ಹನುಮ ಜಯಂತಿ ಪ್ರಯುಕ್ತ ಲೇಖನ
🙏ಜಗದ್ ಪ್ರಾಣನ ಮಹಿಮೆ🙏
#ಲೇಖನ :-#ಪ್ರತಿ_ಅಣುತೃಣುವಿನಲ್ಲೂ
#ವಾಯುದೇವರ_ಸಂಚಾರವಿಲ್ಲದೇ#ಇಲ್ಲ..
ಜಯಜಗತ್ರಾಣ ಅಖಿಲ ಸದ್ಗುಣ ಧಾಮ ಮುಖ್ಯಪ್ರಾಣ........
ಚೈತ್ರ ಹುಣ್ಣುಮೆಯಂದು ಹನುಮ ಜಯಂತಿ. ಪ್ರತಿ ಯುಗದಲ್ಲೂ ಶ್ರೇಷ್ಡ ಹರಿಭಕ್ತದಾಸ ಎನಿಸಿದ್ದಾನೆ.
ವಾಯುದೇವರ ಒಂದಂಶದಿಂದ ಕೇಸರಿ ಮತ್ತು ಅಂಜನಿ ಪುತ್ರನಾಗಿ ಧರೆಯಲ್ಲಿ ಅವತರಿಸಿದ್ದಾನೆ.
#ಇಂತಹ_ವಾಯುದೇವರ #ಮಹಿಮೆಯನ್ನ_ತಿಳಿಯೋಣ.
ಭಗವಂತ ತನ್ನ ನಂತರ ಶ್ರೇಷ್ಟ ಸ್ಥಾನ ಕೊಟ್ಟಿದ್ದೇಕೆಂದರೆ; ಭಗವಂತ ತಾನು ಭೂಮಿಯಲ್ಲಿ ಅವತರಿಸಲು ಇಷ್ಟಪಡದೇ, ತನ್ನ ತರುವಾಯ ವಾಯುದೇವರನ್ನು ಅವತರಿಸುವಂತೆ
ಅಜ್ಞಾಪಿಸಲು ಕಾರಣ, ತನ್ನ ಬಿಟ್ಟು;
ವಾಯುದೇವರ ಹೊರತು;. ಯಾರು? ಸರ್ವಜ್ಞರಿಲ್ಲ ಅನ್ನುವ ಕಾರಣಕ್ಕೆ ,
ಸರ್ವಕಾಲದಲ್ಲೂ ಶ್ರೇಷ್ಟರೆನಿಸಿದ್ದಾರೆ.
ಹೀಗಾಗಿಯೇ ವಾಯುದೇವರನ್ನು "ಜೀವೋತ್ತಮರು" ಎನ್ನುವರು. ಇವರು ಮೂವತ್ತೇರಡುಸೌಂದರ್ಯ ಲಕ್ಷಣಗಳನ್ನು ಹೊಂದಿ ವಾಯು ಪದವಿಗೆ ಯೋಗ್ಯರಾಗಿದ್ದಾರೆ.
ಇವರಿಗೆ ಇನ್ನೊಂದು ಹೆಸರು
"ಅಖಣಾಷ್ಮರು". "ಅಖಣಾಷ್ಮರು" ಎಂದರೆ, "ವಜ್ರಶರೀರ" ಹೊಂದಿದವರು.ಋಷಿಗಳು,ಸಜ್ಜನರು ಭಗವಂತನನ್ನು ಉಪಾಶಿಸಲು ಹೋರಟಾಗ ಅಸುರರು ಬಂದು ಭಂಗಿಸುವರು. ಆಗ ಅಲ್ಲಿ ಮುಖ್ಯಪ್ರಾಣರೇ ಬಂದು ಅಸುರರನ್ನು ಓಡಿಸುತ್ತಾರೆ. ಹೀಗಾಗಿ ಮುಖ್ಯಪ್ರಾಣದೇವರಿಗೆ ಆಖಣಾಷ್ಮರೆನ್ನುವರು. ವಾಯುದೇವರ ಪತ್ನಿ ಭಾರತಿದೇವಿ
ದಾಸರು ಹೇಳಿರುವಂತೆ "ಪವಮಾನ ಪವಮಾನ ಜಗದಪ್ರಾಣಾ"ಅಂತ ಹಾಡಿ ಹೋಗಳಿದ್ದಾರೆ.ಅಂದರೆಪ್ರತಿ ಅಣುತೃಣುವಿನಲ್ಲಿ ವಾಯುದೇವರ ಸಂಚಾರವಿಲ್ಲದೇ ಇಲ್ಲ.
