Posts

Showing posts with the label ದಾಸಮುಖಿ ಜೀವನಸುಖಿ

ಅಂಕಣ ೦೧:- ದಾಸಮುಖಿ ಜೀವನಸುಖಿ

Image
ಅಂಕಣ ೦೧:- ದಾಸಮುಖಿ ಜೀವನಸುಖಿ ವಾರ :- ಗುರುವಾರ ಹರಿದಾಸರು ವರ್ಣಿಸಿದ ದೇವತೆಗಳಾದ *(ಲಕ್ಷ್ಮಿ,ಸರಸ್ವತಿ,ಭಾರತಿ,*ಪಾರ್ವತಿ)* ಹರಿದಾಸರು ವರ್ಣಿಸಿದ ದೇವತೆಗಳಾದ *(ಲಕ್ಷ್ಮಿ,ಸರಸ್ವತಿ,ಭಾರತಿ,*ಪಾರ್ವತಿ)* ಹಾಗೂ ಅವರ ಪಾತ್ರ ನಮ್ಮ ಜೀವನದಲ್ಲಿ ಎಷ್ಟು ಪ್ರಭಾವತೆಯಿಂದ ಕೂಡಿದೆ ಎಂಬುದರ ಬಗ್ಗೆ ಹರಿದಾಸರ ಕೃತಿಗಳಿಂದ ತಿಳಿದುಕೊಳ್ಳೋಣ ಲೌಕಿಕ ಹಿತದ ಜೊತೆಗೆ ಪಾರಮಾರ್ಥಿಕ ಸತ್ಯದ ಕಡೆಗೆ ಸಾಮಾನ್ಯರ ಮನಸ್ಸು ಆಕರ್ಷಿಸಿದ ಹರಿದಾಸರು, ಜಗದ ಏಳಿಗೆಯನ್ನು ಕನ್ನಡದ ಸಿರಿಗಂಧದ ಕೀರ್ತನೆ ಸಾಹಿತ್ಯದ ಮೂಲಕ ಮಾಡಿದ್ದಾರೆ ಎಂದರು. ಹರಿದಾಸರು ಜ್ಞಾನದ ಮೂಲಕ ಸಮಾಜದಲ್ಲಿನ ನ್ಯೂನತೆ ಮತ್ತು ಅಂಧಕಾರವನ್ನು ಹೋಗಲಾಡಿಸಿ, ಭಕ್ತಿಯ ಬೀಜ ಬಿತ್ತಿದ್ದಾರೆ ಸಾಮಾನ್ಯ ಸಾಧಕನ ಜೀವನ ಸಮೃದ್ಧಗೊಳಿಸಲು ಶ್ರಮಿಸಿದ್ದಾರೆ’. *ಲಕ್ಷ್ಮಿ ಚಿಂತನೆ* ಲಕ್ಷ್ಮಿ ದೇವಿ ವೇದಾಭಿಮಾನಿ ದೇವತೆ. ಸಿರಿ ಸಂಪತ್ತಿನ ಒಡತಿ, ಶ್ರೀನಿವಾಸನ ವೃಕ್ಷಸ್ಥಳವಾಸಿನಿ. ಅನಂತ ಗುಣಗಳಿಂದ ಶ್ರೇಷ್ಠಳು. *ಶ್ರೀ ವಾದಿರಾಜರು ರಚಿಸಿದ ಕೃತಿಯಲ್ಲಿ* *"ಕಾಯೇ ಶ್ರೀಕಾಮಲಾಲಾಯೆ /ಕಲ್ಲೂರನೀಲಯೇ /ಪ ನೊಂದಿರುವೆ ಸಂಸಾರದಿ ಸತಿಸುತರ ಸಂದಣಿ ಬೆಂದೆನೋ ಮಾನದಿ................ ಶ್ರೀ ಹಯವದನ ವ್ಯಾಸನ /*ಶೋಭಿಸುವ ಮೂರ್ತಿಯನು ಮನದಿ ವಿಭಾಸಿಸೈ ಶಾಣಾಶ್ಮಬಿಂಬಿತೆ* ಅಂದರೆ ಶ್ರೀ ಹರಿಯ ವೃಕ್ಷಸ್ಥಳವಾಸಿಯಾದ ಲಕ್ಷ್ಮಿ ದೇವಿಯನ್ನು ಬೇಡುತ್ತಿದ್ದಾರೆ. ಈ ಸಂಸಾರದಲ್ಲಿ ಬಹಳ ನೊಂದಿರುವೆನು. ತಾಯಿ ತನ್ನ ಮಗುವನ...