Posts

Showing posts with the label ಧಾರ್ಮಿಕ ಲೇಖನ

ಲೇಖನ :- ಪತಿಯ ಆಯುಷ್ಯ ವರ್ಧಕ ಪೂಜೆ ಭೀಮನ ಅಮಾವಾಸ್ಯೆ

Image
ಲೇಖನ :- ಪತಿಯ ಆಯುಷ್ಯ ವರ್ಧಕ ಪೂಜೆ ಭೀಮನ ಅಮಾವಾಸ್ಯೆ ಆಷಾಡ ಮಾಸದ ಅಮವಾಸ್ಯೆಯನ್ನು, ಭೀಮನ ಅಮವಾಸ್ಯೆ ಎಂದು ಕರೆಯುತ್ತಾರೆ. ಅಂದು ಮಾಡುವ ಪೂಜೆಗೆ ಜ್ಯೋರ್ತಿಭೀಮೇಶ್ವರ ವೃತ ಅನ್ನುತ್ತಾರೆ. ಹಾಗೇ ಉತ್ತರಕರ್ನಾಟಕದ ವಿಭಾಗದಲ್ಲಿ ಇದನ್ನು ನಾಗರ ಅಮವಾಸ್ಯೆ ಎಂದು ಕರೆಯುತ್ತಾರೆ. ಅಂದೇ "ದಿವಶಿ ಗೌರಿ" ಪೂಜೆ ಮಾಡುತ್ತಾರೆ. ದಿವಶಿ ಗೌರಿ ಪೂಜೆಯು ಮತ್ತು ಜ್ಯೋರ್ತಿಭೀಮೇಶ್ವರನ  ಪೂಜೆಯು ಎರಡು ಒಂದೇ ಅಭಿಲಾಷೆ ಹೊಂದಿದ ಪೂಜೆಯಾಗಿದೆ. ಆದರೆ ಪೂಜೆ ಮಾಡುವ ವಿಧಿವಿಧಾನ ಬೇರೆ ಬೇರೆ ರೀತಿಯಾಗಿದೆ. ಸುಮಂಗಲಿಯರು‌ ತಮ್ಮ ಮಾಂಗಲ್ಯ ಸುಸ್ಥಿರವಾಗಿದ್ದು ಪತಿಯ ದೀರ್ಘಾಯು ಸಲುವಾಗಿ ಹಾಗೂ ಸಹ ಕುಟುಂಬ ಸುಖ ಸಂಸಾರ, ಸಂಪತ್ತ ಸಮೃದ್ಧಿಯಾಗಲಿ  ಎಂದು   ಈ ವ್ರತವನ್ನಾಚರಿಸುತ್ತಾರೆ. ಕುಮಾರಿಯರು ಮತ್ತು ಕನ್ಯಾಮಣಿಗಳು ತಮಗೆ ಉತ್ತಮವಾದ, ಸಕಲ ಗುಣ ಸಂಪನ್ನನಾದ ರಾಮನ ಹಾಗೇ ಮತ್ತು‌ ಧೀರ್ಘಾಯು ಯೋಗ್ಯ ಪತಿ ದೊರಕಿ, ಸುಖೀ ದಾಂಪತ್ಯಕ್ಕಾಗಿ ಪೂಜಿಸುತ್ತಾರೆ. ಈಶ್ವರನು ಕೈಲಾಸದಲ್ಲಿ‌ ಸನತ್ಕುಮಾರರಿಗೆ  ಉಪದೇಶಿಸಿದನು. ಅವರು ಭೂಲೋಕದ ಋಷಿಪತ್ನಿಯರಿಗೆ ತಿಳಿಸಿದರು. ಅವರ ಮೂಲಕ ಎಲ್ಲೆಡೆ ಜ್ಯೋತಿರ್ಭೀಮೇಶ್ವರ ವ್ರತ ಮಾಡುವುದು ವ್ಯಾಪಿಸಿತು.   ಕೃತಯುಗದಲ್ಲಿ ಮೃಕಂಡು ಮುನಿಯ ಪತ್ನಿ ಸೌಮಿತ್ರೆ ಈ ವೃತ ಮಾಡಿದಳು ತ್ರೇತಾಯುಗದಲ್ಲಿ ಅತ್ರಿ ಮಹರ್ಷಿಯ ಪತ್ನಿ ಅನಸೂಯಾ ಈ ವೃತ ಮಾಡಿದಳು. ದ್ವಾಪರದಲ್ಲಿ ...