ಶ್ರೀಪಾದರಾಜರು ರಚಿಸಿರುವ ಮದ್ವನಾಮದಲ್ಲಿ ಹೇಳಿರುವಂತೆ
" ಕರುಣಾಭಿಮಾನಿದಿವಿಜರು ದೇಹವನ್ನು ಬೀಡಲು/ಕುರುಡ ಕಿವುಡ
ಮೂಕನೆಂದನಿಸುವ//
ಪರಮ ಮುಖ್ಯಪ್ರಾಣ ತೊಲಗಲು/ಅರಿತು ಪೆಣನೆಂದು ಪೇಳ್ವರು ಬುಧಜನ//
ಅಂದರೆ ದೇಹದಲ್ಲಿ ಯಾವುದೇ ಅಂಗವಿಲ್ಲದಿದ್ದರೂ ಕುರುಡ,ಕಿವುಡ, ಮೂಕ ಅನ್ನಿಸಿಕೊಳ್ಳುತ್ತಾರೆ.ಆದರೆ ದೇಹದಲ್ಲಿ "ಪ್ರಾಣ" ಹೋದರೆ "ಹೆಣ"
ಎಂದು ಎನಿಸಿಕೊಳ್ಳುತ್ತಾನೆ.ಹಾಗೇ ನಮ್ಮ ಶರೀರ ನಾಲ್ಕು ದೇಹದಿಂದ ಕೂಡಿದೆ ೧)ಸ್ಥೂಲದೇಹ ೨)ಅನಿರುದ್ಧದೇಹ ೩)ಲಿಂಗ ದೇಹ ೪) ಸ್ವರೂಪ ದೇಹ. ಹೀಗೆ ಪ್ರತಿ ದೇಹದಲ್ಲಿ ಪ್ರಾಣದೇವರು
೨೧೬೦೦ ನೂರು ಶ್ವಾಸ ಜಪ(ಉಸಿರಾಟ)ದಂತೆ, ಹೀಗೆ ನಾಲ್ಕು ದೇಹದಲ್ಲಿ ಒಟ್ಟಾರೆ ೮೬೪೦೦
ಶತಶ್ವಾಸ ಜಪದಿಂದ ನಮ್ಮಲ್ಲಿ ನಿಂತು ನಮ್ಮ ಅಂತರ್ಯಾಮಿಯಾದ
ಬಿಂಬರೂಪಿಯಾದ ಭಗವಂತನಾ ಸೇವೆ ಮಾಡುತ್ತಾರೆ.
ನಮ್ಮ ದೇಹದಲ್ಲಿ ಸುಷ್ಮನಾಡಿಯಲ್ಲಿ
ವಾಯುದೇವರ ವಾಸಸ್ಥಾನ.
"ದಶಪ್ರಾಣ"ಗಳಿಂದ ನಮ್ಮನ್ನು ಸಲಹುತಿರುತ್ತಾನೆ.
೧)ಪ್ರಾಣ-ಶ್ವಾಸೋಚ್ಛಾಸ,
ಪಚನಕ್ರಿಯೆ
೨)ಅಪಾನ-ಮಲಮೂತ್ರ ವಿಸರ್ಜನೆ
೩)ವ್ಯಾನ- ಅನ್ನಕ್ಕೆ ಅವಕಾಶ
೪)ಉದಾನ-ಸೀನುವುದು,ಶಬ್ದ ನುಡಿಸುವುದು
೫)ಸಮಾಮ-ಉಂಡ ಅನ್ನದ ಶಕ್ತಿಯನ್ನ ದೇಹದ ತುಂಬ ಮುಟ್ಟಿಸುವ ಕಾರ್ಯ
೬)ನಾಗ-ಚಲನಾದಿಗಳನ್ನು ಮಾಡಿಸುವುದು
೭)ಕೂರ್ಮ-ಶಿರಾದಿಗಳಲ್ಲಿ ನಾಡಿ ಬಡಿತ
೮)ಕೃಕಳ-ಹಸಿವು,ನೀರಡಿಕೆ,ಸೃಷ್ಟಿ
೯)ದೇವದತ್ತ-ನಿದ್ರೆ,ಭಯ,ಎಚ್ಚರ ನೀಡುತ್ತಾನೆ
೧೦)ಧನಂಜಯ- ಮರಣ ಸಮೀಪದವರಿಗೆ ಕಿವಿಯಲ್ಲಿ ಶಬ್ದ.
