ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ ನಮ್ಮ ಭಾರತ ದೇಶ ಮಾದರಿಯ ದೇಶ. ಇಲ್ಲಿಯ ನೆಲ ಜಲ ಬಲ ಎಲ್ಲವೂ ಬಲಿಷ್ಠವಾಗಿದೆ.ಮತ್ತು ಹಿಂದು ಧರ್ಮದ ಸಾತ್ವಿಕ, ತಾತ್ವಿಕ ಮತ್ತು ನೈತಿಕತೆಯ ಬೀಡಾಗಿದೆ. ಇಲ್ಲಿ ಆಚರಿಸುವ ಪ್ರತಿ ಹಬ್ಬಕ್ಕೂ ಶಾಸ್ತ್ರೀಯ ಪುರಾಣ ಗ್ರಂಥಗಳ ಆಧಾರವಾಗಿದೆ. ಮಾನವ ಕುಲಕೆ ಒಂದು ದಾರಿದೀಪವಾಗಿದೆ. ಆ ನಿಟ್ಟಿನಲ್ಲಿ ಇಂದಿನ ಪ್ರಸ್ತುತಿ ಅಕ್ಷಯ ತೃತೀಯ ಬಗ್ಗೆ ಹೇಳುತ್ತಿರುವೆ. ವೈಶಾಖ ಮಾಸದ ಮಹತ್ವ ವೆನೆಂದರೆ ವಿಶಾಖ ನಕ್ಷತ್ರದಲ್ಲಿ ಬರುವ ಈ ಮಾಸವನ್ನು ವೈಶಾಖ ಎಂದು ಕರೆಯಲಾಗುತ್ತದೆ. ವಿಶಾಖ ನಕ್ಷತ್ರವು ಬೃಹಸ್ಪತಿ ಮತ್ತು ಇಂದ್ರನ ಆಳ್ವಿಕೆಯಲ್ಲಿದೆ. ಈ ತಿಂಗಳು ಸ್ನಾನ, ಉಪವಾಸ ಮತ್ತು ಪೂಜಿಸುವುದು ಅತ್ಯಂತ ಪುಣ್ಯವನ್ನು ನೀಡುತ್ತದೆ. ಈ ಮಾಸದಲ್ಲಿ ಪರಶುರಾಮ ಜಯಂತಿ, ಅಕ್ಷಯ ತೃತೀಯ, ಮೋಹಿನಿ ಏಕಾದಶಿ ಮುಂತಾದ ಪ್ರಮುಖ ಹಬ್ಬಗಳಿವೆ. ಸ್ಕಂದ ಪುರಾಣದಲ್ಲಿ ಕೂಡಾ ವೈಶಾಖ ಮಾಸವನ್ನು ಉಲ್ಲೇಖಿಸಲಾಗಿದೆ. ದೇವರ ಆರಾಧನೆ, ಉಪಕಾರ ಮತ್ತು ಪುಣ್ಯಕ್ಕೆ ಇದು ಸೂಕ್ತ ತಿಂಗಳು. ಅದಕ್ಕಾಗಿಯೇ ಈ ಮಾಸದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಸ್ಥಾಪಿಸುವುದು, ಮರಗಳನ್ನು ರಕ್ಷಿಸುವುದು, ಬಡವರಿಗೆ. ಸಹಾಯ , ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದು ಮಾಡಿದರೆ, ಸಂತೋಷ ಮತ್ತು ಸಂಪತ್ತು ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಸ್ಕಂದ ಪುರಾಣವು ವೈಶಾಖ ಮಾಸವನ...
Comments
Post a Comment