದ್ದಾರೆ
ಈಗ ಸಂಭಂಧ , ಭಾವನೆಗಳ ಅರಿವಾಗ್ತಿದೆ.

ಇನ್ನು ಬಡುವರು ಮತ್ತು ಮಧ್ಯಮ ವರ್ಗದವರಿಗೆ ಗಳಿಸಿದ ಹಣ ಭವಿಷ್ಯಕ್ಕಾಗಿ ಊಳಿಸದೇ.. ದುಂದು
,ಸಾಲಸೋಲ ಮಾಡಿ ಆಡಂಬರತೆ ತೋರಿಸುತ್ತಿದ್ದರು . ಈ ಕರೋನಾದಿಂದ ಅವರು‌ ಪಾಠ ಕಲಿತರು . ಭವಿಷ್ಯಕ್ಕಾಗಿ ಹಣ ಕೂಡಿಡಬೇಕು.ನಾವು ಮಾಡುವ  ಕೆಲಸದ ಕಂಪನಿ ಅಥವಾ ಇನ್ಯಾವುದೇ ಕೆಲಸ ಶಾಶ್ವತವಲ್ಲ. ಜೀವನ ಅಸ್ಥಿರತೆಯಲ್ಲಿ ಹಣದ ಅವಶ್ಯಕತೆ ಗೊತ್ತಾಗಿದೆ.

ಇನ್ನು ನಮ್ಮ ಭಾರತದ ಬೆನ್ನ ಎಲಬು ಆದ ಕೃಷಿಯನ್ನು ತ್ಯಜಿಸಿ , ಕಲಿತವರು ಕಲಿಯಲಾರದವರು , ಸೋಮೆರಿತನದಿಂದ ಹೊಲಮನೆ  ನಾಲ್ಕೈದು  ಅಂಕಿಯ ಸಂಬಳಕ್ಕೆ ಆಸೆ ಪಟ್ಟು ; ಅದೇ ವೇಳೆ ಹೊಲದಲ್ಲಿ ದುಡಿದರೆ  ಲಕ್ಷ ಲಕ್ಷ ಸಂಪಾದಿಸಬಹುದು ಎಂದು ಮರೆತು ನಗರಕ್ಕೆ ವಲಸೆಹೋಗಿದ್ದರು.ಈಗ‌ ಮತ್ತೇ ಎಲ್ಲರೂ
ಕೃಷಿಕಡೆ ಗಮನ ಹರಿಸಿದ್ದಾರೆ.

ಒಟ್ಟಾರೆ ಈ ಕರೋನಾದಿಂದ. ಬದುಕಿನ ಅಸ್ಥಿರತೆ ಮತ್ತು ಕಾಲನ‌ ಮುಂದೆ ನಮ್ಮ ಆಟ ಏನು‌"ಇಲ್ಲ ಅಂತ ಅರಿತರು. ಬಡವ ಮತ್ತು ಶ್ರೀಮಂತ ಎಂಬ ಭೇಧಭಾವ‌ ಮಾಡದೇ ಎಲ್ಲರಿಗೂ ಸಮನಾಗಿ ಕಾಡುತ್ತಿದೆ. ಮೊದಲಿನ ಹಾಗೇ ನಮ್ಮ
ಹಳೇ ಕಾಲ ಮರಳಿ ಬಂದಿದೆ.
ಇನ್ನಾದರೂ  ನಾವು ಮನುಜರು ಮಾನವೀಯತೆಯಿಂದ ಇದ್ದು ; ಅಂತಸ್ತು ನೋಡಿ , ಮೂಖ ನೋಡಿ ಮೊಳ ಹಾಕದೇ ಎಲ್ಲರ ಜೊತೆಯಲ್ಲಿ ಜಾತಿ ,ಶ್ರೀಮಂತಿಕೆ, ಅಂತಸ್ತು,ಸುಲಿಗೆ, ಅನಾಚಾರ ಬೀಡಬೇಕು. ಒಂದು ಒಳ್ಳೆಯ  ಸುವ್ಯವಸ್ಥೆಯ , ಆದರ್ಶ ಗುಣಗಳನ್ನು ಬೆಳೆಸಿಕೊಂಡು ಸ್ವಸ್ಥ ಸಮಾಜ ಕಟ್ಟೋಣ.

ಆದರೆ ಈಕರೋನಾದಿಂದ ದುಃಖ ಆಗಿದೆ.
ಬಂಧು ಬಳಗದವರು, ಆಪ್ತರೇಷ್ಟರನ್ನು ಕಳೆದುಕೊಂಡು ಮೂಕ ರೋಧನೆ ಮಾಡುವಂತಾಗಿದೆ.ಅಗಲಿದ ಎಲ್ಲ ಪವಿತ್ರ ಆತ್ಮಗಳಿಗೆ ಶಾಂತಿನೀಡಲಿ ಎಂಬ ದೇವರಲ್ಲಿ ಪ್ರಾರ್ಥಿಸೋಣ. ಇದನ್ನೇ ಸವಲನ್ನಾಗಿ ಸ್ವೀಕರಿಸಿ  ಧೈರ್ಯದಿಂದ ಹೋರಾಡಿ , ಅಂತರ ಕಾಯ್ದುಕೊಂಡು,ಮಾಸ್ಕ್ ಧರಿಸಿ, ಅನಾವಶ್ಯಕ(ಕಾರ್ಯಕ್ರಮಗಳನ್ನು ತ್ಯಜಿಸಿ 🙏🙏) ತಿರುಗಾಡದೇ ಎಲ್ಲರೂ ಆರೋಗ್ಯದಿಂದ ಇದ್ದು ಈ ಕರೋನಾ ಎಂಬ ಹೆಮ್ಮಾರಿಯನ್ನು ತೊಲಗಿಸೋಣ.
ನಿತ್ಯದಲ್ಲಿ ಎಲ್ಲರೂ ಮಿತ ಆಹಾರ, ಯೋಗ, ದೇವರ ಧ್ಯಾನ ಮಂತ್ರ ಮಾಡುತ್ತ ಆತ್ಮಸ್ತೈರ್ಯದಿಂದ  ಇರೋಣ.

🙏 ಧಂ ಧನ್ವಂತ್ರಾಯೇನಮಃ 🙏

ಲೋಕಾ ಸಮಸ್ತ'  ಸುಜನೋ ಸುಖಿನೋ ಭವಂತು  🙏🙏

🖋 ಪ್ರಿಯಾ ಪ್ರಾಣೇಶ ಹರಿದಾಸ

Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