Posts

Showing posts with the label ಧಾರ್ಮಿಕ ಹಬ್ಬದ ಮಾಹಿತಿ

ಲೇಖನ :- ಅಷ್ಟಸೌಭಾಗ್ಯ ನೀಡುವ ಎಳೆ ಅಷ್ಟಮಿ ಗೌರಿ (ಜ್ಯೇಷ್ಟಾ ಗೌರಿ)*

Image
*ಲೇಖನ :- ಅಷ್ಟಸೌಭಾಗ್ಯ ನೀಡುವ ಎಳೆ ಅಷ್ಟಮಿ ಗೌರಿ (ಜ್ಯೇಷ್ಟಾ ಗೌರಿ)* ಹೆಣ್ಣು ಹುಟ್ಟಿದ ಕೂಡಲೇ ಲಕ್ಷ್ಮಿ ಸ್ವರೂಪ ಎನ್ನುವರು. ಪೂಜಿಸಲು ಪ್ರತಿ ಮಾಸಕ್ಕೂ ಒಂದೊಂದು ಗೌರಿ ಪೂಜೆ ಇವೆ. ಆದರೆ ಕೆಲವೇ ಗೌರಿ ಪೂಜೆಗಳು ಪ್ರಚಲಿತದಲ್ಲಿ  ಇವೆ. ಬಾಲ್ಯದಲ್ಲಿ ಇದ್ದಾಗ ಮೌನ ಗೌರಿ ವೃತ, ಇನ್ನು ಮದುವೆಯ ವಯಸ್ಸಿಗೆ ಬಂದಾಗ ಗುಣವಂತ ಪತಿಗಾಗಿ ಉಮಾಶಂಕರನ ಪೂಜೆ, ಹೀಗೆ ಒದೊಂದು ಪೂಜೆಯು ಹೆಣ್ಣಿನ ಮತ್ತು ಅವಳ ಕುಟುಂಬದ ಶ್ರೇಯೋಭಿವೃಧಿಗಾಗಿ ಇವೆ.  ಚೈತ್ರಗೌರಿ, ದಿವಸಿಗೌರಿ, ಶ್ರಾವಣಗೌರಿ,ಅಷ್ಟಮಿಗೌರಿ, ಶೀಗಿಗೌರಿ,.... ಇನ್ನು ಅನೇಕ ಇವೆ. -ಇಂತಹ ಸಂದರ್ಭದಲ್ಲಿ  ಗೌರಿ ಸ್ಥಾಪನೆ ಮಾಡಿ, ಷೋಡಶೋಪಚಾರಗಳಿಂದ ಪೂಜಿಸಿ, ಸಾಯಂಕಾಲ ಮುತೈದೆಯರಿಗೆ ಅರಿಶಿನ ಕುಂಕುಮಕ್ಕೆ ಕರೆದು ಉಡಿ ತುಂಬುವ ಕಾರ್ಯ ನೆರವೇರುತ್ತದೆ.  ಭವಿಷೋತ್ತರ ಪುರಾಣದಲ್ಲಿ   ಜ್ಯೇಷ್ಟಾ   ದೇವಿಯ ಕಥೆಯ ಉಲ್ಲೇಖವಿದೆ. ಇದಕ್ಕೆ ಇನ್ನೊಂದು ಹೆಸರು ಎಳೆ ಅಷ್ಟಮಿ ಗೌರಿ, ಅಷ್ಟಮಿ ಗೌರಿ ಅನ್ನುತ್ತಾರೆ. ಕೈಲಾಸ ದಲ್ಲಿ ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಿಗೆ ಕೇಳುತ್ತಾಳೆ. ಜನರಿಗೆ ಮತ್ತು ಸ್ತ್ರೀಯರಿಗೆ ಸೌಭಾಗ್ಯ, ಸಂಪತ್ತು, ಇಷ್ಟವಾದ ಕಾರ್ಯಗಳು ಇಡೇರಿಸುವ ಒಂದು ವೃತ ಕೇಳುತ್ತಾಳೆ. ಶಂಕರನು ಮುಗಳ್ನಗುತ್ತಾ , ಹೇಳುತ್ತಾನೆ.‌ ಹೇ! ಪಾರ್ವತಿ   ಜ್ಯೇಷ್ಟಾ ದೇವಿಯ ವೃತವಿದೆ.ಈ ವೃತವನ್ನು ಸುಹಾಸಿನಿಯರು ಮಾಡಿದರೆ; ...