ಜಗದ್ಗುರು ವೇದವ್ಯಾಸರ ಲೇಖನ
ವೇದವ್ಯಾಸರ ಲೇಖನ
🌸🌸🌸🌸🌸🌸🌸🌸🌸
🙏🙏🙏🙏🙏🙏🙏🙏🙏
ಭಗವಂತ ಸಮಸ್ತ ಬೃಹ್ಮಾಂಡವನ್ನು
ಸೃಷ್ಟಿ ಮಾಡುತ್ತಾನೆ .ಎಲ್ಲದರೊಳು ತಾನೂ ಇದ್ದು; ಎಲ್ಲರಲ್ಲಿ ತಾನಿದ್ದು,.. ಅನುಭವಿಸುತ್ತಾನೆ , ಹಾಗೇ ಅನುಭವಿಸಲು ಕೊಟುತ್ತಾನೆ.
ಜ್ಞಾನಿಗಳು,ಋಷಿಗಳು, ಸಜ್ಜನರ ಮೂಲಕ ಧರ್ಮ ಮಾರ್ಗದರ್ಶನ ಮಾಡಿಸುತ್ತಿರುತ್ತಾನೆ. ಯಾವಾಗ'
ಅಧರ್ಮ ಹೆಚ್ಚಾಗುತ್ತದೆಯೋ?..
ಆಗ ಭಗವಂತ ತಾನೇ ಸ್ವಯಂ
ಅವತಾರವೆತ್ತುತ್ತಾನೆ . ದುಷ್ಟರನ್ನು ಸಂಹರಿಸುತ್ತಾನೆ.
ಹೀಗೆ ದತ್ತ, ಕಪಿಲ,ಹಂಸ,ವ್ಯಾಸ ರೂಪನಾಗಿ ಅವತರಿಸಿದ್ದಾನೆ.
"ದತ್ತ" ರೂಪನಾಗಿ ಅತ್ರಿ ಅನುಸೂಯರಲ್ಲಿ
"ಕಪಿಲ" ನಾಗಿ ಕದರ್ಮ ದೇವಹುತಿರಲ್ಲಿ
"ಹಂಸ" ರೂಪನಾಗಿ ಬ್ರಹ್ಮ ದೇವರಿಗೆ
ಜ್ಞಾನ ನೀಡಲಿಕ್ಕೆ
"ವ್ಯಾಸ" ರೂಪನಾಗಿ ಪರಾಶರ ಸತ್ಯವತಿರಲ್ಲಿ ಅವತರಿಸಿ ಜ್ಞಾನದ ಪ್ರಸಾರ ಮಾಡಿದ್ದಾನೆ.
ರಾಮ, ಕೃಷ್ಣ,ಪರುಶರಾಮ,ನರಸಿಂಹ
ಅವತಾರದಲ್ಲಿ ಬಲದಿಂದ ಕಾರ್ಯ ಸಾಧಿಸಿದ್ದರೆ.ದತ್ತ,ಕಪಿಲ,ಹಂಸ,ವ್ಯಾಸ
ರೂಪದಿಂದ ಜ್ಞಾನ ಕಾರ್ಯದಿಂದ ಸಾಧಿಸಿದ್ದಾರೆ.ಆದರೆ ಪರಾಶರ ಮತ್ತು ಸತ್ಯವತಿಯಲ್ಲಿ ಮಗನಾಗಿ ದ್ವೈಪಾಯನ ಸರೋವರದ ದಡದಲ್ಲಿ ಅವಿರ್ಭವಿಸಿದರು. ಇವರ ಬಣ್ಣ ಕಪಗಪಾಗಿತ್ತು. ಹೀಗಾಗಿ ಇವರ ಮತ್ತೋಂದು ಹೆಸರು "ಕೃಷ್ಣದ್ವೈಪಾನರು". ವ್ಯಾಸರು ವೇದವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದರಿಂದ ಅವರಿಗೆ ವೇದವ್ಯಾಸ ಎಂದು ಹೆಸರು. ಬದರಿಕಾಶ್ರಮದಲ್ಲಿ ನೆಲಸಿದುದರಿಂದ ಬಾದರಾಯಣ ಎಂದು ಮತ್ತೋಂದು ಹೆಸರು.ಎಲ್ಲ ಅವತಾರದ ಕಾರ್ಯದಕ್ಕಿಂತ ವೇದವ್ಯಾಸರಾಗಿ ಹುಟ್ಟಿ ಅನಂತ ಪಟ್ಟು ಹೆಚ್ಚು ಜ್ಞಾನ ಕಾರ್ಯ ಮಾಡಿದ್ದಾರೆ.
