Posts

Showing posts with the label ಪುಸ್ತಕ ಪರಿಚಯ

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಪುಸ್ತಕ - ಮಸ್ತಕ :- ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"  ಲೇಖಕರು :- ಮುರುಗೇಶ ಸಂಗಮ  (೯೪೪೯೪೩೭೬೦೪) ಬೆಲೆ :- ೧೧೦  ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ ತೊಡಗಿಸಿಕೊಳ್ಳಬೇಕು. ಇದರಿಂದ ಪ್ರಪಂಚದ ಮತ್ತು ನಮ್ಮ ಸುತ್ತಮುತ್ತಲಿನ ವಿಷಯ ತಿಳಿಯುತ್ತದೆ. ಕಣ್ಣುಗಳು  ಚಿಕ್ಕದಾಗಿದ್ದರೂ ಇಡೀ  ಲೋಕವನ್ನೆಲ್ಲ ನೋಡುವ ಹಾಗೂ ಅನುಭವ ಪಡೆಯುತ್ತದೆ. ಹಾಗೇ  "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ" ಪುಸ್ತಕ ಓದಿದರೆ  ಬಸವಣ್ಣನವರ ಹುಟ್ಟು ಹಾಗೂ ಅವರ ಜೀವನವನ್ನು ಲಿಖಿತˌ ಮತ್ತು ಮೌಲಿಕ ಮಾಹಿತಿಯೊಂದಿಗೆ ಚಿಕ್ಕದಾಗಿ ಚೊಕ್ಕವಾಗಿ ಆಧಾರಸಹಿತವಾಗಿ ನೀಡಿರುವುದು ಈ ಗ್ರಂಥದ ವಿಶೇಷವಾಗಿದೆ . ಬಸವನಬಾಗೇವಾಡಿಯಲ್ಲಿರುವ ಬಸವಣ್ಣನವರ ಜನ್ಮಸ್ಥಳದಲ್ಲಿ ಬಸವ ಜನ್ಮಸ್ಮಾರಕ ನಿರ್ಮಾಣದ ಪ್ರಯತ್ನ ಮತ್ತು ಹೋರಾಟದ ಮಜಲುಗಳ ಬಗ್ಗೆ ವಿಸ್ತೃತ ವಿವರಗಳನ್ನೊಳಗೊಂಡ ಹೊತ್ತಿಗೆ ಓದುಗರ ಮನಮುಟ್ಟುತ್ತದೆ. ಪಟ್ಟಣದ ಇತಿಹಾಸ ಹಾಗೂ ಬಸವೇಶ್ವರರ ಜೀವನ ಚರಿತ್ರೆಯನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಲೇಖಕರು. ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಪರಿಶ್ರಮಿಸಿದವರಲ್ಲಿ ಅಗ್ರಗಣ್ಯರಾಗಿರುವ ದಿ.ರಾವಸಾಹೇಬ ಮಲ್ಲಪ್ಪ ಸಿಂಹಾಸನ ಅವರ ಪರಿಶ್ರಮ ಮೆಚ್ಚುವಂತದ್ದು. ಅವರ ಅನುಪಮ ಸೇವೆಯನ್ನು ಮನದುಂಬಿ ಸ್ಮರಿಸಿದ್ದಾರೆ ಲೇಖಕರು. ಅಂತಹ ಮೇರು ವ್ಯಕ್ತಿಗಳಾದ ಸಿಂಹಾ...