Posts

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ

Image
ಲೇಖನ :- ದುರ್ಗುಣಗಳು  ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ  ನಮ್ಮ  ಭಾರತ ದೇಶ ಮಾದರಿಯ ದೇಶ. ಇಲ್ಲಿಯ ನೆಲ ಜಲ ಬಲ ಎಲ್ಲವೂ ಬಲಿಷ್ಠವಾಗಿದೆ.ಮತ್ತು ಹಿಂದು ಧರ್ಮದ ಸಾತ್ವಿಕ, ತಾತ್ವಿಕ ಮತ್ತು ನೈತಿಕತೆಯ ಬೀಡಾಗಿದೆ.  ಇಲ್ಲಿ ಆಚರಿಸುವ ಪ್ರತಿ ಹಬ್ಬಕ್ಕೂ ಶಾಸ್ತ್ರೀಯ ಪುರಾಣ ಗ್ರಂಥಗಳ ಆಧಾರವಾಗಿದೆ. ಮಾನವ ಕುಲಕೆ ಒಂದು ದಾರಿದೀಪವಾಗಿದೆ. ಆ ನಿಟ್ಟಿನಲ್ಲಿ ಇಂದಿನ ಪ್ರಸ್ತುತಿ ಅಕ್ಷಯ ತೃತೀಯ ಬಗ್ಗೆ ಹೇಳುತ್ತಿರುವೆ. ವೈಶಾಖ ಮಾಸದ ಮಹತ್ವ ವೆನೆಂದರೆ  ವಿಶಾಖ ನಕ್ಷತ್ರದಲ್ಲಿ ಬರುವ ಈ ಮಾಸವನ್ನು ವೈಶಾಖ ಎಂದು ಕರೆಯಲಾಗುತ್ತದೆ. ವಿಶಾಖ ನಕ್ಷತ್ರವು ಬೃಹಸ್ಪತಿ ಮತ್ತು ಇಂದ್ರನ ಆಳ್ವಿಕೆಯಲ್ಲಿದೆ. ಈ ತಿಂಗಳು ಸ್ನಾನ, ಉಪವಾಸ ಮತ್ತು ಪೂಜಿಸುವುದು ಅತ್ಯಂತ ಪುಣ್ಯವನ್ನು ನೀಡುತ್ತದೆ. ಈ ಮಾಸದಲ್ಲಿ ಪರಶುರಾಮ ಜಯಂತಿ, ಅಕ್ಷಯ ತೃತೀಯ, ಮೋಹಿನಿ ಏಕಾದಶಿ ಮುಂತಾದ ಪ್ರಮುಖ ಹಬ್ಬಗಳಿವೆ. ಸ್ಕಂದ ಪುರಾಣದಲ್ಲಿ ಕೂಡಾ ವೈಶಾಖ ಮಾಸವನ್ನು ಉಲ್ಲೇಖಿಸಲಾಗಿದೆ. ದೇವರ ಆರಾಧನೆ, ಉಪಕಾರ ಮತ್ತು ಪುಣ್ಯಕ್ಕೆ ಇದು ಸೂಕ್ತ ತಿಂಗಳು. ಅದಕ್ಕಾಗಿಯೇ ಈ ಮಾಸದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಸ್ಥಾಪಿಸುವುದು, ಮರಗಳನ್ನು ರಕ್ಷಿಸುವುದು, ಬಡವರಿಗೆ. ಸಹಾಯ , ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದು ಮಾಡಿದರೆ, ಸಂತೋಷ ಮತ್ತು ಸಂಪತ್ತು ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಸ್ಕಂದ ಪುರಾಣವು ವೈಶಾಖ ಮಾಸವನ...

ಲೇಖನ :- ವಸಂತನ ಆಗಮನ ಯುಗಾದಿ ಸಂಭ್ರಮ

*ಲೇಖನ :- ವಸಂತನ  ಆಗಮನ ಯುಗಾದಿ ಸಂಭ್ರಮ  ನಮ್ಮ ಭಾರತದಲ್ಲಿ  ಆಚರಿಸುವ  ಪ್ರತಿ ಹಬ್ಬದ ಹಿಂದೆ ಶೃತಿ ಸ್ಮೃತಿಗಳ  ಹಿನ್ನಲೆ ಇರುವುದರ ಜೊತೆ ವೈಜ್ಞಾನಿಕ ಹಿನ್ನಲೆಯೂ ಸೇರಿದೆ. ಭಗವಂತ ಅಣುತೃಣಾದಿಗಳನ್ನು ಸೃಷ್ಟಿಸಬೇಕಾದರೆ, ಸೃಷ್ಟಿಯಲ್ಲಿರುವಂತಹುದೆ ಮಾನವಕುಲದಲ್ಲಿ ತಂದನು. ಅಂದರೆ ಸೃಷ್ಟಿಯಲ್ಲಿನ ಬದಲಾವಣೆ ಪ್ರತಿ ಮಾಸದ ಋತುಮಾನದತಕ್ಕಂತೆ ನಾವು ಕಾಣಬಹುದು. ಹಾಗೇ  ನಮ್ಮ  ಜೀವನದಲ್ಲಿ  ಕಾಣಬಹುದು. ಯುಗಾದಿ ಹಬ್ಬ ದೇವರ  ಪೂಜೆ ಮಾಡಿ ಭಕ್ಷ್ಯ ಭೋಜ್ಯ , ಬೇವು ಬೆಲ್ಲ  ನೈವೇದ್ಯ ತೋರಿಸಿ ಸ್ವೀಕರಿಸಬೇಕು. ಅಮಾವಾಸ್ಯೆಯ ನಂತರ ಚಂದ್ರನು ಮೇಷ ಮತ್ತು ಅಶ್ವಿನಿ ರಾಶಿಗಳಲ್ಲಿ ಕಾಣಿಸಿಕೊಂಡು 15ನೇ ದಿನ ಚಿತ್ರಾನಕ್ಷತ್ರದಲ್ಲಿ ಪರಿಪೂರ್ಣತೆಯನ್ನು ಹೊಂದಿ, ಪ್ರತಿದಿನವೂ ಹೆಚ್ಚಾಗುವುದರಿಂದ ಆ ಮಾಸಕ್ಕೆ ‘ಚೈತ್ರ’ ಎಂದು ಹೆಸರು. ಇದನ್ನು ಸಂವತ್ಸರ ಎಂದು ಕರೆಯಲಾಗುತ್ತದೆ ಅಂದರೆ ಅದರಲ್ಲಿ ಹನ್ನೆರಡು ತಿಂಗಳುಗಳಿವೆ. *ಮಾಸದ ಪ್ರಮುಖ ಹಬ್ಬಗಳು* ಯುಗಾದಿ, ಶ್ವೇತ ವರಾಹ ಕಲ್ಪಾರಂಭ (ಶುಕ್ಲ ಪಾಡ್ಯ ) ಶ್ರೀ ರಾಮ ನವಮಿ  (ಶುಕ್ಲ ನವಮಿ) ಕಾಮದಾ ಏಕಾದಶಿ  (ಶುಕ್ಲ ಏಕಾದಶಿ) ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ) ಮತ್ಸ್ಯ ಜಯಂತಿ  (ಕೃಷ್ಣ ಪಂಚಮಿ) ವರೂಥಿನಿ ಏಕಾದಶಿ  (ಕೃಷ್ಣ ಏಕಾದಶಿ) ವರಾಹ ಜಯಂತಿ  (ಕೃಷ್ಣ ತ್ರಯೋದಶಿ) ಮೊದಲ ವರ್ಷರಂಭವಾಗುವುದೇ "ಯುಗಾದ...