ಹೀಗೆ ನಮ್ಮ ದೇಹದ ದಶ ಪ್ರಾಣಗಳಲ್ಲಿ ನಿಂತು ಕಾರ್ಯವನ್ನು ಮಾಡಿಸುತ್ತಾರೆ.
ದುಷ್ಟಶಿಷ್ಟರಲ್ಲಿ ಪ್ರಾಣದೇವರ ಕಾರ್ಯ ಇರುತ್ತದೆ.ಆದರೆ ಅವರವರ ಕರ್ಮಾನುಸಾರವಾಗಿ ಅವರನ್ನು ಭಗವಂತನ ಆಜ್ಞೆ ಯಂತೆ ಶಿಕ್ಷಿಸುತ್ತಾನೆ; ರಕ್ಷಿಸುತ್ತಾನೆ.
ಶಿಷ್ಟರಲ್ಲಿ " ಹಂಸ "ಮಂತ್ರದ ಉಪಾಸನೆಯಿಂದ ವಾಸವಾಗಿದ್ದರೆ, ದುಷ್ಟರಲ್ಲಿ "ಸೊಹಂ" ಉಪಾಸನೆ ಯಿಂದ ವಾಸವಾಗಿರುತ್ತಾನೆ.
ಒಟ್ಟಾರೆ ಈ ಮುಖ್ಯಪ್ರಾಣನ ಅನುಗ್ರಹದಿಂದ ನಾವೆಲ್ಲರೂ ಬದುಕಿರುತ್ತೆವೆ. ಇನ್ನಾದರೂ ಅಹಂಕಾರದಿಂದ "ನಾನು ನನ್ನದು"
ಬಿಟ್ಟು ಸಾತ್ವಿಕಮಾರ್ಗದಿಂದ ಉಪಾಸನೆ ಮಾಡುತ್ತಾ
ಸನ್ಮಾರ್ಗದಲ್ಲಿ ನಡೆಯೋಣ.
-:#ಹನುಮ ನಾಮ:-
ಹನುಮನ ಮಹಿಮೆಯ ಸಾರುವ ಜಗದೊಳು
ಅಖಿಲ ಸದ್ಗುಣ ಧಾಮ ಹನುಮ ನಾಮ
/ಪ/
ಧರೆಯಲಿ ಜನಿಸಿ ಅಂಜನಿ ಪುತ್ರನಾಗಿ
ಎಲ್ಲ ಜೀವರ ಪ್ರಾಣ ನಾಮಕಾನಾಗಿ
ಹಂಸಮಂತ್ರ ಜಪಿಸಿ ಜಗತ್ರಾಣನಾಗಿ
ನಿನ್ನ ನಾಮವ ನೆನದರೆ ಪಾಪವಿಲ್ಲ
ಹನುಮನಿಲ್ಲದೇ ಜಗವಿಲ್ಲ
ರಾಮಭಕ್ತನ ಭಕ್ತಿಗೆ ಕೊನೆಯಿಲ್ಲ
ನಿತ್ಯದಿ ನೆನೆಯಲು ನಿನ್ನಯ ಅನುಗ್ರಹವಿರಲು
ದುಷ್ಟ ಶಿಕ್ಷಿಸಿ ಶಿಷ್ಟರನು ರಕ್ಷಿಸಿ ಗುರುವಾಗಿರಲು
ಬಿಂಬಮೂರ್ತಿ ಪ್ರಿಯಕೃಷ್ಣ ಜೊತೆಯಿರಲು
🖋 #ಪ್ರಿಯಾ_ಪ್ರಾಣೇಶ_ಹರಿದಾಸ
ಇದೇ ಲೇಖನ #ಸಂದರ್ಶನ ಪತ್ರಿಕೆಯಲ್ಲಿ ಪ್ರಕಟವಾಗಿದೆ.ಪತ್ರಿಕಾ ಬಳಗಕ್ಕೆ
Nais
ReplyDelete