ಬ್ರಹ್ಮವಾಯುಗಳಿಗೆ ಮತ್ತು ಸಮಸ್ತ ಬ್ರಹ್ಮಾಂಡಕ್ಕೂ ಗುರೋತ್ತಮರಾಗಿ, ವೇದವ್ಯಾಸ ಎನಿಸಿದ್ದಾರೆ. ಯಾವುದೇ ಜ್ಞಾನ ಸಂಪನ್ನವಾಗಬೇಕಾದರೆ ಮೊದಲು ವೇದವ್ಯಾಸರ ಅನುಗ್ರಹ ಬೇಕು.
ಪ್ರತಿ ಮನ್ವಂತರದಲ್ಲಿ ವೇದಗಳ ರಚನೆ ಮತ್ತು ವಿಭಾಗವಾಗಿದೆ.
ವೈವಸ್ವತ ಮನ್ವಂತರದಲ್ಲಿ ಅನೇಕ ದ್ವಾಪರಯುಗಗಳು ಆಗಿವೆ. ಅದರಲ್ಲಿ
೩,೭,೧೬,೨೫,೨೮ ನೇ ದ್ವಾಪರದಲ್ಲಿ
ವೇದವ್ಯಾಸರ ಅವತಾರವಾಗಿದೆ. ಇದು ಕೇವಲ ದ್ವಾಪರಯುಗದಲ್ಲಿ ಮಾತ್ರ ಆಗಿದೆ. ಅನೇಕ ವೇದ, ಉಪನಿಷತ್ಗಳು,ಬ್ರಹ್ಮ ಸೂತ್ರ ರಚಿಸಿದರು. ಶ್ರೀಮದ್ ಭಾಗವತ ರಚಿಸಿ ಮೋಕ್ಷಮಾರ್ಗ ತೋರಿಸಿದರು.
ಕವಿತೆ
ವೇದವ್ಯಾಸ ಬದರಿನಿವಾಸ
ಹರಿಯ ಅಂಶದಿ ಬಾದರಾಯಣ
/ಪ/
ವೇದವ್ಯೇದ್ಯನೇ ಪರಾಶರ ಸುತನೇ
ವಾಸಿಷ್ಟ ಕೃಷ್ಣನೇ/ಅ.ಪ/
ದ್ವಾಪರಯುಗದಲಿ ಅವತರಿಸಿದೆ ನೀ
ಅಗುಣಿತಗುಣಗಳ ಜ್ಞಾನದ ಗಣಿ ನೀ
ಧರ್ಮನುಳಿಸಲು ಲೋಕೊತ್ತಮ ನೀ
ವೇದವ್ಯಾಸನಾಗಿ ವೇದವ ರಚಿಸಿದೆ
ಲೋಕವಂದ್ಯನಾದ ಗುರೊತ್ತಮನಾದೆ
ಪ್ರತಿ ಮನ್ವಂತರದಲ್ಲಿ ಅವತರಿಸಿದೆ
ದತ್ತ ಕಪಿಲನಾಗಿ ಹಂಸ ವ್ಯಾಸನಾಗಿ
ಸಕಲರ ಉದ್ಧರಿಸಿ ಸಕಲೋತ್ತಮನಾಗಿ
ಪ್ರಿಯಕೃಷ್ಣನ ಸುಗುಣ ರೂಪನಾಗಿ
🖋 ಪ್ರಿಯಾ ಪ್ರಾಣೇಶ ಹರಿದಾಸ
Comments
Post a Comment