ಹರಿಕರುಣಾಮೃತ -೦೧
ಲೇಖನ ೦೧ :- ಹರಿಕರುಣಾಮೃತ
ಹರಿನಾಮದ ಸವಿಜೇನ ಸವಿಯಿರೋ ....
ಜೀವನ ಸುಖಿಸೊರೋ...
ನಾನು ಇಂದು ಬರೆಯುತ್ತಿದ್ದು ಜಗನ್ನಾಥ ದಾಸರು ಬರೆದ "ಹರಿಕಥಾಮೃತ ಸಾರ".
ಇದರಲ್ಲಿ ವೇದ,ಉಪನಿಷತ್ತುಗಳು, ಹದಿನೆಂಟು ಪುರಾಣಗಳು, ಮಹಾನ ಗ್ರಂಥಗಳಾದಭಾಗವತ,ರಾಮಾಯಣ, ಮಹಾಭಾರತ ಹೀಗೆ ಎಲ್ಲ ಗ್ರಂಥಗಳ ಸಾರ ಸರಳ ಸುಂದರವಾಗಿ ನಿತ್ಯದಲ್ಲಿ ಪಠನೆಮಾಡುವ ಹಾಗೆ ೩೨ ಸಂಧಿಗಳುವುಳ್ಳ ಹರಿಕಥಾಮೃತ ಸಾರವನ್ನು ರಚಿಸಿದ್ದಾರೆ.
ನಮ್ಮ ಭಾರತದ ಸಂವಿಧಾನದ ಕಾನೂನು ಹೇಗಿದೆಯೋ... ಹಾಗೇ ನಮ್ಮ ಜೀವನಕ್ಕೆ ಸಂದೇಶ,ಅರಿವು ಕೊಡುವ ಸಂವಿಧಾನ ವಿದ್ದಂತೆ,ಈ ಹರಿಕಥಾಮೃತಸಾರ.ಇದರಲ್ಲಿನ ಆಯ್ದ ನುಡಿಗಳನ್ನು ನೋಡೋಣ.
******************************
ಹರಿಕಥಾಮೃತ ಸಾರದ ಕರುಣಾಸಂಧಿಯಲ್ಲಿ
"ಶ್ರವಣಮನಾಕಾನಂದವೀವುದು ಭವಜನಿತ ದುಃಖಗಳ ಕಳೆಯುವುದು
ವಿವಿಧಭೋಗಗಳಿಹಪರದಲಿತ್ತು ಸಲುಹುವದು/ಭುವನಪಾವನನೆಪ ಲಕುಮಿಧವನ ಮಂಗಳಕಥೆಯ ಪರಮೋತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ/
ಇದರ ಅರ್ಥ, ಭಗವಂತನು ಸಕಲ ಚರಾಚರಗಳಲ್ಲಿ ಇದ್ದು ಪವಿತ್ರ ಮಾಡುವ ಲಕ್ಷ್ಮಿ ರಮಣನ ನಾಮ ಸ್ಮರಣೆ, ಕಥೆ,ಭಜನೆ ಮಾಡುವುದರಿಂದ ಸಾಂಸಾರಿಕ ದುಃಖ ಕಳೆಯುವುದಲ್ಲದೇ..; ಇಹಪರಗಳಲ್ಲಿ ಸುಖ ಕೊಡುವುನು.
ಆದ್ದರಿಂದ ನಿತ್ಯದಲ್ಲಿ ಕಂಚಿತ್ತು ಸಮಯವನ್ನಾದರೂ ಅವನ ಮಂಗಳ ಕಥೆಯನ್ನು ಸಗಮರಿಸಬೇಕು.
ಹಾಗಾದರೇ ನಾವು ಏನ್ ಬೇಕಾದರೂ ತಪ್ಪುಒಪ್ಪುಗಳನ್ನು ಮಾಡಿದರೆ ನಡೆಯುತ್ತೆ,.. ಅಂತಲ್ಲ.
ನಾವು ಮಾಡುವ ಪ್ರತಿ ಕರ್ಮಗಳು ಹಾಗೂ ಪ್ರಾರಬ್ದ, ಸಂಚಿತ ಕರ್ಮಗಳನ್ನು ಎಲ್ಲವನ್ನು
ಗಣನೆಗೆ ತಗೆದುಕೊಂಡು ನಮಗೆ ಸುಖದುಃಖಗಳನ್ನು ಕೊಡುತ್ತಾನೆ. ಏನಿದ್ದರೂ ನಮ್ಮ ಕರ್ಮದ ಫಲ ನಾವೇ ಉಣ್ಣುವುದು ನಿಶ್ಚಿತ ಕೊನೆಗೆ ಅದು ಜನ್ಮಾಂತರದಲ್ಲೂ ನಮಗೆ ಕಟ್ಟಿಟ್ಟ ಬುತ್ತಿ.ಸ್ಮರಣೆ ಮಾತ್ರದಿಂದ ಕರಗಿಸಲು ಸಾಧ್ಯ.
ಅದಕ್ಕೆ ಕೃಷ್ಣದಾಸರು ತಮ್ಮ ಸಾಹಿತ್ಯದ ಒಂದು ನುಡಿಯಲ್ಲಿ ಹೇಳುತ್ತಾರೆ.
"ಧೃಡ ಭಾವದಿಂದ ಹೋಗಿ/ಶುಭ ಚರಣಕೆರಗಿ/ಕಡೆಗುಣಗಳ ನೀಗಿ ಇಡುವಾ/
ತುಡುವಾ/ಮುಡುವಾ/ಕುಡುವಾ/
ನುಡಿನಾಡಿಗಳಲ್ಲಿ ಬಿಡದೇ ಅಡಿಗಡಿಗೇ ನೆನವುತಾ/
ಎಂದು ಹೇಳಿದ್ದಾರೆ.ನಾವು ನಂಬಿಕೆ,ಧೃಢ ಭಕ್ತಿ ವಿಶ್ವಾಸದಿಂದ ಅವನನ್ನು ನಂಬಿ ನಡೆದರೆ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ನೀಗಿಸಿ , ನಮ್ಮ ಜೊತೆ ನೆಲಿಸಿ ಸದಾ ಕಾಯುತ್ತಾನೆ.ಪ್ರತಿ ಹೆಜ್ಜೆಯಲ್ಲೂ ಭಗವಂತನ ನೆನೆದು ನಡೆದರೆ ನಮ್ಮ ಜೊತೆಯಾಗಿ ಅವನು ಇರುತ್ತಾನೆ ಎಂದು ಹೇಳಿದ್ದಾರೆ.
ಹೀಗಾಗಿ ನಾವುಗಳು ಯಾರದೋ ಗುಣಗಾನ ಮಾಡಿ ಅವರ ಮುಖಸ್ಥುತಿ ಮಾಡುವುದಕ್ಕಿಂತ; ನಾವು ನಂಬಿದ ಭಗವಂತ ಸ್ಮರಣೆ ಮಾಡಿದರೆ ಕಿಂಚಿತ್ತಾದರೂ ನಮ್ಮ ಸೂಕ್ಷ್ಮ ಶರೀರವಾದ ಆತ್ಮಕ್ಕೆ ಸಂಸ್ಕಾರ ಕೊಟ್ಟಂತಾಗುತ್ತದೆ. ಹೀಗಾಗಿ ನಾವೆಲ್ಲರೂ ಭಗವಂತನ ಒಪ್ಪಿ ಅಪ್ಪಿ ನಡೆಯೊಣ.
✒️ ಪ್ರಿಯಾ ಪ್ರಾಣೇಶ ಹರಿದಾಸ
Comments
Post a Comment